ಖಾಸಗಿ ಬಸ್ ಪಲ್ಟಿ, ಹಲವರಿಗೆ ಗಾಯ

090624 bus mishap near anandapura

SHIVAMOGGA LIVE NEWS | 9 JUNE 2024 SAGARA : ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ (PRIVATE BUS) ಪಲ್ಟಿಯಾಗಿದೆ‌. ಸಾಗರ ತಾಲೂಕು ಮುಂಬಾಳು ಬಳಿ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ. ಬೆಳಗ್ಗೆ ಜೋರು ಮಳೆಯಾಗುತ್ತಿತ್ತು. ಈ ಸಂದರ್ಭ ಮುಂಬಾಳು ತಿರುವಿನಲ್ಲಿ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ‌ ಎನ್ನಲಾಗುತ್ತಿದೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಆನಂದಪುರ, ಸಾಗರ ಮತ್ತು ಶಿವಮೊಗ್ಗದ ಆಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲಾಗಿದೆ. ಬಸ್ಸು ಸಾಗರದಿಂದ ಬೆಳ್ತಂಗಡಿಗೆ … Read more

ಮಂಡಗದ್ದೆ ಸಮೀಪ ಮರಕ್ಕೆ ಡಿಕ್ಕಿ ಹೊಡೆದ ಖಾಸಗಿ ಬಸ್‌, ಘಟನೆ ಸಂಭವಿಸಿದ್ದು ಹೇಗೆ?

Bus-incident-near-mandagadde

SHIVAMOGGA LIVE NEWS | 21 MAY 2024 THIRTHAHALLI : ಮುಂದೆ ಸಾಗುತ್ತಿದ್ದ ವಾಹನವನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ (BUS) ಮರಕ್ಕೆ ಡಿಕ್ಕಿ ಹೊಡೆದಿದೆ. ಮಂಡಗದ್ದೆಯ 15ನೇ ಮೈಲಿಕಲ್ಲು ಬಳಿ ಘಟನೆ ಸಂಭವಿಸಿದೆ. ಇಬ್ಬರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಖಾಸಗಿ ಬಸ್ಸು ಕಳಸದಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು. ಓವರ್‌ ಟೇಕ್ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ರಸ್ತೆಯ ಬಲ ಬದಿಯ ಮರಕ್ಕೆ ಡಿಕ್ಕಿ … Read more

ಶಿವಮೊಗ್ಗ ರಸ್ತೆ ಪಕ್ಕದ ಜಮೀನಿಗೆ ಪಲ್ಟಿಯಾದ ಬಸ್‌, ಅದೃಷ್ಟವಶಾತ್‌ ತಪ್ಪಿತು ದೊಡ್ಡ ದುರಂತ

bus-incident-near-Kumadvati-college-at-Shikaripura.

SHIVAMOGGA LIVE NEWS | 9 MAY 2024 SHIKARIPURA : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಬಸ್ಸಿನಲ್ಲಿ ಪ್ರಯಾಣಿಕರು ಇರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಖಾಸಗಿ ಬಸ್‌ ಬೆಂಗಳೂರಿನಿಂದ ಸೊರಬಕ್ಕೆ ತೆರಳುತ್ತಿತ್ತು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿ ಹೊಡೆದು, ರಸ್ತೆ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ. ಘಟನೆಯಲ್ಲಿ ಬಸ್‌ ಚಾಲಕ ಸೊರಬ ನಿವಾಸಿ ಜಗದೀಶ್‌ ಮತ್ತು ಬೈಕ್‌ ಸವಾರ … Read more

BREAKING NEWS | ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದಲ್ಲಿ ಬೆಂಕಿ, ಸುಟ್ಟು ಕರಕಲಾಯ್ತು ಅಂಗಡಿ

Shops-at-Private-bus-stand-incident

SHIVAMOGGA LIVE NEWS | 29 APRIL 2024 SHIMOGA : ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಮಳಿಗೆಯೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೊಬೈಲ್‌ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಜೋರಾಗಿ ಉರಿಯುತ್ತಿದ್ದು, ಅಂಗಡಿಯೊಳಗಿದ್ದ ವಸ್ತುಗಳು ಸುಟ್ಟು ಕರಕಲಾಗಿವೆ. ವಿಚಾರ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಇದನ್ನೂ ಓದಿ – ಶಿಕಾರಿಪುರ ರಸ್ತೆಯಲ್ಲಿ ಮಹಿಳೆಗೆ ಬೊಲೇರೋ ಡಿಕ್ಕಿ, ಸಾವು | ರಿಪ್ಪನ್‌ಪೇಟೆ ಸಮೀಪ ಬೈಕ್‌ಗಳು ಮುಖಾಮುಖಿ … Read more

