BREAKING NEWS – ಶಿವಮೊಗ್ಗದಲ್ಲಿ ಚಾಕು ಇರಿತ, ವ್ಯಕ್ತಿಗೆ ಗಂಭೀರ ಗಾಯ, ಎಲ್ಲಿ? ಹೇಗಾಯ್ತು ಘಟನೆ?

Crime-News-General-Image

ಶಿವಮೊಗ್ಗ: ಮಲವಗೊಪ್ಪದ ಪೆಟ್ರೋಲ್ ಬಂಕ್ ಎದುರು ನಿನ್ನೆ ರಾತ್ರಿ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬರಿಗೆ ಚಾಕು (Stabbed) ಇರಿಯಲಾಗಿದೆ. ಮಿಳ್ಳಘಟ್ಟ ನಿವಾಸಿ ವಿನೋದ್ (35) ಚಾಕು ಇರಿತಕ್ಕೊಳಗಾದವರು. ಆರೋಪಿ ವಿಕ್ರಂ (42) ಎಂಬಾತ ವಿನೋದ್ ಅವರ ಮೇಲೆ ಚಾಕುವಿನಿಂದ ಮನಸೋಇಚ್ಛೆ ದಾಳಿ ನಡೆಸಿದ್ದಾನೆ. ದಾಳಿಯ ರಭಸಕ್ಕೆ ವಿನೋದ್ ಅವರ ಮುಖ, ಕೈ ಹಾಗೂ ಮೈಮೇಲೆ ತೀವ್ರ ಗಾಯಗಳಾಗಿವೆ. ಗಂಭೀರ ಸ್ಥಿತಿಯಲ್ಲಿರುವ ಅವರನ್ನು ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು … Read more

ಮದುವೆ ಆಮಂತ್ರಣ ಪತ್ರಿಕೆ ಕೊಡಲು ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು, ಹೇಗಾಯ್ತು ಘಟನೆ?

Kavitha-Bai-Machenahalli-incident - Shimoga Accident

ಶಿವಮೊಗ್ಗ: ಸ್ನೇಹಿತರಿಗೆ ತನ್ನ ಮದುವೆ ಆಮಂತ್ರಣ ಪತ್ರಿಕೆ ನೀಡಲು ತೆರಳುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ (Shimoga Accident) ಯುವತಿಯೊಬ್ಬಳು ಸಾವನ್ನಪ್ಪಿದ್ದಾರೆ. ಮಲವಗೊಪ್ಪ – ಹರಿಗೆ ಮಧ್ಯೆ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ದುಮ್ಮಳ್ಳಿ ಗ್ರಾಮದ ನಿವಾಸಿ ಕವಿತಾ ಬಾಯಿ.ಟಿ (26) ಮೃತ ದುರ್ದೈವಿ. ಸಹೋದರನೊಂದಿಗೆ ಶಿವಮೊಗ್ಗದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ರಾಂಗ್‌ ರೂಟ್‌ ಬೈಕು, ಬಸ್‌ ಅಡಿ ಯುವತಿ ಕವಿತಾ ಮತ್ತು ಆಕೆಯ ಸಹೋದರ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ. ನಿಯಂತ್ರಣ ತಪ್ಪಿದ … Read more

ಮಲವಗೊಪ್ಪದಲ್ಲಿ 112 ಪೊಲೀಸ್‌ ಸಿಬ್ಬಂದಿ ಯುನಿಫಾರಂ ಹರಿದು ಹಲ್ಲೆ

Police-Van-Jeep-at-Shimoga-Nehru-Road

SHIVAMOGGA LIVE NEWS | 24 MAY 2024 SHIMOGA : ಬುದ್ದಿವಾದ ಹೇಳಲು ಮುಂದಾದ 112 ಇಆರ್ ಎಎಸ್‌ ಸಿಬ್ಬಂದಿ ಸಮವಸ್ತ್ರ (UNIFORM) ಹರಿದು ಹಲ್ಲೆ ಮಾಡಿದ ವ್ಯಕ್ತಿ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಲವಗೊಪ್ಪದಿಂದ 112 ಸಹಾಯವಾಣಿಗೆ ಮೇ 19ರಂದು ಮಹಿಳೆಯೊಬ್ಬರು ಕರೆ ಮಾಡಿದ್ದರು. ತಮ್ಮ ಮನೆ ಬಳಿ ವ್ಯಕ್ತಿಯೊಬ್ಬ ತಮ್ಮ ಮೇಲೆ ಹಲ್ಲೆ ಮಾಡುತ್ತಿದ್ದಾನೆ ಎಂದು ದೂರು ನೀಡಿದ್ದರು. ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ … Read more

ಪುಟ್ಟ ಪುಟ್ಟ ಮಕ್ಕಳ ಹೊತ್ತು, ರಣ ಬಿಸಿಲಿನಲ್ಲಿ 20 ಕಿ.ಮೀ ನಡೆದು ಹೋರಾಟ, ರೈತರ ಆಕ್ರೋಶಕ್ಕೆ ಕಾರಣವೇನು?

Farmers-with-children-protest-march-in-Shimoga.

