ಲಾರಿ ಚಕ್ರದಡಿ ಸಿಲುಕಿದ ಬೈಕ್‌, ಇಬ್ಬರು ಸವಾರರು ಸ್ಥಳದಲ್ಲೆ ಸಾವು

Bike-and-Lorry-mishap-at-thirthahalli

ತೀರ್ಥಹಳ್ಳಿ: ಲಾರಿ ಮತ್ತು ಬೈಕ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಆರ್‌.ಎಂ.ಸಿ ಯಾರ್ಡ್‌ ಬಳಿ ತಡರಾತ್ರಿ ಅಪಘಾತವಾಗಿದೆ. ಬೈಕ್‌ ಸವಾರರಾದ ಸುದೀಪ್‌ (25), ಸುಧೀಶ್‌ (30) ಮೃತರು. ಘಟನಾ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಬೈಕ್‌ ನಜ್ಜುಗುಜ್ಜಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ. ಮೃತರು ತೀರ್ಥಹಳ್ಳಿಯ ಯಡೇಹಳ್ಳಿ ಮತ್ತು ಇಂದಿರಾನಗರಕ್ಕೆ ಸೇರಿದವರು. ತೀರ್ಥಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಅಗರದಹಳ್ಳಿ ಕ್ಯಾಂಪ್‌ನ ವ್ಯಕ್ತಿಗೆ … Read more

ಗೋಪಿ ಸರ್ಕಲ್‌ನಿಂದ ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಹೊಡೆಯುತ್ತ ಸಾಗಿದ ಕಾರು, ಏನಿದು ಕೇಸ್?

Car Mishap at Mahaveera Circle in Shimoga

ಶಿವಮೊಗ್ಗ: ಮದ್ಯದ ಅಮಲಿನಲ್ಲಿ ಚಾಲಕನೊಬ್ಬ ಕಾರನ್ನು (CAR) ಯದ್ವತದ್ವ ಚಲಾಯಿಸಿ ಸರಣಿ ಅಪಘಾತ ಮಾಡಿದ್ದಾನೆ. ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಕಾರಿನ ಮುಂಭಾಗ ಜಖಂ ಆಗಿದೆ. ಘಟನೆ ಸಂಬಂಧ ಹೊನ್ನಾಳಿಯ ಕುಮಾರ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು, ಪರೀಕ್ಷೆಗೆ ಒಳಪಡಿಸಿದ್ದಾರೆ. ರಸ್ತೆ ಉದ್ದಕ್ಕೂ ವಾಹನಗಳಿಗೆ ಡಿಕ್ಕಿ ಗೋಪಿ ವೃತ್ತದ ಅಂಬಿಕಾ ಬುಕ್‌ ಸ್ಟೋರ್‌ ಸಮೀಪ ಮೊದಲು ವಾಹನವೊಂದಕ್ಕೆ ಡಿಕ್ಕಿ ಹೊಡೆದ ಕಾರು ಬಾಲರಾಜ ಅರಸ್‌ ರಸ್ತೆಯಲ್ಲಿ ಒಟ್ಟು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಮಹಾವೀರ ವೃತ್ತದಲ್ಲಿ … Read more

ವಾಹನ ಡಿಕ್ಕಿಯಾಗಿ ಏಳು ತಿಂಗಳ ಚಿರತೆ ಸಾವು, ಎಲ್ಲಿ?

7-month-leopard-at-soraba.

