ತುಮಿಳುನಾಡಿನಿಂದ ಬಂದ ಲಾರಿ ಮೇಲೆ ಶಿವಮೊಗ್ಗ DySP ನೇತೃತ್ವದಲ್ಲಿ ದಾಳಿ, ಲಕ್ಷ ಲಕ್ಷದ ವಸ್ತುಗಳು ಸೀಜ್‌

Police-Van-in-Shimoga-City

ಶಿವಮೊಗ್ಗ: ಸಾರಿಗೆ ಅಧಿಕಾರಿಗಳಿಂದ ಪರವಾನಗಿ ಪಡೆಯದೆ, ಸುರಕ್ಷಿತ ಕ್ರಮ ಕೈಗೊಳ್ಳದೆ ಪಟಾಕಿ ಸಾಗಿಸುತ್ತಿದ್ದ ಲಾರಿಯನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ₹4,15,741 ಮೌಲ್ಯದ ಪಟಾಕಿ ಜಫ್ತಿ ಮಾಡಲಾಗಿದೆ. ತಮಿಳುನಾಡಿನ ಶಿವಾಕಾಶಿಯಿಂದ ಶಿವಮೊಗ್ಗ ಮತ್ತು ಹುಬ್ಬಳ್ಳಿಯ ಗೋಡೋನ್‌ಗಳಿಗೆ ಪಟಾಕಿ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಡಿವೈಎಸ್‌ಪಿ ಸಂಜೀವ್‌ ಕುಮಾರ್‌ ನೇತೃತ್ವದಲ್ಲಿ ವಿರೂಪಿನಕೊಪ್ಪ ಬಳಿ ದಾಳಿ ನಡೆಸಿದ ಪೊಲೀಸರು, ದಾಖಲೆಗಳ ಪರಿಶೀಲನೆ ನಡೆಸಿದರು. ಸ್ಪೋಟಕ ವಸ್ತುಗಳ ಸಾಗಣೆಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಲಾರಿಯಲ್ಲಿ ಅಗ್ನಿ ನಿರೋಧಕ ವಸ್ತುಗಳು … Read more

ಗೋವಾ ನಂಬರ್‌ ಕಾರು ತಡೆದ ಅಧಿಕಾರಿಗಳು, ಸಿಕ್ತು ನಾನಾ ಬ್ರಾಂಡ್‌ನ ಮದ್ಯ, ಎಷ್ಟು ಲೀಟರ್‌ ಇತ್ತು?

goa-liquor-seized-in-sagara.

ಸಾಗರ : ಗೋವಾದಿಂದ (Goa) ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವಿಶ್ವನಾಥ್ ಎಂಬ ವ್ಯಕ್ತಿಯನ್ನು  ನಗರದ ಕಾಗೋಡು ತಿಮ್ಮಪ್ಪ ಬಡಾವಣೆ ಸಮೀಪದ ಲೇಔಟ್‌ವೊಂದರ ಬಳಿ ಅಬಕಾರಿ ಇಲಾಖೆ ಸಿಬ್ಬಂದಿ ಗುರುವಾರ ಬಂಧಿಸಿದ್ದಾರೆ. ಮದ್ಯ ಸಾಗಿಸಲು ಬಳಸಲಾಗಿದ್ದ ಕಾರು ಹಾಗೂ 138.06 ಲೀ. ಗೋವಾ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಡಿವೈಎಸ್‌ಪಿ ಶೀಲಾ ದರ್ಜಕರ್, ಇನ್‌ಸ್ಪೆಕ್ಟರ್ ಭಾಗ್ಯಲಕ್ಷ್ಮಿ, ಸಂದೀಪ್ ಎಲ್.ಸಿ., ಸಿಬ್ಬಂದಿ ಗುರುಮೂರ್ತಿ, ದೀಪಕ್, ಮಲ್ಲಿಕಾರ್ಜುನ ಹಾಗೂ ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ » ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಮನ್ಮಥನ ಪ್ರತಿಷ್ಠಾಪನೆ, … Read more

ಅಡಿಕೆ ಲೋಡ್‌ ಲಾರಿ ವಶಕ್ಕೆ, ಬೆನ್ನಟ್ಟಿ ಹಿಡಿದ ಕಸ್ಟಮ್ಸ್‌ ಅಧಿಕಾರಿಗಳ ಪಡೆ

Areca-truck-seized-in-Holehonnuru.