ಆಗುಂಬೆಯಲ್ಲಿ ಟೀ ಕುಡಿದು ಬಸ್‌ ಹತ್ತಿದ ಪ್ರಯಾಣಿಕನಿಗೆ ಕಾದಿತ್ತು ಆಘಾತ, ವಿಷಯ ತಿಳಿದು ಶಿವಮೊಗ್ಗದ ವ್ಯಕ್ತಿ ಸ್ಥಳಕ್ಕೆ ದೌಡು

Agumbe Ghat Home Stay Forest

SHIVAMOGGA LIVE NEWS | 14 MARCH 2024 THIRTHAHALLI : ಬಸ್ಸಿನ ಸೀಟಿನ ಮೇಲಿಟ್ಟಿದ್ದ ಹಣದ ಬ್ಯಾಗ್‌ ಕಳ್ಳತನವಾಗಿದೆ. ಆಗುಂಬೆಯ ಹೊಟೇಲ್‌ ಒಂದರ ಬಳಿ ಘಟನೆ ಸಂಭವಿಸಿದೆ. 31.72 ಲಕ್ಷ ರೂ. ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ.   ಶ್ಯಾಮ್‌ ಎಂಬುವವರು ಫೆ.19ರಂದು ಶಿವಮೊಗ್ಗದಿಂದ ಮಂಗಳೂರಿನ ಚಿನ್ನಾಭರಣ ಅಂಗಡಿಯೊಂದಕ್ಕೆ ಹಣ ಕೊಂಡೊಯ್ಯುತ್ತಿದ್ದರು. ಆಗುಂಬೆ ನಿಲ್ದಾಣದ ಹಣದ ಬ್ಯಾಗ್‌ ಅನ್ನು ಬಸ್ಸಿನ ಸೀಟಿನ ಮೇಲಿಟ್ಟು ಹೊಟೇಲ್‌ನಲ್ಲಿ ಟೀ ಕುಡಿಯಲು ತೆರಳಿದ್ದರು. ಮರಳಿ ಬಂದಾಗ ಬ್ಯಾಗ್‌ ನಾಪತ್ತೆಯಾಗಿತ್ತು. ಶಿವಮೊಗ್ಗದ … Read more

ಟಿಕೆಟ್‌ ಬುಕ್‌ ಮಾಡಿ ಪ್ಲಾಟ್‌ಫಾರಂ 1ಕ್ಕೆ ಮರಳಿದ ಯುವಕನಿಗೆ ಕಾದಿತ್ತು ಆಘಾತ

Shimoga-Private-Bus-Stand-Board

SHIVAMOGGA LIVE NEWS | 19 FEBRUARY 2024 SHIMOGA : ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸಿನ ಟಿಕೆಟ್‌ ಬುಕ್‌ ಮಾಡಿ ಹಿಂತಿರುಗುವಷ್ಟರಲ್ಲಿ ಯಮಹಾ ಆರ್‌ಎಕ್ಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ಶರತ್‌ ಎಂಬುವವರು ರಾತ್ರಿ 9 ಗಂಟೆ ಹೊತ್ತಿಗೆ ಬೈಕ್‌ ತಂದು ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ನಿಲ್ಲಿಸಿದ್ದರು. 9.30ರ ಹೊತ್ತಿಗೆ ಮನೆಗೆ ತೆರಳಲು ಪಾರ್ಕಿಂಗ್‌ ಮಾಡಿದ್ದ ಸ್ಥಳಕ್ಕೆ ಬಂದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ … Read more

ಖಾಸಗಿ ಬಸ್‌ ಪಲ್ಟಿ, ಹೊಳೆಹೊನ್ನೂರು ಸಮೀಪ ಗದ್ದೆಗೆ ಉರುಳಿದ ಬಸ್‌

Private-Bus-incident-near-Kallihal-at-Holehonnuru

SHIVAMOGGA LIVE NEWS | 9 NOVEMBER 2023 HOLEHONNURU : ಚಾಲಕನ ನಿಯಂತ್ರಣ ತಪ್ಪಿದ ಖಾಸಗಿ ಬಸ್‌ (Bus) ರಸ್ತೆ ಪಕ್ಕದ ಜಮೀನಿಗೆ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ. ವಿಚಾರ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ದೊಡ್ಡ ಸಂಖ್ಯೆಯ ಜನ ಜಮಾಯಿಸಿದ್ದರು. ಹೊಳೆಹೊನ್ನೂರು ಸಮೀಪದ ಅರಹತೊಳಲು – ಕಲ್ಲಿಹಾಳ್‌ ಮಾರ್ಗ ಮಧ್ಯೆ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಆರು ಮಂದಿ ಇದ್ದರು ಎಂದು ತಿಳಿದು ಬಂದಿದೆ. ಕೆಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರಿಗೆ ಮಾರಶೆಟ್ಟಿಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ … Read more

ಶಿವಮೊಗ್ಗಕ್ಕೆ ಪ್ರೈವೇಟ್‌ ಜೆಟ್‌, ಬೆಂಗಳೂರಿನಿಂದ 39 ನಿಮಿಷ, ಇಲ್ಲಿಂದ ಮೈಸೂರಿಗೆ 25 ನಿಮಿಷದಲ್ಲಿ ಹಾರಾಟ

