ಶಿವಮೊಗ್ಗದಲ್ಲಿ ಮಳೆಗೆ ಮನೆ ಗೋಡೆ ಕುಸಿತ, ಅದೃಷ್ಟವಶಾತ್‌ ತಪ್ಪಿದ ಅನಾಹುತ

House-damage-due-to-rain-in-milagatta.

SHIMOGA, 25 AUGUST 2024 : ಜೋರು ಮಳೆಗೆ ಶಿಮೊವಗ್ಗದಲ್ಲಿ ಮನೆ (House) ಕುಸಿದಿದೆ. ಮಿಳಘಟ್ಟ ಬಸ್‌ ನಿಲ್ದಾಣದ ಸಮೀಪ ಕುಲುಶುಂಬಿ ಎಂಬುವವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಮಳೆಯಿಂದಾಗಿ ಕಳೆದ ರಾತ್ರಿ ಗೋಡೆ ಕುಸಿದಿದೆ. ಅದೃಷ್ಟವಶಾತ್‌ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ. ಸಂತ್ರಸ್ತ ಕುಟುಂಬಕ್ಕೆ ಸರ್ಕಾರ ತುರ್ತು ನೆರವು ನೀಡಬೇಕು ಎಂದು ಕುಟುಂಬದವರು ಆಗ್ರಹಿಸಿದ್ದಾರೆ. ಇದನ್ನೂ ಓದಿ ⇒ ಆರೆಂಜ್‌ ಅಲರ್ಟ್‌, ಹೊಸನಗರ, ತೀರ್ಥಹಳ್ಳಿಯ ವಿವಿಧೆಡೆ ಮಳೆ ಅಬ್ಬರ, ಜಿಲ್ಲೆಯ ವಿವಿಧೆಡೆ ಹೇಗಿದೆ ವರ್ಷಧಾರೆ?

ಮಘ ಮಳೆಗೆ ಕೋಡಿ ಬಿತ್ತು ಅಬ್ಬಲಗೆರೆ ಕೆರೆ, ಬೊಮ್ಮನಕಟ್ಟೆಯಲ್ಲಿ ಹಾನಿ, ಆನಂದಪುರದಲ್ಲಿ ಕೊಚ್ಚಿ ಹೋದ ಸಸಿ

abbalagere-lake-and-basavanaganguru-school.

RAINFALL NEWS, 20 AUGUST 2024 : ಮಘ ಮಳೆ ಅಬ್ಬರಕ್ಕೆ (Rain Effect)  ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಭಾರಿ ಹಾನಿ ಉಂಟಾಗಿದೆ. ಸೋಮವಾರ ಸುರಿದ ಮಳೆಗೆ ಕೆರೆ ಕೋಡಿ ಬಿದ್ದಿವೆ. ಗದ್ದೆ, ತೋಟಗಳು ಜಲಾವೃತವಾಗಿ ನಷ್ಟ ಉಂಟಾಗಿದೆ. ಎಲ್ಲೆಲ್ಲಿ ಏನೇನು ಹಾನಿಯಾಗಿದೆ? ಇದನ್ನೂ ಓದಿ ⇒ ಶಿವಮೊಗ್ಗದ ಶಿವಪ್ಪನಾಯಕ ಪ್ರತಿಮೆ ಮುಂದೆ ರಾತ್ರೋರಾತ್ರಿ ಪ್ರತ್ಯಕ್ಷವಾಗುತ್ತೆ ಫಲಕ, ಇದನ್ನು ಹಾಕೋದ್ಯಾರು ಗೊತ್ತಾ? ಇದನ್ನೂ ಓದಿ ⇒ ರೀಲ್ಸ್‌ ಮಾಡಿದರೆ ಅಂಗಡಿಗೆ ಹೆಚ್ಚಾಗ್ತಾರೆ ಗ್ರಾಹಕರು, ಇಲ್ಲಿದೆ ಶಿವಮೊಗ್ಗ ಜಿಲ್ಲೆಯ ಬೆಸ್ಟ್‌ ಉದಾಹರಣೆಗಳು

