ನೆಟ್ ವರ್ಕ್ ಸಮಸ್ಯೆ, ಕೇಂದ್ರ ಸಚಿವರಿಗೆ ಹಳ್ಳಿಗಳ ಹೆಸರಿನ ಪಟ್ಟಿ ಸಹಿತ ಮನವಿ, ಯಾವೆಲ್ಲ ಊರಿನ ಹೆಸರಿದೆ?

BY-Raghavendra-Submits-Memorandum-to-telecom-ministry.

ಶಿವಮೊಗ್ಗ | ಜಿಲ್ಲೆಯಲ್ಲಿ ನೆಟ್ ವರ್ಕ್ (NETWORK) ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು. ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದರು. ಜಿಲ್ಲೆಯ 80 ಗ್ರಾಮಗಳು ಸೇರಿದಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಇಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ … Read more

ಶರಾವತಿ ಹಿನ್ನೀರು ಭಾಗದ ನೆಟ್ ವರ್ಕ್ ಹೋರಾಟ ಮತ್ತಷ್ಟು ತೀವ್ರ

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 01 ಅಕ್ಟೋಬರ್ 2021 ಮೊಬೈಲ್ ನೆಟ್ ವರ್ಕ್’ಗಾಗಿ ನಡೆಯುತ್ತಿರುವ ಹೋರಾಟ ಮತ್ತೊಂದು ಸ್ವರೂಪ ಪಡೆದುಕೊಂಡಿದೆ. ಗಾಂಧಿ ಜಯಂತಿಯಂದು ಪಾದಯಾತ್ರೆ ಮತ್ತು ರಸ್ತೆ ತಡೆ ಮಾಡಲು ಜನರು ನಿರ್ಧರಿಸಿದ್ದಾರೆ ಸಾಗರ ತಾಲೂಕು ಶರಾವತಿ ಹಿನ್ನೀರು ಪ್ರದೇಶದ ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿನಕಾರು, ಕಾರಣಿ, ಹಾಳಸಸಿ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಮೊಬೈಲ್ ನೆಟ್ ವರ್ಕ್ ಮರೀಚಿಕೆಯಾಗಿದೆ. ಇದನ್ನು ಓದಿ | ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ … Read more

ಪುಷ್ಯಾ ಮಳೆ ಅಬ್ಬರಕ್ಕೆ ಕತ್ತಲಲ್ಲಿ ಗ್ರಾಮಗಳು, ಇದ್ದ ಒಂದು ಪಾಯಿಂಟ್ ನೆಟ್​​ವರ್ಕ್​​ ಕೂಡ ಮಾಯ

200920 Agumbe Heavy Rain 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಜುಲೈ 2021 ಭಾರಿ ಮಳೆಯಿಂದಾಗಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ರಸ್ತೆಗಳು ಕೊಚ್ಚಿ ಹೋಗಿವೆ. ಬೆಳೆಹಾನಿ ಸಂಭವಿಸಿದೆ. ಆಸ್ತಿಪಾಸ್ತಿಗೂ ಹಾನಿಯಾಗಿದೆ. ಈ ನಡುವೆ ಹಲವು ಗ್ರಾಮಗಳು ಹೊರ ಜಗತ್ತಿನೊಂದಿಗೆ ಸಂಪರ್ಕ ಕಳೆದುಕೊಂಡು, ಕತ್ತಲಲ್ಲಿ ಕೂರುವಂತಾಗಿದೆ. ಪುಷ್ಯಾ ಮಳೆಯ ಅಬ್ಬರಕ್ಕೆ ಶಿವಮೊಗ್ಗ ಜಿಲ್ಲೆ ತತ್ತರಿಸಿ ಹೋಗಿದೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಮರಗಳು ಉರುಳಿವೆ. ಗ್ರಾಮಗಳನ್ನು ಸಂಪರ್ಕಿಸುವ ರಸ್ತೆಗಳೆ ಕಣ್ಮರೆಯಾಗಿವೆ. ಈ ನಡುವೆ ಜನರು ಕತ್ತಲಲ್ಲಿ ಕೂರುವಂತಾಗಿದೆ. ಕತ್ತಲಲ್ಲೇ ಕಾಲ … Read more

