ಪೆಟ್ರೋಲ್, ಡಿಸೇಲ್ ಶಿವಮೊಗ್ಗದಲ್ಲಿ ಮತ್ತಷ್ಟು ದುಬಾರಿ, ಇವತ್ತೂ ಹೆಚ್ಚಾಯ್ತು ರೇಟ್, ಅಕ್ಟೋಬರ್ ತಿಂಗಳಲ್ಲಿ ಏರಿಕೆಯಾಗಿದ್ದೆಷ್ಟು?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 05 ಅಕ್ಟೋಬರ್ 2021 ಪೆಟ್ರೋಲ್ ಮತ್ತು ಡಿಸೇಲ್ ದರ ಮತ್ತೊಮ್ಮೆ ನಿರಂತರ ಏರಿಕೆಯಾಗುತ್ತಿದೆ. ಇವತ್ತು ಕೂಡ ತೈಲೋತ್ಪನ್ನ ದರ ಹೆಚ್ಚಳವಾಗಿದೆ. ಶಿವಮೊಗ್ಗದಲ್ಲಿ ಪೆಟ್ರೋಲ್, ಡಿಸೇಲ್ ದರ ದಾಖಲೆ ಬರೆದಿವೆ. ಶಿವಮೊಗ್ಗದಲ್ಲಿ ಪೆಟ್ರೋಲ್ ದರ 26 ಪೈಸೆ ಹೆಚ್ಚಳವಾಗಿದೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ದರ 107.65 ರೂ.ಗೆ ಏರಿಕೆಯಾಗಿದೆ. ಕಳೆದ ಐದು ದಿನದಲ್ಲಿ ನಾಲ್ಕು ಭಾರಿ ಪೆಟ್ರೋಲ್ ರೇಟ್ ಹೆಚ್ಚಳವಾಗಿದೆ. ಅಕ್ಟೋಬರ್ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ … Read more

ಇವತ್ತಿನ ಅಡಕೆ ರೇಟ್ | 10 ಅಕ್ಟೋಬರ್ 2021

ಶಿವಮೊಗ್ಗ ಗೊರಬಲು 16000 32450 ಬೆಟ್ಟೆ 46009 50529 ರಾಶಿ 43099 49100 ಸರಕು 50509 74996 ಸಾಗರ ಕೆಂಪುಗೋಟು 33569 38009 ಕೋಕ 26099 39169 ಚಾಲಿ 34609 45099 ಬಿಳೆ ಗೋಟು 25288 40099 ರಾಶಿ 36219 47699 ಸಿಪ್ಪೆಗೋಟು 18100 25892 ಶಿರಸಿ ಚಾಲಿ 45029 48208 ಬೆಟ್ಟೆ 12099 45299 ಬಿಳೆ ಗೋಟು 26599 42426 ರಾಶಿ 37601 47919

ಶಿವಮೊಗ್ಗ ಸಿಟಿಯ ನಡು ರಸ್ತೆಯಲ್ಲಿ ಒಲೆ ಹಚ್ಚಿ ಅಡುಗೆ, ಪ್ರಧಾನಿ ಮೋದಿ ಫೋಟೊಗೆ ಬೆಂಕಿ

040921 Youth Congress Protest Against Gas Price hike

ಶಿವಮೊಗ್ಗ ಲೈವ್.ಕಾಂ |SHIMOGA NEWS | 4 ಸೆಪ್ಟೆಂಬರ್ 2021 ಅಡುಗೆ ಅನಿಲ ಸಿಲಿಂಡರ್ ಬಲೆ, ಪೆಟ್ರೋಲ್ ಮತ್ತು ಡಿಸೇಲ್ ದರ ಹೆಚ್ಚಳ ವಿರೋಧಿಸಿ ಶಿವಮೊಗ್ಗದಲ್ಲಿ ನಡುರಸ್ತೆಯಲ್ಲೇ ಒಲೆ ಹಚ್ಚಿ, ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಶಿವಮೊಗ್ಗದ ಮಹಾವೀರ ಸರ್ಕಲ್’ನಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದರು. ಒಲೆ ಹಚ್ಚಿ ಅಡುಗೆ ಸರ್ಕಲ್ ಮಧ್ಯದಲ್ಲೇ ಸೌದೆ ಒಲೆ ನಿರ್ಮಿಸಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಡುಗೆ ಮಾಡುವಂತೆ ಅಣಕು ಪ್ರದರ್ಶನ ಮಾಡಿದರು. ಇದೇ ವೇಳೆ ಕೇಂದ್ರ ಸರ್ಕಾರ … Read more

