ಶಿವಮೊಗ್ಗದ ಹೊನ್ನಾಳಿ ಫ್ಲೈ ಓವರ್‌ ಮೇಲೆ ವಾಹನ ಸಂಚಾರ ಬಂದ್‌

Vehicle-Movement-stopped-on-honnali-flyover.

ಶಿವಮೊಗ್ಗ: ರಸ್ತೆ ಕಾಮಗಾರಿ ಹಿನ್ನೆಲೆ ಶಿವಮೊಗ್ಗ – ಹೊನ್ನಾಳಿ ರಸ್ತೆಯಲ್ಲಿರುವ ಹೊನ್ನಾಳಿ ಫ್ಲೈ ಓವರ್‌ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ ಬಳಿ ಬ್ಯಾರಿಕೇಡ್‌ ಅಳವಡಿಸಿ ಮಣ್ಣು ಹಾಕಿ ಫ್ಲೈ ಓವರ್‌ (Fly over) ಪ್ರವೇಶವನ್ನು ಬಂದ್‌ ಮಾಡಲಾಗಿದೆ. ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಶಿವಮೊಗ್ಗ – ಹೊಸಪೇಟೆ ರಾಜ್ಯ ಹೆದ್ದಾರಿಯಲ್ಲಿ ಫ್ಲೈ ಓವರ್‌ ಇಳಿಜಾರು ಮುಕ್ತಾಯ ಜಾಗ ಮತ್ತು ಚತುಷ್ಪಥ ಕೂಡವ ರಸ್ತೆ ಜಾಗದಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಈ ಭಾಗದಲ್ಲಿ ವಾಹನ … Read more

ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿ ಶಿಕ್ಷಕನ ದರೋಡೆ, ರೀಲ್ಸ್‌ಗೆ ಲೈಕ್‌ ಕೊಟ್ಟವನಿಂದಲೇ ಕೃತ್ಯ

SHIMOGA-NEWS-UPDATE

ಶಿವಮೊಗ್ಗ: ‘ನಿಮ್ಮ ರೀಲ್ಸ್‌ನ ಅಭಿಮಾನಿಗಳು’ ಎಂದು ತಿಳಿಸಿ ಟೀಚರ್‌ (Teacher) ಒಬ್ಬರನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ ಕೃತ್ಯ ನಡೆದಿದೆ. ಖಾಸಗಿ ಶಾಲೆಯೊಂದರ ಶಿಕ್ಷಕ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಅಪ್‌ಲೋಡ್‌ ಮಾಡುತ್ತಿದ್ದರು. ಅವರ ಇನ್‌ಸ್ಟಾಗ್ರಾಂಗೆ ವ್ಯಕ್ತಿಯೊಬ್ಬ ಮೆಸೇಜ್‌ ಮಾಡಿದ್ದ. ಶಿಕ್ಷಕನ ರೀಲ್ಸ್‌ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದ. ಕೊನೆಗೆ ಶಿಕ್ಷಕನನ್ನು ಭೇಟಿಯಾಗಬೇಕು ಎಂದು ತಿಳಿಸಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನ.7ರ ರಾತ್ರಿ 9.30ಕ್ಕೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ ಬಳಿ … Read more

ಸವಳಂಗ ರಸ್ತೆಯಲ್ಲಿ ಕೊಮ್ಮನಾಳು ವ್ಯಕ್ತಿಯ ಬಲಿ ಪಡೆದ ಅಪರಿಚಿತ ವಾಹನ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿವಮೊಗ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ (ACCIDENT) ತೀವ್ರ ಗಾಯಗೊಂಡಿದ್ದ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಶಿವಮೊಗ್ಗ – ಸವಳಂಗ ಮುಖ್ಯ ರಸ್ತೆಯಲ್ಲಿ ಖಾಸಗಿ ಶಾಲೆ ಮುಂಭಾಗ ಘಟನೆ ಸಂಭವಿಸಿದೆ. ಕೊಮ್ಮನಾಳು ಗ್ರಾಮದ ಮಂಜುನಾಥ್‌ (40) ಮೃತಪಟ್ಟಿದ್ದಾರೆ. ಮಂಜುನಾಥ್‌ ತಮ್ಮ ಮನೆಯಿಂದ ಬೈಕಿನಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಂಜುನಾಥ್‌ ತಲೆ, ಭುಜು, ಹೊಟ್ಟೆ ಸೇರಿದಂತೆ ವಿವಿಧೆಡೆ ತೀವ್ರ ಗಾಯವಾಗಿ, ರಕ್ತಸ್ರಾವ ಉಂಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಅಸುನೀಗಿದ್ದರು. ಘಟನೆ ಸಂಬಂಧ … Read more

ಶಿವಮೊಗ್ಗ – ಭದ್ರಾವತಿ ರಸ್ತೆ, ಟೀ ಕುಡಿಯಲು ತೆರಳಿದ್ದ ಸೆಕ್ಯೂರಿಟಿಯ ಜೀವ ಕಸಿದ ಕಾರು, ಆಗಿದ್ದೇನು?

