ಮಲೆನಾಡು ಶಾಸಕರಿಂದ ವಿಧಾನಸಭೆ ಸ್ಪೀಕರ್‌ಗೆ ಪತ್ರ, ಏನಿದೆ ಪತ್ರದಲ್ಲಿ? ಎಂಎಲ್‌ಎ ಹೇಳಿದ್ದೇನು?

Sagara-Beluru-Gopalakrishna-press-meet

ಸಾಗರ: ಮುಂಬರುವ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮಲೆನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ವಿಶೇಷ ಕಾಲವಕಾಶ ಕೋರಿ ಮಲೆನಾಡು ಭಾಗದ ಶಾಸಕರಿಂದ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು. ಸಾಗರದ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಕ್ಕುಪತ್ರ, ವನ್ಯಜೀವಿಗಳ ಉಪಟಳ, ಅಡಿಕೆಗೆ ರೋಗಬಾಧೆ ಮತ್ತಿತರ ಸಮಸ್ಯೆಗಳು ಮಲೆನಾಡು ಜನರನ್ನು ಪ್ರತಿನಿತ್ಯ ಕಾಡುತ್ತಿವೆ. ಈ ಬಗ್ಗೆ ಶಾಸನ ಸಭೆಯಲ್ಲಿ ವಿವರವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಲೆನಾಡು ಭಾಗದ ಶಾಸಕರೆಲ್ಲರೂ ಪಕ್ಷಾತೀತವಾಗಿ … Read more

ಶಿವಮೊಗ್ಗ ಸಿಟಿಯ ರಸ್ತೆ ಗುಂಡಿಗಳನ್ನು ಮುಚ್ಚಲು ಡೆಡ್‌ಲೈನ್‌ ಫಿಕ್ಸ್‌, ಯಾವಾಗ?

MLA-Channabasappa-gives-deadline-to-clear-pot-holes.

ಶಿವಮೊಗ್ಗ: ಪಾಲಿಕೆ ಇಂಜಿನಿಯರ್‌ಗಳು ತಮ್ಮ ವ್ಯಾಪ್ತಿಯ ರಸ್ತೆ ಗುಂಡಿಗಳ (Pot Holes) ಬಗ್ಗೆ ವರದಿ ಸಲ್ಲಿಸಬೇಕು. ಶೂನ್ಯ ಗುಂಡಿ ಅಭಿಯಾನದ ಮೂಲಕ ಅವುಗಳನ್ನು ಮುಚ್ಚಬೇಕು ಎಂದು ಶಾಸಕ ಎಸ್‌.ಎನ್.ಚನ್ನಬಸಪ್ಪ ಡೆಡ್‌ಲೈನ್‌ ಫಿಕ್ಸ್‌ ಮಾಡಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಸ್ತೆ ಗುಂಡಿಗಳನ್ನು ಬಂದ್‌ ಮಾಡುವಂತೆ ಸೂಚಿಸಿದರು. ಸಂಜೆ ಪರಿಶೀಲನೆ ಕಡ್ಡಾಯ ವಿದ್ಯುತ್ ನಿಧಿಯನ್ನು ಸಮರ್ಥವಾಗಿ ಬಳಸಿಕೊಂಡು, ನಗರದಾದ್ಯಂತ ಹಾಳಾಗಿರುವ ಬೀದಿ ದೀಪಗಳನ್ನು ತ್ವರಿತವಾಗಿ ಸರಿಪಡಿಸಬೇಕು. ಪ್ರತಿ ಸಂಜೆ 6 ಗಂಟೆಯ ನಂತರ … Read more

‘ವರಿಷ್ಠರ ಭೇಟಿಗೆ ದೆಹಲಿಗೆ ತೆರಳುವೆ’, ಸಚಿವ ಸ್ಥಾನದ ಬಗ್ಗೆ ಸಾಗರ ಎಂಎಲ್‌ಎ ಏನಂದ್ರು?