SHIVAMOGGA LIVE NEWS | 9 FEBRUARY 2024 HOLEHONNURU : ತೆರಿಗೆ ವಂಚಿಸಿ ಹೊರ ರಾಜ್ಯಕ್ಕೆ ಅಡಿಕೆ ಸಾಗಣೆ ಮಾಡುತ್ತಿದ್ದ ಲಾರಿಯನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಮೈಸೂರು ಮೂಲದ ತೆರಿಗೆ ಅಧಿಕಾರಿಗಳ ತಂಡ ರಾಶಿ ಅಡಿಕೆ ಲೋಡ್ ಇದ್ದ ಲಾರಿಯನ್ನು ಹೊಳೆಹೊನ್ನೂರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೈಸೂರಿನ ಕಸ್ಟಮ್ಸ್‌ ಅಧಿಕಾರಿಗಳು ರಾಶಿ ಅಡಿಕೆ ತುಂಬಿದ್ದ ಲಾರಿಯನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಹಾಸನ ಜಿಲ್ಲೆಯ ವ್ಯಾಪಾರಿಯೊಬ್ಬರು ತೆರಿಗೆ ವಂಚಿಸಿ ಅಡಿಕೆಯನ್ನು ಹೊರ ರಾಜ್ಯಕ್ಕೆ … Read more

ವಿಶೇಷ ಕಾರ್ಯಾಚರಣೆ, ಶಿವಮೊಗ್ಗ ಜಿಲ್ಲೆಯಲ್ಲಿ 99 ವಾಹನಗಳು ವಶಕ್ಕೆ, ಕಾರಣವೇನು?

Shrill-Horns-Vehicles-seized-at-Shimoga-and-Anavatti-in-Soraba

SHIVAMOGGA LIVE | 15 JUNE 2023 SHIMOGA / SORABA : ಕರ್ಕಶ ಶಬ್ದ ಮಾಡುವ ಹಾರನ್‌ ಬಳಕೆ, ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ 99 ವಾಹನಗಳನ್ನು ಪೊಲೀಸರು ವಶಕ್ಕೆ (Seized) ಪಡೆದು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ ಮತ್ತು ಸೊರಬದಲ್ಲಿ ಪ್ರತ್ಯೇಕವಾಗಿ ವಾಹನಗಳ ತಪಾಸಣೆ ನಡೆಸಲಾಯಿತು ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಶಿವಮೊಗ್ಗ ರಿಪೋರ್ಟ್‌ ಕರ್ಕಶ ಶಬ್ದ ಮಾಡುವ ಹಾರನ್‌ ಬಳಸುತ್ತಿದ್ದವರ ವಿರುದ್ಧ ಶಿವಮೊಗ್ಗ ಸಂಚಾರ ಠಾಣೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ಇನ್ಸ್‌ಪೆಕ್ಟರ್‌ ಸಂತೋಷ್‌ … Read more

ಟಿಪ್ಪರ್‌ ಲಾರಿ ದಾಖಲೆ ಪರಿಶೀಲಿಸಿ ದಂಗಾದ ಸಾರಿಗೆ ಅಧಿಕಾರಿಗಳು, ಮಾಲೀಕನಿಗೆ ಲಕ್ಷ ಲಕ್ಷ ದಂಡ, ಕಾರಣವೇನು?

RTO-Seized-Truck-in-Sagara

SHIVAMOGGA LIVE NEWS | 2 MAY 2023 SAGARA : ಆರು ವರ್ಷದಿಂದ ತೆರಿಗೆ ಪಾವತಿ (Tax) ಮಾಡದೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್‌ ಲಾರಿಯನ್ನು ಪತ್ತೆ ಮಾಡಿ ಸಾರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಮಾಲೀಕನಿಗೆ ದಂಡ ವಿಧಿಸಿದ್ದಾರೆ. ಸಾಗರದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಟಿಪ್ಪರ್‌ ಲಾರಿಗೆ ಆರು ವರ್ಷದಿಂದ ತೆರಿಗೆ (Tax) ಪಾವತಿ ಮಾಡದಿರುವುದು ಗೊತ್ತಾಗಿದೆ. ಟಿಪ್ಪರ್‌ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ. ಮಾಲೀಕನಿಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ. … Read more

