ಶಿವಮೊಗ್ಗದಲ್ಲಿ ನಾಳೆ ರಾಜ್ಯೋತ್ಸವ ಸಪ್ತಾಹಕ್ಕೆ ಚಾಲನೆ, ಯಾವ್ಯಾವ ತಾಲೂಕಿನಲ್ಲಿ ಯಾವಾಗಿದೆ ಕಾರ್ಯಕ್ರಮ?

D-Manjunatha-about-kannada-shahitya-sammelana

ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಜಾನಪದ ಪರಿಷತ್‌ ನೇತೃತ್ವದಲ್ಲಿ ಒಂದು ವಾರ ರಾಜ್ಯೋತ್ಸವ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಅಧ್ಯಕ್ಷ ಡಿ.ಮಂಜುನಾಥ ಹೇಳಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್‌, ನ. 24ರಂದು ಶಿವಮೊಗ್ಗ ಸಾಹಿತ್ಯ ಗ್ರಾಮದಲ್ಲಿ ಸಪ್ತಾಹ ಕಾರ್ಯಕ್ರಮ ಆರಂಭವಾಗಲಿದೆ. ನ.25ರಂದು ಭದ್ರಾವತಿಯಲ್ಲಿ, 26ರಂದು ತೀರ್ಥಹಳ್ಳಿಯಲ್ಲಿ, 27ರಂದು ಸೊರಬ, 28ರಂದು ಶಿಕಾರಿಪುರ, 29ರಂದು ಹೊಸನಗರ, 30ರಂದು ಸಾಗರದ ನೆಹರೂ ಮೈದಾನದಲ್ಲಿ … Read more

ಮೌಡ್ಯಗಳಿಗೆ ಪರಿಹಾರ, ವಿಮರ್ಶೆಯ ಪ್ರಜ್ಞೆ ಬೆಳೆಸಲು ಕುವೆಂಪು ಸಾಹಿತ್ಯ ಪೂರಕ

Sahitya-parishad-Programme-in-Sahyadri-College-D-Manjunath

SHIVAMOGGA LIVE NEWS | 12 FEBRUARY 2024 SHIMOGA : ನಮ್ಮ ನಡುವೆ ಇರುವ ಮೌಡ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ವಿಮರ್ಶೆಯ ಪ್ರಜ್ಞೆ ಬೆಳೆಸಿಕೊಳ್ಳಲು ಕುವೆಂಪು ಸಾಹಿತ್ಯ ಪೂರಕವಾಗಿದೆ ಎಂದು ಸಾಹಿತಿ ಡಾ.ಎಚ್.ಟಿ.ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಿಂದ ಏರ್ಪಡಿಸಿದ್ದ ದೇವಂಗಿ ಡಿ.ಆರ್.ರತ್ನಾಕರ ದತ್ತಿ ಕಾರ್ಯಕ್ರಮದಲ್ಲಿ ಕುವೆಂಪು ಅವರ ಸಾಹಿತ್ಯದಲ್ಲಿ ವೈಜ್ಞಾನಿಕ ದೃಷ್ಟಿಕೋನ ವಿಷಯದ ಕುರಿತು ಮಾತನಾಡಿದರು. ಕುವೆಂಪು ಮೌಡ್ಯ ವಿರೋಧದ ಪ್ರತೀಕ. ಧರ್ಮ, ದೇವರು, ಪುರೋಹಿತ, ರಾಜಕೀಯ, ಹೆಣ್ಣು, … Read more

ಶಿವಮೊಗ್ಗ ಸಾಹಿತ್ಯ ಸಮ್ಮೇಳನ, ನಾಡ ಧ್ವಜದೊಂದಿಗೆ ರಾಜಬೀದಿ ಉತ್ಸವ, ಇಲ್ಲಿದೆ ಸಮ್ಮೇಳನಾಧ್ಯಕ್ಷರ ಭಾಷಣದ 3 ಪ್ರಮುಖಾಂಶ

Kannada-Sahitya-Sammelana-Procession-in-Shimoga-city.

