ಶಿವಮೊಗ್ಗದಲ್ಲಿ ಪೊಲೀಸ್‌ ಅಧಿಕಾರಿಯ ಬೈಕ್‌ ನಾಪತ್ತೆ, ಎಲ್ಲಿ? ಆಗಿದ್ದೇನು?

bike theft reference image

ಶಿವಮೊಗ್ಗ: ಮನೆ ಮುಂದೆ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿಯೊಬ್ಬರ ಬೈಕನ್ನೇ (Splendor Plus) ಕಳ್ಳರು ಕದ್ದೊಯ್ದಿದ್ದಾರೆ.  ಹೊಸ ಬೊಮ್ಮನಕಟ್ಟೆ, ಅಪೂರ್ವ ಕಾಲೇಜು ಬಳಿ ಮನೆ ಮುಂಭಾಗ ನಿಲ್ಲಿಸಿದ್ದ ಪೊಲೀಸ್‌ ಅಧಿಕಾರಿ ಯತೀಶ್‌  ಅವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳುವಾಗಿದೆ. ಇದನ್ನೂ ಓದಿ » ಮೆಗ್ಗಾನ್‌ ಆಸ್ಪತ್ರೆಯಿಂದ ಹೊರಬಂದ ಮೆಡಿಕಲ್‌ ವಿದ್ಯಾರ್ಥಿಗೆ ಕಾದಿತ್ತು ಶಾಕ್‌, ಆಗಿದ್ದೇನು? ಯತೀಶ್‌ ಅವರು ರಾತ್ರಿ ಕರ್ತವ್ಯ ಮುಗಿಸಿ ಬಂದ ನಂತರ ಬೈಕ್ ಅನ್ನು ಮನೆಯ ಮುಂದೆ ನಿಲ್ಲಿಸಿದ್ದರು. ಮರುದಿನ ಬೆಳಗ್ಗೆ ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ಬೈಕ್‌ಗಾಗಿ … Read more

ಶಿವಮೊಗ್ಗದ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ನ್ಯಾಯಾಧೀಶರ ದಿಢೀರ್ ಭೇಟಿ, ಕಾರಣವೇನು?

Judge-Santosh-sudden-visit-to-traffic-police-station

ಶಿವಮೊಗ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಂತೋಷ್.ಎಂ.ಎಸ್ ಅವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ದಿಢೀರ್‌ ಭೇಟಿ ನೀಡಿದರು. ಈ-ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿ ಪರಿಶೀಲಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,00,508 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ₹16,33,91,250. ಈ ಪೈಕಿ ಒಟ್ಟು 1,527 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದೆ. ಒಟ್ಟು ₹6,14,750 ದಂಡ ಪಾವತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಇದನ್ನೂ ಓದಿ … Read more

ತುಮಿಳುನಾಡಿನಿಂದ ಬಂದ ಲಾರಿ ಮೇಲೆ ಶಿವಮೊಗ್ಗ DySP ನೇತೃತ್ವದಲ್ಲಿ ದಾಳಿ, ಲಕ್ಷ ಲಕ್ಷದ ವಸ್ತುಗಳು ಸೀಜ್‌

Police-Van-in-Shimoga-City

ಶಿವಮೊಗ್ಗ: ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ ಸಾಗಿಸುತ್ತಿದ್ದ ಲಾರಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹4,15,741 ಮೌಲ್ಯದ ಪಟಾಕಿ ಜಫ್ತಿ ಮಾಡಲಾಗಿದೆ. ತಮಿಳುನಾಡಿನ ಶಿವಾಕಾಶಿಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೋನ್‌ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು … Read more

ಶಿವಮೊಗ್ಗ ಸಿಟಿಯಲ್ಲಿ ಹಂಪ್‌ಗಳ ಅವಾಂತರ, ಸಿಟ್ಟಾದ ಜನ, ಅಷ್ಟಕ್ಕು ಸಮಸ್ಯೆ ಏನು?