ಅಡಕೆಗೆ ಬಂಪರ್ ಬೆಲೆ, ಇನ್ನಷ್ಟು ಏರಿಕೆಯ ನಿರೀಕ್ಷೆ, ಧಾರಣೆ ಹೆಚ್ಚಳಕ್ಕೆ ಕಾರಣವೇನು? ಮುಂದೇನಾಗುತ್ತೆ?

areca nut

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2021

ಒಂದು ವರ್ಷದಿಂದ ಸ್ಥಿರತೆ ಕಾಯ್ದುಕೊಂಡಿದ್ದ ಅಡಕೆಗೆ ಈಗ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಅಡಕೆ ಬೆಲೆ 50 ಸಾವಿರದ ಕಡೆಗೆ ಮುನ್ನುಗುತ್ತಿದೆ. ಇದರಿಂದ ಬೆಳೆಗಾರರು ಖುಷ್ ಆಗಿದ್ದಾರೆ.

38 ರಿಂದ 43 ಸಾವಿರ ರೂ.ವರೆಗೆ ಇದ್ದ ಅಡಕೆ ಬೆಲೆ ಈಗ 50 ಸಾವಿರ ರೂ. ಕಡೆ ಮುನ್ನಗುತ್ತಿದೆ.  ಮಂಗಳವಾರ 1 ಕ್ವಿಂಟಾಲ್ ರಾಶಿ ಅಡಿಕೆ ಬೆಲೆ 47,700 ರೂ.ಗೆ ತಲುಪಿದೆ. ಬಿಲ್ ಇಲ್ಲದೆ ವ್ಯವಹಾರ ಮಾಡುತ್ತಿರುವವರು 49 ಸಾವಿರ ರೂ.ವರೆಗೆ ಖರೀದಿ ಮಾಡಿದ್ದಾರೆ.

ಮಲೆನಾಡಿನ ಪ್ರಮುಖ ಬೆಳೆ

ಮಲೆನಾಡಿನ ಪ್ರಮುಖ ಬೆಳೆಯಾಗಿರುವ ಅಡಕೆ ಈಗ ಬಯಲುಸೀಮೆಯಲ್ಲೂ ಪ್ರಸಿದ್ಧಿ ಪಡೆದಿದೆ. ಕಡಿಮೆ ಖರ್ಚು ಹೆಚ್ಚು ಲಾಭದ ದೃಷ್ಟಿಯ ಕಾರಣದಿಂದ ಈಗ ಎಲ್ಲಿ ನೋಡಿದರೂ ಅಡಕೆ ತೋಟಗಳೇ ಕಾಣಸಿಗುತ್ತಿವೆ. ಪ್ರತಿ ವರ್ಷ ಸಾವಿರಾರು ಹೆಕ್ಟೇರ್ ಭತ್ತದ ಗದ್ದೆಗಳು ಅಡಕೆ ತೋಟಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅಡಕೆ ಬೆಳೆ ಹೆಚ್ಚಾದರೂ ಬೆಲೆ ಮಾತ್ರ ಕುಗ್ಗಿಲ್ಲ. ಇದಕ್ಕೆ ಅನೇಕ ಅಂಶಗಳು ಅನುಕೂಲಕರವಾಗಿವೆ.

ಅಡಕೆ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

ಕಾರಣ 1 – ಈಶಾನ್ಯ ಗಡಿಗಳು ಬಂದ್

ಈಶಾನ್ಯ ಗಡಿರಾಜ್ಯಗಳಲ್ಲಿ ಸಂಘರ್ಷ ಏರ್ಪಟ್ಟಿರುವುದರಿಂದ ಕೇಂದ್ರ ಸರ್ಕಾರ ಗಡಿಗಳನ್ನು ಬ್ಲಾಕ್ ಮಾಡಿದೆ. ಹಾಗಾಗಿ ಇಂಡೋನೇಷಿಯಾ, ಮಲೇಷಿಯಾ ದೇಶಗಳಿಂದ ಬರುತ್ತಿದ್ದ ಕಳಪೆ ಅಡಕೆ ನಿಂತಿದೆ. ಇಂತಹ ಅಡಕೆ ಮೇಲೆ ಕೆಲ ಗುಟ್ಕಾ ಕಂಪನಿಗಳು ಅವಲಂಬಿತವಾಗಿವೆ. ಈಗ ಗಡಿಗಳು ಬ್ಲಾಕ್ ಆಗಿರುವುದರಿಂದ ರೈತರಿಂದಲೇ ನೇರ ಖರೀದಿ ಮಾಡುತ್ತಿವೆ. ಇದು ಬೆಲೆ ಏರಿಕೆಗೆ ಕಾರಣವಾಗಿದೆ.