ಚುನಾವಣೆ ಹಿನ್ನೆಲೆ, ಜನ ಎಷ್ಟು ದುಡ್ಡು ಕೊಂಡೊಯ್ಯಬಹುದು, ಹಣ ಸೀಜ್ ಆದರೆ ಏನೆಲ್ಲ ದಾಖಲೆ ಒದಗಿಸಬೇಕು?

Shimoga-SP-Mithun-Kumar-IPS-and-DC-Dr.Selvamani-IAS

SHIVAMOGGA LIVE NEWS | 17 APRIL 2023 SHIMOGA : ಸಾರ್ವಜನಿಕರು 50 ಸಾವಿರ ರೂ.ಗಿಂತಲೂ ಹೆಚ್ಚಿನ ಹಣ ಹೊಂದಿದ್ದರೆ ಅದನ್ನು ಚುನಾವಣಾಧಿಕಾರಿಗಳು ವಶಕ್ಕೆ (Seized) ಪಡೆಯಲಿದ್ದಾರೆ. ಸಮರ್ಪಕ ದಾಖಲೆ ಒದಗಿಸಿದರೆ ಹಣ ಹಿಂತಿರುಗಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಮತ್ತು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ತಿಳಿಸಿದರು. ಪ್ರೆಸ್ ಟ್ರಸ್ಟ್ ಮತ್ತು ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಹಣಕ್ಕೆ ಸೂಕ್ತ ದಾಖಲೆ ಒದಗಿಸಬೇಕು ಎಂದು ತಿಳಿಸಿದರು. ಜಿಲ್ಲಾಧಿಕಾರಿ … Read more

ಲಾರಿಯಲ್ಲಿ ಸಾಗಿಸಲಾಗುತ್ತಿತ್ತು 46 ಬೈಕ್, ಯಾವುದಕ್ಕೂ ಇರಲಿಲ್ಲ ಡಾಕ್ಯೂಮೆಂಟ್

46-bikes-seized-for-not-having-valid-documents

SHIVAMOGGA LIVE NEWS | 14 APRIL 2023 SAGARA : ಸೂಕ್ತ ದಾಖಲೆ ಇಲ್ಲದೆ ಕಂಟೇನರ್ ಲಾರಿಯಲ್ಲಿ ಸಾಗಿಸುತ್ತಿದ್ದ 46 ಹೊಸ ಬೈಕುಗಳನ್ನು (Bikes) ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚೆಕ್‍ ಪೋಸ್ಟ್‍ನಲ್ಲಿ ತಪಾಸಣೆ ವೇಳೆ ಬೈಕುಗಳ ಸಾಗಣೆ ಬೆಳಕಿಗೆ ಬಂದಿದೆ. 33,78,336 ರೂ. ಮೌಲ್ಯದ ಬೈಕುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಗಲ್ ಪಿಎಸ್‍ಐ ತಿರುಮಲೇಶ್ ನೇತೃತ್ವದಲ್ಲಿ ಪರಿಶೀಲನೆ ವೇಳೆ ಬೈಕುಗಳು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ … Read more

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಅನುಮಾನಾಸ್ಪದ ವ್ಯಕ್ತಿ ಬಳಿ ಕೋಟಿ ಕೋಟಿ ಮೊತ್ತದ ಬಂಗಾರ

