ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ 150 ಪೊಲೀಸರಿಂದ ದಾಳಿ

shimoga central jail building

SHIVAMOGGA LIVE NEWS | SHIMOGA | 24 ಜುಲೈ 2022 ಶಿವಮೊಗ್ಗದ ಕೇಂದ್ರ ಕಾರಾಗೃಹದ (CENTRAL JAIL) ಮೇಲೆ 150ಕ್ಕೂ ಹೆಚ್ಚು ಪೊಲೀಸರು ದಿಢೀರ್ ದಾಳಿ (RAID) ನಡೆಸಿ, ಪರಿಶೀಲನೆ ನಡೆಸಿದರು. ಪ್ರತಿ ಕೈದಿಯ ಕೊಠಡಿಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿ ಬಿ.ಎಂ.ಲಕ್ಷ್ಮಿಪ್ರಸಾದ್ ನೇತೃತ್ವದಲ್ಲಿ ಶನಿವಾರ ಪೊಲೀಸರು ದಾಳಿ ನಡೆಸಿ, ಪರಿಶೀಲನೆ ಮಾಡಿದರು. ದಾಳಿಗೆ ಕಾರಣವೇನು? ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ (MOBILE) ಬಳಕೆ, ಗಾಂಜಾ (GANJA) ಉಪಯೋಗ ಸೇರಿದಂತೆ ಹಲವು ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ … Read more

ಜೈಲಿಗೆ ಹೋದರೂ ಪಾಠ ಕಲಿಯಲಿಲ್ಲ, ಬಿಡುಗಡೆಯಾಗಿ ಬಂದ ಮೇಲೆ ಮತ್ತೆ ಜೀವ ಬೆದರಿಕೆ

crime name image

SHIVAMOGGA LIVE NEWS |  THREAT | 06 ಮೇ 2022 ಕೊಲೆ ಬೆದರಿಕೆ ಆರೋಪ ಸಂಬಂಧ ಕಂಬಿ ಎಣಿಸಿ ಬಂದ ಆರೋಪಿಗಳು ಮತ್ತೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ. ಇವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ಉಸ್ಮಾನ್ ಮತ್ತು ಅಬ್ಬಾಸ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಭರತ್ ಮತ್ತು ಸುಮಂತ ಎಂಬುವವರನ್ನು ಸಾಯಿಸುತ್ತೇವೆ ಎಂದು ಆರೋಪಿಗಳು ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಏನಿದು ಪ್ರಕರಣ? ಏಪ್ರಿಲ್ 23ರಂದು ಭರತ್ ಎಂಬಾತನಿಗೆ ಉಸ್ಮಾನ್, ಅಬ್ಬಾಸ್ ಮತ್ತು ಸಲ್ಮಾನ್ ಎಂಬುವವರು … Read more

ಶಿವಮೊಗ್ಗ ಜೈಲಿನಲ್ಲಿ ವಿಚಾರಣಾಧೀನ ಖೈದಿಯಿಂದ ಕ್ಯಾಮರಾ, ಟ್ಯೂಬ್ ಲೈಟ್ ಪೀಸ್ ಪೀಸ್

shimoga central jail building

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಫೆಬ್ರವರಿ 2022 ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬ ಬುಲೆಟ್ ಕ್ಯಾಮರಾ ಮತ್ತು ಟ್ಯೂಬ್ ಲೈಟ್’ಗಳಿಗೆ ಹಾನಿ ಮಾಡಿದ್ದಾನೆ. ಆತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶರಾವತಿ ನಗರದ ಗಗನ್ ಅಲಿಯಾಸ್ ಆನಂದ ಎಂಬ ವಿಚಾರಣಾಧೀನ ಖೈದಿ ವಿರುದ್ಧ ಪ್ರಕರಣ ದಾಖಲಾಗಿದೆ. ಹೇಗಾಯ್ತು ಘಟನೆ? ಕೇಂದ್ರ ಕಾರಾಗೃಹದ ಶರಾವತಿ ವಿಭಾಗದಲ್ಲಿ ಖೈದಿಗಳು ಮತ್ತು ಸೆಲ್’ಗಳಲ್ಲಿ ದೈನಂದಿನ ತಪಾಸಣೆ ನಡೆಸಲಾಗುತ್ತಿತ್ತು. ಅನಧಿಕೃತ ವಸ್ತುಗಳು ತಂದಿಟ್ಟುಕೊಳ್ಳುವುದನ್ನು ತಡೆಯಲು ಜೈಲು … Read more