Car-Incident-at-nidige-near-jain-public-school

ಶಿವಮೊಗ್ಗ: ರಸ್ತೆ ದಾಟುವಾಗ ಕಾರು (Car) ಡಿಕ್ಕಿ ಹೊಡೆದು ಸೆಕ್ಯೂರಿಟಿ ಗಾರ್ಡ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಿವಮೊಗ್ಗ – ಭದ್ರಾವತಿ ರಸ್ತೆಯ ನಿದಿಗೆ ಬಸ್‌ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಭದ್ರಾವತಿಯ ಜಿಂಕ್‌ಲೈನ್‌ ರಸ್ತೆ ನಿವಾಸಿ ನಂಜುಂಡ.ಬಿ (57) ಮೃತರು. ಇಲ್ಲಿನ ಜೈನ್‌ ಪಬ್ಲಿಕ್‌ ಶಾಲೆಯಲ್ಲಿ ಸೆಕ್ಯೂರಿಟಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶುಕ್ರವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿ ಸ್ವಲ್ಪ ಸಮಯದ ಬಳಿಕ ಟೀ ಕುಡಿಯಲು ನಂಜುಂಡ ತೆರಳಿದ್ದರು. ನಿದಿಗೆ ಬಸ್‌ ನಿಲ್ದಾಣದ ಕಡೆಗೆ ತೆರಳಲು ರಸ್ತೆ ದಾಟುವಾಗ ಮಲವಗೊಪ್ಪ ಕಡೆಯಿಂದ ಬಂದು … Read more

ಶಿವಮೊಗ್ಗದ ಕೃಷ್ಣ ಕೆಫೆ ಬಳಿ ತುಂಡಾಗಿ ಬಿದ್ದ ರೆಂಬೆ, ಕೆಲ ಹೊತ್ತು ರಸ್ತೆ ಸಂಚಾರ ಬಂದ್‌

tree-falls-to-road-at-Krishna-Cafe.

ಶಿವಮೊಗ್ಗ: ಭಾರಿ ಗಾಳಿ ಮಳೆಗೆ ಶಿವಮೊಗ್ಗ ನಗರದ ಕೃಷ್ಣ ಕೆಫೆ ಬಳಿ ಮರದ (tree) ರೆಂಬೆ ತುಂಡಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೃಷ್ಟವಾಶತ್‌ ಯಾರಿಗು ತೊಂದರೆಯಾಗಿಲ್ಲ. ಕೃಷ್ಣ ಕೆಫೆ ಪಕ್ಕದ ಓಲ್ಡ್‌ ಫೋಸ್ಟ್‌ ಆಫೀಸ್‌ ರಸ್ತೆಯಲ್ಲಿ ಮರದ ರೆಂಬೆ ತುಂಡಾಗಿ ಬಿದ್ದಿದೆ. ಹಾಗಾಗಿ ಈ ರಸ್ತೆಯಲ್ಲಿ ಕೆಲ ಹೊತ್ತು ವಾಹನ ಸಂಚಾರ ಬಂದ್‌ ಆಗಿತ್ತು. ಮಹಾನಗರ ಪಾಲಿಕೆ ಸಿಬ್ಬಂದಿ ರೆಂಬೆ ತೆರವು ಮಾಡಿದರು. ಸದ್ಯ ವಾಹನ ಸಂಚಾರಕ್ಕೆ ರಸ್ತೆ ಮುಕ್ತವಾಗಿದೆ. ಇದನ್ನೂ ಓದಿ » ಗದ್ದೆಯಲ್ಲಿ ಹಾವು ಕಚ್ಚಿ … Read more

ಎಣ್ಣೆ ಕೊಡ್ಲಿಲ್ಲ ಅಂತಾ ಏಕಾಂಗಿಯಾಗಿ ‘ಹೆದ್ದಾರಿ ತಡೆ’ದ ಯುವಕ, ಮೊಬೈಲ್‌ನಲ್ಲಿ ಸೆರೆಯಾಯ್ತು ಅವಾಂತರ

youth-lunatic-behaviour-on-NT-road-at-Shimoga.