Road-Humps-Problem-in-Shimoga-city.

ಶಿವಮೊಗ್ಗ: ವಾಹನಗಳ ಅತಿ ವೇಗಕ್ಕೆ ಬ್ರೇಕ್‌ ಹಾಕಿ, ಅಪಘಾತ ತಪ್ಪಿಸಲು ಸಿಟಿಯ ವಿವಿಧ ರಸ್ತೆಗಳಲ್ಲಿ ಹಂಪ್‌ಗಳನ್ನು ಹಾಕಲಾಗುತ್ತಿದೆ. ಆದರೆ ಈ ಹಂಪುಗಳೇ ಅಪಘಾತಕ್ಕೆ ಕಾರಣವಾಗಿ ಸಾರ್ವಜನಿಕ ಟೀಕೆಗು ಗುರಿಯಾಗಿದೆ. ರಾತ್ರೋರಾತ್ರಿ ಹಂಪ್‌, ಹಲವರಿಗೆ ಗಾಯ ಶಿವಮೊಗ್ಗ ನಗರದ ರೋಟರಿ ಬ್ಲಡ್‌ ಬ್ಯಾಂಕ್‌ ಎದುರಿನ ರಸ್ತೆಯ ಒಂದು ಬದಿಯಲ್ಲಿ ಕೆಲವೇ ಮೀಟರ್‌ ಅಂತರದಲ್ಲಿ ಎರಡು ಬೃಹತ್‌ ಹಂಪ್‌ಗಳನ್ನು ಹಾಕಲಾಗಿದೆ. ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌.ಅರುಣ್‌ ಅವರ ಮನೆ ಮುಂಭಾಗ ಮತ್ತು ನವಶ್ರೀ ಸಭಾಂಗಣದ ಎದುರು ಎರಡು ಪ್ರತ್ಯೇಕ ಹಂಪ್‌ಗಳನ್ನ … Read more

ಶಿವಮೊಗ್ಗದಲ್ಲಿ ಪೊಲೀಸರ ಮಕ್ಕಳ ಕ್ರೀಡಕೂಟ, ಏನೆಲ್ಲ ಸ್ಪರ್ಧೆ ಇತ್ತು?

Police-children-sports-in-Shimoga-DAR-Ground

ಶಿವಮೊಗ್ಗ: ಸದಾ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವ ಪೊಲೀಸರು, ತಮ್ಮ ಮಕ್ಕಳು ಕ್ರೀಡಾಕೂಟದಲ್ಲಿ ಉತ್ಸಾಹದಿಂದ ಭಾಗವಹಿಸುವುದನ್ನು ಕಂಡು ಸಂತಸಪಟ್ಟರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ನಗರದ ಡಿಎಆರ್ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಪೊಲೀಸ್ ಮಕ್ಕಳ ಕ್ರೀಡಾಕೂಟವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಉದ್ಘಾಟಿಸಿದರು. ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ್ದ ಮಕ್ಕಳಿಗೆ ಸಿಹಿ ಹಂಚುವ ಮೂಲಕ ಶುಭ ಕೋರಿದರು. ಕ್ರೀಡಾಕೂಟದಲ್ಲಿ ಕಪ್ಪೆ ಜಿಗಿತ, ಓಟ, ಬಕೆಟ್‌ಗೆ ಬಾಲ್ ಎಸೆಯುವುದು, ಹಿಟ್ ದ ವಿಕೆಟ್, ಗುಂಡು ಎಸೆತ ಹಾಗೂ ಸ್ಲೋ ಸೈಕಲ್ … Read more

ಶಿವಮೊಗ್ಗದಲ್ಲಿ ಪೊಲೀಸರಿಗೆ ನೇವಿ ಬ್ಲೂ ಪೀಕ್‌ ಕ್ಯಾಪ್‌

Peak-Cap-for-Shivamogga-KSRP-Police.