ಕಾರಣ 2 – ಹೊಸ ಅಡಕೆ ಬಂದಿಲ್ಲ

ಇಷ್ಟೊತ್ತಿಗಾಗಲೇ ಹೊಸ ಅಡಕೆ ಮಾರುಕಟ್ಟೆ ಪ್ರವೇಶ ಮಾಡಬೇಕಿತ್ತು. ಮಳೆ ಕಾರಣದಿಂದ ಕೊಯ್ಲು, ಸಂಸ್ಕರಣೆ ಸೇರಿದಂತೆ ಎಲ್ಲಾ ಕೆಲಸಗಳು ನಿಧಾನವಾಗಿದ್ದು ಹೆಚ್ಚು ಆವಕ ಇಲ್ಲ. ಮೂರು ವರ್ಷದಿಂದ ನಿರಂತರ ಮಳೆಯಾಗುತ್ತಿರುವುದರಿಂದ ಕೊಳೆರೋಗ ಬಾಧಿಸುತ್ತಿದೆ. ಇದು ಸಹ ಬೆಲೆ ಏರಿಕೆಗೆ ಕಾರಣ ಎನ್ನಲಾಗುತ್ತಿದೆ.

ಕಾರಣ 3 – ಅಕ್ರಮ, ಸಕ್ರಮದ ಮಧ್ಯೆ ಸ್ಪರ್ಧೆ

ಇತ್ತೀಚೆಗೆ ರೈತರು ಅಡಕೆ ದಾಸ್ತಾನು ಮಾಡುವ ಸೌಲಭ್ಯ ಹೊಂದಿದ್ದು ತಮಗೆ ಅನುಕೂಲಕರ ಸಮಯಕ್ಕೆ ತಂದು ಮಾರುಕಟ್ಟೆಯಲ್ಲಿ ಮಾರುತ್ತಿದ್ದಾರೆ. ದಿಢೀರ್ ಬೆಲೆ ಏರಿಕೆ ಲಾಭ ಪಡೆಯುವ ಉದ್ದೇಶದಿಂದ ಅಕ್ರಮ-ಸಕ್ರಮ ವ್ಯವಹಾರಸ್ಥರಲ್ಲಿ ಪೈಪೋಟಿ ಏರ್ಪಟ್ಟಿರುವುದರಿಂದ ಬೆಲೆ ಏರಿಸುತ್ತಿದ್ದಾರೆ. ಇದು ಉತ್ತಮ ಬೆಳವಣಿಗೆಯಲ್ಲ ಎಂಬುದು ಪಕ್ಕಾ ವ್ಯವಹಾರಸ್ಥರ ಅಭಿಪ್ರಾಯ.

AVvXsEjqI8PPMNmhmzTK72s6aHdyGOwaxgBbnPaxEgdNmEiwLVxu2qPFWOl6pNSi5TkLjb7eVIwUDa7oTDLioeFYHsTaIvxkbizculAS6mYiPjBUAXSI3yUj FPfEWxml8DJztTgufNzviEAb8 E9X6L8I0JOYK4raqr

ಬೆಲೆ ಏರಿಕೆ ಹಾದಿ

ಫೆಬ್ರವರಿ 2020ರಲ್ಲಿ 39 ಸಾವಿರ ಆಸುಪಾಸಿನಲ್ಲಿದ್ದ ಅಡಕೆ ಕೆಲವೇ ತಿಂಗಳಲ್ಲಿ 42, 43 ಸಾವಿರಕ್ಕೆ ಸ್ಥಿರಗೊಂಡಿತು. 2021ರ ಆಗಸ್ಟ್ ವರೆಗೂ 38 ರಿಂದ 43 ಸಾವಿರವರೆಗೆ ಬೆಲೆ ಕಾಯ್ದುಕೊಂಡಿದೆ. ಆ.10ರ ರಾಶಿಯ ಗರಿಷ್ಟ ಬೆಲೆ 44,099, 16ರಂದು 44,299 ರೂ., 19ರಂದು 44,099 ರೂ., 23ರಂದು 46,599 ರೂ., 24ರಂದು 47,500 ರೂ.ಗೆ ವಹಿವಾಟು ನಡೆದಿದೆ. ರೈತರಿಂದ ನೇರ ಖರೀದಿಸುವ ವ್ಯವಹಾರಸ್ಥರು 49 ಸಾವಿರಕ್ಕೆ ಖರೀದಿ ಮಾಡಿ ದಾಖಲೆ ಬರೆದಿದ್ದಾರೆ.