ಶಿವಮೊಗ್ಗ ಸಿಟಿಯಲ್ಲಿ ಮಳೆ ಅಬ್ಬರ, ಜೈಲ್‌ ರಸ್ತೆ ಜಲಾವೃತ

Heavy-Rain-Shimoga-Jail-Road

SHIMOGA, 16 AUGUST 2024 : ಶಿವಮೊಗ್ಗ ನಗರದಲ್ಲಿ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಮಳೆ ಜೋರಾಗಿದೆ. ನಗರದಲ್ಲಿ ದಟ್ಟ ಮೋಡ ಕವಿದಿದ್ದು ಕೆಲ ಹೊತ್ತು ಎಡೆಬಿಡದೆ ಮಳೆಯಾಗುತ್ತಿದೆ. ಭಾರಿ ಮಳೆಗೆ ಚರಂಡಿಗಳು ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ವಿವಿಧೆಡೆ ಮನೆ, ಮಳಿಗೆಗಳಿಗು ನೀರು ನುಗ್ಗಿದೆ. ಜೈಲ್‌ ರಸ್ತೆ ಜಲಾವೃತ ಶಿವಮೊಗ್ಗ ಜೈಲ್‌ ರಸ್ತೆ ಜಲಾವೃತವಾಗಿದೆ. ಸುಬ್ಬಯ್ಯ ಆಸ್ಪತ್ರೆಯಿಂದ ಹೊಸಮನೆ ಚಾನೆಲ್‌ ವರೆಗು ರಸ್ತೆ ಮೇಲೆ … Read more

ಶಿವಮೊಗ್ಗದಲ್ಲಿ ಜೋರು ಮಳೆ, ವಿವಿಧ ತಾಲೂಕಿನಲ್ಲೂ ವರುಣನ ಅಬ್ಬರ, ಎಲ್ಲೆಲ್ಲಿ ಮಳೆಯಾಗ್ತಿದೆ? ಇಲ್ಲಿದೆ ರಿಪೋರ್ಟ್

Rain-in-Shimoga-city-night.

SHIMOGA, 14 AUGUST 2024 : ಶಿವಮೊಗ್ಗ ನಗರದಲ್ಲಿ ಜೋರು ಮಳೆ (Rain) ಶುರುವಾಗಿದೆ. ದಿಢೀರ್‌ ಮಳೆಯಿಂದಾಗಿ ಜನರು ಸಂಕಷ್ಟಕ್ಕೀಡಾದರು. ವ್ಯಾಪಾರ, ವಹಿವಾಟಿಗು ತೊಂದರೆ ಉಂಟಾಯಿತು. ಬೆಳಗ್ಗೆಯಿಂದ ಜೋರು ಬಿಸಿಲು, ಧಗೆಯಿಂದಾಗಿ ಮಳೆಗಾಲದಲ್ಲು ಬೇಸಿಗೆಯ ಅನುಭವವಾಗಿತ್ತು. ರಾತ್ರಿ 8 ಗಂಟೆ ಹೊತ್ತಿಗೆ ಶಿವಮೊಗ್ಗ ನಗರದಲ್ಲಿ ಜೋರು ಮಳೆಯಾಗುತ್ತಿದೆ. ಹಠಾತ್‌ ಮಳೆಯಿಂದಾಗಿ ಕಚೇರಿಗಳಿಂದ ಮನೆಗೆ ತೆರಳುತ್ತಿರುವವರು, ವ್ಯಾಪಾರ, ವಾಹಿವಾಟು ನಡೆಸುತ್ತಿದ್ದವರಿಗೆ ಸಮಸ್ಯೆ ಉಂಟಾಯಿತು. ಭಾರಿ ಮಳೆ ಹಿನ್ನೆಲೆ ಶಿವಮೊಗ್ಗ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ. ಶಿವಮೊಗ್ಗದ ಸಂತೆ ಕಡೂರು, … Read more

ರಾತ್ರಿ ಗಾಜನೂರಿಗೆ MLA ದಿಢೀರ್‌ ಭೇಟಿ, ಕಮಿಷನರ್‌ ಸಿಟಿ ರೌಂಡ್ಸ್‌, ಶಿವಮೊಗ್ಗದಲ್ಲಿ ಇವತ್ತು ಬಿಸಿಲು

MLA-Sudden-visit-to-gajanuru-dam.

SHIMOGA, 31 JULY 2024 : ಭಾರಿ ಮಳೆ ಮುನ್ಸೂಚನೆ ಮಧ್ಯೆ ಶಿವಮೊಗ್ಗ ನಗರದಲ್ಲಿ ಬಿಸಿಲು ಪ್ರತ್ಯಕ್ಷವಾಗಿದೆ. ಇನ್ನೊಂದೆಡೆ ನೆರೆ ಭೀತಿ ಹಿನ್ನೆಲೆ ಶಾಸಕ ಎಸ್‌.ಎನ್.ಚನ್ನಬಸಪ್ಪ, ಪಾಲಿಕೆ ಆಯುಕ್ತರು ಪ್ರತ್ಯೇಕವಾಗಿ ಸಿಟಿ ರೌಂಡ್ಸ್‌ (ROUNDS) ನಡೆಸಿದರು. ಶಿವಮೊಗ್ಗ ಸಿಟಿಯಲ್ಲಿ ಬಿಸಿಲು ನಿರಂತರ ಮಳೆ ಮತ್ತು ಮೋಡ ಕವಿದ ವಾತಾವರಣದಿಂದ ಕಳೆದ ಎರಡು ವಾರದಿಂದ ಬಿಸಿಲು ಮರೆಯಾಗಿತ್ತು. ಇವತ್ತು ಬೆಳಗೆಯಿಂದ ಆಗಸಲ್ಲಿ ಮೋಡಗಳು ಮರೆಯಾಗಿವೆ. ಪುನಃ ಬಿಸಲು ಕಾಣಿಸಿಕೊಂಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಮುಗ್ಗುಲು ಹಿಡಿದ ಬಟ್ಟೆಗಳನ್ನು ಒಣಗಿಸುತ್ತಿದ್ದಾರೆ. … Read more