SHIVAMOGGA LIVE NEWS | 1 FEBRUARY 2024 SHIMOGA : ಕರ್ನಾಟಕದ ಧ್ವಜ ಹಿಡಿದು ಮೆರವಣಿಗೆಯಲ್ಲಿ ಸಾಗಿದ ವಿದ್ಯಾರ್ಥಿಗಳು. ಡೊಳ್ಳಿನ ಶಬ್ದದೊಂದಿಗೆ ಕನ್ನಡ ಪರ ಘೋಷಣೆ. ಕನ್ನಡದ ಕಂಪು ಸೂಸುತ್ತ ಸಮ್ಮೇಳನ ಅಧ್ಯಕ್ಷರ ರಾಜಬೀದಿ ಉತ್ಸವ. ಇದು ಜಿಲ್ಲಾ ಮಟ್ಟದ 18ಮೇ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಮುಖಾಂಶ. ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ನಡೆಯುತ್ತಿರುವ ಎರಡು ದಿನದ ಸಾಹಿತ್ಯ ಸಮ್ಮೇಳನಕ್ಕೆ ಇಂದು ಚಾಲನೆ ನೀಡಲಾಯಿತು. ಅದ್ಧೂರಿ ರಾಜಬೀದಿ ಉತ್ಸವ ಗೋಪಾಳದ ಆನೆ ಪ್ರತಿಮೆ … Read more

ಅಧ್ಯಕ್ಷರ ಅದ್ಧೂರಿ ಮೆರವಣಿಗೆ, ಸಮ್ಮೇಳನಕ್ಕೆ ಚಾಲನೆ, ಭಾಷಣದಲ್ಲಿ ಏನೇನೆಲ್ಲ ಪ್ರಸ್ತಾಪಿಸಿದರು?

010223 Sahitya Sammelana Lakshmana Kodase in SMG

SHIVAMOGGA LIVE NEWS | 1 FEBRUARY 2023 SHIMOGA | ಜಿಲ್ಲಾ ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ (Sahitya Sammelana) ಇವತ್ತು ಚಾಲನೆ ಸಿಕ್ಕಿದೆ. ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ಸಮ್ಮೇಳನ ನಡೆಯುತ್ತಿದೆ. ಇದಕ್ಕೂ ಮೊದಲು ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರ ಮೆರವಣಿಗೆ ನಡೆಸಲಾಯಿತು. ಎರಡು ದಿನದ ಸಾಹಿತ್ಯ ಸಮ್ಮೇಳನದ (Sahitya Sammelana) ಉದ್ಘಾಟನೆ ಬಳಿಕ ಭಾಷಣ ಮಾಡಿದ ಸಮ್ಮೇಳನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಅವರು ಹಲವು ಪ್ರಮುಖ ವಿಚಾರ ಪ್ರಸ್ತಾಪಿಸಿದರು. … Read more

ಭದ್ರಾವತಿ ಗೋಣಿಬೀಡಿನಲ್ಲಿ ಜಿಲ್ಲಾ ಮಟ್ಟದ 3ನೇ ಜಾನಪದ ಸಮ್ಮೇಳನ

D-Manjunath-Sahitya-Parishad-Press-Meet

SHIVAMOGGA LIVE NEWS | CULTURE| 05 ಮೇ 2022 ಜಿಲ್ಲಾ ಮಟ್ಟದ ಮೂರನೇ ಜಾನಪದ ಸಮ್ಮೇಳನ ಮತ್ತು 889ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮವನ್ನು ಭದ್ರಾವತಿ ತಾಲೂಕು ಗೋಣಿಬೀಡು ಗ್ರಾಮದ ಶ್ರೀ ಶೀಲಸಂಪಾದನಾ ಮಠದಲ್ಲಿ ಆಯೋಜಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಮಂಜುನಾಥ್ ಅವರು, ಮೇ 8ರಂದು ಬೆಳಗ್ಗೆ 9 ಗಂಟೆಗೆ ಜಾನಪದ ಸಮ್ಮೇಳನಕ್ಕೆ ಚಾಲನೆ ಸಿಗಲಿದೆ ಎಂದು ತಿಳಿಸಿದರು. ಜಾನಪದ ಸಮ್ಮೇಳನದ ಮೆರವಣಿಗೆ ಅಂತಾರಾಷ್ಟ್ರೀಯ ಡೊಳ್ಳು ಕಲಾವಿದ ಜೆ.ಸಿ.ಮಂಜಪ್ಪ … Read more