ವ್ಯಾಪಾರಿಗಳಲ್ಲಿ ಹೆಚ್ಚುತ್ತಿದೆ ಆತಂಕ

ಬೆಲೆ ಏರಿಕೆಯು ಒಂದೆಡೆ ಖುಷಿಯ ವಿಚಾರವಾಗಿದ್ದರೆ ವ್ಯಾಪಾರಸ್ಥರಲ್ಲಿ ಆತಂಕ ಹುಟ್ಟಿಸುತ್ತಿದೆ. 43 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 48 ಸಾವಿರಕ್ಕೆ ಬಿಕರಿಯಾದರೆ ಲಾಭವಾಗುತ್ತದೆ. ಅದೇ 49 ಸಾವಿರಕ್ಕೆ ಖರೀದಿ ಮಾಡಿದ ಅಡಕೆ 43 ಸಾವಿರಕ್ಕೆ ಬಿಕರಿಯಾದರೆ ದೊಡ್ಡ ನಷ್ಟವಾಗಲಿದೆ. ಮಾರುಕಟ್ಟೆ ಬೆಲೆ ಸ್ಥಿರತೆ ಕಾಪಾಡಿಕೊಳ್ಳದಿದ್ದರೆ ಎಲ್ಲರಿಗೂ ದೊಡ್ಡ ನಷ್ಟವಾಗಲಿದೆ. 2014ರಲ್ಲಿ 18 ಸಾವಿರ ಇದ್ದ ಅಡಕೆ ಬೆಲೆ 90 ಸಾವಿರವರೆಗೂ ಏರಿಕೆಯಾಗಿತ್ತು. ಒಂದೇ ಸಾರಿ ಮಾರುಕಟ್ಟೆ ಬಿದ್ದು ಅನೇಕ ವ್ಯಾಪಾರಿಗಳು ಬೀದಿಪಾಲಾದರು.

ಹಾಗಾಗಿ ಅಡಕೆ ಧಾರಣೆ ಏರಿಕೆ ಒಂದೆಡೆ ಸಂತಸ ಮೂಡಿಸಿದ್ದರೆ, ಮತ್ತೊಂದೆಡೆ ಮುಂದಿನ ವಹಿವಾಟು ಕುರಿತು ಆತಂಕವನ್ನು ಮೂಡಿಸಿದೆ.

240389864 1181422792337629 3783538181483720992 n.jpg? nc cat=104&ccb=1 5& nc sid=730e14& nc ohc=Cj3EIM570B0AX CPZbk& nc ht=scontent.fblr1 4

(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಮಾಲೀಕರೆ ಹುಷಾರ್, ಶಿವಮೊಗ್ಗದಲ್ಲಿ ಗೇಟ್ ಹೊರಗೆ ನಿಲ್ಲೋ ಬೈಕ್​ಗಳೆ ಕಳ್ಳರ ಟಾರ್ಗೆಟ್, ಖದೀಮರಿಗೇಕೆ ಭಯವಿಲ್ಲ?

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2021 ಶಿವಮೊಗ್ಗ ನಗರದಲ್ಲಿ ಪೆಟ್ರೋಲ್ ಕಳ್ಳರ ಹಾವಳಿ ಹೆಚ್ಚುತ್ತಿದೆ. ರಾತ್ರಿ ವೇಳೆ ಬೈಕ್‍ಗಳಲ್ಲಿ ಪೆಟ್ರೋಲ್ ಪೈಪ್‍ಗಳನ್ನು ಕಟ್ ಮಾಡಿ, ಕಳುವು ಮಾಡುತ್ತಿದ್ದಾರೆ. ಖದೀಮರ ಹಾವಳಿಯಿಂದ ಬೈಕ್ ಸವಾರರು ಹೈರಾಣಾಗಿದ್ದಾರೆ. ಹೊರ ನಿಲ್ಲುವ ವಾಹನಗಳೆ ಟಾರ್ಗೆಟ್ ಮನೆಯ ಗೇಟ್‍ನಿಂದ ಹೊರಗೆ ನಿಲ್ಲಿಸಿರುವ ವಾಹನಗಳೆ ಕಳ್ಳರ ಪ್ರಮುಖ ಟಾರ್ಗೆಟ್‍. ರಾತ್ರಿ ವೇಳೆ ಕಳ್ಳರ ಗ್ಯಾಂಗ್, ಬೈಕ್‍ಗಳ ಪೆಟ್ರೋಲ್ ಟ್ಯಾಂಕ್‍ನಿಂದ ಎಂಜಿನ್‍ಗೆ ಹೋಗುವ ಪೆಟ್ರೋಲ್ ಪೂರೈಕೆ ಮಾಡುವ, ಪೈಪ್ ಕಟ್ … Read more

