ಮರಕ್ಕೆ ಬೈಕ್‌ ಡಿಕ್ಕಿ, ಬೈಕ್‌ನ ಹಿಂಬದಿ ಸವಾರ ಸಾವು

bike-hits-tree-pillion-rider-manjunath-dies

ರಿಪ್ಪನ್‌ಪೇಟೆ: ಸವಾರನ ನಿಯಂತ್ರಣ ತಪ್ಪಿದ ಬೈಕ್‌ ಮರಕ್ಕೆ ಡಿಕ್ಕಿ (Fatal Bike Accident) ಹೊಡೆದ ಪರಿಣಾಮ ಹಿಂಬದಿ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ಹರತಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಡ್ರಿಗೆ ಗ್ರಾಮದಲ್ಲಿ ಭಾನುವಾರ ಘಟನೆ ಸಂಭವಿಸಿದೆ. ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಣಸೆ ಗ್ರಾಮದ ನಿವಾಸಿ ಶಿವಪ್ಪ ಎಂಬುವರ ಪುತ್ರ ಮಂಜುನಾಥ (35) ಮೃತ ವ್ಯಕ್ತಿ. ಮಂಜುನಾಥ, ಹೊಸನಗರದಲ್ಲಿ ಗ್ರಾಮಒನ್ ನಡೆಸುತ್ತಿದ್ದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಹಾಡಹಗಲೆ ಶಿಕ್ಷಕಿಯ ಪರ್ಸ್‌ ಕಸಿದು ಎಸ್ಕೇಪ್‌, ಎಲ್ಲಿ? ಹೇಗಾಯ್ತು ಘಟನೆ? ಗಿಣಸೆ … Read more

ರಿಪ್ಪನ್‌ಪೇಟೆ ಸೇರಿ ವಿವಿಧೆಡೆ ಡಿ.3ರಂದು ಇಡೀ ದಿನ ಕರೆಂಟ್‌ ಇರಲ್ಲ

POWER-CUT-UPDATE-NEWs ELECTRICITY

ರಿಪ್ಪನ್‌ಪೇಟೆ: ಹೊಸನಗರ ಉಪವಿಭಾಗದ ರಿಪ್ಪನ್‌ಪೇಟೆ ಮೆಸ್ಕಾಂ ಶಾಖೆ ವ್ಯಾಪ್ತಿಯಲ್ಲಿ ಡಿ.3ರಂದು ಬೆಳಗ್ಗೆ 9.30ರಿಂದ ಸಂಜೆ 6 ರವರೆಗೆ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ. ರಿಪ್ಪನ್‌ಪೇಟೆ, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಬಾಳೂರು, ಬೆಳ್ಳೂರು, ಅರಸಾಳು, ಕೋಡೂರು, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶ ಗಳಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ತಿಳಿಸಿದೆ. ಇದನ್ನೂ ಓದಿ » ಕೋಣಂದೂರು ಬಳಿ ಡೆತ್‌ ನೋಟ್‌ ಬರೆದಿಟ್ಟು ವ್ಯಕ್ತಿ ಆತ್ಮಹತ್ಯೆ

ಕಳೆನಾಶಕ ಸೇವಿಸಿದ್ದ ರೈತ ಕೊನೆಯುಸಿರು

Police-jeep-in-Shimoga.

ರಿಪ್ಪನ್‌ಪೇಟೆ: ಚಂದಳ್ಳಿ ಗ್ರಾಮದ ರೈತ ರಾಜು (46) ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಚಟುವಟಿಕೆಗಾಗಿ ಬ್ಯಾಂಕ್ ಹಾಗೂ ಇನ್ನಿತರೆಡೆ ಸಾಲ ಮಾಡಿದ್ದು, ಬೆಳೆನಷ್ಟದಿಂದ ಸಾಲ ತೀರಿಸಲಾಗುವುದಿಲ್ಲ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೃತರಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮನೆಯಲ್ಲಿ ನೇಣಿಗೆ ಶರಣಾದ ಯುವಕ

ಮನೆಯಲ್ಲಿ ನೇಣಿಗೆ ಶರಣಾದ ಯುವಕ

Crime-News-General-Image

ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮದ ಯುವಕ ಕಿರಣ (26) ಎಂಬುವರು ಗುರುವಾರ ವಾಸದ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿರಣ ಕೆಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರು ನೀಡಲಾಗಿದೆ. ಮೃತನು ಅವಿವಾಹಿತನಾಗಿದ್ದು, ತಂದೆ, ತಾಯಿ, ಸಹೋದರ ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಭದ್ರಾವತಿಯ 30 ವರ್ಷದ ವ್ಯಕ್ತಿಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ

ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವು

Areca-Farm-Adike-tota-in-Shimoga

ರಿಪ್ಪನ್‌ಪೇಟೆ: ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕ ಹಳ್ಳಕ್ಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ. ದೊಡ್ಡಿನಕೊಪ್ಪದ ಮಂಜುನಾಥ್ (37) ಮೃತರು. ಮಂಗಳವಾರ ಗವಟೂರು ಗ್ರಾಮದ ವ್ಯಕ್ತಿಯೊಬ್ಬರ ಅಡಿಕೆ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಘಟನೆ ನಡೆದಿದೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ರಿಪ್ಪನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ ಹಚ್ಚಿಕೊಂಡ ಮಹಿಳೆ, ಜೊತೆಗಿದ್ದ ವ್ಯಕ್ತಿ ಯಾರು? ‌SP ಫಸ್ಟ್‌ ರಿಯಾಕ್ಷನ್?

ವಿದೇಶದಿಂದ ಮರಳಿದ್ದ ಯುವಕನಿಗೆ ಹೃದಯಾಘಾತ, ಸಾವು

Youth-Returned-from-saudi-arabia-scummbed-at-ripponpete

ರಿಪ್ಪನ್‌ಪೇಟೆ: ವಿದೇಶದಿಂದ ಮರಳಿದ್ದ ಯುವಕನೊಬ್ಬ ಹೃದಯಾಘಾತಕ್ಕೀಡಾಗಿ (Heart Attack) ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಿಪ್ಪನ್‌ಪೇಟೆಯ ಇಮ್ರಾನ್‌ (36) ಮೃತ ದುರ್ದೈವಿ. ಕಳೆದ ಮೂರು ವರ್ಷದಿಂದ ಇಮ್ರಾನ್ ಸೌದಿ ಆರೇಬಿಯಾದಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದರು. ಎರಡು ದಿನದ ಹಿಂದೆ ರಿಪ್ಪನ್‌ಪೇಟೆಯ ಮದೀನಾ ಕಾಲೋನಿಯ ಮನೆಗೆ ಬಂದಿದ್ದರು. ಇವತ್ತು ಬೆಳಗ್ಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೆ ಇಮ್ರಾನ್‌ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶಿವಮೊಗ್ಗದ ಮಾರ್ಗ ಮಧ್ಯೆ ಇಮ್ರಾನ್‌ ಕೊನೆಯುಸಿರೆಳೆದಿದ್ದಾರೆ. ಇಮ್ರಾನ್‌ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ … Read more

ರಿಪ್ಪನ್‌ಪೇಟೆಯಲ್ಲಿ ರಂಭಾಪುರಿ ಶ್ರೀ ಆಶೀರ್ವಚನ, ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

Rambapuri-Swamiji-at-Ripponpete-Malali-mutt

ರಿಪ್ಪನ್‌ಪೇಟೆ: ರಂಭಾಪುರಿ (rambhapuri) ಶಾಖಾ ಮಠ ಮಳಲಿ ಸಂಸ್ಥಾನ ಮಠದಲ್ಲಿ ಕಾರ್ತಿಕ ದೀಪೋತ್ಸವ ಧರ್ಮ ಸಮಾರಂಭ ನಡೆಯಿತು. ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸ್ವಾಮೀಜಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌ ಹೊರಗಿನ ಮಾಲಿನ್ಯ ಕಳೆಯಲು ಹೊರಟ ಮನುಷ್ಯ ತನ್ನ ಅಂತರಂಗದಲ್ಲಿಯೇ ಕತ್ತಲು ತುಂಬಿಕೊಂಡಿದ್ದಾನೆ. ಗೊತ್ತು ಗುರಿಗಳಿಲ್ಲದ ಜೀವನ, ಮನುಷ್ಯ ಬದುಕಲು ಬೇಕಾದ ಜ್ಞಾನವನ್ನು ಪಡೆಯುತ್ತಿಲ್ಲ. ಅರಿವಿನ ಕಣ್ಣು ತೆರೆಯಿಸಲು ಧರ್ಮ ಮತ್ತು ಗುರು ಬೇಕು ಎಂಬುದನ್ನು ಅರಿತಾಗ ಬಾಳು … Read more

