ಶಿವಮೊಗ್ಗದ ಕೃಷ್ಣ ಕೆಫೆ ಬಳಿ ತುಂಡಾಗಿ ಬಿದ್ದ ರೆಂಬೆ, ಕೆಲ ಹೊತ್ತು ರಸ್ತೆ ಸಂಚಾರ ಬಂದ್‌

tree-falls-to-road-at-Krishna-Cafe.

ಶಿವಮೊಗ್ಗ: ಭಾರಿ ಗಾಳಿ ಮಳೆಗೆ ಶಿವಮೊಗ್ಗ ನಗರದ ಕೃಷ್ಣ ಕೆಫೆ ಬಳಿ ಮರದ (tree) ರೆಂಬೆ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಾಶತ್‌ ಯಾರಿಗು ತೊಂದರೆಯಾಗಿಲ್ಲ. ಕೃಷ್ಣ ಕೆಫೆ ಪಕ್ಕದ ಓಲ್ಡ್‌ ಫೋಸ್ಟ್‌ ಆಫೀಸ್‌ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿದೆ. ಹಾಗಾಗಿ ಈ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಬಂದ್‌ ಆಗಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ರೆಂಬೆ ತೆರವು ಮಾಡಿದರು. ಸದ್ಯ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ. ಇದನ್ನೂ ಓದಿ » ಗದ್ದೆಯಲ್ಲಿ ಹಾವು ಕಚ್ಚಿ … Read more

ಶಿವಮೊಗ್ಗ ಸೇರಿ ಐದು ಜಿಲ್ಲೆಗಳಿಗೆ ಬೆಳಗ್ಗೆ 10 ಗಂಟೆವರೆಗೆ ಅಲರ್ಟ್‌

290623-Rain-General-Image.jpg

ಶಿವಮೊಗ್ಗ: ಕಳೆದ ರಾತ್ರಿಯಿಂದ ಶಿವಮೊಗ್ಗದಲ್ಲಿ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ. ಇವತ್ತು ಇಡೀ ದಿನ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಗುಡುಗು ಅಲರ್ಟ್‌ (Rain Alert) ಪ್ರಕಟಿಸಲಾಗಿದೆ. ಶಿವಮೊಗ್ಗದಲ್ಲಿ ಭಾರಿ ಮಿಂಚು, ಗುಡುಗು ಇರಲಿದೆ ಎಂದು ಹವಾಮಾನ ಇಲಾಖೆ ಅಲರ್ಟ್‌ ಘೋಷಿಸಿದೆ. ಬೆಳಗ್ಗೆ 10 ಗಂಟೆವರೆಗೆ ಯಲ್ಲೋ ಅಲರ್ಟ್‌ ಪ್ರಕಟಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ ಮಿಂಚು, ಗುಡುಗು ಸಹಿತ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅಲರ್ಟ್‌ನಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ಶಂಕರಘಟ್ಟದ … Read more

Rain in Shivamogga City Cools Down the Weather

night-rain-in-shimoga

Shivamogga: Heavy rain started in the city during the night. The rain god has brought some relief to the people of Shivamogga, who were exhausted by the intense heat and extreme sultriness. The Meteorological Department had forecast rain in Shivamogga for the last two days. However, only light rain had occurred in scattered parts of … Read more

ಶಿವಮೊಗ್ಗ ಸಿಟಿಯಲ್ಲಿ ಮಳೆ, ತುಸು ತಂಪಾಯ್ತು ವಾತಾವರಣ

Rain-in-Shimoga-city-night.

ಶಿವಮೊಗ್ಗ: ನಗರದಲ್ಲಿ ರಾತ್ರಿ ವೇಳೆಗೆ ಜೋರು ಮಳೆ (Rain) ಆರಂಭವಾಗಿದೆ. ಭಾರಿ ಬಿಸಿಲು, ವಿಪರೀತ ಧಗೆಯಿಂದಾಗಿ ಹೈರಾಣಾಗಿದ್ದ ಶಿವಮೊಗ್ಗದ ಜನರಿಗೆ ವರುಣ ತುಸು ನೆಮ್ಮದಿ ನೀಡಿದ್ದಾನೆ. ಕಳೆದ ಎರಡು ದಿನದಿಂದ ಶಿವಮೊಗ್ಗದಲ್ಲಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆದರೆ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಿತ್ತು. ಶಿವಮೊಗ್ಗ ನಗರದಲ್ಲಿ ವಿಪರೀತ ಬಿಸಿಲಿಗೆ ಜನರು ಹೈರಾಣಾಗಿದ್ದರು. ರಾತ್ರಿ ವೇಳೆಗೆ ಮಳೆ ಆರಂಭವಾಗಿದ್ದು ವಾತಾವರಣ ತಂಪಾಗುವ ಸಾಧ್ಯತೆ ಇದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಕರೆಂಟ್‌ … Read more