ಸೊರಬ: ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ಏಳು ತಿಂಗಳ ಹೆಣ್ಣು ಚಿರತೆ (Leopard) ಮರಿ ಸಾವನ್ನಪ್ಪಿದೆ. ಸೊರಬ ತಾಲೂಕು ಉಳುವಿ – ಸಾಗರ ರಸ್ತೆಯ ಅವಲುಗೋಡು ಬಳಿ ಘಟನೆ ಸಂಭವಿಸಿದೆ. ಬುಧವಾರ ರಾತ್ರಿ ವಾಹನ ಡಿಕ್ಕಿಯಾಗಿ ಗಾಯಗೊಂಡಿದ್ದ ಚಿರತೆ ಮರಿ ಸ್ಥಳದಲ್ಲೆ ಸಾವನ್ನಪ್ಪಿದೆ. ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್‌ ಕುಳ್ಳೊಳ್ಳಿ, ಉಪ ವಲಯ ಅರಣ್ಯಾಧಿಕಾರಿ ಭದ್ರೇಶ್‌, ಉಳಿವಿಯ ಪಶು … Read more

ಹಸೆಮಣೆ ಏರಬೇಕಿದ್ದ ಜೋಡಿ ಅಪಘಾತದಲ್ಲಿ ಸಾವು, ಹೇಗಾಯ್ತು ಘಟನೆ?

couple-succumbed-in-a-mishap-at-Shikaripura

ಶಿಕಾರಿಪುರ: ಬೈಕ್‌ ಮತ್ತು ಕಾರು ಡಿಕ್ಕಿಯಾಗಿ ಹಸೆಮಣೆ ಏರಬೇಕಿದ್ದ ಜೋಡಿ (Couple) ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕಿನ ಅಂಬಾರಗೊಪ್ಪ ಕ್ರಾಸ್‌ನಲ್ಲಿ ಘಟನೆ ಸಂಭವಿಸಿದೆ. ಮೃತರನ್ನು ತಾಲೂಕಿನ ಮಟ್ಟಿಕೋಟೆಯ ರೇಖಾ (20), ತೊಗರ್ಸಿ ಸಮೀಪದ ಗಂಗೊಳ್ಳಿಯ ಬಸವನಗೌಡ ದ್ಯಾಮನಗೌಡ್ರ (25) ಎಂದು ಗುರುತಿಸಲಾಗಿದೆ. ಪಟ್ಟಣದಲ್ಲಿರುವ ಗಾರ್ಮೆಂಟ್ಸ್‌ ಕೆಲಸಕ್ಕೆ ತೆರಳುವವರನ್ನು ಕರೆ ತರುತ್ತಿದ್ದ ಕಾರು ಡಿಕ್ಕಿ ಹೊಡೆದಾಗ ಬೈಕ್ ರಸ್ತೆ ಪಕ್ಕದ ಕಂದಕಕ್ಕೆ ಬಿದ್ದಿದೆ.  ಕಳೆದ ತಿಂಗಳು ರೇಖಾ, ಬಸವನಗೌಡ ನಿಶ್ಚಿತಾರ್ಥ ನಡೆದಿತ್ತು. ಮಳೆಯ ಕಾರಣಕ್ಕೆ ಮದುವೆ ಮುಂದಕ್ಕೆ ಹಾಕಿದ್ದು, ಡಿಸೆಂಬರ್‌ನಲ್ಲಿ ಮದುವೆಗೆ … Read more

ಸಿಗಂದೂರು ರಸ್ತೆಯ ಆವಿನಹಳ್ಳಿ ಸರ್ಕಲ್‌ ಬಳಿ ಓಮ್ನಿ ಕಾರಿಗೆ ಡಿಕ್ಕಿ ಹೊಡೆದು ಪರಾರಿಯಾದ ವಾಹನ

AVINAHALLI SAGARA NEWS 1

ಸಾಗರ: ವಾಹನವೊಂದು ಓಮ್ನಿ ಕಾರಿಗೆ (CAR) ಡಿಕ್ಕಿ ಹೊಡೆದ ಪರಿಣಾಮ ಚಾಲಕ ಗಾಯಗೊಂಡಿದ್ದಾರೆ. ಸಾಗರ ತಾಲೂಕಿನ ಸಿಗಂದೂರ ರಸ್ತೆಯ ಆವಿನಹಳ್ಳಿ ಸರ್ಕಲ್‌ ಬಳಿ ಘಟನೆ ಸಂಭವಿಸಿದೆ. ಓಮ್ನಿ ಕಾರಿನಲ್ಲಿದ್ದ ಸಾಗರದ ಜಯಣ್ಣ (80) ಎಂಬುವವರು ಗಾಯಗೊಂಡಿದ್ದಾರೆ. ಅವರನ್ನು ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತಪಡಿಸಿದ ವಾಹನದ ಚಾಲಕ ಘಟನೆ ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿ ಕೇಸರಿಮಯ, ಎಲ್ಲೆಲ್ಲಿ ಹೇಗಿದೆ ಅಲಂಕಾರ? … Read more