ಶಿವಮೊಗ್ಗ ನಗರದಲ್ಲಿ ಒಂದೇ ರಾತ್ರಿ ಒಂದೇ ಬೀದಿಯಲ್ಲಿ 30ಕ್ಕೂ ಹೆಚ್ಚು ಬೈಕ್​​ಗಳಲ್ಲಿ ಪೆಟ್ರೋಲ್ ಕಳುವು

170721 Petrol Theft at purale 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2021 ಒಂದೆಡೆ ದಿನೆ ದಿನೆ ಪೆಟ್ರೋಲ್‍ ಬೆಲೆ ಏರಿಕೆಯಿಂದಾಗಿ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ. ಈ ನಡುವೆ ಪೆಟ್ರೋಲ್ ಕಳ್ಳರ ಹಾವಳಿಯು ಹೆಚ್ಚಾಗಿದೆ. ಶಿವಮೊಗ್ಗ ನಗರದಲ್ಲಿ ಒಂದೆ ರಾತ್ರಿ ಸುಮಾರು 30 ಬೈಕ್‍ಗಳಿಂದ ಪೆಟ್ರೋಲ್ ಕಳುವು ಮಾಡಲಾಗಿದೆ. ಪುರಲೆಯ ಒಕ್ಕಲಿಗರ ಬೀದಿಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಇಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‍ಗಳಿಂದ ಪೆಟ್ರೋಲ್‍ ಕಳುವು ಮಾಡಲಾಗಿದೆ. ಪೈಪ್ ಕಟ್ ಮಾಡಿದ ಖದೀಮರು ಬೈಕ್‍ಗಳ … Read more

ಮೂರು ದಿನದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಹೆಚ್ಚಾಯ್ತು ಪೆಟ್ರೋಲ್ ದರ, ಡಿಸೇಲ್ ಬೆಲೆಯು ಏರಿಕೆ

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021 ಮೂರು ದಿನದ ಬಳಿಕ ಮತ್ತೆ ಪೆಟ್ರೋಲ್ ದರ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತು ಪ್ರತಿ ಲೀಟರ್‍ ಪೆಟ್ರೋಲ್ ಮೇಲೆ 36 ಪೈಸೆ ಏರಿಕೆಯಾಗಿದೆ. ಜಿಲ್ಲೆಯಾದ್ಯಂತ ಇವತ್ತು ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 106.33 ರೂ. ಆಗಿದೆ. ಜುಲೈ 12ರಂದು ಪೆಟ್ರೋಲ್ ದರ 29 ಪೈಸೆ ಏರಿಕೆಯಾಗಿತ್ತು. ಇನ್ನು, ಡಿಸೇಲ್ ದರವು ಇವತ್ತು ಏರಿಕೆಯಾಗಿದೆ. ಪ್ರತಿ ಲೀಟರ್ ಡಿಸೇಲ್‍ ದರ 16 ಪೈಸೆ ಹೆಚ್ಚಾಗಿದೆ. ಇದರಿಂದ … Read more

