ಶಾರದಾ ಪೂರ್ಯಾನಾಯ್ಕ್ ರಾಜ್ಯಕ್ಕೆ ಉತ್ತಮ ಸಚಿವೆ ಆಗಲಿದ್ದಾರೆ, ಮಾಜಿ ಸಿಎಂ ಭವಿಷ್ಯ

sharada-pooryanaik-and-HD-Kumaraswamy.

SHIVAMOGGA LIVE NEWS | MINISTER | 22 ಏಪ್ರಿಲ್ 2022 ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಶಾರದಾ ಪೂರ್ಯಾನಾಯ್ಕ್ ಅವರನ್ನು ಗೆಲ್ಲಿಸಿ ಕಳುಹಿಸಿ. ಜೆಡಿಎಸ್ ಸರ್ಕಾರ ಬಂದರೆ ರಾಜ್ಯಕ್ಕೆ ಒಬ್ಬ ಉತ್ತಮ ಸಚಿವೆ ಸಿಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗ ತಾಲೂಕು ಕೂಡ್ಲಿಯಲ್ಲಿ ಜನತಾ ಜಲಧಾರೆ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಜೆಡಿಎಸ್ ಪಕ್ಷ 120 ಸೀಟು ಗೆಲ್ಲಬೇಕು ಅಂದುಕೊಂಡಿದ್ದೇವೆ. ಅದಕ್ಕಾಗಿ ಈ ಭಾಗದಿಂದ ಶಾರದಾ ಪೂರ್ಯನಾಯ್ಕ್ ಅವರನ್ನು ಗೆಲ್ಲಿಸಿ ಕಳುಹಿಸಿ. ರಾಜ್ಯಕ್ಕೆ ಉತ್ತಮ ಮಹಿಳಾ … Read more

ಶಿವಮೊಗ್ಗದಲ್ಲಿ ಸಿಎಂ, ಮಲೆನಾಡು ಭಾಗದ ಅರಣ್ಯ ಭೂಮಿ ಸಮಸ್ಯೆ ಕುರಿತು ಮಹತ್ವದ ಸಭೆಗೆ ದಿನಾಂಕ ನಿಗದಿ

Chief-MInister-Basavaraja-Bommai-Press-Meet-in-Shimoga

SHIVAMOGGA LIVE NEWS | CHIEF MINISTER | 20 ಏಪ್ರಿಲ್ 2022 ಮಲೆನಾಡು ಭಾಗದಲ್ಲಿ ಅರಣ್ಯ ಭೂಮಿ ಸಾಗುವಳಿ ಸಂಬಂಧದ ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಮೇ ಮೊದಲ ವಾರದಲ್ಲಿ ಪ್ರತ್ಯೇಕ ಸಭೆ ಕರೆಯಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕರಾವಳಿ ಮತ್ತು ಮಲೆನಾಡು ಭಾಗದ ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆ ಕರೆಯುತ್ತಿದ್ದೇನೆ. ಮೇ ಮೊದಲ ವಾರದಲ್ಲಿ ಸಭೆ ಕರೆಯುತ್ತೇನೆ. ಶಿವಮೊಗ್ಗ ಮಾತ್ರವಲ್ಲ ಪಶ್ಚಿಮಘಟ್ಟ … Read more

ಬೊಲೇರೋ ಜೀಪಲ್ಲಿ ಬಂದು ಒಂಟಿ ಮನೆಯಲ್ಲಿ ದರೋಡೆಗೆ ಯತ್ನ

Thirthahalli Name Graphics

SHIVAMOGGA LIVE NEWS | THIRTHAHALLI | 20 ಏಪ್ರಿಲ್ 2022 ಸೋಲಾರ್ ರಿಪೇರಿ ನೆಪದಲ್ಲಿ ಮನೆ ಬಳಿಗೆ ಬಂದವರು ದರೋಡೆ ವಿಫಲ ಯತ್ನ ನಡೆಸಿದ್ದಾರೆ. ಮಹಿಳೆಯರ ಧೈರ್ಯ ಮತ್ತು ಸಮಯ ಪ್ರಜ್ಞೆಯಿಂದ ದರೋಡೆ ತಪ್ಪಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯ ಹೇಳಿದ್ದಾರೆ. ತೀರ್ಥಹಳ್ಳಿ ತಾಲೂಕು ನೆರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಬ್ಬಿ ಹೊರಣಿ ಬಳಿ ಸೋಮವಾರ ಸಂಜೆ … Read more

‘ಆರಗ ಜ್ಞಾನೇಂದ್ರ 7 ಕೋಟಿ ಜನರ ಗೃಹ ಸಚಿವರು ಅನ್ನೋದನ್ನ ಮರೆತಿದ್ದಾರೆ’