Rain in Shivamogga City Sparks Fear of Increased Humidity

Maxx-Hospital-lady-Staff-walking-holding-umbrella-in-Rain

Shivamogga: Rain began to fall in various parts of Shivamogga city in the evening. Around 4 PM, a light drizzle began in different localities and neighbourhoods leading to concern among residents about a rise in humidity and discomfort. The city experienced intense heat and high temperatures throughout the morning. This mix of hot weather and … Read more

ಶಿವಮೊಗ್ಗ ಸಿಟಿಯಲ್ಲಿ ಸಂಜೆ ವೇಳೆಗೆ ಮತ್ತೆ ಮಳೆ ಶುರು, ಆಗುಂಬೆ ಭಾಗದಲ್ಲಿ ಅಬ್ಬರ ಜೋರು

Rain-in-Shimoga-City

ಶಿವಮೊಗ್ಗ: ಸಿಟಿಯಲ್ಲಿ ಮತ್ತೆ ಮಳೆ (Rain) ಅಬ್ಬರಿಸುತ್ತಿದೆ. ಶಿವಮೊಗ್ಗ ನಗರದಲ್ಲಿ ಬಹು ಹೊತ್ತಿನಿಂದ ಗಂಟೆಯಿಂದ ನಿರಂತರ ಮಳೆಯಾಗುತ್ತಿದೆ. ಇಂದು ಬೆಳಗ್ಗೆಯಿಂದ ಮೋಡದ ಕವಿದ ವಾತಾವರಣ ಇತ್ತು. ಆಗಾಗ ಬಿಸಿಲು ಪ್ರತ್ಯಕ್ಷವಾಗಿ ಸ್ವಲ್ಪ ಹೊತ್ತಿಗೆ ಮರೆಯಾಗುತ್ತಿತ್ತು. ಮಧ್ಯಾಹ್ನದ ವೇಳೆ ಕೆಲವು ಹೊತ್ತು ನಗರದ ವಿವಿಧೆಡೆ ಮಳೆಯಾಗಿತ್ತು. ಸಂಜೆ ಹೊತ್ತಿಗೆ ಮತ್ತೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿ, ಜೋರು ಮಳೆಯಾಗುತ್ತಿದೆ. ಜಿಲ್ಲೆಯ ವಿವಿಧೆಡೆ ಮಳೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯು ಮಳೆಯಾಗುತ್ತಿರುವ ವರದಿಯಾಗಿದೆ. ಭದ್ರಾವತಿಯ ಅರಕೆರೆ, ಅರೆಬಿಳಚಿ, ಕಲ್ಲಿಹಾಳ್‌, ನಾಗತಿಬೆಳಗಲು, ತಡಸ, … Read more

ಶಿವಮೊಗ್ಗದಲ್ಲಿ ತುಸು ಹೆಚ್ಚಲಿದೆ ತಾಪಮಾನ, ಇವತ್ತೂ ಸುರಿಯುತ್ತಾ ಮಳೆ? ಹವಾಮಾನ ಇಲಾಖೆ ಪ್ರಕಟಣೆಯಲ್ಲಿ ಏನಿದೆ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಶುಕ್ರವಾರ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದೆ. ಇದೇ ರೀತಿ ಇಂದೂ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಇದರ ಹೊರತು ಹವಾಮಾನ ಇಲಾಖೆ ಇಂದು ಯಾವುದೇ ಅಲರ್ಟ್‌ ಪ್ರಕಟಿಸಿಲ್ಲ. (Weather Report) ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 20 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 29 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 23 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಸಾಗರ, … Read more