SHIMOGA, 27 JULY 2024 : ಅಂಗಡಿಯಲ್ಲಿ ಹಣ ಕೊಡದೆ ಮದ್ಯ ಕೊಡುವುದಿಲ್ಲ ಎಂದು ಹೇಳಿದ್ದಕ್ಕೆ ಯುವಕನೊಬ್ಬ ರೊಚ್ಚಿಗೆದ್ದು ಏಕಾಂಗಿಯಾಗಿ ‘ಹೆದ್ದಾರಿ ತಡೆ’ (Highway) ನಡೆಸಿದ್ದಾನೆ. ಶಿವಮೊಗ್ಗದ ಎನ್‌.ಟಿ.ರಸ್ತೆಯಲ್ಲಿ ಯುವಕನೊಬ್ಬ ಅವಾಂತರ ಸೃಷ್ಟಿಸಿದ್ದಾನೆ. ಶುಕ್ರವಾರ ಮಧ್ಯಾಹ್ನ ಮದ್ಯದ ಅಂಗಡಿಗೆ ತೆರಳಿದ್ದ ಯುವಕನಿಗೆ ಅಂಗಡಿಯವರು ಮದ್ಯ ಕೊಡಲು ನಿರಾಕರಿಸಿದ್ದಾರೆ. ಹಣ ಕೊಟ್ಟರಷ್ಟೆ ಮದ್ಯ ಕೊಡುವುದಾಗಿ ತಿಳಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಯುವಕ ಸುರಿವ ಮಳೆಯಲ್ಲಿ ದಿಢೀರನೆ ಎನ್‌.ಟಿ.ರಸ್ತೆಗೆ ಬಂದು ನಿಂತಿದ್ದ. ಸುಮಾರು 15 ನಿಮಿಷ ಈತನ ಅವಾಂತರ ಮುಂದುವರೆದಿತ್ತು. ಯುವಕನ … Read more

ತೀರ್ಥಹಳ್ಳಿಯ ಕುರುವಳ್ಳಿ – ಬಾಳೆಬೈಲು ಹೆದ್ದಾರಿಯಲ್ಲಿ ತಡೆಗೋಡೆ ಸಂಪೂರ್ಣ ಕುಸಿತ

revetment-wall-collapse-in-thirthahalli-bypass-road.

SHIVAMOGGA LIVE NEWS | 16 JULY 2024 THIRTHAHALLI : ಕುರುವಳ್ಳಿ – ಬಾಳೆಬೈಲು ನಡುವಿನ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್‌ (Bypass) ರಸ್ತೆಯಲ್ಲಿ ತಡೆಗೋಡೆ ಮುರಿದು ಬಿದ್ದಿವೆ. ಇದರಿಂದ ಮತ್ತಷ್ಟು ಮಣ್ಣು ರಸ್ತೆ ಮೇಲೆ ಬಿದ್ದಿದೆ. ಸಂಜೆ ವೇಳೆಗೆ ಸುರಿದ ಗಾಳಿ, ಮಳೆಗೆ ತಡೆಗೋಡೆ ಕುಸಿದು ಬಿದ್ದಿವೆ. ಸೋಮವಾರ ಧರೆ ಕುಸಿತದಿಂದ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆ ತೀರ್ಥಹಳ್ಳಿ ಬೈಪಾಸ್‌ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. ತೀರ್ಥಹಳ್ಳಿಯಲ್ಲಿ ಇವತ್ತು ಕೂಡ ಮಳೆ ಮುಂದುವರೆದಿದ್ದು, … Read more

ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ, ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ

land-slide-at-agumbe-ghat-during-rainy-season.