gold-found-in-Shimoga-Gandhi-Bazaar

SHIVAMOGGA LIVE NEWS | 8 APRIL 2023 SHIMOGA : ಖಚಿತ ಮಾಹಿತಿ ಮೇರೆಗೆ ಗಾಂಧಿ ಬಜಾರ್‌ನ ಎಲೆ ರೇವಣ್ಣಕೇರಿಯಲ್ಲಿ ವ್ಯಕ್ತಿಯೊಬ್ಬನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನಾಭರಣವನ್ನು (Gold Ornaments) ಅಕ್ರಮವಾಗಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿಗೆ. ಆತನ ಆಂಗಡಿಯಲ್ಲಿ ಶೋಧ ಕಾರ್ಯ ನಡೆಸಿದಾಗ ಒಟ್ಟು 9 ಕೆ.ಜಿ ಬಂಗಾರ ಪತ್ತೆಯಾಗಿದೆ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಿಲಾಗಿದೆ. ಕೋಟೆ ಠಾಣೆ ಇನ್ಸ್‌ಪೆಕ್ಟರ್‌ ಶಿವಪ್ರಸಾದ್‌ ಅವರು ಖಚಿತ ಮಾಹಿತಿ ಮೇರೆಗೆ ಗಾಂಧಿ ಬಜಾರ್‌ ಎಲೆ ರೇವಣ್ಣಕೇರಿಯಲ್ಲಿ  ಅನುಮಾನಾಸ್ಪದಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನನ್ನು … Read more

ಶಿವಮೊಗ್ಗ ಚೆಕ್‌ಪೋಸ್ಟ್‌ನಲ್ಲಿ ಈತನಕ ಏನೆಲ್ಲ ಸೀಜ್‌ ಆಗಿದೆ? ಎಷ್ಟು ಮೌಲ್ಯದ ನಗದು, ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ?

Shimoga-Police-Barricade-Checkpost

SHIVAMOGGA LIVE NEWS | 8 APRIL 2023 SHIMOGA : ನೀತಿ ಸಂಹಿತೆ ಹಿನ್ನೆಲೆ ಜಿಲ್ಲೆಯಾದ್ಯಂತ ಚೆಕ್‌ಪೋಸ್ಟ್‌ಗಳನ್ನು (check post) ಸ್ಥಾಪಿಸಲಾಗಿದೆ. ಪೊಲೀಸ್‌ ಸಿಬ್ಬಂದಿ ಮತ್ತು ಚುನಾವಣಾ ಆಯೋಗದ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಇನ್ನು, ವಿವಿಧೆಡೆ ದಾಳಿ ನಡೆಸಿ ನಗದು, ಮದ್ಯ, ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನಕ 10 ಕೋಟಿ ರೂ. ಮೌಲ್ಯದ ನಗದು ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಈತನಕ ಏನೇನೆಲ್ಲ ವಶಪಡೆಯಲಾಗಿದೆ? ಶಿವಮೊಗ್ಗ ಜಿಲ್ಲೆಯಾದ್ಯಂತ ವಿವಿಧೆಡೆ ದಾಖಲೆ ಇಲ್ಲದ 3.19 … Read more

ಶಿವಮೊಗ್ಗದಲ್ಲಿ ಕೋಟಿ ಕೋಟಿ ಮೌಲ್ಯದ ಸೀರೆಗಳು ಸೀಜ್, ಕ್ವಿಂಟಾಲ್ ಗಟ್ಟಲೆ ಅಕ್ಕಿ, ನಗದು ವಶಕ್ಕೆ, ಎಲ್ಲೆಲ್ಲಿ ಏನೇನು ಸಿಕ್ತು?

Rice-Bags-seized-Checking-at-Checkpost-in-Shimoga

SHIVAMOGGA LIVE NEWS | 1 APRIL 2023 SHIMOGA : ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ. ವಿವಿಧೆಡೆ ನಗದು, ದಾಖಲೆ ರಹಿತವಾಗಿ ಸಾಗಿಸುತ್ತಿದ್ದ ವಿವಿಧ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (Seized). ಎಲ್ಲೆಲ್ಲಿ ಏನೇನು ವಶಕ್ಕೆ ಪಡೆಯಲಾಗಿದೆ? ಇಲ್ಲಿದೆ ಡಿಟೇಲ್ಸ್ ಸೀರೆ ಸೀಜ್ : ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ (Seized). ದಾಖಲೆ ಇಲ್ಲದೆ ಸಂಗ್ರಹಿಸಿಟ್ಟಿದ್ದ 4.50 ಕೋಟಿ ಮೌಲ್ಯದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಚೆಕ್ ಪೋಸ್ಟ್ ನಲ್ಲಿ … Read more