BREAKING NEWS | ಶಿವಮೊಗ್ಗದ ಸೆಂಟ್ರಲ್ ಜೈಲ್ ಮೇಲೆ ರಾತ್ರೋರಾತ್ರಿ ಪೊಲೀಸರಿಂದ ದಾಳಿ

shimoga central jail building

ಶಿವಮೊಗ್ಗ ಲೈವ್.ಕಾಂ | SHIMOGA NEWS | 27 ಜನವರಿ 2022 ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ಪೊಲೀಸರು ದಾಳಿ‌ ನಡೆಸಿದ್ದಾರೆ. ಕಳೆದ ರಾತ್ರಿ ದಾಳಿ ನಡೆದಿದ್ದು, ಪ್ರಮುಖ ಆರೋಪಿ‌ ಒಬ್ಬನಿಂದ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಪ್ರಕರಣ ಸಂಬಂಧ ಜೈಲಿನಲ್ಲಿರುವ ಆರೋಪಿ ಬಚ್ಚನ್ ಮೊಬೈಲ್ ಬಳಕೆ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಇತ್ತೀಚೆಗೆ ಜೈಲಿನಿಂದಲೆ ಕರೆ ಮಾಡಿದ ಬಚ್ಚನ್ ಉದ್ಯಮಿ ಒಬ್ಬರಿಗೆ ಬೆದರಿಕೆ ಒಡ್ಡಿದ್ದ ಆರೋಪವಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರೋರಾತ್ರಿ ಪೊಲೀಸರ … Read more

ಶಿವಮೊಗ್ಗದ ಸೆಂಟ್ರಲ್ ಜೈಲ್​​ನಲ್ಲಿ ಕೈದಿ ಮೇಲೆ ಸಹ ಕೈದಿಗಳಿಂದ ಹಲ್ಲೆ, ಕಾರಾಗೃಹದ ಗೇಟ್ ಮುಂದೆ ಹೈಡ್ರಾಮಾ, ಕಾರಣವೇನು?

shimoga central jail building

ಶಿವಮೊಗ್ಗ ಲೈವ್.ಕಾಂ |SHIMOGA NEWS | 29 ಜುಲೈ 2021 ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಕೈದಿಯೊಬ್ಬನ ಮೇಲೆ ಸಹ ಕೈದಿಗಳೇ ಹಲ್ಲೆ ಮಾಡಿದ್ದಾರೆ. ಈ ನಡುವೆ ಹಲ್ಲೆಗೊಳಗಾದ ಕೈದಿ ಕೊಲೆಯಾಗಿದ್ದಾನೆ ಎಂದು ಸುದ್ದಿ ಹಬ್ಬಿದ್ದರಿಂದ ಜೈಲು ಗೇಟ್‍ ಮುಂದೆ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಏನಿದು ಕೇಸ್‍? ಹಲ್ಲೆಗೇನು ಕಾರಣ? ಗಾಂಜಾ ಪ್ರಕರಣದಲ್ಲಿ ಬಂಧಿತನಾಗಿದ್ದ ಸಲ್ಮಾನ್ ಎಂಬಾತನನ್ನು ಬುಧವಾರ ಸಂಜೆ ಜೈಲಿಗೆ ತಂದು ಬಿಡಲಾಗಿತ್ತು. ಇವತ್ತು ಬೆಳಗ್ಗೆ ಸಲ್ಮಾನ್ ಮೇಲೆ ಸಹ ಕೈದಿಗಳಾದ ಸೂಳೆಬೈಲಿನ ಗೌಸ್‍, ಸಲೀಂ … Read more

