ಶಿವಮೊಗ್ಗ ಪೊಲೀಸರ ದಿಢೀರ್ ಕಾರ್ಯಾಚರಣೆ, ರೌಡಿಗಳ ಮನೆಗಳ ಮೇಲೆ ದಾಳಿ
ಶಿವಮೊಗ್ಗ: ಜಿಲ್ಲೆಯಾದ್ಯಂತ ಇಂದು ಬೆಳಗಿನ ಜಾವ ಪೊಲೀಸರು ರೌಡಿಗಳ ಮನೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ಆಯಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಿಢೀರ್ ಕಾರ್ಯಾಚರಣೆ (raid) ನಡೆಸಿದ ಪೊಲೀಸರು, ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ರೌಡಿಗಳ ಮನೆಗಳಲ್ಲಿ ಮಾದಕ ವಸ್ತುಗಳು, ಮಾರಕಾಸ್ತ್ರಗಳಿಗಾಗಿ ಶೋಧ ನಡೆಸಲಾಯಿತು. ಅಲ್ಲದೆ ರೌಡಿಗಳು ಮಾಡುತ್ತಿರುವ ಕೆಲಸ ಸೇರಿದಂತೆ ಪ್ರಮುಖ ಮಾಹಿತಿ ಸಂಗ್ರಹಿಸಲಾಯಿತು. ಕಾನೂನು ಬಾಹಿರ ಚುಟವಟಿಕೆಗಳಲ್ಲಿ ತೊಡಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎಎಸ್‌ಪಿಗಳಾದ ಅನಿಲ್ … Read more