SHIVAMOGGA LIVE NEWS | 29 FEBRUARY 2024 SHIMOGA : ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾವಿರಾರು ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದನ್ನು ಖಂಡಿಸಿ ಸುಡು ಬಿಸಿಲಿನಲ್ಲಿ ರೈತರು ಪಾದಯಾತ್ರೆ, ಟ್ರಾಕ್ಟರ್ ರಾಲಿ ನಡೆಸಿದರು. ಸಕ್ಕರೆ ಕಾರ್ಖಾನೆ ರೈತರು ಮತ್ತು ಕಾರ್ಮಿಕರು, ನಿವಾಸಿಗಳ ಭೂ ಹಕ್ಕು ಹೋರಾಟ ಸಮಿತಿ ವತಿಯಿಂದ ಮಲವಗೊಪ್ಪದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರೈತರು ಪಾದಯಾತ್ರೆ ನಡೆಸಲಾಯಿತು. ಬಿ.ಹೆಚ್.ರಸ್ತೆ, ಅಮೀರ್ ಅಹಮದ್ ಸರ್ಕಲ್, ನೆಹರೂ ರಸ್ತೆ, ಗೋಪಿ ಸರ್ಕಲ್ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ಸುಡು … Read more

ಕೆರೆಯಲ್ಲಿ ರಾಶಿ ರಾಶಿ ಮೀನು ಮರಿಗಳು ಸಾವು

Malavagoppa-Lake-Fishes

SHIVAMOGGA LIVE NEWS | 29 JANUARY 2024 SHIMOGA : ಮಲವಗೊಪ್ಪ ಕೆರೆಯಲ್ಲಿ ಮೀನು ಮರಿಗಳು ಸಾವನ್ನಪ್ಪಿವೆ. ಮೀನು ಸಾಕಣೆದಾರರು ಮತ್ತು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭಾನುವಾರ ಮೀನುಗಳು ಸಾವನ್ನಪ್ಪಿ ಕೆರೆ ದಂಡೆಗೆ ತೇಲಿ ಬರುತ್ತಿರುವುದನ್ನು ಸಾಕಣೆದಾರರು ಗಮನಿಸಿದ್ದಾರೆ. ರಾಶಿ ರಾಶಿ ಮೀನುಗಳು ಸಾವನ್ನಪ್ಪಿರುವುದು ಸಾಕಣೆದಾರರ ಆಕ್ರೋಶಕ್ಕೆ ಕಾರಣವಾಗಿದೆ. ‘8 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಿ ಮೀನು ಸಾಕಣೆ ಮಾಡಿದ್ದೇವೆ. ಇದಕ್ಕಾಗಿ ಕೆರೆಯನ್ನು ಸ್ವಚ್ಛಗೊಳಿಸಿದ್ದೆವು. ಈಗ ಮೀನುಗಳು ಸಾವನ್ನಪ್ಪಿರುವುದರಿಂದ ಭಾರಿ ನಷ್ಟವಾಗಿದೆ’ ಎಂದು ಆಕ್ರೋಶ … Read more

ಮಲವಗೊಪ್ಪದಲ್ಲಿ ಮರದ ಕೆಳಗೆ ಇಬ್ಬರ ಮೃತದೇಹ ಪತ್ತೆ

Police-Van-Jeep-at-Shimoga-Nehru-Road

SHIVAMOGGA LIVE NEWS | 11 JANUARY 2024 SHIMOGA : ಮಲವಗೊಪ್ಪದಲ್ಲಿ ಓರ್ವ ಪುರುಷ ಮತ್ತು ಮಹಿಳೆಯ ಮೃತದೇಹ ಪತ್ತೆಯಾಗಿದೆ. ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಮರವೊಂದರ ಕೆಳಗೆ ಮೃತದೇಹಗಳು ಸಿಕ್ಕಿವೆ. ಇಬ್ಬರ ವಯಸ್ಸು 50 ರಿಂದ 55 ಎಂದು ಅಂದಾಜಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತದೇಹಗಳನ್ನು ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಮೃತರ ಗುರುತು ಮತ್ತು ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more

ಮಾಚೇನಹಳ್ಳಿಯಲ್ಲಿ ಅಪಘಾತ, ಪ್ರಜ್ಞೆ ಕಳೆದುಕೊಂಡ ವ್ಯಕ್ತಿ, ಮಲವಗೊಪ್ಪದಲ್ಲಿ ರಾಂಗ್‌ ಸೈಡಲ್ಲಿ ಬಂದು ಯುವತಿಗೆ ಬೈಕ್ ಡಿಕ್ಕಿ

ACCIDENT-NEWS-GENERAL-IMAGE.

