ಶಿವಮೊಗ್ಗ ಜಿಲ್ಲೆಯಿಂದ ಮಳೆ ಮಾಯ, ಮತ್ತೆ ಶುರುವಾಯ್ತು ಬಿಸಿಲ ಝಳ, 24 ಗಂಟೆಯಲ್ಲಿ ಎಷ್ಟಾಗಿದೆ ಮಳೆ?

Low-Rainfall-in-Shimoga-city-woman-holding-umbrella-to-avoid-sunshine

SHIVAMOGGA LIVE | 1 AUGUST 2023 SHIMOGA : ಜಿಲ್ಲೆಯಾದ್ಯಂತ ಮಳೆ ಕಾಣೆಯಾಗಿದ್ದು (Less Rainfall) ಬಿಸಿಲು ಆವರಿಸಿದೆ. ಸದ್ಯ ಶಿವಮೊಗ್ಗದಲ್ಲಿ ಬೇಸಿಗೆಯ ವಾತಾವರಣ ನಿರ್ಮಾಣವಾಗಿದೆ. ಜೋರು ಮಳೆಯಾಗಬೇಕಿದ್ದ ಸಂದರ್ಭ ಶಿವಮೊಗ್ಗ ಜಿಲ್ಲೆಯಲ್ಲಿ ಬಿಸಿಲು ಆವರಿಸಿದೆ. ಮಳೆ ಸಂಪೂರ್ಣ ಕ್ಷೀಣಿಸಿದ್ದು (Less Rainfall) ಅಲ್ಲಲ್ಲಿ ಚದುರಿದಂತೆ ಸುರಿಯುತ್ತಿದೆ. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 8.97 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ ಒಂದು ಮಿ.ಮೀ.ಗಿಂತಲೂ ಕಡಿಮೆಯಾಗಿದೆ. PHOTO : ಶಿವಮೊಗ್ಗದ ತುಂಗಾ ನದಿ ಸೇತುವೆ ಮೇಲೆ … Read more

ತುಂಗಾ, ಭದ್ರಾ ಒಳ ಹರಿವು ಇಳಿಕೆ, ಲಿಂಗನಮಕ್ಕಿ ಡ್ಯಾಂ ನೀರಿನ ಮಟ್ಟ ಮೂರುವರೆ ಅಡಿ ಏರಿಕೆ

Tunga-Dam-Full-All-Gates-opened.

SHIVAMOGGA LIVE | 26 JULY 2023 SHIMOGA | ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದೆ. ಈ ಹಿನ್ನೆಲೆ ತುಂಗಾ ಮತ್ತು ಭದ್ರಾ ಜಲಾಶಯಗಳ ಒಳ ಹರಿವು (inflow) ಇಳಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಯಾವ್ಯಾವ ಡ್ಯಾಂನಲ್ಲಿ ಎಷ್ಟಿದೆ ನೀರಿನ ಸಂಗ್ರಹ? ಲಿಂಗನಮಕ್ಕಿ : ಜಲಾಶಯದ ಒಳಹರಿವು 68,645 ಕ್ಯೂಸೆಕ್ ದಾಖಲಾಗಿದೆ. ನೀರಿನ ಮಟ್ಟ 1782.3 ಅಡಿಗೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಜಲಾಶಯದ ನೀರಿನ ಮಟ್ಟ 3.4 ಅಡಿಯಷ್ಟು ಏರಿಕೆಯಾಗಿದೆ. ಇದನ್ನೂ ಓದಿ … Read more