ಶಿವಮೊಗ್ಗದಲ್ಲಿ ಹಾಡು, ಪದ್ಯಗಳ ಮೂಲಕ ಕನ್ನಡ ಭಾಷೆಯ ಶ್ರೀಮಂತಿಗೆ ಪರಿಚಯಿಸಿದ ಪ್ರೊ.ಕೃಷ್ಣೇಗೌಡ

Prof-Krishnegowda-in-Shimoga-sahitya-sammelana

SHIVAMOGGA LIVE NEWS | 30 ಮಾರ್ಚ್ 2022 ಕನ್ನಡ ಭಾಷೆಗೆ ಶಿವಮೊಗ್ಗದಲ್ಲಿ ಅಪಾಯ ಎದುರಾದರೆ ರಾಜ್ಯದಲ್ಲಿಯು ಅಪಾಯ ಉಂಟಾಗಿದೆ ಎಂದರ್ಥ ಎಂದು ಸಾಹಿತಿ, ದೂರದರ್ಶನ ಕಲಾವಿದ ಪ್ರೊ. ಕೃಷ್ಣೇಗೌಡ ಹೇಳಿದರು. ಶಿವಮೊಗ್ಗದ ಸಾಹಿತ್ಯ ಗ್ರಾಮದಲ್ಲಿ 16ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರೊ.ಕೃಷ್ಣೇಗೌಡ ಅವರು, ಮೈಸೂರು ಜಿಲ್ಲೆ ಸಾಂಸ್ಕೃತಿಕ ರಾಜಧಾನಿ. ಅಂತೆಯೆ ಶಿವಮೊಗ್ಗ ಜಿಲ್ಲೆ ಸಾಹಿತ್ಯದ ರಾಜಧಾನಿ. ಇಲ್ಲಿ ಕನ್ನಡದ ಭಾಷೆಗೆ ಅಪಾಯ ಉಂಟಾದರೆ, ರಾಜ್ಯದಲ್ಲಿ ಅಪಾಯ ಎದುರಾಗಿದೆ ಎಂದರ್ಥ ಎಂದು ತಿಳಿಸಿದರು. 30 … Read more

ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಗೋಪಾಳದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ

Kannada-Sahitya-Sammelana.

SHIVAMOGGA LIVE NEWS | 30 ಮಾರ್ಚ್ 2022 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವತ್ತು ಚಾಲನೆ ಸಿಕ್ಕಿದೆ. ಇಂದಿನಿಂದ ಎರಡು ದಿನ ಶಿವಮೊಗ್ಗದ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿರುವ ಸಾಹಿತ್ಯ ಗ್ರಾಮದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿವೆ. ಇವತ್ತು ಬೆಳಗ್ಗೆ ಸಾಹಿತ್ಯ ಗ್ರಾಮದಲ್ಲಿ ಧ್ವಜಾರೋಹಣ ನೆರವೇರಿಸಿ, ಸಾಹಿತ್ಯ ಸಮ್ಮೇಳನ್ನಕ್ಕೆ ಚಾಲನೆ ನೀಡಲಾಯಿತು. ನಂತರ ಗೋಪಾಳದಿಂದ ಸಮ್ಮೇಳನ ಅಧ್ಯಕ್ಷರಾದ ಡಾ. ಕೆಳದಿ ಗುಂಡಾಜೋಯ್ಸ್ ಅವರನ್ನು ಮೆರವಣಿಗೆ ಮೂಲಕ ಸಮ್ಮೇಳನದ ಸಭಾಂಗಣಕ್ಕೆ ಕರೆತರಲಾಯಿತು. ಸಾಹಿತ್ಯ ಆಸಕ್ತರು, ಪರಿಷತ್ತಿನ ಪದಾಧಿಕಾರಿಗಳು ಮೆರವಣಿಗೆಯಲ್ಲಿ … Read more

