ಶಿವಮೊಗ್ಗದಲ್ಲಿ ಮಳೆ ಆರ್ಭಟ, ಜನ ತತ್ತರ, ರಸ್ತೆಗಳು ಜಲಾವೃತ | PHOTO NEWS

061021 Heavy Rain At Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 06 ಅಕ್ಟೋಬರ್ 2021 ಶಿವಮೊಗ್ಗ ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ವರುಣನ ಆರ್ಭಟಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರ ಜೋರು ಮಳೆಯಿಂದಾಗಿ ನಗರದ ರಸ್ತೆಗಳಲ್ಲಿ ನೀರು ನಿಂತಿದೆ. ಹಾಗಾಗಿ ಜನರು ಓಡಾಡುವುದಕ್ಕೆ ಕಷ್ಟಪಡುವಂತಾಗಿದೆ. ಮಳೆ ಅಬ್ಬರದ ಫೋಟೊಗಳು ಇಲ್ಲಿವೆ (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ … Read more

ಶಿವಮೊಗ್ಗದಲ್ಲಿ ಜೋರು ಮಳೆ, ತಗ್ಗು ಪ್ರದೇಶದ ಜನರಲ್ಲಿ ಢವಢವ

Rain-At-Shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 ಅಕ್ಟೋಬರ್ 2021 ಶಿವಮೊಗ್ಗದಲ್ಲಿ ಭಾರಿ ಮಳೆ ಆರಂಭವಾಗಿದೆ. ರಾತ್ರಿ ಗುಡುಗು ಸಹಿತ ಮಳೆ ಆರಂಭವಾಗಿದೆ. ತಗ್ಗು ಪ್ರದೇಶದಲ್ಲಿ ಜನರಲ್ಲಿ ಆತಂಕ ಮೂಡಿಸಿದೆ. ಶಿವಮೊಗ್ಗ ನಗರದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಮಿಂಚು, ಗುಡುಗು ಸಹಿತಿ ಮಳೆಯಾಗುತ್ತಿದೆ. ರಾತ್ರಿ ಇಡೀ ಮಳೆ ಸುರಿಯುವ ಸಂಭವವಿದೆ. ಜೋರು ಮಳೆಯಾಗುತ್ತಿರುವುದರಿಂದ ತಗ್ಗು ಪ್ರದೇಶದ ಜನರಲ್ಲಿ ಆತಂಕ ಮೂಡಿದೆ. ಶಿವಮೊಗ್ಗ ನಗರದ ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. (ಶಿವಮೊಗ್ಗ ಲೈವ್.ಕಾಂ … Read more

ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಮೂರು ದಿನ ಮಳೆ

180520 Shimoga Rain May 18 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಸೆಪ್ಟೆಂಬರ್ 2021 ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಶಿವಮೊಗ್ಗ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆ ಇನ್ನು ಮೂರು ದಿನ ಮಳೆಯಾಗಲಿದೆ. ಸಂಜೆಯಿಂದ ಶಿವಮೊಗ್ಗ ನಗರದ ವಿವಿಧೆಡೆ ಕೆಲವು ನಿಮಿಷ ಮಳೆ ಸುರಿದಿದೆ. ಮೂರು ದಿನ ನಿರಂತರ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಮಳೆ ಸುರಿಯಲಿದೆ. ರಾಜ್ಯದಲ್ಲಿ ಮುಂಗಾರು ದುರ್ಬಲಗೊಂಡಿದೆ. ಆದರೆ ಬಂಗಾಳ … Read more

BREAKING NEWS | ತಿಲಕನಗರದಲ್ಲಿ ಕಾರಿನ ಮೇಲೆ ಉರುಳಿದ ಬೃಹತ್ ಮರ

140921 Tree Fall On Car in Tilak Nagara

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟೆಂಬರ್ 2021 ಬೃಹತ್ ಮರವೊಂದು ಬುಡಮೇಲಾಗಿ ಕಾರಿನ ಮೇಲೆ ಉರುಳಿದೆ. ಕಾರು ನಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಯಾವುದೆ ಪ್ರಾಣಹಾನಿಯಾಗಿಲ್ಲ. ತಿಲಕನಗರ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಡಯಾನ ಬುಕ್ ಹೌಸ್ ಸಮೀಪ ಇದ್ದ ಮರ ಬುಡಮೇಲಾಗಿದೆ. ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬದ್ದಿದೆ. ಕಾರು ನುಜ್ಜುಗುಜ್ಜು ಮರ ಉರುಳಿದ್ದರಿಂದ ಕಾರು ನುಜ್ಜುಗುಜ್ಜಾಗಿದೆ. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇರಲಿಲ್ಲ ಎಂದು ಹೇಳಲಾಗುತ್ತಿದೆ. ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು … Read more

ಶಿವಮೊಗ್ಗದಲ್ಲಿ ಮಳೆ, ಬಿಸಿಲಿನ ಕಣ್ಣಾಮುಚ್ಚಾಲೆ, ಹೆಚ್ಚುತ್ತಿದೆ ಆರೋಗ್ಯ ಸಮಸ್ಯೆ, ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ಮಳೆ?