ಶಿವಮೊಗ್ಗ: ಮಾಚೇನಹಳ್ಳಿಯ ಕೆಎಸ್‌ಆರ್‌ಪಿ 8ನೇ ಪಡೆಯ ಹೆಡ್‌ ಕಾನ್‌ಸ್ಟೇಬಲ್‌ ಮತ್ತು ಕಾನ್‌ಸ್ಟೇಬಲ್‌ಗಳಿಗೆ ನೇವಿ ಬ್ಲೂ ಪೀಕ್‌ ಕ್ಯಾಪ್‌ಗಳನ್ನು ವಿತರಿಸಲಾಯಿತು. ಘಟಕದ 500 ಆರ್‌ಹೆಚ್‌ಸಿ ಹಾಗೂ ಆರ್‌ಪಿಸಿ ರವರಿಗೆ ಕೆಎಸ್‌ಆರ್‌ಪಿ ಕಮಾಂಡೆಂಟ್ ಎಸ್. ಯುವಕುಮಾರ್‌, ಹೊಸ ನೇವಿ ಬ್ಲೂ ಪೀಕ್ ಕ್ಯಾಪ್‌ನ್ನು ವಿತರಿಸಿದರು. ಈ ಸಮಾರಂಭದಲ್ಲಿ ಡೆಪ್ಯೂಟಿ ಕಮಾಂಡೆಂಟ್ ಎಸ್. ಚಂದ್ರಶೇಖರ್, ಹಾಗೂ ಸಹಾಯಕ ಕಮಾಂಡೆಂಟ್ ರಾಚಪ್ಪ ಬಿ. ಕಾಜಗಾರ, ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. ಇತ್ತೀಚೆಗಷ್ಟೆ ರಾಜ್ಯ ಸರ್ಕಾರ ಪೊಲೀಸ್‌ ಸಿಬ್ಬಂದಿಗೆ ಪೀಕ್‌ ಕ್ಯಾಪ್‌ ವಿತರಿಸುವಂತೆ ಆದೇಶಿಸಿತ್ತು. … Read more

ಶಿವಮೊಗ್ಗ ಪೊಲೀಸ್‌ ಇಲಾಖೆಯಿಂದ 21 ವಾಹನಗಳ ಹರಾಜು, ದಿನಾಂಕ ಪ್ರಕಟ

Shimoga-News-update

ಶಿವಮೊಗ್ಗ: ಜಿಲ್ಲಾ ಪೊಲೀಸ್ ಠಾಣೆಯಲ್ಲಿ ವಾರಸುದಾರಿಲ್ಲದ 21 ವಿವಿಧ ಮಾದರಿಯ ನಿರುಪಯುಕ್ತ ವಾಹನಗಳನ್ನು ಡಿ.1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಚೇರಿಯ ಆವರಣದಲ್ಲಿ ಬಹಿರಂಗ ಹರಾಜು ಹಾಕಲಾಗುತ್ತಿದೆ. ಆಸಕ್ತರು ನಿಗದಿತ ಸಮಯದಲ್ಲಿ ಭಾಗವಹಿಸುವಂತೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಿಎಸ್‌ಪಿ ಡಿಎಆರ್ ಶಿವಮೊಗ್ಗ ದೂ.ಸಂ.: 08182-261412 ನ್ನು ಸಂಪರ್ಕಿಸುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ ರೂಮಿನಲ್ಲಿ ಬೆಂಕಿ ಕೇಸ್‌, ಪುರುಷ, … Read more