ಶಿವಮೊಗ್ಗ ತುಂಗಾ ನದಿ ಹೊಸ ಸೇತುವೆ ಮೇಲಿಂದ ಜಿಗಿದು ಯುವಕನ ಹುಚ್ಚಾಟ, ವಿಡಿಯೋ ವೈರಲ್‌

Youth-jumping-from-Tunga-Bridge-in-Shimoga

SHIVAMOGGA LIVE | 25 JULY 2023 SHIMOGA : ಯುವಕನೊಬ್ಬ ತುಂಗಾ ನದಿ ಹೊಸ ಸೇತುವೆ ಮೇಲಿನಿಂದ ಹೊಳೆಗೆ ಹಾರಿರುವ (JUMP) ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸೇತುವೆ ಮೇಲಿಂದ ಜಿಗಿದು ಸ್ವಲ್ಪ ಹೊತ್ತು ಈಜಿ ಬಳಿಕ ದಡಕ್ಕೆ ತಲುಪಿದ್ದಾನೆ ಎಂದು ಹೇಳಲಾಗುತ್ತಿದೆ. ವೈರಲ್‌ ವಿಡಿಯೋದಲ್ಲಿ ಏನಿದೆ? ಯುವಕನೊಬ್ಬ ತುಂಗಾ ನದಿ ಹೊಸ ಸೇತುವೆ ತಡೆಗೋಡೆ ಮೇಲಿನಿಂದ ಜಿಗಿದಿದ್ದಾನೆ (JUMP). ರಭಸವಾಗಿ ಹರಿಯುವ ನೀರಿನಲ್ಲಿ ರೈಲ್ವೆ ಸೇತುವೆವರೆಗು ತಲುಪಿದ್ದಾನೆ. ಅಲ್ಲಿಂದ ನೀರಿನ ಹರಿವಿಗೆ ವಿರುದ್ಧ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಅಬ್ಬರ, ಜು.26ರಿಂದ ಮಲೆನಾಡು ಭಾಗದಲ್ಲಿ ಹೈ ಅಲರ್ಟ್‌, ಕಾರಣವೇನು?

Rain-General-Image-youth-With-an-Umbrella

SHIVAMOGGA LIVE | 25 JULY 2023 SHIMOGA : ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೆ ಮಳೆ ಬಿರುಸಾಗಿದೆ. ಇನ್ನೊಂದೆಡೆ ಮೂರ್ನಾಲ್ಕು ದಿನದಲ್ಲಿ ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗಲಿದೆ (Rainfall) ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ ಮುಂದುವರೆದಿದೆ. ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹಲವೆಡೆ ಆಗಾಗ ಸ್ವಲ್ಪ ಬಿಡುವು ನೀಡಿ ಬಳಿಕ ಮಳೆ ಅಬ್ಬರಿಸುತ್ತಿದೆ. ಎಲ್ಲೆಲ್ಲಿ ಮಳೆ ಹೇಗಿದೆ? ತೀರ್ಥಹಳ್ಳಿಯ ಹೊನ್ನೇತಾಳು, ಬಿದರಗೋಡು, ಅರೇಹಳ್ಳಿ, ತೀರ್ಥಮತ್ತೂರು, ಸಾಲ್ಗುಡಿ, ಹೊಸಹಳ್ಳಿ, ಬೆಜ್ಜವಳ್ಳಿ, ಭಾಂಡ್ಯ ಕುಕ್ಕೆ, … Read more

ತುಂಗಾ ಜಲಾಶಯದ ಒಳ ಹರಿವು ಹೆಚ್ಚಳ, ಇವತ್ತು ಎಷ್ಟಿದೆ ಹೊರ ಹರಿವು?

Tunga-Dam-Full-All-Gates-opened.