ತೀರ್ಥಹಳ್ಳಿಯಲ್ಲಿ ಎಡೆಬಿಡದೆ ಮಳೆ, ಅಪಾಯದ ಮಟ್ಟದಲ್ಲಿ ತುಂಗೆ, ಶಾಲೆ, ಕಾಲೇಜಿಗೆ ರಜೆ

Thirthahalli-tunga-river-heavy-rain

THIRTHAHALLI, 30 JULY 2024 : ತೀರ್ಥಹಳ್ಳಿ ತಾಲೂಕಿನಾದ್ಯಂತ ಇವತ್ತು ಮಳೆ ಅಬ್ಬರಿಸುತ್ತಿದೆ (Heavy Rain). ತುಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಇನ್ನೊಂದೆಡೆ ಮುನ್ನೆಚ್ಚರಿಕೆ ಕ್ರಮವಾಗಿ ಶಾಲೆ, ಕಾಲೇಜಗಳಿಗೆ ರಜೆ ಘೋಷಿಸಲಾಗಿದೆ. ತಾಲೂಕಿನಾದ್ಯಂತ ಮಳೆ ಅಬ್ಬರ ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಬಿರುಸಾಗಿದೆ. ಬೆಳಗ್ಗೆಯಿಂದ ಎಡೆಬಿಡದೆ ಮಳೆಯಾಗುತ್ತಿದೆ. ಸದ್ಯ ಹೊನ್ನೇತಾಳು, ಬಿದರಗೋಡು ಸೇರಿದಂತೆ ಆಗುಂಬೆ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ತೂದರು, ಭಾಂಡ್ಯ ಕುಕ್ಕೆ, ತ್ರಯಂಬಕಪುರ, ದೇಮ್ಲಾಪುರ, ಆರಗ, ಹೆಗ್ಗೋಡು ಸೇರಿದಂತೆ ವಿವಿಧೆಡೆ ಜೋರು ಮಳೆಯಾಗುತ್ತಿರುವ ವರದಿಯಾಗಿದೆ. ರಾಮ … Read more

ಶಿವಮೊಗ್ಗಕ್ಕೆ ಆರೆಂಜ್‌ ಅಲರ್ಟ್‌, ಜೋರು ಮಳೆ ಜೊತೆಗೆ ವಿಪರೀತ ಗಾಳಿ, ಜನರಲ್ಲಿ ಭೀತಿ

agumbe-ghat-road-during-rainy-season

ಶಿವಮೊಗ್ಗ, 26 JULY 2024 : ಜಿಲ್ಲೆಯಾದ್ಯಂತ ಪುನಃ ಮಳೆ (rain) ಅಬ್ಬರಿಸಲು ಆರಂಭಿಸಿದೆ. ಈ ಹಿನ್ನೆಲೆ ಹವಾಮಾನ ಇಲಾಖೆ ಇವತ್ತು ಶಿವಮೊಗ್ಗ ಜಿಲ್ಲೆಗೆ ಆರೆಂಜ್‌ ಅಲರ್ಟ್‌ ಘೋಷಿಸಿದೆ. ಆರೆಂಜ್‌ ಅಲರ್ಟ್‌ ಇರುವ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ. ವಿಪರೀತ ಗಾಳಿಯಿಂದ ಭೀತಿ ಜೋರು ಮಳೆಯ ಜೊತೆಗೆ ಮೇಲ್ಮೈ ಗಾಳಿ ವಿಪರೀತವಾಗಿದೆ. ಕಳೆದ ರಾತ್ರಿ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲೂಕಿನ ವಿವಿಧೆಡೆ ವಿಪರೀತ ಗಾಳಿ ಬೀಸಿದೆ. ಉಳಿದ ತಾಲೂಕುಗಳಲ್ಲಿ ಗಾಳಿ ಜೋರಿತ್ತು. ಅಲ್ಲಲ್ಲಿ ಮರಗಳ ರೆಂಬೆ, ಕೊಂಬೆಗಳು ಬಿದ್ದಿವೆ. … Read more

