ಶಂಕರಘಟ್ಟದ ಕುವೆಂಪು ವಿವಿ ಸಮೀಪ ಧಗಧಗ ಹೊತ್ತಿ ಉರಿದ ಬೇಕರಿ

Cake-Mane-bakery-in-Shankaraghatta.

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ಮುಂಭಾಗ ಬೇಕರಿಯಲ್ಲಿ (Bakery) ಅಗ್ನಿ ಅವಘಡ ಸಂಭವಿಸಿದೆ. ಘಟನೆಯಲ್ಲಿ ಬೇಕರಿಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ. ಶಂಕರಘಟ್ಟ ಮುಖ್ಯ ರಸ್ತೆಯಲ್ಲಿರುವ ಬೇಕರಿಯಲ್ಲಿ ರಾತ್ರಿ 3 ಗಂಟೆ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಅಕ್ಕಪಕ್ಕದ ಮನೆಯವರು, ಸ್ಥಳೀಯರು ಎಚ್ಚರವಾಗಿ ನೀರು ಹಾಕಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಬೇಕರಿ ಒಳಗಿದ್ದ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿರುವ … Read more

ಸಬ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ, ತಿರುಮಲೇಶ್‌, ನವೀನ್‌ ಮಠಪತಿ ಶಿವಮೊಗ್ಗದ ಠಾಣೆಗಳಿಗೆ ಟ್ರಾನ್ಸ್‌ಫರ್‌

Police-General-Image

ಶಿವಮೊಗ್ಗ: ಪೂರ್ವ ವಲಯದ 17 ಸಬ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಮಾಡಿ ಪೊಲೀಸ್‌ ಮಹಾನಿರೀಕ್ಷಕ ಡಾ. ಬಿ.ಆರ್‌.ರವಿಕಾಂತೇಗೌಡ ಆದೇಶಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಗಳ ಸಬ್‌ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾಯಿಸಲಾಗಿದೆ (Transfer). ಯಾರೆಲ್ಲ ಎಲ್ಲೆಲ್ಲಿಗೆ ವರ್ಗವಾಗಿದ್ದಾರೆ? ಸಿದ್ರಾಮಪ್ಪ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿರಾಳಕೊಪ್ಪ ಪೊಲೀಸ್‌ ಠಾಣೆಗೆ (ಪಿಎಸ್‌ಐ 2) ನವೀನ್‌ ವಿ.ಮಠಪತಿ – ಸ್ಥಳ ನಿರೀಕ್ಷಣೆಯಲ್ಲಿದ್ದವರು ಶಿವಮೊಗ್ಗ ಗ್ರಾಮಾಂತರ ಠಾಣೆ (ಪಿಎಸ್‌ಐ 1) ತಿರುಮಲೇಶ್‌ – ಸ್ಥಳ ನಿರೀಕ್ಷಣೆಯಲ್ಲಿದ್ದವರು ವಿನೋಬನಗರ ಠಾಣೆ (ಪಿಎಸ್‌ಐ 1) ಭಾರತಿ ಎಸ್.ಎನ್‌ – ಸ್ಥಳ … Read more

ಶಿವಮೊಗ್ಗ ಸಿಟಿಯಲ್ಲಿ ಅ.11ರಂದು ವಿವಿಧ ಬಡಾವಣೆಗಳಲ್ಲಿ ಕರೆಂಟ್‌ ಇರಲ್ಲ, ಎಲ್ಲೆಲ್ಲಿ? ಎಷ್ಟು ಹೊತ್ತು ವ್ಯತ್ಯಯವಾಗಲಿದೆ?

