ಮತದಾನ ಮಾಡಿದವರಿಗೆ ನಂಜಪ್ಪ ಆಸ್ಪತ್ರೆಯಲ್ಲಿ ಭಾರಿ ರಿಯಾಯಿತಿ, ಯಾವ್ಯಾವ ಪರೀಕ್ಷೆಗೆ ಡಿಸ್ಕೌಂಟ್ ಇದೆ?
SHIVAMOGGA LIVE NEWS | 6 MAY 2024 SHIMOGA : ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಿದರೆ ಲ್ಯಾಬ್ ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡುವುದಾಗಿ ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ರಿಯಾಯಿತಿ ಶಿವಮೊಗ್ಗ ಮತ್ತು ದಾವಣಗೆರೆಯ ನಂಜಪ್ಪ ಆಸ್ಪತ್ರೆ, ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಲಭ್ಯ. ಲ್ಯಾಬ್ ಪರೀಕ್ಷೆಗಳ ಮೇಲೆ ಶೇ.25ರಷ್ಟು ರಿಯಾಯಿತಿ. ಇಸಿಜಿ, ಇಕೋ, ಟಿ.ಎಂ.ಟಿ, ಸಿ.ಟಿ, ಎಂ.ಆರ್.ಐ, ಅಲ್ಟ್ರಾ ಸೌಂಡ್ ಮತ್ತು ಮ್ಯಾಮೋಗ್ರಾಫಿ ಪರೀಕ್ಷೆಗಳ ಮೇಲೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ. … Read more