ವಾಹನ ಸವಾರರಿಗೆ ಮತ್ತೆ ಶಾಕ್, ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ಹೆಚ್ಚಳ, ಇವತ್ತೆಷ್ಟಾಗಿದೆ ರೇಟ್?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಜುಲೈ 2021 ಜಿಲ್ಲೆಯಲ್ಲಿ ಮತ್ತೆ ಪೆಟ್ರೋಲ್ ಬೆಲೆ ಏರಿಕೆಯಾಗಿದೆ. ಶಿವಮೊಗ್ಗದಲ್ಲಿ ತೈಲೋತ್ಪನ್ನ ದರ ಮತ್ತೊಂದು ದಾಖಲೆ ಬರೆದಿದೆ. ಇವತ್ತು ಪೆಟ್ರೋಲ್ ದರ 29 ಪೈಸೆ ಏರಿಕೆಯಾಗಿದೆ. ಆದ್ದರಿಂದ ಪ್ರತಿ ಲೀಟರ್‍ ಪೆಟ್ರೋಲ್ ರೇಟ್ 105.97ಕ್ಕೆ ತಲುಪಿದೆ. ಇನ್ನು, ಡಿಸೇಲ್ ದರ ಯಥಾ ಸ್ಥಿತಿಯಲ್ಲಿದೆ. ಜಿಲ್ಲೆಯಲ್ಲಿ ಪ್ರತಿ ಲೀಟರ್ ‍ಡಿಸೇಲ್‍ಗೆ 96.29 ರೂ. ಇದೆ. ಪವರ್‍ ಪೆಟ್ರೋಲ್ ದರ ಪ್ರತಿ ಲೀಟರ್‍ಗೆ 109.52 ರೂ. ಟರ್ಬೊ ಜೆಟ್ ಪ್ರತಿ … Read more

ಶಿವಮೊಗ್ಗದಲ್ಲಿ ಜುಲೈ ತಿಂಗಳಲ್ಲಿ ಆರನೆ ಭಾರಿ ಪೆಟ್ರೋಲ್ ರೇಟ್ ಹೆಚ್ಚಳ, ಇವತ್ತೆಷ್ಟಾಗಿದೆ?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 10 ಜುಲೈ 2021 ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್ ದರ ಮತ್ತೆ ಹೆಚ್ಚಳವಾಗಿದೆ. ಕಳೆದ ಹತ್ತು ದಿನದಲ್ಲಿ ಆರು ಭಾರಿ ಪೆಟ್ರೋಲ್‍ ದರ ಏರಿಕೆಯಾಗಿದೆ. ಜುಲೈ 10ರಂದು ಪೆಟ್ರೋಲ್ ದರ 36 ಪೈಸೆ ಏರಿಕೆಯಾಗಿದೆ. ಇದರಿಂದ ಪೆಟ್ರೋಲ್ ದರ 105.68 ರೂ. ಆಗಿದೆ. ಜುಲೈ ತಿಂಗಳ ಮೊದಲ ಹತ್ತು ದಿನದಲ್ಲಿ ಆರು ಬಾರಿ ಪೆಟ್ರೋಲ್ ದರ ಏರಿಕೆಯಾಗಿದೆ. ಈ ಅವಧಿಯಲ್ಲಿ ಪ್ರತಿ ಲೀಟರ್‍ ಪೆಟ್ರೋಲ್‍ಗೆ 2.18 ರೂ. ಹೆಚ್ಚಾಗಿದೆ. ಡಿಸೇಲ್ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಪೆಟ್ರೋಲ್, ಡಿಸೇಲ್ ದರ ಮತ್ತೆ ಏರಿಕೆ, ಇವತ್ತೆಷ್ಟು ಹೆಚ್ಚಾಗಿದೆ? ಪ್ರತಿ ಲೀಟರ್ಗೆ ಈಗೆಷ್ಟಾಗಿದೆ ದರ?

petrol pump

ಶಿವಮೊಗ್ಗ ಲೈವ್.ಕಾಂ | SHIMOGA NEWS | 8 ಜುಲೈ 2021 ಪೆಟ್ರೋಲ್ ಬೆಲೆ ಮತ್ತೆ ಹೆಚ್ಚಳವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 105 ರೂ. ಗಡಿ ದಾಟಿದೆ. ಇವತ್ತು ಪೆಟ್ರೋಲ್ ದರ 37 ಪೈಸೆ ಹೆಚ್ಚಳವಾಗಿದೆ. ಹಾಗಾಗಿ ಪ್ರತಿ ಲೀಟರ್ ಪೆಟ್ರೋಲ್ ದರ 105.32 ರೂ.ಗೆ ಏರಿಕೆಯಾಗಿದೆ. ಜುಲೈ 7ರಂದು 36 ಪೈಸೆ ಹೆಚ್ಚಾಗಿತ್ತು. ಇನ್ನು, ಡಿಸೇಲ್ ದರವು ಹೆಚ್ಚಾಗಿದೆ. ಇವತ್ತು ಪ್ರತಿ ಲೀಟರ್‍ ಡಿಸೇಲ್‍ ದರದಲ್ಲಿ 10 ಪೈಸೆ ಏರಿಕೆಯಾಗಿದೆ. ಇದರಿಂದ … Read more