power cut mescom ELECTRICITY

ಶಿವಮೊಗ್ಗ: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎಎಫ್-8 ಮತ್ತು ಎಎಫ್-12 ರಲ್ಲಿ ಮೆಸ್ಕಾಂ ವತಿಯಿಂದ ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಅ.11 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ (Power Cut) ಎಂದು ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ಕರೆಂಟ್‌ ಇರಲ್ಲ? ಆಲ್ಕೋಳ, ಇಂದಿರಾಗಾಂಧಿ ಬಡಾವಣೆ, ಶಿವಪ್ಪನಾಯಕ ಬಡಾವಣೆ, ಜಯದೇವ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್, ಕಾಶಿಪುರ, ಲಕ್ಕಪ್ಪ ಲೇಔಟ್, ಸಿದ್ದರಾಮ ಬಡಾವಣೆ, ರೇಣುಕಾಂಬ ಬಡಾವಣೆ, … Read more

ಶಿವಮೊಗ್ಗ ವಿಮಾನ ನಿಲ್ದಾಣದ ಗೇಟ್‌ ಮುಂದೆ ಪೆಂಡಾಲ್‌ ಹಾಕಿ ರೈತರ ಧರಣಿ, ಇಲ್ಲಿದೆ ಕಾರಣ

091025 Farmers protest in Front of Shimoga Airport

ಶಿವಮೊಗ್ಗ: ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ ಮಾಡದ ಸರ್ಕಾರದ ಕ್ರಮ ಖಂಡಿಸಿ ಸೋಗಾನೆ ಭೂಮಿ ಹಕ್ಕು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ವಿಮಾನ ನಿಲ್ದಾಣದ (Airport) ಗೇಟ್‌ ಮುಂಭಾಗ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ರೈತರು, ಅವರ ಕುಟುಂಬದವರು ಧರಣಿಯಲ್ಲಿ ಭಾಗವಹಿಸಿದ್ದಾರೆ. ವಿಮಾನ ನಿಲ್ದಾಣದ ಗೇಟ್‌ ಮುಂಭಾಗ ಮಹಾತ್ಮ ಗಂಧೀಜಿ ಫೋಟೊ ಇರಿಸಿಕೊಂಡು ರೈತರು ಧರಣಿ ಆರಂಭಿಸಿದ್ದಾರೆ. ಹೋರಾಟಕ್ಕೆ ಕಾರಣವೇನು? ಇಲ್ಲಿದೆ ಪ್ರಮುಖಾಂಶ ಇನ್ನು, ವಿಮಾನ ನಿಲ್ದಾಣದ ಮುಂಭಾಗ … Read more

ಶಿಕಾರಿಪುರ ಟೋಲ್‌ ಗೇಟ್‌ ಬಳಿ ಬಂದೋಬಸ್ತ್‌, ಜನ ಗುಂಪು ಸೇರುವುದು ನಿಷೇಧ

091025-Bandobast-near-kutralli-toll-gate.webp

ಶಿಕಾರಿಪುರ: ಟೋಲ್‌ ಗೇಟ್‌ ವಿರೋಧಿಸಿ ಶಿಕಾರಿಪುರ ಬಂದ್‌ ಬೆನ್ನಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಕುಟ್ರಳ್ಳಿ ಟೋಲ್‌ ಗೇಟ್‌ (toll gate) ಬಳಿ  ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ ಶಿಕಾರಿಪುರ ಬಂದ್‌ಗೆ ಕರೆ ನೀಡಿದೆ. ಇದರ ಬೆನ್ನಿಗೆ ಶಿಕಾರಿಪುರ – ಶಿರಾಳಕೊಪ್ಪ ನಡುವಿನ ರಾಜ್ಯ ಹೆದ್ದಾರಿಯ ಕುಟ್ರಳ್ಳಿ ಟೋಲ್‌ಗೆ ಪೊಲೀಸ್‌ ಬಂದೋಬಸ್ತ್‌ ನಿಯೋಜನೆ ಮಾಡಲಾಗಿದೆ. ಟೋಲ್‌ ಗೇಟ್‌ನಿಂದ ಎರಡು ಬದಿಯಲ್ಲಿ ನೂರು ಮೀಟರ್‌ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ … Read more

ಶಿವಮೊಗ್ಗದ 21 ವರ್ಷದ ಯುವಕನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ, ₹10,000 ದಂಡ

azgar-sentenced-for-7-years.