ಕರೋನ ಪಾಸಿಟಿವ್ ಆಗಿ ಗುಣವಾಗಿದ್ದ ಶಿವಮೊಗ್ಗ ಕಾರಾಗೃಹದ ಖೈದಿಗೆ ಹೃದಯಾಘಾತ, ಸಾವು

shimoga central jail building

ಶಿವಮೊಗ್ಗ ಲೈವ್.ಕಾಂ |  SHIMOGA NEWS | 26 MAY 2021 ಕರೋನ ಪಾಸಿಟಿವ್ ಆಗಿ ಗುಣವಾಗಿದ್ದ ಖೈದಿಯೊಬ್ಬ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾನೆ. ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದ ಹಿನ್ನೆಲೆ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಸ್ಮಾಯಿಲ್ ಖಾನ್ (72) ಮೃತ ಖೈದಿ. ಶಿವಮೊಗ್ಗದ ಟ್ಯಾಂಕ್ ಮೊಹಲ್ಲಾ ನಿವಾಸಿ. ಖಜಾನೆ ಅಧಿಕಾರಿಯಾಗಿದ್ದ ಇಸ್ಮಾಯಿಲ್ ಖಾನ್ ನಿವೃತ್ತರಾಗಿದ್ದರು. ಆದರೆ ಇದಕ್ಕೂ ಮುನ್ನ ಇವರ ವಿರುದ್ಧ  ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ … Read more

ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಯುಗಾದಿ, ಮೋದಿ ವಿಚಾರ ಮಂಚ್​​ನಿಂದ ಬೇವು, ಬೆಲ್ಲ

130421 Narendr Modi Vichar Manch Yugadi In Shimoga Jail 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 APRIL 2021 ನರೇಂದ್ರ ಮೋದಿ ವಿಚಾರ ಮಂಚ್ ವತಿಯಿಂದ ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳೊಂದಿಗೆ ಯುಗಾದಿ ಹಬ್ಬ ಆಚರಿಸಲಾಯಿತು. ಕೈದಿಗಳಿಗೆ ಬೇವು, ಬೆಲ್ಲ ವಿತರಿಸಿ, ಶುಭಾಶಯ ತಿಳಿಸಲಾಯಿತು. ನಲಿ ನಲಿಯುತ ಯುಗಾದಿ ಆಚರಣೆ ಕೈದಿಗಳು ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದರು. ಯುಗಾದಿ ಸಂಬಂಧ ಹಾಡುಗಳನ್ನು ಹೇಳಿ, ಸಂಭ್ರಮಿಸಿದರು. ಬಳಿಕ ನರೇಂದ್ರ ಮೋದಿ ವಿಚಾರ ಮಂಚ್​ನ ವತಿಯಿಂದ ಕೈದಿಗಳಿಗೆ ಬೇವು, ಬೆಲ್ಲ ವಿತರಿಸಲಾಯಿತು. ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ … Read more

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕೈದಿಗೆ ಹೃದಯಾಘಾತ, ಸಾವು

shimoga central jail building

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ಅಕ್ಟೋಬರ್ 2020 ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರದ ಲೋಕೇಶ್ ಬಂಗೇರ (53) ಮೃತ ಕೈದಿ. ಗುರುವಾರ ಕೈದಿ ಲೋಕೇಶ್‍ಗೆ  ಎದೆನೋವು ಕಾಣಿಸಿಕೊಂಡಿದೆ. ಕೂಡಲೆ ಅವರು ಜೈಲು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಹಿನ್ನೆಲೆ, ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಬೇಕಾಗುತ್ತದೆ  ಎಂದು ಜೈಲು ಆರೋಗ್ಯಾಧಿಕಾರಿ ತಿಳಿಸಿದರು. ಕೊಠಡಿಯಲ್ಲಿದ್ದ ಮಾಸ್ಕ್ ತೆಗೆದುಕೊಂಡು ಬರುವುದಾಗಿ … Read more