ಸ್ನೇಹಿತರೊಂದಿಗೆ ತೆರಳಿದ್ದ ಬಾಲಕ, ನೀರಿನಲ್ಲಿ ಮುಳುಗಿ ಸಾವು

boy-missing-at-mattur-check-dam-in-Shimoga-taluk

ಶಿವಮೊಗ್ಗ : ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಬಾಲಕನೊಬ್ಬ ಚೆಕ್‌ ಡ್ಯಾಮ್‌ನಲ್ಲಿ (dam) ಮುಳುಗಿ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಮತ್ತೊರು – ಹೊಸಹಳ್ಳಿ ಚೆಕ್‌ ಡ್ಯಾಮ್‌ನಲ್ಲಿ ಮಂಗಳವಾರ ಘಟನೆ ಸಂಭವಿಸಿದೆ. ರಾಗಿಗುಡ್ಡದ ರಹಮತ್‌ (16) ಮೃತ ಬಾಲಕ. ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ತುಂಗಾ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಮೃತದೇಹವನ್ನು ಹೊರ ತಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಮೆಗ್ಗಾನ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ » ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ … Read more

ಮತ್ತೊಂದು ಅಗ್ನಿ ಅವಘಡ, ಧಗಧಗ ಹೊತ್ತಿ ಉರಿದ ಕಾರು, ಗೋಡೋನ್‌ನಲ್ಲಿದ್ದ ವಸ್ತುಗಳು

Shivamogga-Mattur-Village-villagers-and-go-down

SHIVAMOGGA LIVE NEWS | 20 FEBRUARY 2024 SHIMOGA : ಗೋಡೋನ್‌ನಲ್ಲಿ ಅಗ್ನಿ ಅವಘಡ ಸಂಭವಿಸಿ ಕಾರು, ಅಡಿಕೆ ಚೀಲಗಳು, ತೆಂಗಿನ ಕಾಯಿಗಳು ಸುಟ್ಟು ಹೋಗಿವೆ. ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದ ಬಾಬಯ್ಯ ಎಂಬುವವರಿಗೆ ಸೇರಿದ ಗೋಡೋನ್‌ನಲ್ಲಿ ಘಟನೆ ಸಂಭವಿಸಿದೆ. ಶಾರ್ಟ್‌ ಸರ್ಕ್ಯೂಟ್‌ನಿಂದ ಘಟನೆ ಸಂಭವಿಸಿರುವ ಶಂಕೆ ಇದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದರು. ಆದರೆ ಬೆಂಕಿಯ ಕೆನ್ನಾಲಗೆಗೆ ಗೋಡನ್‌ನಲ್ಲಿದ್ದ ವಸ್ತುಗಳು ಆಹುತಿಯಾದವು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಲಕ್ಷಾಂತರ ರೂ. … Read more

ಶಾಲಾ ಬಸ್‌ ಡಿಕ್ಕಿಯಾಗಿ ಸೈಕಲ್‌ ಸಹಿತ ನಾಲೆಗೆ ಬಿದ್ದ ವ್ಯಕ್ತಿ

ACCIDENT-NEWS-GENERAL-IMAGE.

SHIVAMOGGA LIVE NEWS | 11 NOVEMBER 2023 SHIMOGA : ಶಾಲಾ ಬಸ್‌ (School Bus) ಡಿಕ್ಕಿಯಾಗಿ ಸೈಕಲ್‌ ಸವಾರರೊಬ್ಬರು ಕಾಲುವೆಗೆ ಬಿದ್ದು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕಿನ ಮತ್ತೂರಿನಲ್ಲಿ ಘಟನೆ ಸಂಭವಿಸಿದೆ. ಗಾಜನೂರು ಇಂದಿರಾನಗರದ ಪರಶುರಾಮ ಎಂಬುವವರು ಸೈಕಲ್‌ನಲ್ಲಿ ತೆರಳುತ್ತಿದ್ದಾಗ ಹಳೇಹೊನ್ನಾಪುರದಿಂದ ಮತ್ತೂರು ಕಡೆಗೆ ಬರುತ್ತಿದ್ದ ಶಾಲಾ ಬಸ್‌ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಪರಶುರಾಮ ಅವರು ಸೈಕಲ್‌ ಸಹಿತ ಕಾಲುವೆಗೆ ಬಿದ್ದಿದ್ದಾರೆ. ಬಲಗಾಲು ಮತ್ತು ಸೊಂಟಕ್ಕೆ ಪೆಟ್ಟು ಬಿದ್ದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸ್ಥಳೀಯರು ಪರಶುರಾಮ ಅವರನ್ನು … Read more

ಸೂಳೆಬೈಲಿನಲ್ಲಿ ಕಾರು ಗ್ಲಾಸ್ ಒಡೆದ ಕೇಸ್, ಐವರು ಅರೆಸ್ಟ್, ಕೃತ್ಯಕ್ಕೆ ಮೊದಲೇ ನಡೆದಿತ್ತಾ ಸಂಚು?