ಶಿವಮೊಗ್ಗ: 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರ ಸಂಬಂಧ, ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಪ್ರಮುಖ ಆರೋಪಿಗೆ ಏಳು ವರ್ಷಗಳ (7 Years) ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹10,000 ದಂಡ ವಿಧಿಸಿ ತೀರ್ಪು ನೀಡಿದೆ. 2021ರ ಆಗಸ್ಟ್‌ 9ರಂದು ಶಿವಮೊಗ್ಗದ ಬಾಪೂಜಿನಗರದ ನಿವಾಸಿ ರಾಹಿಲ್ (21) ಎಂಬುವವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ಟ್ಯಾಂಕ್‌ ಮೊಹಲ್ಲಾದ ಅಜ್ಗರ್ ಖಾನ್ (21) ಮತ್ತು ಅತೀಖ್ ಪಾಷಾ (36) ಎಂಬುವವರನ್ನು … Read more

ಶಿವಮೊಗ್ಗದ ಅರಣ್ಯ ರಕ್ಷಕ ಎಂ.ಸಲೀಂಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಪದಕ ಪ್ರದಾನ

CM-Medal-for-forest-department-employee-M-Saleem.

ಬೆಂಗಳೂರು: ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ 71ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅರಣ್ಯ ಇಲಾಖೆಯ 25 ಸಿಬ್ಬಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಮುಖ್ಯಮಂತ್ರಿ ಪದಕ’ (Medal) ಪ್ರದಾನ ಮಾಡಿದರು. ಶಿವಮೊಗ್ಗದ ಅರಣ್ಯ ರಕ್ಷಕ ಎಂ.ಸಲೀಂ ಅವರಿಗು ಪಕದ ಪ್ರದಾನ ಮಾಡಲಾಯಿತು. ಅರಣ್ಯ ಇಲಾಖೆಯಲ್ಲಿ ಅತ್ಯುತ್ತಮ ಸೇವೆಗಾಗಿ ಶಿವಮೊಗ್ಗದ ಗಸ್ತು ಅರಣ್ಯ ಪಾಲಕ ಎಂ. ಸಲೀಂ ಅವರು 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ (Medal) ಆಯ್ಕೆಯಾಗಿದ್ದರು. ಸಲೀಂ ಅವರು ತಮ್ಮ ಶೌರ್ಯ, ದಿಟ್ಟತನ ಮತ್ತು ಅರಣ್ಯ ಅಭಿವೃದ್ಧಿಯಲ್ಲಿ ಮಾಡಿದ ಮಹತ್ತರ … Read more

ಶಿವಮೊಗ್ಗದಲ್ಲಿ ಆನೆ ಮೇಲೆ ಸ್ವಾಮೀಜಿಯ ಅಂಬಾರಿ ಮೆರವಣಿಗೆ, ಯಾವಾಗ? ಎಲ್ಲೆಲ್ಲಿ ಸಾಗಲಿದೆ ಮೆರವಣಿಗೆ?