ಹೊಸನಗರ ತಾಲೂಕಿನ ಶಾಲೆ, ಕಾಲೇಜುಗಳಿಗೆ ಇವತ್ತು ರಜೆ

HOSANAGARA BREAKING NEWS

SHIVAMOGGA LIVE NEWS | 26 JULY 2024 ಶಿವಮೊಗ್ಗ ಲೈವ್.ಕಾಂ : ಜೋರು ಗಾಳಿ, ಭಾರಿ ಮಳೆ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಹೊಸನಗರ ತಾಲೂಕಿನ ಶಾಲೆ, ಕಾಲೇಜುಗಳಿಗೆ ಇವತ್ತು ರಜೆ (Holiday) ಘೋಷಿಸಲಾಗಿದೆ. ಈ ಸಂಬಂಧ ತಹಶೀಲ್ದಾರ್‌ ರಶ್ಮಿ ಹಾಲೇಶ್‌ ಆದೇಶಿಸಿದ್ದಾರೆ. ಹೊಸನಗರ ತಾಲೂಕಿನಾದ್ಯಂತ ಜು.25ರಂದು ಭಾರಿ ಮಳೆಯಾಗಿದೆ.  ಕಳೆದ ರಾತ್ರಿ ಜೋರು ಗಾಳಿ ಸಹಿತ ಮಳೆ ಸುರಿದಿದೆ. ಇವತ್ತು ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ತಾಲೂಕಿನಾದ್ಯಂತ ಎಲ್ಲ ಪ್ರಾಥಮಿಕ, ಪ್ರೌಢ … Read more

ತೀರ್ಥಹಳ್ಳಿಯಲ್ಲಿ ಕಡಿಮೆಯಾದ ಮಳೆ, ಆಗುಂಬೆಯಲ್ಲಿ ನೂರು ಮಿ.ಮೀ.ಗಿಂತಲೂ ಹೆಚ್ಚು ವರ್ಷಧಾರೆ, ಎಲ್ಲೆಲ್ಲಿ ಎಷ್ಟಾಗಿದೆ?

Agumbe-witness-heavy-Rain

SHIVAMOGGA LIVE NEWS | 22 JULY 2024 RAINFALL NEWS : ತೀರ್ಥಹಳ್ಳಿ ತಾಲೂಕಿನಲ್ಲಿ ಮಳೆ ಕಡಿಮೆಯಾಗಿದೆ. ಕಳೆದ 24 ಗಂಟೆಯಲ್ಲಿ 36.10 ಮಿ.ಮೀ ಮಳೆಯಾಗಿದೆ. ತಾಲೂಕಿನ ಆಗುಂಬೆಯಲ್ಲಿ ಭಾರಿ ಮಳೆಯಾಗಿದೆ. ಎಲ್ಲೆಲ್ಲಿ ಎಷ್ಟಾಗಿದೆ? ತೀರ್ಥಹಳ್ಳಿ ತಾಲೂಕಿನ ಆಗುಂಬೆ – 124.2 ಮಿ.ಮೀ, ಆರಗ – 52.2 ಮಿ.ಮೀ, ದೇವಂಗಿ – 32 ಮಿ.ಮೀ, ಅರಳಸುರುಳಿ – 32.2 ಮಿ.ಮೀ, ಕೋಣಂದೂರು – 26.8 ಮಿ.ಮೀ, ಮಾಳೂರು – 55.4 ಮಿ.ಮೀ, ಮೇಗರವಳ್ಳಿ – 50.2 … Read more

ಎರಡು ದಿನ ಶಿವಮೊಗ್ಗ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಿನಿಸ್ಟರ್‌ ಪರಿಶೀಲನೆ, ಎಲ್ಲೆಲ್ಲಿ ಭೇಟಿ ನೀಡಿದ್ದರು?

Minister-Madhu-Bangarappa-visits-drought-effect-areas.

SHIVAMOGGA LIVE NEWS | 22 JULY 2024 RAINFALL NEWS : ಜಿಲ್ಲೆಯಾದ್ಯಂತ ಮಳೆ ಪ್ರಮಾಣ ತಗ್ಗಿದೆ. ಆದರೆ ಕಳೆದ ವಾರ ಸುರಿದ ಮಳೆಗೆ ಜಿಲ್ಲೆಯ ವಿವಿಧೆಡೆ ಆಸ್ತಿಪಾಸ್ತಿ, ಬೆಳೆ ಹಾನಿಯಾಗಿದೆ (Rain Effect). ಕಳೆದ ಎರಡು ದಿನದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಳೆ ಹಾನಿ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಸೊರಬ, ಸಾಗರ, ಹೊಸನಗರ ಮತ್ತು ತೀರ್ಥಹಳ್ಳಿ ತಾಲೂಕಿನ ಮಳೆ ಹಾನಿ ಪ್ರದೇಶಗಳಿಗೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿ ಪರಿಶೀಲಿಸಿದರು. … Read more