Sagara-Beluru-Gopalakrishna-press-meet

ಸಾಗರ: ನಾನು ಹಿರಿಯ ಶಾಸಕ. ನನಗೆ ಸಚಿವ (Minister) ಸ್ಥಾನ ಸಿಗುವ ವಿಶ್ವಾಸ ಇದೆ. ಅಗತ್ಯ ಬಿದ್ದರೆ ವರಿಷ್ಠರ ಭೇಟಿಗೆ ಹೊಸದಿಲ್ಲಿಗೂ ತೆರಳುವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ದೃಢವಾಗಿ ಹೇಳಿದರು. ಸಾಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಹಿಂದುಳಿದ ವರ್ಗಕ್ಕೆ ಸೇರಿದ ನನಗೆ ಸಚಿವ ಸ್ಥಾನ ಕೊಡಿ ಎಂದು ಹಿಂದೆ ಹೊಸದಿಲ್ಲಿಗೆ ಹೋಗಿದ್ದಾಗ ವರಿಷ್ಠರಿಗೆ ಮನವಿ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಳಿಯೂ ಕೇಳಿದ್ದೇನೆ. ನನ್ನ ಹಕ್ಕನ್ನು ಕೇಳಲು ಮುಜುಗರವಿಲ್ಲ ಎಂದರು. ಮುಖ್ಯಮಂತ್ರಿ ಬದಲಾವಣೆ, … Read more

ಮಾಜಿ MLAಯನ್ನು ಕೆಳಗೆ ಉರುಳಿಸಿದ ಹೋರಿ, ವಿಡಿಯೋ ವೈರಲ್

251025-Hori-Hits-former-MLA-at-Shikaripura.webp

ಶಿಕಾರಿಪುರ: ಹೋರಿ ಹಬ್ಬ ವೀಕ್ಷಿಸಲು ತೆರಳಿದ್ದ ಮಾಜಿ ಶಾಸಕ (Former MLA) ಮಹಲಿಂಗಪ್ಪ ಅವರಿಗೆ ಹೋರಿ ತಿವಿದಿದೆ. ಅದೃಷ್ಟವಶಾತ್‌ ಅವರು ಪಾರಾಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದೆ. ಮಾಜಿ ಶಾಸಕ ಮಹಾಲಿಂಗಪ್ಪ ಶಿಕಾರಿಪುರದ ಬಳ್ಳಿಗಾವಿಯ ಹೋರಿ ಹಬ್ಬಕ್ಕೆ ತೆರಳಿದ್ದರು. ಹೋರಿಯೊಂದು ಜನರನ್ನು ಓಡಿಸಿಕೊಂಡು ಬಂದಿತ್ತು. ಕೂಡಲೆ ಮಹಾಲಿಂಗಪ್ಪ ಅವರು ಮನೆಯೊಂದರ ಬಾಗಿಲಿನ ಬಳಿ ತೆರಳಿ ನಿಂತಿದ್ದರು. ಅವರತ್ತ ನುಗ್ಗಿದ ಹೋರಿ ಕೊಂಬಿನಲ್ಲಿ ಮಹಾಲಿಂಗಪ್ಪ ಅವರ ಬಟ್ಟೆಗೆ ಚುಚ್ಚಿ ಮೇಲೆ ಎತ್ತಿ ಕೆಳಗೆ ಬೀಳಿಸಿತ್ತು. ಅದೃಷ್ಟವಶಾತ್‌ ಮಹಾಲಿಂಗಪ್ಪ ಪಾರಾಗಿದ್ದಾರೆ. … Read more

ಅರಣ್ಯ ಸಚಿವರನ್ನು ಭೇಟಿಯಾದ ಭದ್ರಾವತಿ MLA, 3 ಯೋಜನೆಗಳ ಕುರಿತು ಪ್ರಸ್ತಾಪ

Bhadravathi-MLA-sangameshwara-meets-minister-eshwar-khandre.

ಭದ್ರಾವತಿ: ಅರಣ್ಯ (forest) ಸಚಿವ ಈಶ್ವರ ಖಂಡ್ರೆ ಅವರನ್ನು ಶಾಸಕ ಬಿ.ಕೆ.ಸಂಗಮೇಶ್ವರ ಭೇಟಿ ನೀಡಿ ಮೂರು ಪ್ರಮುಖ ಯೋಜನೆಗಳ ಕುರಿತು ಚರ್ಚಿಸಿದರು. ಈ ಸಂದರ್ಭ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ಶಾಸಕರ ಡಿಮಾಂಡ್‌ಗಳೇನು? ಬೆಳ್ಳಿಗೆರೆ, ಗಂಗೂರು, ದೇವರಹಳ್ಳಿ, ಕಾಚಗೊಂಡನಹಳ್ಳಿ ಗ್ರಾಮಗಳ ಅರಣ್ಯ ಪ್ರದೇಶಗಳಲ್ಲಿ ರೈಲ್ವೆ ಬ್ಯಾರಿಕೇಡ್ ಹಾಗೂ ಆನೆ ನಿರೋಧಕ ಕಂದಕ (ಇ.ಪಿ.ಟಿ) ಸೋಲಾರ್ ಟೆಂಟಕಲ್ಸ್ ಕಾಮಗಾರಿಯನ್ನು ₹20 ಕೋಟಿ ವೆಚ್ಚದಲ್ಲಿ ತುರ್ತಾಗಿ ನಡೆಸಬೇಕು. ಗಂಗೂರು, ದೇವರಹಳ್ಳಿ ಕಾಚಗೊಂಡನಹಳ್ಳಿ ಗ್ರಾಮಗಳ ಸುಮಾರು 850 ಹೆಕ್ಟರ್ … Read more