Ballekere-Santosh-Press-meet about Kedara Peeta

ಶಿವಮೊಗ್ಗ: ನಗರದ ಶಿವಶಕ್ತಿ ಸಮಾಜದಿಂದ ಅ.11ರಂದು ಸಮಾಜದ ಅಧ್ಯಕ್ಷೆ ಎನ್‌ಟಿ ರಸ್ತೆಯಲ್ಲಿನ ಹೆಚ್.ಪಾರ್ವತಮ್ಮ ಅವರ ಘಂಟಾಕರಣ ನಿವಾಸಕ್ಕೆ ಉತ್ತರಾಖಂಡ ಕೇದಾರಪೀಠದ ಶ್ರೀ ಭೀಮಾಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿ (Kedara Peeta) ಆಗಮಿಸಲಿದ್ದಾರೆ ಎಂದು ಸಂತೋಷ್ ಬಳ್ಳೆಕೆರೆ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್‌ ಬಳ್ಳೆಕೆರೆ, ಅ.10 ರಂದು ಸಂಜೆ 4ಕ್ಕೆ ಶಿವಪ್ಪನಾಯಕ ವೃತ್ತದಿಂದ ಸ್ವಾಮೀಜಿಯವರನ್ನು ಬೀರನಕೆರೆ ಮಠದ ಆನೆಯ ಅಂಬಾರಿ ಮೇಲೆ ಮೆರವಣಿಗೆ ಮೂಲಕ ಪಾರ್ವತಮ್ಮ ಅವರ ಮನೆಗೆ ಕರೆತಲಾಗುವುದು.ಇದಕ್ಕಾಗಿ ಅರಣ್ಯ ಇಲಾಖೆ ಅನುಮತಿ ಪಡೆಯಲಾಗಿದೆ ಎಂದರು. … Read more

ನಿದಿಗೆಯಲ್ಲಿ ಬೈಕ್‌ ಕದ್ದುಕೊಂಡು ಹೋಗುವಾಗಲೇ ಸಿಕ್ಕಿಬಿದ್ದ ಕಳ್ಳ ರಂಗ

NIDIGE-NEWS-1.jpg

ಶಿವಮೊಗ್ಗ: ಮನೆ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕ್‌ ಕಳವು ಮಾಡಿ ತಳ್ಳಿಕೊಂಡು ಹೋಗುತ್ತಿದ್ದಾಗ ಜನರು ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶಿವಮೊಗ್ಗದ ನಿದಿಗೆ ಗ್ರಾಮದ ಶರತ್‌ ಎಂಬುವವರ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ (Bike) ಕಳ್ಳತನ ಮಾಡಿಕೊಂಡು ಹೋಗುವಾಗ ಕಳ್ಳ ಸಿಕ್ಕಿಬಿದ್ದಿದ್ದಾನೆ. ಶರತ್‌ ತಮ್ಮ ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕನ್ನ ವ್ಯಕ್ತಿಯೊಬ್ಬ ಹೊರಗೆ ಕೊಂಡೊಯ್ದು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗುತ್ತಿದ್ದ. ಶರತ್‌ ಅವರ ತಂದೆ ಇದನ್ನು ಗಮನಿಸಿ ಜೋರಾಗಿ ಜನರನ್ನು ಕೂಗಿದ್ದಾರೆ. ಕಳ್ಳನನ್ನು ಹಿಡಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬೈಕ್‌ … Read more

ಶಿವಮೊಗ್ಗದಲ್ಲಿ ಅಕ್ಬರ್‌ ಕಾಲಿಗೆ ಗುಂಡೇಟು, ಜಿಲ್ಲಾ ರಕ್ಷಣಾಧಿಕಾರಿ ಫಸ್ಟ್‌ ರಿಯಾಕ್ಷನ್‌, ಏನಂದ್ರು ಎಸ್‌ಪಿ?

081025 Akbar Nabbed in Amjad case SP Mithun Kumar spoke to media at Mc Gann Hospital

ಶಿವಮೊಗ್ಗ: ಅಮ್ಜದ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿ ಅಕ್ಬರ್‌ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ (Arrest). ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಮೆಗ್ಗಾನ್‌ ಆಸ್ಪತ್ರೆ ಆವರಣದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಜಿಲ್ಲಾ ರಕ್ಷಣಾಧಿಕಾರಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌ ಬಂಧಿತ ಆರೋಪಿ ಅಕ್ಬರ್ ಮೇಲೆ ಈಗಾಗಲೇ ಕೊಲೆ ಯತ್ನ ಮತ್ತು ಸುಲಿಗೆಯಂತಹ ನಾಲ್ಕು ಗಂಭೀರ ಪ್ರಕರಣಗಳು ದಾಖಲಾಗಿವೆ. ಕೆಲ ದಿನಗಳ ಹಿಂದೆ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಮ್ಜದ್ … Read more