ದಿಢೀರ್‌ ಕಾರ್ಯಾಚರಣೆ, 24 ಮಂದಿಯನ್ನು ಠಾಣೆಗೆ ಕರೆದೊಯ್ದ ಪೊಲೀಸ್‌, ನಾಲ್ವರ ವಿರುದ್ಧ ಕೇಸ್‌

Shimoga-Police-Jeep

ಶಿವಮೊಗ್ಗ: ನಗರದಲ್ಲಿ ಪೊಲೀಸರು ದಿಢೀರ್‌ ವಿಶೇಷ ಏರಿಯಾ ಡಾಮಿನೇಷನ್‌ ಕಾರ್ಯಾಚರಣೆ ನಡೆಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದರು. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಆರ್‌ಎಂಎಲ್‌ ನಗರ, ಬುದ್ಧನಗರ, ಮಿಳಘಟ್ಟ ಭಾಗದಲ್ಲಿ ಏರಿಯಾ ಡಾಮಿನೇಷನ್‌ ವಿಶೇಷ ಗಸ್ತು ನಡೆಸಲಾಯಿತು. ಈ ಸಂದರ್ಭ 24 ಮಂದಿಯನ್ನು ಠಾಣೆಗೆ ಕರೆಯಿಸಿ ವೈದ್ಯಕೀಯ ಪರೀಕ್ಷೆ ನಡೆಸಾಯಿತು. ಈ ಸಂದರ್ಭ ನಾಲ್ಕು ಮಂದಿ ಗಾಂಜಾ ಸೇವನೆ ಮಾಡಿರುವುದು ದೃಢವಾಗಿದೆ. ಅವರ ವಿರುದ್ಧ ಎನ್‌ಡಿಪಿಎಸ್‌ ಕಾಯ್ದೆ ಅಡಿ ಪ್ರಕರಣ … Read more

ನೆಹರು ಕ್ರೀಡಾಂಗಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ, ಪೊಲೀಸರಿಂದ ಪರಿಶೀಲನೆ

Person-breathed-last-at-Nehru-Stadium-in-Shimoga - ನೆಹರು ಕ್ರೀಡಾಂಗಣ

ಶಿವಮೊಗ್ಗ: ನಗರದ ನೆಹರು ಕ್ರೀಡಾಂಗಣದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದೆ. ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮೃತ ವ್ಯಕ್ತಿಯನ್ನು ಹೊಸನಗರದ ವಿಕಲ ಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಗುತ್ತಿಗೆ ನೌಕರರ ಶ್ರೀಕಾಂತ್‌ (42) ಎಂದು ಗುರುತಿಸಲಾಗಿದೆ. ನೆಹರು ಕ್ರೀಡಾಂಗಣದಲ್ಲಿ ಇವತ್ತು ಜಿಲ್ಲಾ ಮಟ್ಟದ ವಿಕಲ ಚೇತನರ ಕ್ರೀಡಾಕೂಟ ನಡೆಯುತಿತ್ತು. ಆದರೆ ಶ್ರೀಕಾಂತ್‌ ಯಾವುದೇ ಕ್ರೀಡಾಕೂಟದಲ್ಲಿ ಭಾಗವಹಿಸಿರಲಿಲ್ಲ ಎಂದು ತಿಳಿದು ಬಂದಿದೆ. ಪೆವಿಲಿಯನ್‌ ಮೇಲೆ ಶ್ರೀಕಾಂತ್‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಜಯನಗರ ಠಾಣೆಗೆ ಮಾಹಿತಿ … Read more

ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

railway-track-general-image.webp

ಶಿವಮೊಗ್ಗ: ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂದಾಜು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಡು ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕಡು ಗುಲಾಬಿ ಬಣ್ಣದ ಶರ್ಟ್ ಮತ್ತು ಕಪ್ಪು-ಬಿಳಿ ಬಣ್ಣದ ಲುಂಗಿ ಧರಿಸಿದ್ದಾರೆ. ಸಂಬಂಧಿಗಳು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಎಸ್‌ಐ ಅವರನ್ನು ಖುದ್ದಾಗಿ ಅಥವಾ ದೂ.ಸಂ: 08182-222974/ 948082124ಗೆ ಸಂಪರ್ಕಿಸುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ … Read more