ಬಸ್ ಸಂಚಾರ ಪುನಾರಂಭಕ್ಕೆ ಆಗ್ರಹ, ಮೊಬೈಲ್ ನೆಟ್ವರ್ಕ್ಗೆ ಒತ್ತಾಯ, ಶಿವಮೊಗ್ಗದಲ್ಲಿ ಪ್ರತಿಭಟನೆ

200721 ABVP Protest For Mobile Network 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2021 ಮೊಬೈಲ್‍ ನೆಟ್‍ವರ್ಕ್ ಸಮಸ್ಯೆ ಬಗೆಹರಿಸಬೇಕು, ಬಸ್‍ ಸೌಕರ್ಯ ಪುನಾರಂಭ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆನ್‍ಲೈನ್ ತರಗತಿಗಳು ನಡೆಯುತ್ತಿದ್ದು, ಜಿಲ್ಲೆಯ ವಿವಿಧೆಡೆ ಮೊಬೈಲ್‍ ನೆಟ್‍ವರ್ಕ್ ಸಮಸ್ಯೆ ಉಂಟಾಗಿದೆ. ಇದರಿಂದ ವಿದ್ಯಾರ್ಥಿಗಳು ಸಮರ್ಪಕವಾಗಿ ತರಗತಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆದ್ದರಿಂದ ಕೂಡಲೆ ನೆಟ್‍ವರ್ಕ್ ಸಮಸ್ಯೆ ಬಗೆಹರಿಸುವಂತೆ … Read more

ನೋ ನೆಟ್​​ವರ್ಕ್​, ನೋ ವೋಟಿಂಗ್, ಗ್ರಾಮಸ್ಥರಿಂದ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರದ ವಾರ್ನಿಂಗ್

130721 Kudaruru Village No Protest 1

ಶಿವಮೊಗ್ಗ ಲೈವ್.ಕಾಂ | SAGARA NEWS | 13 ಜುಲೈ 2021 ಶರಾವತಿ ಹಿನ್ನೀರು ಭಾಗದಲ್ಲಿ ಮೊಬೈಲ್ ನೆಟ್‍ವರ್ಕ್ ಸಮಸ್ಯೆ ಉಲ್ಬಣಗೊಂಡಿದೆ. ಆಕ್ರೋಶಗೊಂಡಿರುವ ಸ್ಥಳೀಯರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ಈಗಾಗಲೆ ‘ನೋ ನೆಟ್‍ವರ್ಕ್, ನೋ ವೋಟಿಂಗ್’ ಅಭಿಯಾನ ಶುರುವಾಗಿದೆ. ಭಾರಿ ಬೆಂಬಲವು ವ್ಯಕ್ತವಾಗುತ್ತಿದೆ. ಇದು ಚುನಾವಣೆ ಸಿದ್ಧತೆ, ಟಿಕೆಟ್‍ ಪೈಪೋಟಿಗೆ ಬಿದ್ದಿರುವ ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ. ಹೊಸ ಕ್ಷೇತ್ರಕ್ಕೆ ತಟ್ಟಿದ ಬಿಸಿ ಸಾಗರ ತಾಲೂಕಿನಲ್ಲಿ ಕುದರೂರು ಜಿಲ್ಲಾ ಪಂಚಾಯಿತಿ … Read more

5ಜಿ ಯುಗದಲ್ಲೂ ಇಲ್ಲ ಸಿಗ್ನಲ್, ನೆಟ್​​​ವರ್ಕ್​ಗಾಗಿ ಮರದಡಿ ಟೆಂಟ್, ಆನ್​​ಲೈನ್ ಕ್ಲಾಸ್​​ಗಾಗಿ​​​ 12 ಕಿ.ಮೀ ಹೋಗ್ತಾರೆ ಸ್ಟೂಡೆಂಟ್ಸ್

030621 No Network In Varamaballi At Hosanagara 1

ಶಿವಮೊಗ್ಗ ಲೈವ್.ಕಾಂ | HOSANAGARA / SAGARA NEWS | 3 JUNE 2021 ಸ್ಥಳ : ವಾರಂಬಳ್ಳಿ , ಹೊಸನಗರ ತಾಲೂಕು   ವರ್ಕ್ ಫ್ರಂ ಹೋಂ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ಬಂದಿರುವ ಸಿಂಧು. ಮನೆ ಬಳಿ ಮೊಬೈಲ್ ನೆಟ್‍ ವರ್ಕ್‍ ಸಿಗುತ್ತಿಲ್ಲ. ಊರಾಚೆಗೆ ಸಿಗ್ನಲ್ ಸಿಗುವ ಕಡೆ, ಟೆಂಟ್ ನಿರ್ಮಿಸಿ ಕೆಲಸ ಮಾಡುತ್ತಿದ್ದಾರೆ. ಸ್ಥಳ : ವಾರಂಬಳ್ಳಿ, ಹೊಸನಗರ ತಾಲೂಕು ಅಪರೂಪಕ್ಕೆ ಸಿಗುತ್ತಿದ್ದ ನೆಟ್‍ ವರ್ಕ್‍ ಮಳೆ ಸುರಿದಿದ್ದರಿಂದ ಮಾಯವಾಗಿತ್ತು. ಪುನಃ ನೆಟ್‍ ವರ್ಕ್‍ … Read more