020823-Private-Jets-visit-Shivamogga-Airport-at-Sogane.webp

SHIVAMOGGA LIVE NEWS | 2 SEPTEMBER 2023 SHIMOGA : ಸೋಗಾನೆಯ ವಿಮಾನ ನಿಲ್ದಾಣಕ್ಕೆ ಪ್ರೈವೇಟ್‌ ಜೆಟ್‌ಗಳು ಆಗಮಿಸುತ್ತಿವೆ. ಸಾರ್ವಜನಿಕ ಸೇವೆಗೆ ವಿದ್ಯುಕ್ತ ಚಾಲನೆ ದೊರೆತ ಬೆನ್ನಿಗೆ ಸೆ.1ರಂದು ಖಾಸಗಿ ವಿಮಾನವೊಂದು ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದನ್ನೂ ಓದಿ – ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ ಶುಕ್ರವಾರ ಬೆಳಗ್ಗೆ 9.52ಕ್ಕೆ ಬೆಂಗಳೂರಿನಿಂದ ಹೊರಟು ಬೆಳಗ್ಗೆ 10.31ಕ್ಕೆ ಶಿವಮೊಗ್ಗದಲ್ಲಿ ಲ್ಯಾಂಡ್‌ ಆಗಿತ್ತು. ಮಧ್ಯಾಹ್ನ 1.21ಕ್ಕೆ ಶಿವಮೊಗ್ಗದಿಂದ ಹೊರಟು ಕೇವಲ 25 … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಅರ್ಧ ಗಂಟೆಗೊಂದು KSRTC ಬಸ್‌, ಯಾವ ಸಮಯದಿಂದ ಶುರುವಾಗುತ್ತೆ?

KSRTC-Bus-to-Shimoga-Airport-in-Sogane.webp

SHIVAMOGGA LIVE NEWS | 31 AUGUST 2023 SHIMOGA : ವಿಮಾನ ನಿಲ್ದಾಣಕ್ಕೆ (Airport) ಸಾರ್ವಜನಿಕರು ಹೋಗಿ ಬರಲು ಅನುಕೂಲವಾಗಲಿ ಎಂದು ಕೆಎಸ್‌ಆರ್‌ಟಿಸಿ ಬಸ್‌ (KSRTC Bus) ಸೇವೆ ಆರಂಭಿಸಲಾಗಿದೆ. ಶಿವಮೊಗ್ಗ – ವಿಮಾನ ನಿಲ್ದಾಣ – ಕಾಚಿನಕಟ್ಟೆಗೆ ಮಾರ್ಗದಲ್ಲಿ ಬಸ್ಸು ಸಂಚರಿಸಲಿದೆ. ಇದರ ಸಮಯವನ್ನು ಸಾರಿಗೆ ಸಂಸ್ಥೆ ಬಿಡುಗಡೆ ಮಾಡಿದೆ. ಶಿವಮೊಗ್ಗದಿಂದ ಬೆಳಗ್ಗೆ 8.30 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಹಾಗೂ ಕಾಚಿನಕಟ್ಟೆಯಿಂದ ಬೆಳಗ್ಗೆ 9 ರಿಂದ ಪ್ರತಿ ಅರ್ಧ ಗಂಟೆಗೊಮ್ಮೆ ಸಂಜೆ 6.30 … Read more

ಹೆದ್ದಾರಿಯಲ್ಲಿ ಧಗಧಗ ಹೊತ್ತಿ ಉರಿದ ಖಾಸಗಿ ಬಸ್

Private-Bus-Incident-near-hosuru-in-Sagara

SHIVAMOGGA LIVE | 17 JULY 2023 SAGARA | ಕೆಟ್ಟು ನಿಂತಿದ್ದ ಖಾಸಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಗೆಗೆ ಬಸ್ (Private Bus) ಸುಟ್ಟು ಹೋಗಿದೆ. ಸಾಗರ ತಾಲೂಕು ಆನಂದಪುರ ಬಳಿ ಘಟನೆ ಸಂಭವಿಸಿದೆ. ಖಾಸಗಿ ಬಸ್ ಕೆಟ್ಟು ರಸ್ತೆ ಬದಿ ನಿಂತಿತ್ತು. ಇವತ್ತು ರಿಪೇರಿ ಕೆಲಸ ನಡೆಯುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಬೆಂಕಿಯಿಂದಾಗಿ ದಟ್ಟ ಹೊಗೆ ಆವರಿಸಿತ್ತು. ಇದನ್ನೂ ಓದಿ – ಟ್ರಾನ್ಸ್‌ಫಾರ್ಮರ್‌ ಆಫ್‌ ಮಾಡಿ ಕರೆಂಟ್‌ ವಯರನ್ನೇ … Read more