270821 Kimmane Rathnakar and Araga Jnanendra

SHIVAMOGGA LIVE NEWS | HOME MINISTER| 19 ಏಪ್ರಿಲ್ 2022 ಆರಗ ಜ್ಞಾನೇಂದ್ರ ಅವರು 7 ಕೋಟಿ ಜನರಿಗೆ ಗೃಹ ಸಚಿವ ಅನ್ನುವುದನ್ನು ಮರೆತಂತಿದೆ. ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಗೆ ಸೀಮಿತವಾಗಿ ಯೋಚನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ್ ಅವರು, ರಾಜ್ಯದಲ್ಲಿ ಕೋಮು ಸಂಘರ್ಷ ಹೆಚ್ಚಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ನೇರ ಕಾರಣ. ಸೌಹಾರ್ದತೆ ಹಾಳಾಗಲು ನೇರ ಕಾರಣ ಅವರೆ. ಆದ್ದರಿಂದ ಆರಗ ಜ್ಞಾನೇಂದ್ರ … Read more

ಶಿವಮೊಗ್ಗದಲ್ಲಿ ಯುವ ಕಾಂಗ್ರೆಸ್, NSUI ಮುಖಂಡರ ಮೇಲೆ ಪೊಲೀಸರ ಹದ್ದಿನ ಕಣ್ಣು

police jeep

SHIVAMOGGA LIVE NEWS | SHIMOGA | 19 ಏಪ್ರಿಲ್ 2022 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಶಿವಮೊಗ್ಗ ಪ್ರವಾಸದ ಹಿನ್ನೆಲೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಚಲನವಲನ ಗಮನಿಸಲು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಳಗ್ಗೆಯಿಂದ ಮುಖಂಡರ ಮನೆಗಳ ಮುಂದೆ ಪೊಲೀಸರು ಠಿಕಾಣಿ ಹೂಡಿದ್ದಾರೆ. ಯುವ ಕಾಂಗ್ರೆಸ್, NSUI ಸೇರಿದಂತೆ ಯುವ ಮುಖಂಡರಿಗೆ ಇವತ್ತು ಬೆಳ್ಳಂಬೆಳಗ್ಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೆಳಿಗ್ಗೆ 6 ಗಂಟೆಗೆಲ್ಲಾ ಮುಖಂಡರುಗಳ ಮನೆ ಮುಂದೆ ಹಾಜರಾದ ಪೊಲೀಸರು, ಮುಖ್ಯಮಂತ್ರಿಗಳ ಕಾರ್ಯಕ್ರಮ ಇರುವುದರಿಂದ ನೀವು ಇಂದು … Read more

ಕರ್ನಾಟಕದಲ್ಲೂ ಉತ್ತರ ಪ್ರದೇಶದಂತೆ ರಸ್ತೆಗಿಳಿಯುತ್ತಾ ಬುಲ್ಡೋಜರ್? ಶಿವಮೊಗ್ಗದಲ್ಲಿ ಸಿಎಂ ಹೇಳಿದ್ದೇನು?

Chief-Minister-Basavaraja-Bommai-in-Shimoga-city

SHIVAMOGGA LIVE NEWS | CHIEF MINISTER | 19 ಏಪ್ರಿಲ್ 2022 ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಎಲ್ಲವೂ ಸರಿ ಇದೆ. ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಶಿವಮೊಗ್ಗಕ್ಕೆ ಆಗಮಿಸಿದ ವೇಳೆ ಹೆಲಿಪ್ಯಾಡ್’ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದಂತೆ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ವೀಡಿಯೋ ಕ್ಲಿಪಿಂಗ್’ಗಳನ್ನು … Read more

ಶಿವಮೊಗ್ಗಕ್ಕೆ ಇವತ್ತು ಮುಖ್ಯಮಂತ್ರಿ ಭೇಟಿ, ಯಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ?