Car-Glass-break-at-Sulebailu-in-Shimoga-City

SHIVAMOGGA LIVE NEWS | CAR ATTACK | 10 ಮೇ 2022 ಸೂಳೆಬೈಲಿನಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಸಂಚು ರೂಪಿಸಿಯೆ ಕಾರಿನ ಗಾಜು ಒಡೆದಿರುವ ಕುರಿತು ಶಂಕೆ ವ್ಯಕ್ತವಾಗಿದೆ. ‘ಊರುಗಡೂರು ಮುಖ್ಯ ರಸ್ತೆಯಲ್ಲಿ ಕಾರಿನ ಗಾಜು ಒಡೆದ ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ. ಕೃತ್ಯ ಎಸಗಿದ ಇಬ್ಬರು ಮತ್ತು ಕೃತ್ಯಕ್ಕೂ ಮೊದಲು ಅವರೊಂದಿಗೆ ಮದ್ಯ ಸೇವಿಸಿದ್ದ ಇನ್ನೂ ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ. … Read more

ಕಾರಿನ ಮೇಲೆ ದಾಳಿ ಬೆನ್ನಿಗೆ ಸೂಳೆಬೈಲಿನಲ್ಲಿ ಮನೆಗಳ ಮೇಲೆ ಕಲ್ಲು ತೂರಾಟ

Stone-Pelting-on-House-in-Shimoga-Sulebailu

SHIVAMOGGA LIVE NEWS | STONE PELTING | 09 ಮೇ 2022 ಕಾರಿನ ಗಾಜು ಒಡೆದ ಪ್ರಕರಣದ ಬೆನ್ನಿಗೆ ಶಿವಮೊಗ್ಗದ ಸೂಳೆಬೈಲಿನ ಹಲವು ಮನೆಗಳ ಮೇಲೆ ಕಲ್ಲು ತೂರಲಾಗಿದೆ. ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆಯಲ್ಲಿ ಮನೆಗಳ ಗಾಜು ಪುಡಿ ಪುಡಿಯಾಗಿದೆ. ಸೂಳೆಬೈಲು ಸಮೀಪದ ಇಂದಿರಾನಗರದ ತೀರ್ಥಪ್ಪನ ಕ್ಯಾಂಪ್ ನಿವಾಸಿ ಹಫೀಜ್ ಉಲ್ಲಾ (21) ಎಂಬುವವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಅವರ ಮಾವನ ಮನೆ ಮೇಲೆ ಕಲ್ಲು ತೂರಾಟ ನಡೆಸಿದೆ ಎಂದು ಆರೋಪಿಸಲಾಗಿದೆ. ಘಟನೆ … Read more

ಕಾರಿನ ಗಾಜು ಒಡೆದ ಕೇಸ್, ಒಬ್ಬ ಅರೆಸ್ಟ್, ಯಾರದು?

Car-Glass-break-at-Sulebailu-in-Shimoga-City

SHIVAMOGGA LIVE NEWS | ATTACK | 08 ಮೇ 2022 ಶಿವಮೊಗ್ಗದ ಸೂಳೆಬೈಲಿನಲ್ಲಿ ಕಳೆದ ರಾತ್ರಿ ಕಾರು ಗಾಜು ಒಡೆದ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಮತ್ತೋರ್ವನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಅಲ್ಲದೆ ಘಟನೆ ಕುರಿತು ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಅವರು ಹೇಳಿದ್ದೇನು? ಬೆಂಗಳೂರಿನ ನಿವಾಸಿಯೊಬ್ಬರು ಶಿವಮೊಗ್ಗದ ಮತ್ತೂರಿನಲ್ಲಿರುವ ತಮ್ಮ ಸಂಬಂಧಿಯ ಮನೆಗೆ ಆಗಮಿಸಿದ್ದರು. ಕಾರಿನಲ್ಲಿ ಅವರೊಂದಿಗೆ ಸ್ಥಳೀಯರೊಬ್ಬರ ಇದ್ದರು. ರಾತ್ರಿ ಮತ್ತೂರಿಗೆ ಹೋಗಲು ಸೂಳೆಬೈಲು … Read more

ಸೂಳೆಬೈಲ್ ಮುಖ್ಯರಸ್ತೆಯಲ್ಲಿ ಗೃಹ ಸಚಿವರಿಂದ ವಾರ್ನಿಂಗ್, ಏನಂದರು ಹೋಂ ಮಿನಿಸ್ಟರ್?