SHIVAMOGGA LIVE NEWS | 14 JULY 2024 THIRTHAHALLI : ಭಾರಿ ಮಳೆಗೆ ಆಗಂಬೆಯಲ್ಲಿ ಗುಡ್ಡ ಕುಸಿದಿದೆ. ಘಾಟಿಯ 4ನೇ ತಿರುವಿನಲ್ಲಿ ಗುಡ್ಡ ಕುಸಿದು, ಕಲ್ಲು, ಮಣ್ಣು ರಸ್ತೆಗೆ ಮೇಲೆ ಬಿದ್ದಿದೆ. ಗುಡ್ಡ ಮತ್ತಷ್ಟು ಕುಸಿದರೆ ಆಗುಂಬೆ ಘಾಟಿಯಲ್ಲಿ (Ghat) ವಾಹನ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.   ಶಿವಮೊಗ್ಗ ಮತ್ತು ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಇದು. ಈ ಹಿಂದೆಯು ಘಾಟಿಯಲ್ಲಿ ಗುಡ್ಡ ಕುಸಿತ ಉಂಟಾಗಿತ್ತು. ಇದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. … Read more

ಬೈಪಾಸ್‌ ರಸ್ತೆಯಲ್ಲಿ ಬಸ್‌ಗೆ ದಿಢೀರ್‌ ಎದುರು ಬಂದ ಬೈಕ್‌, CCTVಯಲ್ಲಿ ಸೆರೆಯಾಯ್ತು ಅಪಘಾತದ ದೃಶ್ಯ

Rajahamsa bus

SHIVAMOGGA LIVE NEWS | 25 JUNE 2024 SHIMOGA : ನಗರದ ಬೈಪಾಸ್‌ ರಸ್ತೆಯಲ್ಲಿ ಬಸ್‌ ಮತ್ತು ಬೈಕ್‌ ನಡುವೆ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ರಾಜಹಂಸ ಬಸ್ಸಿನ (Rajahamsa) ಕೆಳಗೆ ಸಿಲುಕಿ ಬೈಕ್‌ ಸವಾರ ಶ್ರೀರಾಮಪುರದ ಸಂತೋಷ್‌ (23) ನಜ್ಜುಗುಜ್ಜಾಗಿದ್ದ. ರಾಜಹಂಸ ಬಸ್ಸು ಎಂಆರ್‌ಎಸ್‌ ಸರ್ಕಲ್‌ನಿಂದ ಬಸ್‌ ನಿಲ್ದಾಣದ ಕಡೆಗೆ ಸಾಗುತ್ತಿತ್ತು. ಈ ಸಂದರ್ಭ ಊರುಗಡೂರು ರಸ್ತೆಯಿಂದ ಬೈಕ್‌ ದಿಢೀರ್‌ ಎಂದು ಬಸ್ಸಿನ ಮುಂದೆ ಬಂದಿದೆ. ಬೈಕ್‌ಗೆ ಡಿಕ್ಕಿ ಆಗುವುದನ್ನು ತಪ್ಪಿಸಲು … Read more

ಶಿವಮೊಗ್ಗದ ಸವಳಂಗ ರಸ್ತೆ ರೈಲ್ವೆ ಮೇಲ್ಸೇತುವೆ ಪರಿಶೀಲನೆ, ಏನೆಲ್ಲ ಸೂಚನೆ ನೀಡಿದ್ರು ಸಂಸದ?

BY-Raghavendra-Visit-Savalanga-road-bridge

SHIVAMOGGA LIVE NEWS | 20 JUNE 2024 SHIMOGA : ಸವಳಂಗ ರಸ್ತೆ ಮೇಲ್ಸೇತುವೆಯ (Bridge) ಸರ್ವಿಸ್ ರಸ್ತೆ ಕಾಮಗಾರಿಯನ್ನು ಸಂಸದ ಬಿ.ವೈ.ರಾಘವೇಂದ್ರ ಮತ್ತು ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳು ಪರಿಶೀಲಿಸಿದರು. ಮೇಲ್ಸೇತುವೆ ಕಾಮಗಾರಿ ಹಾಗೂ ಸರ್ವಿಸ್ ರಸ್ತೆಯಲ್ಲಿನ ಕಾಮಗಾರಿಗಳಲ್ಲಿ ಕೆಲ ಲೋ‍ಪಗಳಿವೆ ಎಂದು ನಿವಾಸಿಗಳಿಂದ ದೂರು ಬಂದ ಹಿನ್ನೆಲೆ ಪರಿಶೀಲಿಸಿದರು. ಮಳೆ ನೀರು ಸರಾಗವಾಗಿ ಹೋಗಲು ಸರ್ವಿಸ್ ರಸ್ತೆಯ ಎರಡು ಬದಿ ಮತ್ತು ಮೇಲ್ಸೇತುವೆಯಿಂದ ಕೆಳಗೆ ಬೀಳುವ ಮಳೆ ನೀರನ್ನು ತಡೆದು ಇಂಗಿಸಲು, ಅಂಡರ್‌ಪಾಸ್‌ನಲ್ಲಿನ … Read more