ಮತಗಟ್ಟೆ ಮುಂದೆ ಸಂಭ್ರಮಾಚರಣೆ, ಪಟಾಕಿ ಸಿಡಿಸಿ, ಸಿಹಿ ಹಂಚಿ ನೂತನ ಅಧ್ಯಕ್ಷರಿಗೆ ಅಭಿನಂದನೆ

211121 D manjunath Wins KaSaPa Election

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ನವೆಂಬರ್ 2021 ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸ್ಥಾನದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಡಿ.ಮಂಜುನಾಥ್ ಅವರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು. ಡಿ.ಮಂಜುನಾಥ್ ಅವರು ಅತ್ಯಧಿಕ ಮತಗಳನ್ನು ಪಡೆದಿದ್ದಾರೆ. ಪ್ರತಿಸ್ಪರ್ಧಿಗಳಾಗಿದ್ದ ಶಂಕರಪ್ಪ ಅವರು ಎರಡನೇ ಸ್ಥಾನ, ಶಿ.ಜು.ಪಾಶ ಮತ್ತು ಗಾ.ರಾ.ಶ್ರೀನಿವಾಸ್ ಅವರು ನಂತರದ ಸ್ಥಾನ ಪಡೆದಿದ್ದಾರೆ. ಮತಗಳ ವಿವರ ಇನ್ನಷ್ಟೆ ಲಭ್ಯವಾಗಬೇಕಿದೆ. ಪಟಾಕಿ, … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಬೆಳಗ್ಗೆಯಿಂದಲೇ ಮತದಾನ ಚುರುಕು, ಸಂಜೆಯೇ ಹೊರಬೀಳಲಿದೆ ಫಲಿತಾಂಶ

211121 KaSaPa Election in Shimoga Taluk

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ನವೆಂಬರ್ 2021 ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಇವತ್ತು ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಇವತ್ತು ಸಂಜೆ ವೇಳೆಗೆ ಕಸಾಪ ಶಿವಮೊಗ್ಗ ಘಟಕದ ನೂತನ ಸಾರಥಿ ಯಾರು ಅನ್ನುವುದು ಗೊತ್ತಾಗಲಿದೆ. ಒಂದೇ ಒಂದು ಫೋನ್ ಕರೆ ಮಾಡಿದರೆ ನಿಮ್ಮ ಮನೆಗೆ ಬರಲಿದೆ ಲ್ಯಾಬೋರೇಟರಿ. ನುರಿತ ತಜ್ಞರಿಂದ ನಡೆಯುತ್ತೆ ತಪಾಸಣೆ. ಈಗಲೆ ಕರೆ ಮಾಡಿ. ಶಿವಮೊಗ್ಗ ಜಿಲ್ಲೆಯಾದ್ಯಂತ 12 … Read more

SHIMOGA | ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ, ಸಮ್ಮೇಳನದ ಅಧ್ಯಕ್ಷರ ಅದ್ಧೂರಿ ಮೆರವಣಿಗೆ

010221 Sahitya Sammelana in Shimoga 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 01 FEBRUARY 2021 ರಾಜ್ಯ ಅಥವಾ ಕೇಂದ್ರ ಸರ್ಕಾರದಿಂದ ರೈತರು, ಯೋಧರ ಬದುಕಿಗೆ ಅಡ್ಡಿ ಆತಂಕಗಳು ಉಂಟಾದರೆ  ಎದೆ ಕೊಟ್ಟು ನಿಲ್ಲಬೇಕಾದ್ದು ನಮ್ಮೆಲ್ಲರ ಕರ್ತವ್ಯ ಎಂದು ಶಿವಮೊಗ್ಗ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ವಿಜಯದೇವಿ ತಿಳಿಸಿದರು. ಗೋಪಿಶೆಟ್ಟಿಕೊಪ್ಪ ಬಡಾವಣೆಯ ಚಾಲುಕ್ಯ ನಗರದ ಸಾಹಿತ್ಯ ಗ್ರಾಮದಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಾಹಿತ್ಯ ಭವನದಲ್ಲಿ ಆಯೋಜಿಸಿರುವ 15ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನೆಲವನ್ನು … Read more