ಶಿವಮೊಗ್ಗದಲ್ಲಿ ಶೋ ರೂಂ ಮುಂಭಾಗ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ಮಾಯ

crime name image

ಶಿವಮೊಗ್ಗ: ಶೋ ರೂಂ ಮುಂಭಾಗ ನಿಲ್ಲಸಿದ್ದ ಕಾರು (Car) ಕಳ್ಳತನವಾಗಿದೆ ಎಂದು ಆರೋಪಿಸಿ ಮ್ಯಾನೇಜರ್‌ ದೂರು ನೀಡಿದ್ದಾರೆ. ಶಿವಮೊಗ್ಗದ ಬೈಪಾಸ್‌ ರಸ್ತೆಯ ವಾದಿ-ಎ-ಹುದಾ ಸಮೀಪದ ಶ್ರೀ ಲಕ್ಷ್ಮಿ ಕಾರ್‌ ಶೋ ರೂಂ ಎದುರು ಘಟನೆ ಸಂಭವಿಸಿದೆ. ಅಂಜನ್‌ ದಾಸ್‌ ಎಂಬುವವರು ತಮ್ಮ ಹಳೆಯ ಮಾರುತಿ 800 ಕಾರನ್ನು ಶ್ರೀ ಲಕ್ಷ್ಮಿ ಕಾರ್‌ ಶೂ ರೂಂನಲ್ಲಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಾಟಕ್ಕೆ ಕೊಟಿದ್ದರು. ಆದರೆ ಪ್ರಧಾನ ಕಚೇರಿಯಿಂದ ಇನ್ನು ಅನುಮತಿ ಸಿಗದ ಹಿನ್ನೆಲೆ ಶೋ ರೂಂನವರು ಮಾರುತಿ 800 ಕಾರನ್ನು … Read more

ಸಹ್ಯಾದ್ರಿ ಕಾಲೇಜು ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ, ದಿನಾಂಕ ಪ್ರಕಟ, ಯಾವಾಗ? ಎಲ್ಲಿ?

Sahyadri-Science-college-principal-Rajeshwari.

ಶಿವಮೊಗ್ಗ: ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ನ. 22ರ ಬೆಳಗ್ಗೆ 10ರಿಂದ ಕಾಲೇಜಿನ  (College) ಸಭಾಂಗಣದಲ್ಲಿ ‘ನಮ್ಮ ಸಹ್ಯಾದ್ರಿ, ನಮ್ಮ -2025’ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜೇಶ್ವರಿ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಹುದ್ದೆ, ಸ್ವಂತ ಉದ್ಯಮ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿದ್ದಾರೆ. ಈ ಎಲ್ಲರ ಅಭಿಪ್ರಾಯದಂತೆ ಹಿರಿಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ ಬಂದಿದೆ … Read more

‘ಶಿವಮೊಗ್ಗಕ್ಕೆ 1.50 ಲಕ್ಷ ಟಾರ್ಗೆಟ್‌, ಇನ್ನು ಮೂರು ದಿನದಲ್ಲಿ ಕಂಪ್ಲೀಟ್‌, ರಾಜ್ಯಕ್ಕೆ ವರದಿ ಸಲ್ಲಿಕೆʼ

-Manjunatha-Bhandari-In-shimoga.

ಶಿವಮೊಗ್ಗ: ಕಾಂಗ್ರೆಸ್ ಕೈಗೊಂಡಿರುವ ವೋಟ್ ಚೋರ್‌ – ಗದ್ದಿ ಛೋಡ್ ಅಭಿಯಾನ ನ.8ಕ್ಕೆ ಒಂದು ವರ್ಷ ಪೂರೈಸುತ್ತಿದ್ದು, ಜಿಲ್ಲೆಗೆ ನೀಡಿದ್ದ 1.50 ಲಕ್ಷ ಸಹಿ (Signature) ಸಂಗ್ರಹವೂ ಪೂರ್ಣವಾಗಲಿದೆ. ಈ ದಾಖಲೆಯನ್ನು ನ.11ರಂದು ಕೆಪಿಸಿಸಿಗೆ ಸಲ್ಲಿಸಲಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್‌ ಸದಸ್ಯ ಮಂಜುನಾಥ್ ಭಂಡಾರಿ ತಿಳಿಸಿದರು. ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ಭಂಡಾರಿ, ಮತದಾನದಲ್ಲಿ ನಡೆಯುತ್ತಿದ್ದ ಅಕ್ರಮಗಳನ್ನು ತಡೆಯುವ ದೃಷ್ಟಿಯಿಂದ ಅಭಿಯಾನ ಆರಂಭಿಸಲಾಗಿತ್ತು. ಈ ಮೂಲಕ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಮತಗಳ್ಳತನದ ಬಗ್ಗೆ ಅರಿವು … Read more

