ಶಿವಮೊಗ್ಗ ಸಿಟಿಯ ವಿವಿಧೆಡೆ ಅರ್ಧ ದಿನ ಅಂಗಡಿ, ಮುಂಗಟ್ಟು ಬಂದ್‌, ಎಲ್ಲೆಲ್ಲಿ ಹೇಗಿತ್ತು ಸ್ಥಿತಿ?

Shimoga-city-Bandh-during-in-memory-of-Manjunatha-Rao.

ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಹತರಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ ರಾವ್‌ ಅವರಿಗೆ ಗೌರವ ನಮನ ಸಲ್ಲಿಸಲು, ಶಿವಮೊಗ್ಗ ನಗರದಲ್ಲಿ ಅರ್ಧ ದಿನ ಬಂದ್‌ ಆಚರಿಸಲಾಯಿತು. ಪಾರ್ಥೀವ ಶರೀರದ ಮೆರವಣಿಗೆ ಸಾಗುವ ಮಾರ್ಗದಲ್ಲಿ ಎಲ್ಲ ಅಂಗಡಿ, ಮುಂಗಟ್ಟು ಬಂದ್‌ (Bandh) ಮಾಡಲಾಗಿತ್ತು. ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಗಾಂಧಿ ಬಜಾರ್‌, ಬಿ.ಹೆಚ್‌.ರಸ್ತೆ, ನೆಹರು ರಸ್ತೆ, ದುರ್ಗಿಗುಡಿ ಭಾಗದಲ್ಲಿ ಅಂಗಡಿ ಮುಂಗಟ್ಟು ಬಂದ್‌ ಮಾಡಲಾಗಿತ್ತು. ಇದೇ ಮಾರ್ಗದಲ್ಲಿ ಪಾರ್ಥೀವ ಶರೀರದ ಮೆರವಣಿಗೆ ನಡೆಸಲಾಯಿತು. ಇದನ್ನೂ … Read more

ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಸರ್ಕಾರಿ ಗೌರವದೊಂದಿಗೆ ಮಂಜುನಾಥ್‌ ಅಂತ್ಯಕ್ರಿಯೆ, ಚಿತಾಗಾರದಲ್ಲಿ ಏನೆಲ್ಲ ಆಯ್ತು?

State-government-respect-for-Manjunatha-Rao-in-shimoga.

ಶಿವಮೊಗ್ಗ : ಕಾಶ್ಮೀರದಲ್ಲಿ ಉಗ್ರರ ದಾಳಿ ವೇಳೆ ಸಾವನ್ನಪ್ಪಿದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ ರಾವ್‌ ಅವರ ಅಂತ್ಯಕ್ರಿಯೆ (Final Rites) ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಶಿವಮೊಗ್ಗದ ರೋಟರಿ ಚಿತಾಗಾರದಲ್ಲಿ ಪುತ್ರ ಅಭಿಜಯ್‌ ಮಂಜುನಾಥ್‌ ಅವರ ಪಾರ್ಥೀವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಧಾರ್ಮಿಕ ವಿಧಿವಿಧಾನ, ಸರ್ಕಾರಿ ಗೌರವ ಅಂತ್ಯಕ್ರಿಯೆಗು ಮುನ್ನ ರೋಟರಿ ಚಿತಾಗಾರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಗೌರವ ಸಲ್ಲಿಸಲಾಯತು. ಪೊಲೀಸರು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ನಮನ ಸಲ್ಲಿಸಿದರು. ರಾಜ್ಯ ಸರ್ಕಾರದ ವತಿಯಿಂದ ಸಚಿವ … Read more

ಕಾಶ್ಮೀರ ದಾಳಿ, ಶಿವಮೊಗ್ಗ ಸಿಟಿಯಲ್ಲಿ ಮಂಜುನಾಥ ರಾವ್‌ ಅಂತಿಮ ಯಾತ್ರೆ, ಹೇಗಿತ್ತು? ಯಾರೆಲ್ಲ ಇದ್ದರು?

Manjunatha-Rao-final-Procession-in-Shimoga.

ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಉದ್ಯಮಿ ಮಂಜುನಾಥ ರಾವ್‌ ಪಾರ್ಥೀವ ಶರೀರದ ಅಂತಿಮ ಯಾತ್ರೆ ಇಂದು ನಡೆಯಿತು. ಮಧ್ಯಾಹ್ನದ ವೇಳೆಗೆ ವಿಜಯನಗರದ ಮನೆಯಿಂದ ಆರಂಭವಾದ ಮೆರವಣಿಗೆ (Procession) ರೋಟರಿ ಚಿತಾಗಾರದವರೆಗೆ ನಡೆಯಿತು. ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಮಂಜುನಾಥ ರಾವ್‌ ಅಂತಿಮ ದರ್ಶನ, ಯಾರೆಲ್ಲ ಭೇಟಿ ನೀಡಿದ್ದರು? ಇಲ್ಲಿವೆ ಫೋಟೊಗಳು ಮಧ್ಯಾಹ್ನ 12.40ರ ಹೊತ್ತಿಗೆ ವಿಜಯನಗರ ಮನೆ ಮುಂಭಾಗದಿಂದ ಮಂಜುನಾಥ ರಾವ್‌ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭವಾಯಿತು. ತೆರೆದ … Read more

ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಮಂಜುನಾಥ ರಾವ್‌ ಅಂತಿಮ ದರ್ಶನ, ಯಾರೆಲ್ಲ ಭೇಟಿ ನೀಡಿದ್ದರು? ಇಲ್ಲಿವೆ ಫೋಟೊಗಳು

Manjunatha-Rao-final-rites-in-shimoga

ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ ರಾವ್‌ ಅವರ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಆಗಮಿಸಿದೆ. ವಿಜಯನಗರದಲ್ಲಿರುವ ಅವರ ಮನೆ ಮುಂದೆ ಅಂತಿಮ ದರ್ಶನಕ್ಕೆ (Final Rites) ಇರಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಡಿದೆದ್ದ ಜನ, ಪೆಹಾಲ್ಗಾಮ್‌ ಹಂತಕರ ವಿರುದ್ಧ ಆಕ್ರೋಶ, ಕ್ಯಾಂಡಲ್‌ ಬೆಳಗಿ ಶ್ರದ್ಧಾಂಜಲಿ ಇಂದು ಬೆಳಗ್ಗೆ ಬೆಂಗಳೂರಿನಿಂದ ರಸ್ತೆ ಮಾರ್ಗವಾಗಿ ಮಂಜುನಾಥ ರಾವ್‌ ಪಾರ್ಥೀವ ಶರೀರ ಶಿವಮೊಗ್ಗಕ್ಕೆ ಆಗಮಿಸಿತು. ಮನೆಯಲ್ಲಿ ಅಂತಿಮ ವಿಧಿವಿಧಾನ ವಿಜಯನಗರದ 3ನೇ ಅಡ್ಡರಸ್ತೆಯಲ್ಲಿರುವ … Read more

ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಮಂಜುನಾಥ್‌ ಮನೆ ಸುತ್ತಲು ಬ್ಯಾರಿಕೇಡ್‌, ಪೊಲೀಸ್‌ ಬಂದೋಬಸ್ತ್‌

Barricade-near-Manjunatha-Rao-House

ಶಿವಮೊಗ್ಗ : ಕಾಶ್ಮೀರದಲ್ಲಿ ಪಹಾಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಸಾವನ್ನಪಿದ ರಿಯಲ್‌ ಎಸ್ಟೇಟ್‌ ಉದ್ಯಮಿ (Businessman) ಮಂಜುನಾಥ್‌ ರಾವ್‌ ಅವರ ಮೃತದೇಹ ಇಂದು ರಾತ್ರಿಯೆ ಶಿವಮೊಗ್ಗಕ್ಕೆ ಬರುವ ಸಾಧ್ಯತೆ ಇದೆ. ಇನ್ನೊಂದೆಡೆ ಮಂಜುನಾಥ ರಾವ್‌ ಮನೆಗೆ ಬೆಳಗ್ಗೆಯಿಂದಲೇ ಸಚಿವರು, ಶಾಸಕರು, ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಹಾಗಾಗಿ ಬಂದೋಬಸ್ತ್‌ ನಿಯೋಜಿಸಲಾಗಿದೆ. ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದ ಉದ್ಯಮಿಯ ಮೃತದೇಹದ ಮುಂದೆ ಕಣೀರಾದ ಪತ್ನಿ, ಧೈರ್ಯ ತುಂಬಿದ ಮಿನಿಸ್ಟರ್ ವಿಜಯನಗರದ 3ನೇ ಅಡ್ಡರಸ್ತೆಯಲ್ಲಿ ಮಂಜುನಾಥ್‌ ಅವರ ಮನೆ ಇದೆ. ಗಣ್ಯರು, … Read more

ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

pahalgam-attack-shimoga-manjunath-rao-dies-in-the-incident

ಶಿವಮೊಗ್ಗ : ಕಾಶ್ಮೀರದ ಪ್ರವಾಸಿ ತಾಣದಲ್ಲಿ ಭಯೋತ್ಪಾದಕ ದಾಳಿಗೆ (attack) ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸೇರಿದಂತೆ 28ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಮಂಜುನಾಥ್‌ ಅವರ ಪತ್ನಿ ಪಲ್ಲವಿ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು. ಇದನ್ನೂ ಓದಿ » ಪುರಸಭೆಗೆ ಬಿಜೆಪಿಯ ಅಧ್ಯಕ್ಷ, ಕಾಂಗ್ರೆಸ್‌ನ ಉಪಾಧ್ಯಕ್ಷೆ, ಒಬ್ಬ ಬಿಜೆಪಿಯ ಸದಸ್ಯರಿಂದ ಕಾಂಗ್ರೆಸ್‌ ಪರ ಮತ ಪಲ್ಲವಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌ ಟೂರಿಸ್ಟ್‌ ಏಜೆನ್ಸಿ ಮೂಲಕ ನಾವು ಇಲ್ಲಿಗೆ ಬಂದಿದ್ದೆವು. ನಾನು, … Read more