Basavaraja-Bommai-CM-Chief-Minister

SHIVAMOGGA LIVE NEWS | CHIEF MINISTER | 19 ಏಪ್ರಿಲ್ 2022 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇವತ್ತಿನಿಂದ ಮೂರು ದಿನ ಶಿವಮೊಗ್ಗ ಪ್ರವಾಸ ಕೈಗೊಂಡಿದ್ದಾರೆ. ಪಕ್ಷದ ಕಾರ್ಯಕ್ರಮ ಮತ್ತು ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಏಪ್ರಿಲ್ 19ರಂದು ಬೆಳಗ್ಗೆ 11.50ಕ್ಕೆ ಶಿವಮೊಗ್ಗ ಪ್ರವಾಸಿ ಮಂದಿರದ ಹೆಲಿಪ್ಯಾಡ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಲಿದ್ದಾರೆ. ಮಧ್ಯಾಹ್ನ 12ರಿಂದ ಸಂಜೆವರೆಗೆ ಹೋಟೆಲ್ ಹರ್ಷದ ದ ಫರ್ನ್ ಮತ್ತು ಪಿಇಎಸ್ ಕಾಲೇಜಿನಲ್ಲಿ ನಡೆಯುವ ಪಕ್ಷದ ಸಭೆಗಳಲ್ಲಿ ಪಾಲ್ಗೊಳ್ಳುವರು. ರಾತ್ರಿ ನಗರದಲ್ಲೇ … Read more

‘ಈಶ್ವರಪ್ಪ ಮಾತ್ರವಲ್ಲ ಗೃಹ ಸಚಿವರೂ ರಾಜೀನಾಮೆ ಕೊಡಬೇಕು’

Beluru-Gopalakrishna-Press-Meet-in-Shimoga

SHIVAMOGGA LIVE NEWS | SHIMOGA | 13 ಏಪ್ರಿಲ್ 2022 ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಬಳಿಕ ದೇಣಿಗೆ ಸಂಗ್ರಹಿಸಿದ ಮಾದರಿಯಲ್ಲೇ ಸಂತೋಷ್ ಪಾಟೀಲ್ ಕುಟುಂಬಕ್ಕೂ ನೆರವಾಗಬೇಕು. ಕನಿಷ್ಠ ಐದು ಕೋಟಿ ರೂ. ದೇವಣಿಗೆ ಸಂಗ್ರಹಿಸಿ ಕೊಡಬೇಕು ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಹರ್ಷ ಹತ್ಯೆ ಪ್ರಕರಣವನ್ನು ರಾಜ್ಯಾದ್ಯಂತ ಬಿಂಬಿಸಿದರು. ಈಗ ಹಿಂದೂ ಕಾರ್ಯಕರ್ತ ಸಂತೋಷ್ ಪಾಟೀಲ್ ಪ್ರಕರಣ ನಡೆದಿದೆ. ಅದಕ್ಕೆ ನೇರ ಹೊಣೆ ಸಚಿವ … Read more

ಗುತ್ತಿಗೆದಾರನ ಆತ್ಮಹತ್ಯೆ ಕುರಿತು ಶಿವಮೊಗ್ಗದಲ್ಲಿ ಗೃಹ ಸಚಿವರ ಮೊದಲ ಪ್ರತಿಕ್ರಿಯೆ

Home-Minister-Araga-Janendra-About-Udupi-Suicide

SHIVAMOGGA LIVE NEWS | HOME MINISTER | 12 ಏಪ್ರಿಲ್ 2022 ಬಿಜೆಪಿ ಕಾರ್ಯಕರ್ತ ಮತ್ತು ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಆತ್ಮಹತ್ಯೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲಿನ ಆರೋಪ ಸಂಬಂಧವು ಹೇಳಿಕೆ ನೀಡಿದ್ದಾರೆ. ಗೃಹ ಸಚಿವರು ಹೇಳಿದ್ದೇನು? ‘ಉಡುಪಿ ಜಿಲ್ಲಾ ರಕ್ಷಣಾಧಿಕಾರಿ ಅವರ ಜೊತೆಗೆ ಈಗಷ್ಟೆ ಮಾತನಾಡಿದ್ದೇನೆ. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸುತ್ತಿದ್ದಾರೆ. ಅವರು ಬಂದ ಬಳಿಕ ಕೊಠಡಿಯ ಬಾಗಿಲು … Read more

ಸಚಿವ ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಆತ್ಮಹತ್ಯೆ

santosh-patil-suicide-in-the-name-of-Eshwarappa

SHIVAMOGGA LIVE NEWS | SUICIDE| 12 ಏಪ್ರಿಲ್ 2022 ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಶೇ.40ರಷ್ಟು ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಆಪ್ತರಿಗೆ ವಾಟ್ಸಪ್ ಮೆಸೇಜ್ ಕಳುಹಿಸಿದ್ದಾರೆ. ಉಡುಪಿ KSRTC ಬಸ್ ನಿಲ್ದಾಣ ಸಮೀಪದ ಶಾಂಭವಿ ಲಾಡ್ಜ್’ನಲ್ಲಿ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಲೊಕೇಷನ್ ಆಧಾರದ ಮೇಲೆ ಲಾಡ್ಜ್’ಗಳಲ್ಲಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಆಗ ಸಂತೋಷ್ ಪಾಟೀಲ್ … Read more