Home-Minister-Araga-Jnanendra-Warning-at-Sulebailu

SHIVAMOGGA LIVE NEWS | HOME MINISTER | 07 ಮೇ 2022 ಶಿವಮೊಗ್ಗದ ಸೂಳೆಬೈಲಿನಲ್ಲಿ ಕಾರಿನ ಮೇಲೆ ದಾಳಿ ಪ್ರಕರಣದ ಹಿನ್ನೆಲೆ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ಸ್ಥಳೀಯರೊಬ್ಬರಿಗೆ ವಾರ್ನಿಂಗ್ ನೀಡಿದ್ದಾರೆ. ಇಲ್ಲಿರುವ ಹುಡುಗರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದರು. ಮತ್ತೂರು ಗ್ರಾಮಕ್ಕೆ ತೆರಳಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಸೂಳೆಬೈಲು ಮೂಲಕ ಶಿವಮೊಗ್ಗಕ್ಕೆ ಆಗಮಿಸಿದರು. ಈ ಸಂದರ್ಭ ಕಾರಿನ ಮೇಲೆ ದಾಳಿಯಾದ ಸ್ಥಳಕ್ಕೆ ಭೇಟಿ … Read more

ಕಾರು ಗಾಜು ಪೀಸ್ ಪೀಸ್ ಕೇಸ್, ಮತ್ತೂರಿಗೆ ಗೃಹ ಸಚಿವರ ಭೇಟಿ

Home-Minister-Araga-Jnanendra-Visit-Mattur-Village.

SHIVAMOGGA LIVE NEWS | HOME MINISTER | 07 ಮೇ 2022 ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇತ್ತು ಮತ್ತೂರು ಗ್ರಾಮಕ್ಕೆ ಭೇಟಿ ನೀಡಿದ್ದರು. ಕಳೆದ ಸೂಳೆಬೈಲಿನಲ್ಲಿ ಕಾರು ಗಾಜು ಒಡೆದು ಪ್ರಕರಣ ಸಂಬಂಧ ಸ್ಥಳೀಯರಿಂದ ಮಾಹಿತಿ ಪಡೆದರು. ಮತ್ತೂರಿನ ಪ್ರಮುಖರೊಂದಿಗೆ ಗೃಹ ಸಚಿವರು ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಮಚ್ಚು ಲಾಂಗು ಹಿಡಿದು ಒಂದು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಮಾಹಿತಿ ಗೊತ್ತಾದ ಅರ್ಧ … Read more

ಶಿವಮೊಗ್ಗದಲ್ಲಿ ಕಾರಿನ ಮೇಲೆ ಕಲ್ಲು ತೂರಾಟ, ಗ್ಲಾಸ್ ಪೀಸ್, ಪೀಸ್, ಬಿಗುವಿನ ವಾತಾವರಣ

Car-Glass-break-at-Sulebailu-in-Shimoga-City

SHIVAMOGGA LIVE NEWS | STONE PELTING| 06 ಮೇ 2022 ಶಿವಮೊಗ್ಗದ ಸೂಳೆಬೈಲು ಸಮೀಪದ ಇಂದಿರಾ ನಗರದಲ್ಲಿ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಕಾರಿನ ಗಾಜು ಪುಡಿಯಾಗಿದೆ. ಇದರಿಂದ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಜನ ಗುಂಪುಗೂಡಿದರು. ಹಾಗಾಗಿ ಸೂಳೆಬೈಲಿನಲ್ಲಿ ಗೊಂದಲ ಸೃಷ್ಟಿಯಾಯಿತು. ಕೂಡಲೆ ಪೊಲೀಸರು ಬಿಗಿ ಕ್ರಮ ಕೈಗೊಂಡಿದ್ದು, ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ. ಏನಿದು ಪ್ರಕರಣ? ಕಾರು ಶಿವಮೊಗ್ಗದಿಂದ ಮತ್ತೂರು ಕಡೆಗೆ ತೆರಳುತ್ತಿತ್ತು. ಈ ವೇಳೆ ಹಿಂಬದಿಯಿಂದ ಕಲ್ಲು … Read more

ನೀತಿ ಸಂಹಿತೆ ಹಿನ್ನೆಲೆ, ಮತ್ತೂರು ರಸ್ತೆಯಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್, ಆಟೋ ವಶಕ್ಕೆ

011220 illegal liquor seized at Mattur Road Shimoga 1

ಶಿವಮೊಗ್ಗ ಲೈವ್.ಕಾಂ |SHIMOGA NEWS | 1 DECEMBER 2020 ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಯಾದ ಬೆನ್ನಿಗೆ, ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮದ್ಯ ಮತ್ತು ಸಾಗಣೆಗೆ ಬಳಸುತ್ತಿದ್ದ ಆಟೋವನ್ನು ವಶಕ್ಕೆ ಪಡೆಯಲಾಗಿದೆ. ಮತ್ತೂರು ರಸ್ತೆಯಲ್ಲಿ ರಸ್ತೆಗಾವಲು ಮಾಡುತ್ತಿದ್ದ ವೇಳೆ ಆಟೋದಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದದ್ದು ಬೆಳಕಿಗೆ ಬಂದಿದೆ. ಆಟೋದಲ್ಲಿ 77.760 ಲೀಟರ್ ಮದ್ಯ ಸಾಗಣೆ ಮಾಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸಂತೆಕಡೂರು ಗ್ರಾಮದ ಶೇಖರ್ ಎಂಬಾತನನ್ನು ಬಂಧಿಸಲಾಗಿದೆ. ಆಟೋದ ಮೌಲ್ಯ … Read more