SHIVAMOGGA LIVE NEWS | 28 APRIL 2023 SHIMOGA : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ ಹೊಡೆದು ತಲೆ, ಭುಜ, ಕಾಲಿಗೆ ಗಾಯವಾಗಿದು ಪ್ರಜ್ಞಾಹೀನ (Unconscious) ಸ್ಥಿತಿಗೆ ತಲುಪಿದ್ದರು. ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಿದ್ದು ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದ ಮಾಚೇನಹಳ್ಳಿ ಐಟಿ ಪಾರ್ಕ್‌ ಮುಂಭಾಗ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ನಾಗೇಂದ್ರ ಗಾಯಗೊಂಡವರು. ತಮ್ಮ ಪತ್ನಿ ಮಣಿಪಾಲಕ್ಕೆ ತೆರಳಬೇಕಿದ್ದರಿಂದ ನಾಗೇಂದ್ರ ಅವರು ಮಾಚೇನಹಳ್ಳಿಯಲ್ಲಿ ಬಸ್‌ ಹತ್ತಿಸಿ, ಮನೆಗೆ ಹಿಂತಿರುಗುತ್ತಿದ್ದರು. ಐಟಿ … Read more

ಬನ್ ತರಲು ಬಿ.ಹೆಚ್.ರಸ್ತೆ ದಾಟುತ್ತಿದ್ದ MSIL ಉದ್ಯೋಗಿಗೆ ಟಾಟಾ ಸುಮೋ ಡಿಕ್ಕಿ

crime name image

SHIVAMOGGA LIVE NEWS | 9 APRIL 2023 SHIMOGA : ರಸ್ತೆ ದಾಟುತ್ತಿದ್ದ ಯುವಕನಿಗೆ ಟಾಟಾ ಸುಮೋ (Tata Sumo) ಕಾರು ಡಿಕ್ಕಿ ಹೊಡದಿದ್ದು ಕಾಲು, ಹೊಟ್ಟೆ, ಕೈಗೆ ಗಾಯವಾಗಿದೆ. ಮಲವಗೊಪ್ಪ ಗ್ರಾಮದ ಯಲವಟ್ಟಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಭದ್ರಾವತಿಯ ಪ್ರವೀಣ್ ಎಂಬಾತ ಗಾಯಗೊಂಡಿದ್ದಾನೆ. ಶಿವಮೊಗ್ಗದ ಎಂಎಸ್‍ಐಎಲ್‍ನಲ್ಲಿ ಕೆಲಸ ಮುಗಿಸಿ ಶ್ರೀಕಾಂತ್ ಎಂಬುವವರ ಜೊತೆಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಯಲವಟ್ಟಿ ಕ್ರಾಸ್ ಬಳಿ ಅಂಗಡಿಯಲ್ಲಿ ಟೀ ಕುಡಿಯುಲು ಬೈಕ್ ನಿಲ್ಲಿಸಿದ್ದರು. ಇದನ್ನೂ ಓದಿ – ದೇವರ … Read more

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಪಘಾತ, ಇಬ್ಬರು ಸಾವು | 5 ಅಪಘಾತ ಸುದ್ದಿಗಳು

Crime-News-General-Image

SHIVAMOGGA LIVE NEWS | 6 FEBRUARY 2023 ಆಗುಂಬೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ THIRTHAHALLI : ರಸ್ತೆ ಬದಿ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ (bike accident) ಹೊಡೆದು ಗಂಭೀರ ಗಾಯಗೊಂಡಿದ್ದಾರೆ. ಆಗುಂಬೆ ರಸ್ತೆಯ ಬಾಳೆಬೈಲು ಮಲ್ನಾಡ್ ಕ್ಲಬ್ ಎದುರು ಪಟ್ಟಾಭಿರಾಮ್ ಎಂಬುವವರು ನಡೆದು ಹೋಗುತ್ತಿದ್ದಾಗ ಬೈಕ್ ಸವಾರ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ. ತೀವ್ರ ಗಾಯಗೊಂಡಿದ್ದ ಪಟ್ಟಾಭಿರಾಮ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತೀರ್ಥಹಳ್ಳಿ ಪೊಲೀಸ್ … Read more

ಹೆದ್ದಾರಿಯಲ್ಲಿ ಅಪಘಾತ, ಹಸು ಸಾವು, ನಡುರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

cow-dies-on-the-road-children-cries

SHIMOGA | ಲಾರಿ ಡಿಕ್ಕಿಯಾಗಿ ಹಸುವೊಂದು ಸ್ಥಳದಲ್ಲೇ ಸಾವನ್ನಪ್ಪಿದೆ. ಇದನ್ನು ಕಂಡು ಮಕ್ಕಳು (CHILDREN CRY) ನಡು ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಿವಮೊಗ್ಗ – ಭದ್ರಾವತಿ (SHIMOGA BHADRAVATHI) ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ನಗರದ ಮಲವಗೊಪ್ಪದಲ್ಲಿ ಅಪಘಾತವಾಗಿದೆ. ಮೇಯಲು ಹೋಗಿದ್ದ ಹಸು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡು ಹಸು ಸ್ಥಳದಲ್ಲೇ ಮೃತಪಟ್ಟಿದೆ. ಈ ವೇಳೆ ಅಲ್ಲೇ ಸಮೀಪದಲ್ಲಿ ಗಣಪತಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಕೂಡಲೆ ಸ್ಥಳಕ್ಕೆ ಬಂದಿದ್ದಾರೆ. ತಮ್ಮ … Read more