BREAKING NEWS – ಭಾರಿ ಮಳೆ, ಆ.29ರಂದು ರಜೆ ಕುರಿತು ತೀರ್ಥಹಳ್ಳಿ ತಹಶೀಲ್ದಾರ್‌ ಆದೇಶ

THIRTHAHALLI-BREAKING-NEWS

ಮಳೆ ವರದಿ: ಮಳೆ ಅಬ್ಬರ ಮುಂದುವರೆದ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ತೀರ್ಥಹಳ್ಳಿ ತಾಲೂಕಿನ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆ.29ರಂದು ರಜೆ (Holiday) ಘೋಷಣೆ ಮಾಡಲಾಗಿದೆ. ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮತ್ತು ಪಿ.ಯು. ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈ ರಜೆ ಅವಧಿಯನ್ನು ಮುಂದಿನ ರಜೆ ದಿನದಲ್ಲಿ ಸರಿಹೊಂದಿಸಿಕೊಳ್ಳಬೇಕು ಎಂದು ತಹಶೀಲ್ದಾರ್‌ ಆದೇಶಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಗೆ ಅಲರ್ಟ್‌ ಪ್ರಕಟ, ಕೊನೆ ದಿನವು ಅಬ್ಬರಿಸುತ್ತಾ ಮಘಾ ಮಳೆ? ಇಲ್ಲಿದೆ ಡಿಟೇಲ್ಸ್‌ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಗಾಳಿ ಅಬ್ಬರ, ಮಳೆ ಕ್ಷೀಣ, ಇವತ್ತು ಹೇಗಿರುತ್ತೆ ವಾತಾವರಣ?

WEATHER-REPORT-SHIMOGA-

ಹವಾಮಾನ ವರದಿ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ ಮೇಲ್ಮೈ ಗಾಳಿ ಇದ್ದು ರಭಸವಾಗಿ ಬೀಸುತ್ತಿದೆ. (Weather Report) ಕಳೆದ ಎರಡು ದಿನದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದೆ. ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಕೆಲವೆಡೆ ಸಾಧಾರಣ ಮಳೆಯಾದ ವರದಿಯಾಗಿದೆ. ಇವತ್ತು ಇದೇ ರೀತಿ ವಾತಾವರಣ ಇರಲಿದೆ. ಮಳೆ ಮರೆಯಾಗಿ ಜಿಲ್ಲೆಯಲ್ಲಿ ಬಿಸಿಲು ಕಾಣಿಸಿಕೊಂಡಿದೆ. ಇದನ್ನೂ ಓದಿ » ಭದ್ರಾವತಿಯಲ್ಲಿ ನೀರು ನಾಯಿಗಳ ಹಿಂಡು ಪ್ರತ್ಯಕ್ಷ, ಚಿನ್ನಾಟಕ್ಕೆ ಜನ ಫಿದಾ ಇನ್ನು, ಮೇಲ್ಮೈ ಗಾಳಿ ತೀವ್ರವಾಗಿದೆ. ಖಾಲಿ ಜಾಗಗಳಲ್ಲಿ … Read more

ಶಿವಮೊಗ್ಗದಲ್ಲಿ ಮಳೆ ಕಣ್ಮರೆ, ಬಿಸಿಲು ಪ್ರತ್ಯಕ್ಷ, ಗಾಳಿ ಅಬ್ಬರಕ್ಕೆ ಜನರಲ್ಲಿ ಆತಂಕ, ಎಲ್ಲೆಲ್ಲಿ ಹೇಗಿದೆ ಸ್ಥಿತಿ?

Rain-in-Shimoga-city-Kuvempu-Road

ಶಿವಮೊಗ್ಗ: ಜಿಲ್ಲೆಯಾದ್ಯಂತ ಮಳೆ ಕಾಡಿಮೆಯಾಗಿದೆ. ಅಲ್ಲಲ್ಲಿ ಸಾಧಾರಣ ವ್ಯಾಪಕ ಮಳೆಯಾಗುತ್ತಿದೆ. ಆದರೆ ಮೇಲ್ಮೈ ಗಾಳಿ (Wind) ರಭಸವಾಗಿದ್ದು, ಮರ, ರೆಂಬೆ ಕೊಂಬೆಗಳು ಧರೆಗುರುಳುವ ಭೀತಿ ಎದುರಾಗಿದೆ. ಮಳೆ ವಿವರ: ಇಲ್ಲಿದೆ ಹೈಲೈಟ್ಸ್‌ ಸಾಧಾರಣ ವ್ಯಾಪಕ ಮಳೆ ಕಳೆದ 24 ಗಂಟೆಯಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ವ್ಯಾಪಕ ಮಳೆಯಾಗಿದೆ. ಇವತ್ತು ಚದುರಿದಂತೆ ಮಳೆಯಾಗುವ ಸಂಭವವಿದ್ದು, ಮೇಲ್ಮೈ ಗಾಳಿ ಇರಲಿದೆ. ಎಲ್ಲೆಲ್ಲಿ ಎಷ್ಟಾಗಿದೆ ಮಳೆ? ಜುಲೈ 27ರ ಬೆಳಗ್ಗೆ 8.30ರಿಂದ ಜ.28ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ … Read more