ಸಾಗರದಲ್ಲಿ ಇವತ್ತು ಸಾಹಿತ್ಯ ಹುಣ್ಣಿಮೆ, ಎಲ್ಲಿ? ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ?

D-Manjunatha-about-kannada-shahitya-sammelana

ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪ್ರತಿ ತಿಂಗಳು ಏರ್ಪಡಿಸುವ ಮನೆ–ಮನ ಸಾಹಿತ್ಯ ಕಾರ್ಯಕ್ರಮ ಸಾಹಿತ್ಯ ಹುಣ್ಣಿಮೆಯ 243 ನೇ ತಿಂಗಳ ಸಂಭ್ರಮ ಹಾಗೂ ರಾಜ್ಯೋತ್ಸವ ಕಾರ್ಯಕ್ರಮ ನ. 8ರ ಸಂಜೆ 6.30ಕ್ಕೆ ಲಯನ್ಸ್ ಸಂಸ್ಥೆ ಆತಿಥ್ಯದಲ್ಲಿ ಸಾಗರದ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ. ಮಂಜುನಾಥ ಉದ್ಘಾಟಿಸಲಿದ್ದು, ಸಾಗರ ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಪ್ರಸನ್ನ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ವಕೀಲ ಹೆಚ್.ಟಿ. ರಾಘವೇಂದ್ರ, ಉದ್ಯಮಿಗಳಾದ ಎಲ್.ಎನ್‌. … Read more

ಶಿವಮೊಗ್ಗದ ಕೃಷಿ ಮೇಳಕ್ಕೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಜನರು, ಏನೇನಿದೆ ಮೇಳದಲ್ಲಿ?

Krushi Mela

ಶಿವಮೊಗ್ಗ: ನವುಲೆಯಲ್ಲಿರುವ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ನಾಲ್ಕು ದಿನ ಕೃಷಿ ಮತ್ತು ತೋಟಗಾರಿಕೆ ಮೇಳಕ್ಕೆ (Krushi Mela) ರೈತರಿಂದ ಉತ್ತಮ ಪ್ರತಿಕ್ರಿಯ ವ್ಯಕ್ತವಾಗಿದೆ. ಮೊದಲ ದಿವನೇ ಸುಮಾರು 50 ಸಾವಿರದಷ್ಟು ಜನರು ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು ಎಂದು ಅಂದಾಜಿಸಲಾಗಿದೆ. ಕೃಷಿಯಲ್ಲಿನ ಆವಿಷ್ಕಾರಗಳು, ಸಂಶೋಧನೆ ಹಾಗೂ ತಾಂತ್ರಿಕತೆಗಳ ಬಗ್ಗೆ ರೈತರು ಮಾಹಿತಿ ಪಡೆದರು. ಮೇಳದಲ್ಲಿ ಆಹಾರ, ತಿಂಡಿ ಮಳಿಗೆಗಳು ಇದ್ದು, ಧಾರವಾಡ ಪೇಡೆ, ಬೆಳಗಾವಿಯ ಕುಂದಾ, ಮೇಲುಕೋಟೆಯ ಪುಳಿಯೊಗರೆ, … Read more

ಸವಳಂಗ ರಸ್ತೆಯಲ್ಲಿ ಕೊಮ್ಮನಾಳು ವ್ಯಕ್ತಿಯ ಬಲಿ ಪಡೆದ ಅಪರಿಚಿತ ವಾಹನ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