ಸಿಟಿ ಸೆಂಟರ್‌ ಪಕ್ಕದ ಅಂಡರ್‌ ಪಾಸ್‌ಗೆ ಎಂಎಲ್‌ಎ ಭೇಟಿ, ತ್ವರಿತ ಕ್ರಮಕ್ಕೆ ಸೂಚನೆ

MLA-Channabasappa-visit-Underpass-near-city-centre

ಶಿವಮೊಗ್ಗ: ನಗರದ (City) ಸಿಟಿ ಸೆಂಟರ್‌ ಪಕ್ಕದಲ್ಲಿರುವ ಅಂಡರ್‌ ಪಾಸ್‌ನಲ್ಲಿ ಮಳೆ ನೀರು ತುಂಬಿ ರಸ್ತೆ ಮೇಲೆ ಹರಿದು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಎಸ್‌.ಎನ್.ಚನ್ನಸಬಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ವಿಷಯ ತಿಳಿಸಿ ತ್ವರಿತ ಕ್ರಮ ಕೈಗೊಳ್ಳಬೇಕು. ಅಲ್ಲದೆ ಮೋಟರ್‌ ಬಳಸಿ ನೀರು ಹೊರ ಹಾಕಿ ಎಂದು ಸೂಚಿಸಿದರು. ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ … Read more

ವಿದ್ಯಾನಗರ ಆರೋಗ್ಯ ಕೇಂದ್ರಕ್ಕೆ ಎಂಎಲ್‌ಎ ದಿಢೀರ್‌ ಭೇಟಿ, ಸ್ಥಳೀಯ ಬಡಾವಣೆಗಳ ನಿವಾಸಿಗಳ ಜೊತೆ ಚರ್ಚೆ

MLA-channabasappa-visit-Vidyanagara-Health-Centre.

ಶಿವಮೊಗ್ಗ: ನಗರದ ದಾಮೋದರ ಬಡಾವಣೆ ಮತ್ತು ಇಸ್ಲಾಪುರ ಬಡಾವಣೆಗಳಿಗೆ ಶಾಸಕ ಎಸ್‌.ಎನ್.ಚನ್ನಬಸಪ್ಪ ಭೇಟಿ (Visit) ನೀಡಿದ್ದರು. ಸ್ಥಳೀಯರೊಂದಿಗೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದರು. ಇದನ್ನೂ ಓದಿ » ಶಿವಮೊಗ್ಗ ಜೈಲಿನಿಂದ ಕೋರ್ಟ್‌ಗೆ ಹೊರಟಿದ್ದ ಖೈದಿಯ ಜೇಬಿಗೆ ಕೈ ಹಾಕಿದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಸಿಕ್ಕಿದ್ದೇನು? ಬಡಾವಣೆಗಳಲ್ಲಿ ಸ್ವಚ್ಛತೆ, ಕುಡಿಯುವ ನೀರು, ಬೀದಿ ದೀಪಗಳ ಸಮಸ್ಯೆಯಿದೆ ಎಂದು ಸಾರ್ವಜನಿಕರು ದೂರಿದರು. ಈ ಸಂದರ್ಭ ಆಕ್ರೋಶಗೊಂಡ ಶಾಸಕ ಚನ್ನಬಸಪ್ಪ, ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಆರೋಗ್ಯ ಕೇಂದ್ರಕ್ಕೆ ಭೇಟಿ ವಿದ್ಯಾನಗರದ … Read more