ಶಿವಮೊಗ್ಗದಲ್ಲಿ ಬೈಕ್‌ಗಳು ಮುಖಾಮುಖಿ ಡಿಕ್ಕಿ, ನ್ಯಾಮತಿಯ ವ್ಯಕ್ತಿ ಸಾವು

ACCIDENT-NEWS-GENERAL-IMAGE.

ಶಿವಮೊಗ್ಗ: ಓವರ್‌ ಟೇಕ್‌ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಮತ್ತೊಂದು ಬೈಕ್‌ ಡಿಕ್ಕಿ (Mishap) ಹೊಡೆದಿದೆ. ಘಟನೆಯಲ್ಲಿ ಓರ್ವ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ. ಮತ್ತಿಬ್ಬರು ಗಾಯಗೊಂಡಿದ್ದಾರೆ. ಶಿವಮೊಗ್ಗ ತಾಲೂಕು ಗೆಜ್ಜೇನಹಳ್ಳಿ ಮತ್ತು ಜಕಾತಿಕೊಪ್ಪ ಮಧ್ಯೆ ಘಟನೆ ಸಂಭವಿಸಿದೆ. ನ್ಯಾಮತಿಯ ಚಿನ್ನಿಕಟ್ಟೆ ನಿವಾಸಿ ನರಸಿಂಹ (25) ಎಂಬಾತ ಮೃತಪಟ್ಟಿದ್ದಾರೆ. ಕೆಲಸದ ನಿಮಿತ್ತ ನರಸಿಂಹ ತೆರಳುತ್ತಿದ್ದ ಬೈಕ್‌ಗೆ ಎದುರಿನಿಂದ ಬಂದ ಮತ್ತೊಂದು ಬೈಕ್‌ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ನರಸಿಂಹಗೆ ತೀವ್ರ ಗಾಯವಾಗಿತ್ತು. ಕೂಡಲೆ ಆತನನ್ನು ಮೆಗ್ಗಾನ್‌ … Read more

ಕೈಮರ ಸರ್ಕಲ್‌ನಲ್ಲಿ ಅಪಘಾತ, ವ್ಯಕ್ತಿಯ ಎರಡು ಪಾದಗಳು ಅರ್ಧಕ್ಕೆ ಕಟ್‌, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಭದ್ರಾವತಿ: ರಸ್ತೆ ದಾಟುವಾಗ ವಾಹನ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬರ ಎರಡು ಪಾದಗಳು (Feet) ಅರ್ಧಕ್ಕೆ ಮುರಿದಿವೆ. ಯಡೇಹಳ್ಳಿ ಮತ್ತು ಕೈಮರ ಗ್ರಾಮಗಳ ಮಧ್ಯದ ಕೈಮರ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಿಪ್ಪೇರುದ್ರಸ್ವಾಮಿ ಎಂಬುವವರನ್ನು ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೇಗಾಯ್ತು ಘಟನೆ? ತಿಪ್ಪೇರುದ್ರಸ್ವಾಮಿ ಅವರು ಕೈಮರ ಸರ್ಕಲ್‌ನಲ್ಲಿರುವ ಅಂಗಡಿಯಲ್ಲಿ ಟೀ ಕುಡಿಯಲು ಬೈಕ್‌ ನಿಲ್ಲಿಸಿದ್ದರು. ಮೂತ್ರ ವಿಸರ್ಜನೆಗೆಂದು ರೆಸ್ತೆ ದಾಟಿ ಹೋಗಿದ್ದರು. ಟೀ ಅಂಗಡಿ ಬಳಿ ಮರಳಿ ಬರುವಾಗ ಶಿವಮೊಗ್ಗದಿಂದ ಚನ್ನಗಿರಿ … Read more