Shivamogga-Rain-General-Image

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟೆಂಬರ್ 2021 ಜಿಲ್ಲೆಯಾದ್ಯಂತ ಮಳೆ ಮುಂದುವರೆದಿದೆ. ಕೆಲವೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಇನ್ನು ಕೆಲವು ಕಡೆ ಮಳೆ, ಬಿಸಿಲಿನ ಕಣ್ಣಾ ಮುಚ್ಚಾಲೆ ಮುಂದುವರೆದಿದೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯಾದ್ಯಂತ 35.03 ಮಿ.ಮೀ ಮಳೆಯಾಗಿದೆ. ಈ ಪೈಕಿ ಶಿವಮೊಗ್ಗ ತಾಲೂಕಿನಲ್ಲಿ 9.60 ಮಿ.ಮೀ, ಭದ್ರಾವತಿಯಲ್ಲಿ 7.20 ಮಿ.ಮೀ, ತೀರ್ಥಹಳ್ಳಿಯಲ್ಲಿ 25. 80 ಮಿ.ಮೀ, ಸಾಗರದಲ್ಲಿ 17.40 ಮಿ.ಮೀ, ಶಿಕಾರಿಪುರದಲ್ಲಿ 7.40 ಮಿ.ಮೀ, … Read more

ಹೊಸನಗರದಲ್ಲಿ ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಮಳೆ, ಆರು ದಿನದಲ್ಲಿ ಅತ್ಯಧಿಕ, ಈವರೆಗೂ ಎಷ್ಟು ಮಳೆಯಾಗಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 13 ಸೆಪ್ಟೆಂಬರ್ 2021 ಹೊಸನಗರ ತಾಲೂಕಿನಲ್ಲಿ ಈ ತಿಂಗಳು ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಮಳೆಯಾಗಿದೆ. ಅದರಲ್ಲೂ ಕಳೆದ ಆರು ದಿನದಲ್ಲಿ ಅತ್ಯಧಿಕ ಮಳೆ ಸುರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹೊಸನಗರ ತಾಲೂಕಿನಲ್ಲಿ 219 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಭಾರಿ 1150.20 ಮಿ.ಮೀ ಮಳೆಯಾಗಿದೆ. ಕಳೆದ ಆರು ದಿನದಲ್ಲಿ ಹೊಸನಗರ ತಾಲೂಕಿನಲ್ಲಿ 875.4 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್ 8ರಿಂದ ವರುಣ ಅಬ್ಬರಿಸಲು ಆರಂಭಿಸಿದ್ದಾನೆ. ಆ ದಿನ ತಾಲೂಕಿನಲ್ಲಿ … Read more

ಜಲಾಶಯಗಳಿಗೆ ಒಳಹರಿವು ಹೆಚ್ಚಳ, ಭರ್ತಿಯಾಗುವತ್ತ ಲಿಂಗನಮಕ್ಕಿ, ಯಾವ್ಯಾವ ಡ್ಯಾಮ್’ಗೆ ಎಷ್ಟಿದೆ ಒಳ, ಹೊರ ಹರಿವು?