ಹೊಂಬುಜದಲ್ಲಿ ದೇವಿಗೆ ಭತ್ತದ ಫಸಲು ಸಮರ್ಪಣೆ, ವಿಶೇಷ ಪೂಜೆ

271025-Special-Pooja-at-Hombuja-temple.webp

ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನಮಠದಲ್ಲಿ ಶ್ರೀ ಮಹಾವೀರ ಶಕವರ್ಷ 2552 ವಿಶ್ವಾವಸು ಸಂವತ್ಸರ ಪ್ರಯುಕ್ತ ಕ್ಷೇತ್ರದ ಕೃಷಿ ಭೂಮಿಯಲ್ಲಿ ಶಾಸ್ತೋಕ್ತವಾಗಿ ಪೂರ್ವಪರಂಪರೆಯಂತೆ ಹೊಸ ಭತ್ತದ ಪೈರು ಕಟಾವು ನೆರವೇರಿಸಿ ಶ್ರೀ ಪದ್ಮಾವತಿ ದೇವಿ ಸನ್ನಿಧಿಗೆ ಸಮರ್ಪಿಸಲಾಯಿತು. ಇದೆ ವೇಳೆ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ‍‍ಹೊಲದಲ್ಲಿ ಬೆಳೆದ ಸಮೃದ್ಧ ಭತ್ತದ ಬೆಳೆ ಭೂತಾಯಿಯ ವರಪ್ರಸಾದ. ಭತ್ತ ಆಹಾರದ್ರವ್ಯವಾಗಿ ಬಳಸುವುದರಿಂದ ಅನ್ನಪ್ರಸಾದ ರೂಪವಾಗಿ ಶರೀರ ಪೋಷಣೆ ಆಗುತ್ತದೆ. ಭಕ್ತರಿಗೆ ನಿರಂತರ ಅನ್ನಪ್ರಸಾದ ಲಭಿಸುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಭಾಗಿಯಾದವರಿಗೆ ಮಹಾಮಾತೆ … Read more

ರಿಪ್ಪನ್‌ಪೇಟೆ ಸುತ್ತಾಮುತ್ತ ವಿವಿಧ ಗ್ರಾಮಗಳಲ್ಲಿ ಇವತ್ತು ಇಡೀ ದಿನ ಕರೆಂಟ್‌ ಇರಲ್ಲ, ಯಾವ್ಯಾವ ಹಳ್ಳಿಗಳು?

power cut mescom ELECTRICITY

ರಿಪ್ಪನ್‌ಪೇಟೆ: ಸೆ.23ರಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ರಿಪ್ಪನ್ ಪೇಟೆ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಹುಂಚ, ಬೆಳ್ಳೂರು, ಬಾಳೂರು, ಅರಸಾಳು, ಕೋಡೂರು, ಹೆದ್ದಾರಿಪುರ, ಕೆಂಚನಾಲ, ಗರ್ತಿಕೆರೆ, ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸರಬರಾಜು (Power Cut) ಇರುವುದಿಲ್ಲ ಎಂದು ಮೆಸ್ಕಾಂ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಕಾರು, ಬೈಕ್‌ ಖರೀದಿ ಜೋರು, ಕಾರಿನ ದರ ಎಷ್ಟು ಕಡಿಮೆಯಾಗಿದೆ? ಬೈಕ್‌ ರೇಟ್‌ ಎಷ್ಟು ಇಳಿದಿದೆ?

ಕೆರೆಗೆ ಉರುಳಿದ ಕಾರು, ಸಿಸಿಟಿವಿ ವಿಡಿಯೋ ವೈರಲ್‌, ಇಲ್ಲಿದೆ ಅಪಘಾತದ ಕಂಪ್ಲೀಟ್‌ ವಿವರ

Car-Drowned-in-lake-CCTV-footage

ರಿಪ್ಪನ್‌ಪೇಟೆ: ಸಮೀಪದ ಚಿಪ್ಪಗರ ಕೆರೆಗೆ ಇಂದು ಕಾರು (Car) ಪಲ್ಟಿಯಾಗಿದೆ. ತ್ಯಾಗರ್ತಿಯ ಪಾರ್ವತಮ್ಮ ಎಂಬುವವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಮತ್ತಿಬ್ಬರು ಪಾರಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಾವಳಿ ವೈರಲ್‌ ಆಗಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ದಿಢೀರ್‌ ಎಡಕ್ಕೆ ತಿರುಗಿ ಪಲ್ಟಿಯಾಗಿ ಕೆರೆಗೆ ಬಿದ್ದಿದೆ. ಈ ಭಯಾನಕ ದೃಶ್ಯ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಲ್ಲಿದೆ ಅವಘಡದ ಸಿಸಿಟಿವಿ ದೃಶ್ಯಾವಳಿಯ ಫೋಟೊಗಳು.  ಇದನ್ನೂ ಓದಿ » ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ … Read more