ಯಡೇಹಳ್ಳಿಯಲ್ಲಿ ಅಪಘಾತ, ತೀವ್ರ ಗಾಯಗೊಂಡಿದ್ದ ಯುವಕ ಸಾವು, ಮಾನವೀಯತೆ ಮೆರೆದ ಪೋಷಕರು

Yadehalli-mishap-youth-donates-eyes

ಹೊಳೆಹೊನ್ನೂರು: ಯಡೇಹಳ್ಳಿಯಲ್ಲಿ ಅಪರಿಚಿತ ಸರಕು ಸಾಗಣೆ ವಾಹನ (Goods Vehicle) ಡಿಕ್ಕಿಯಾಗಿ ಗಾಯಗೊಂಡಿದ್ದ ಬಿ.ಪುನೀತ್‌ ರಾಜ್ (19) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಯಡೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಪುನೀತ್‌ರಾಜ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಿಂದಾಗಿ ಬಹು ಅಂಗಾಂಗಕ್ಕೆ ಪೆಟ್ಟಾಗಿ ಹಾನಿಯಾಗಿ, ಕೋಮಾ ತಲುಪಿದ್ದರು. ಇದನ್ನೂ ಓದಿ » ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಿಕಿತ್ಸೆಗೆ ಸ್ಪಂದಿಸದ … Read more

ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬಸ್‌ ಡಿಕ್ಕಿ, ಸಾವು, ಹೇಗಾಯ್ತು ಘಟನೆ?

SHIKARIPURA-NEWS-UPDATE.

ಶಿಕಾರಿಪುರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ (Bus) ಹೊಡೆದು ಮೃತಪಟ್ಟಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಚಾನಲ್ ಸಮೀಪ ಘಟನೆ ಸಂಭವಿಸಿದೆ. ವಿನಾಯಕ ನಗರದ ಕಟ್ಟಡ ಕಾರ್ಮಿಕ ಶಿವಾಜಿರಾವ್ (49) ಮೃತರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾಜಿರಾವ್‌ ಅವರನ್ನು ವಿದ್ಯಾರ್ಥಿಗಳಾದ ನವೀನ್‌ ಮತು ಕೌಶಿಕ್‌ ತಮ್ಮ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟೊತ್ತಿಗಾಗಲೇ ಶಿವಾಜಿರಾವ್‌ ಕೊನೆಯುಸಿರೆಳೆದಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಅಪಘಾತ ಸಂಬಂಧ … Read more

BREAKING NEWS | ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ

Bus-Truck-Mishap-near-Gajanuru-in-Shimoga

ಶಿವಮೊಗ್ಗ: ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಖಾಸಗಿ ಬಸ್‌ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಗಾಜನೂರು ಅಗ್ರಹಾರದ ಬಳಿ ಇಂದು ಬೆಳಗಿನ ಜಾವ ಅಪಘಾತ (Mishap) ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಉಚಿತವಾಗಿ ಹೆಪಟೈಟಿಸ್‌ ಬಿ ತಪಾಸಣೆ ಶಿಬಿರ, ಲಸಿಕೆ ವಿತರಣೆ, ಈಗಲೆ ಹೆಸರು ನೋಂದಣಿಗೆ ಸೂಚನೆ ಖಾಸಗಿ ಬಸ್ಸಿನ ನಿರ್ವಾಹಕ ಅಣ್ಣಪ್ಪ ಮೃತರಾಗಿದ್ದಾರೆ. ಮತ್ತೊಬ್ಬರ ಗುರುತು ಪತ್ತೆಯಾಗಿಲ್ಲ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಯಲ್ಲಿ 13 ಜನ ಗಾಯಗೊಂಡಿದ್ದು … Read more