ಆಯನೂರಿನಲ್ಲಿ ಇಂದು ಶಾಸಕಿ ಶಾರದಾ ಪೂರ್ಯಾನಾಯ್ಕ್‌ ಜನಸ್ಪಂದನಾ ಕಾರ್ಯಕ್ರಮ

Ayanur Graphics

ಶಿವಮೊಗ್ಗ: ಗ್ರಾಮಾಂತರ ಕ್ಷೇತ್ರದ ಶಾಸಕಿ (MLA) ಶಾರದಾ ಪೂರ್ಯಾನಾಯ್ಕ ಅವರು ತಾಲ್ಲೂಕಿನ ಕುಂಸಿ, ಆಯನೂರು ಮತ್ತು ಹಾರನಹಳ್ಳಿ ಹೋಬಳಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಜುಲೈ 7ರಂದು ಆಯನೂರಿನ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಸಭಾ ಭವನದಲ್ಲಿ ಜನಸ್ಪಂದನ ಸಭೆ ನಡೆಸಲಿದ್ದಾರೆ. ಈ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ತಹಶೀಲ್ದಾರ್ ವಿ.ಎಸ್.ರಾಜೀವ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಭದ್ರಾ ಜಲಾಶಯದ ಒಳ ಹರಿವು ತುಸು ಏರಿಕೆ, ಇವತ್ತು ನೀರಿನ ಮಟ್ಟ ಎಷ್ಟಿದೆ?

ಶಿವಮೊಗ್ಗದಲ್ಲಿ ಆರೋಪ ಪಟ್ಟಿ ಅಭಿಯಾನ, 8 ಪುಟದ ಚಾರ್ಜ್‌ ಶೀಟ್‌ ಬಿಡುಗಡೆ ಮಾಡಿದ MLA, ಏನಿದು?

MLA channabasappa released chargesheet

ಶಿವಮೊಗ್ಗ: ರಾಜ್ಯದ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ 8 ಪುಟದ ಚಾರ್ಜ್‌ಶೀಟ್‌ (CHARGESHEET) ಅನ್ನು ಶಾಸಕ ಎಸ್‌.ಎನ್.ಚನ್ನಬಸಪ್ಪ ಬಿಡುಗಡೆ ಮಾಡಿದರು. ಬಳಿಕ ಸಾರ್ವಜನಿಕರಿಗೆ ವಿತರಿಸಿದರು. ಈ ಸಂದರ್ಭ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಜನರಿಗೆ ಮನವರಿಕೆ ಮಾಡಿದರು. ಇದೆ ವೇಳೆ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚನ್ನಬಸಪ್ಪ, ಶೂನ್ಯ ಅಭಿವೃದ್ಧಿ, ದುರಾಡಳಿತದಿಂದ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಆರೋಪಿಸಿದರು. ಎಂಎಲ್‌ಎ ಏನೆಲ್ಲ ಹೇಳಿದರು? ಸಾರ್ವಜನಿಕರಿಂದ ಹಣವನ್ನು ಲೂಟಿ ಮಾಡುವುದು ಹೇಗೆ? ಅವರ ಜೇಬಿಗೆ ಕತ್ತರಿ ಹಾಕುವುದು … Read more

ಸಾಗರದ ಉಪ ಕಾರಗೃಹಕ್ಕೆ ಎಂಎಲ್‌ಎ ಭೇಟಿ, ಕಟ್ಟಡ ದುರಸ್ತಿ ಕಾಮಗಾರಿ ಪರಿಶೀಲನೆ

MLA-Beluru-Gopalakrishna-visits-sub-jail-in-sagara

ಸಾಗರ : ವರದಾ ರಸ್ತೆಯಲ್ಲಿರುವ ಉಪ ಕಾರಾಗೃಹ ಕಟ್ಟಡದ (Jail Building) ರಿಪೇರಿ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ. ಶೀಘ್ರವೇ ನವೀಕೃತ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಉಪ ಕಾರಾಗೃಹ ಕಟ್ಟಡದ ದುರಸ್ತಿ ಕಾಮಗಾರಿಯನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಾಣವಾಗಿದ್ದ ಉಪ ಕಾರಾಗೃಹ ಕಟ್ಟಡ ಶಿಥಿಲಗೊಂಡಿದ್ದ ಕಾರಣ ನವೀಕೃತ ಕಟ್ಟಡ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು. ಕಟ್ಟಡದ ನವೀಕರಣಕ್ಕೆ 1.16 ಕೋಟಿ ರೂ. ಮಂಜೂರಾಗಿದೆ. ಕಾರಾಗೃಹದ ವಾರ್ಡನ್ ಹಾಗೂ … Read more