SHIVAMOGGA LIVE | 25 JULY 2023 SHIMOGA : ಜಲಾನಯನ ಪ್ರದೇಶದಲ್ಲಿ ಮಳೆ ಜೋರಾಗಿದೆ. ಆದ್ದರಿಂದ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳ ಹರಿವು (Dam Level) ಏರಿಕೆಯಾಗುತ್ತಲೆ ಇದೆ. ಪ್ರಸ್ತುತ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್‌ ನೀರು ಒಳ ಹರಿವು ಇದೆ. ಜು.25ರ ಬೆಳಗಿನ ವರದಿ ಪ್ರಕಾರ ತುಂಗಾ ಜಲಾಶಯದ ಒಳ ಹರಿವು 60,455 ಕ್ಯೂಸೆಕ್‌ ಒಳ ಹರಿವು ಇದೆ. 61,033 ಕ್ಯೂಸಕ್‌ ನೀರನ್ನು ಹೊಳೆಗೆ ಹರಿಸಲಾಗುತ್ತಿದೆ. ಕಳೆದ ವರ್ಷ ಈ ದಿನ 14,810 ಕ್ಯೂಸೆಕ್‌ … Read more

ಶಿವಮೊಗ್ಗದಲ್ಲಿ ಶಾಲೆಗಳಿಗೆ ರಜೆ ವಿಚಾರ, ಶಿಕ್ಷಣ ಇಲಾಖೆಯಿಂದ ಪ್ರಮುಖ ಸೂಚನೆ, ಯಾವ್ಯಾವ ಶಾಲೆಗೆ ರಜೆ ಸಿಗುತ್ತೆ?

DDPI-office-Shimoga.

SHIVAMOGGA LIVE | 24 JULY 2023 SHIMOGA : ಭಾರಿ ಮಳೆಯಾಗುತ್ತಿರುವ ಮೂರು ತಾಲೂಕುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ (Holiday) ಘೋಷಿಸುವ ಸಂಬಂಧ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆ ಪ್ರಮುಖ ನಿರ್ಧಾರ ಕೈಗೊಂಡಿದೆ. ಮಳೆಯ ತೀವ್ರತೆಯನ್ನು ಗಮನಿಸಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಯೊಂದಿಗೆ ಚರ್ಚಿಸಿ ರಜೆ ಘೋಷಿಸಬಹುದು ಎಂದು ತಿಳಿಸಿದ್ದಾರೆ. ಜು.25ರಂದು ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ (Holiday) ಘೋಷಿಸುವ ಸಂಬಂಧ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಪ್ರಮುಖ ಸೂಚನೆ … Read more

ಶಿವಮೊಗ್ಗದಲ್ಲಿ ಮಳೆ, ಶಾಲೆಗಳಿಗೆ ರಜೆ, ಜೈಲ್‌ ಗೋಡೆ ಕುಸಿತ, ಜಮೀನು ಜಲಾವೃತ | ಟಾಪ್‌ 10 ಸುದ್ದಿಗಳು

Rain-havoc-in-Shimoga-district-fatafat-news

SHIVAMOGGA LIVE | 24 JULY 2023 SHIMOGA : ಜಿಲ್ಲೆಯಾದ್ಯಂತ ಭಾನುವಾರ ಭಾರಿ ಮಳೆಯಾಗಿದೆ. ಹಳ್ಳ, ಕೊಳ್ಳಗಳು ಭರ್ತಿಯಾಗಿದ್ದು, ಜಲಾಶಯಗಳಿಗೆ ಹೇರಳವಾಗಿ ನೀರು ಹರಿದು ಬಂದಿದೆ. ಇದರ ಜೊತೆಗೆ ಅಲ್ಲಲ್ಲಿ ಮಳೆಯಿಂದಾಗಿ ಹಾನಿಯು ಸಂಭವಿಸಿದೆ. ಜಿಲ್ಲೆಯಾದ್ಯಂತ ಹೇಗಿತ್ತು ಮಳೆ? ಇಲ್ಲಿದೆ ಕಂಪ್ಲೀಟ್‌ ವಿವರ ಹೇಗಿತ್ತು ಮಳೆ? ಏನೆಲ್ಲ ಹಾನಿಯಾಯ್ತು? ಜೈಲಿನ ಕಾಂಪೌಂಡ್‌ ಗೋಡೆ ಕುಸಿತ ಸಾಗರ : ನಿರಂತರ ಮಳೆಯಿಂದಾಗಿ ಎಸ್‌ಆರ್‌ಎಸ್‌ ಮಿಲ್‌ ರಸ್ತೆಯಲ್ಲಿರುವ ಜೈಲಿನ ಗೋಡೆ ಕುಸಿದಿದೆ. ಭಾನುವಾರ ಬೆಳಗ್ಗೆ ಮತ್ತು ಸಂಜೆ ಎರಡು … Read more