130921 Tunga River at Shimoga After Rain

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ವಾಯುಭಾರ ಕುಸಿತದಿಂದಾಗಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದೆ. ನಿರಂತರ ಮಳೆಯಿಂದಾಗಿ ಜಿಲ್ಲೆಯ ಜಲಾಶಯಗಳ ಒಳ ಹರಿವು ಪ್ರಮಾಣದಲ್ಲಿ ಏರಿಕೆಯಾಗಿದೆ. ಲಿಂಗನಮಕ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗುವ ಹಂತಕ್ಕೆ ತಲುಪಿದೆ. ಅರ್ಧ ಮುಳುಗಿದ ಮಂಟಪ ಹಿನ್ನೀರು ಭಾಗದಲ್ಲಿ ಮಳೆ ಹೆಚ್ಚಳವಾದ ಹಿನ್ನೆಲೆ ತುಂಗಾ ಜಲಾಶಯದ ಒಳಹರಿವು ಮತ್ತೆ ಏರಿಕೆಯಾಗಿದೆ. ಜಲಾಶಯ ಈಗಾಗಲೇ ಸಂಪೂರ್ಣ ಭರ್ತಿಯಾಗಿದೆ. ಹಾಗಾಗಿ ಒಳಹರಿವಿನಷ್ಟೆ ಪ್ರಮಾಣದ ನೀರನ್ನು ಹೊರಗೆ ಹರಿಸಲಾಗುತ್ತಿದೆ. ಜಲಾಶಯಕ್ಕೆ 20,396 … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಅಬ್ಬರ, ಹೊಸನಗರದಲ್ಲಿ ಜೋರು ವರುಣಾರ್ಭಟ, ಯಾವ್ಯಾವ ತಾಲೂಕಲ್ಲಿ ಎಷ್ಟಾಗಿದೆ ಮಳೆ?

rain in shimoga

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ಸೋನೆ ಮಳೆಗೆ ಶಿವಮೊಗ್ಗದ ಜಲಾಶಯಗಳ ಒಳ ಹರಿವು ಹೆಚ್ಚಳವಾಗಿದೆ. ಡ್ಯಾಂಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.           ತೀರ್ಥಹಳ್ಳಿ, ಹೊಸನಗರ, ಸಾಗರ ತಾಲೂಕಿನಲ್ಲಿ ಜೋರು ಮಳೆಯಾಗುತ್ತಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದ ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಇನ್ನಷ್ಟು ದಿನ ಮಳೆ ಮುಂದುವರೆಯುವ ಸಾದ್ಯತೆ ಇದೆ. ಹಾಗಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ? ಜಿಲ್ಲೆಯಾದ್ಯಂತ ಕಳೆದ … Read more

ನೂತನ ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿ ಹಂಚಿಕೆ, ಶಿವಮೊಗ್ಗದ ಹೊಣೆ ಯಾರಿಗೆ?

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 ಆಗಸ್ಟ್ 2021 ಸಂಪುಟ ರಚನೆಯಾಗುತ್ತಿದ್ದಂತೆ ನೂತನ ಸಚಿವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೋವಿಡ್ ಮತ್ತು ನೆರೆ ಪರಿಸ್ಥಿತಿ ನಿರ್ವಹಣೆ ಜವಾಬ್ದಾರಿ ಹಂಚಿಕೆ ಮಾಡಿದ್ದಾರೆ. ಇದನ್ನೂ ಓದಿ | ಸಾಲು ಸಾಲು ಸೋಲು, ಆರು ತಿಂಗಳು ಜೈಲು, ತಾಳ್ಮೆಗೆ ಸಿಕ್ತು ಫಲ, ಸಚಿವ ಆರಗ ಜ್ಞಾನೇಂದ್ರ ಬಗ್ಗೆ ತಿಳಿಬೇಕಾದ ಸಂಗತಿಗಳು ಇಲ್ಲಿವೆ ಕರೋನ ಮೂರನೆ ಅಲೆ ಭೀತಿ ಎದುರಾಗಿದೆ. ಮತ್ತೊಂದೆಡೆ ನೆರೆ ಪರಿಹಾರ ಕಾರ್ಯಗಳು ತ್ವರಿತವಾಗಿ ಆಗಬೇಕಿದೆ. ಈ … Read more

ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪ್ ರಾತ್ರೋರಾತ್ರಿ ನಾಪತ್ತೆ

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2021 ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆಯುವುದು, ಟೈರ್ ಬಿಚ್ಚಿಕೊಂಡು ಹೋಗುವುದು, ಕಾರಿನ ಒಳಗಿದ್ದ ವಸ್ತುಗಳನ್ನು ಕದ್ದೊಯ್ಯುವ ಪ್ರಕರಣಗಳನ್ನು ಕೇಳಿದ್ದೇವೆ. ಈಗ ಕಾರಿನ ಸೈಲೆನ್ಸರ್ ಪೈಪನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪನ್ನು ರಾತ್ರೋರಾತ್ರಿ ಕಳುವು ಮಾಡಲಾಗಿದೆ. ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿ ಘಟನೆ ವರದಿಯಾಗಿದೆ. ಹೇಗಾಯ್ತು ಘಟನೆ? ಮಂಜುನಾಥ ಬಡಾವಣೆಯ ಸತೀಶ್ ಕುಮಾರ್ ಅವರು ಪಾತ್ರೆ ವ್ಯಾಪಾರ ಮಾಡುತ್ತಾರೆ. … Read more