ಶಿವಮೊಗ್ಗ ಜಿಲ್ಲೆಯ ಪಿಯು ಕಾಲೇಜುಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ರಜೆ, ಪ್ರಾಂಶುಪಾಲರ ನಿರ್ಧಾರವೆ ಫೈನಲ್

Maxx-Hospital-lady-Staff-walking-holding-umbrella-in-Rain

SHIVAMOGGA LIVE | 24 JULY 2023 SHIMOGA : ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿರುವುದರಿಂದ ಪರಿಸ್ಥಿತಿ ಅನುಗುಣವಾಗಿ ರಜೆ (Holiday) ನೀಡಲು ಆಯಾ ಕಾಲೇಜು ಪ್ರಾಂಶುಪಾಲರಿಗೆ ಅವಕಾಶ ನೀಡಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶಿಸಿದೆ. ಈಗಾಗಲೆ ಭದ್ರಾವತಿ, ಸಾಗರ, ಹೊಸನಗರ, ತೀರ್ಥಹಳ್ಳಿ, ಸೊರಬ, ಶಿಕಾರಿಪುರ ಕೆಲ ಕಾಲೇಜುಗಳಲ್ಲಿ ಪ್ರಾಂಶುಪಾಲರು ರಜೆ ಘೋಷಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ಒಂದು ದಿನ ರಜೆ

BREAKING NEWS | ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲೆಗಳಿಗೆ ಒಂದು ದಿನ ರಜೆ

SHIMOGA-BREAKING-NEWS.jpg

SHIVAMOGGA LIVE | 23 JULY 2023 SHIMOGA : ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಮಕ್ಕಳ ಸುರಕ್ಷತೆ ದೃಷ್ಟಯಿಂದ ಜು.24ರಂದು ಶಾಲೆಗಳಿಗೆ ರಜೆ (Holiday) ಘೋಷಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ ಮಳೆ? – FULL REPORT ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆ ಜು.24ರಂದು ಶಿವಮೊಗ್ಗ ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ, 24 ಗಂಟೆಯಲ್ಲಿ ಯಾವ್ಯಾವ ತಾಲೂಕು, ಹೋಬಳಿಯಲ್ಲಿ ಎಷ್ಟಾಗಿದೆ ಮಳೆ? – FULL REPORT

Rainfall-near-Bhadra-Dam-in-Singanamane-Village-in-Bhadravathi

‌SHIVAMOGGA LIVE | 23 JULY 2023 SHIMOGA : ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು ಮಳೆ ಪ್ರಮಾಣ ಮತ್ತಷ್ಟು ಹೆಚ್ಚಳವಾಗುವ ಸಂಭವವಿದೆ. ಹೊಸನಗರ, ಸಾಗರ ಮತ್ತು ತೀರ್ಥಹಳ್ಳಿ ತಾಲೂಕುಗಳಲ್ಲಿ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಇನ್ನು, ಕಳೆದ 24 ಗಂಟೆಯಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗಿದೆ. ಸರಾಸರಿ 67.4 ಮಿ.ಮೀ ಮಳೆಯಾಗಿದೆ (Rain Report). ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ? ಶಿವಮೊಗ್ಗ ತಾಲೂಕಿನಲ್ಲಿ 19.6 ಮಿ.ಮೀ, ಭದ್ರಾವತಿ 17.5 ಮಿ.ಮೀ, ಹೊಸನಗರ 98 ಮಿ.ಮೀ, … Read more