ಶಿವಮೊಗ್ಗ: ಅಪರಿಚಿತ ವಾಹನ ಡಿಕ್ಕಿಯಾಗಿ (ACCIDENT) ತೀವ್ರ ಗಾಯಗೊಂಡಿದ್ದ ಬೈಕ್‌ ಸವಾರ ಸಾವನ್ನಪ್ಪಿದ್ದಾರೆ. ಶಿವಮೊಗ್ಗ – ಸವಳಂಗ ಮುಖ್ಯ ರಸ್ತೆಯಲ್ಲಿ ಖಾಸಗಿ ಶಾಲೆ ಮುಂಭಾಗ ಘಟನೆ ಸಂಭವಿಸಿದೆ. ಕೊಮ್ಮನಾಳು ಗ್ರಾಮದ ಮಂಜುನಾಥ್‌ (40) ಮೃತಪಟ್ಟಿದ್ದಾರೆ. ಮಂಜುನಾಥ್‌ ತಮ್ಮ ಮನೆಯಿಂದ ಬೈಕಿನಲ್ಲಿ ತೆರಳುವಾಗ ಅಪರಿಚಿತ ವಾಹನ ಡಿಕ್ಕಿಯಾಗಿದೆ. ಘಟನೆಯಲ್ಲಿ ಮಂಜುನಾಥ್‌ ತಲೆ, ಭುಜು, ಹೊಟ್ಟೆ ಸೇರಿದಂತೆ ವಿವಿಧೆಡೆ ತೀವ್ರ ಗಾಯವಾಗಿ, ರಕ್ತಸ್ರಾವ ಉಂಟಾಗಿತ್ತು. ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆ ವೇಳೆಗಾಗಲೇ ಅವರು ಅಸುನೀಗಿದ್ದರು. ಘಟನೆ ಸಂಬಂಧ … Read more

ಶಿವಮೊಗ್ಗದಲ್ಲಿ ನಾಟಕೋತ್ಸವಕ್ಕೆ ಚಾಲನೆ, ಹೇಗಿತ್ತು ಮಾಯಾ ದ್ವೀಪ? ಇವತ್ತು ಯಾವ ನಾಟಕ ಇರಲಿದೆ?

Maya-Dweepa-drama-in-shimoga-city

ಶಿವಮೊಗ್ಗ: ನಾಟಕ ಅಕಾಡೆಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಿವಮೊಗ್ಗ ರಂಗಾಯಣ, ಸಮುದಾಯ ಸಂಯುಕ್ತ ಆಶ್ರಯದಲ್ಲಿ ಮನುಷ್ಯತ್ವದೆಡೆಗೆ ಸಮುದಾಯ ಜಾಥಾ ನೆನಪಿನಲ್ಲಿ ಅಯೋಜಿಸಿರುವ ನಾಟಕೋತ್ಸವಕ್ಕೆ (Drama Festival) ಕುವೆಂಪು ರಂಗಮಂದಿರದಲ್ಲಿ ಶಾಸಕ ಎಸ್‌.ಎನ್.ಚನ್ನಬಸಪ್ಪ ಚಾಲನೆ ನೀಡಿದರು. ‘ರಂಗಭೂಮಿ ಒನ್‌ ಸೈಡ್‌ ಆಗಬಾರದು’ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ರಂಗಭೂಮಿ ಜೀವನ ರೂಪಿಸುವ ವೇದಿಕೆ. ನಾಟಕದ ರೂಪಕ, ದೃಶ್ಯಗಳು ಜೀವನಕ್ಕೆ ಹತ್ತಿರವಾದದ್ದು. ಪ್ರೇಕ್ಷಕ ನಾಟಕಗಳ ಮೂಲಕ ಜೀವನಕ್ಕೆ ಬೇಕಾದದ್ದನ್ನು ಅಳವಡಿಸಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಈಗಲೂ ರಂಗಭೂಮಿ … Read more

ಹೊಂಬುಜದಲ್ಲಿ ಲಕ್ಷ ದೀಪೋತ್ಸವ, ವರ್ಧಂತ್ಯೋತ್ಸವ

Hombuja-Padmavathi-temple-humcha

ರಿಪ್ಪನ್‌ಪೇಟೆ: ಹೊಂಬುಜ (Hombuja) ಜೈನ ಮಠದಲ್ಲಿ ಪ್ರಾಚೀನ ಪರಂಪರೆಯಂತೆ ಕಾರ್ತಿಕ ಮಾಸದ ಪಂಚಮಿ ದಿನವಾದ ನ.9ರಂದು ಲಕ್ಷ ದೀಪೋತ್ಸವ ನೆರವೇರಲಿದೆ. ಪಾರ್ಶ್ವ ನಾಥ ಬಸದಿ, ಪದ್ಮಾವತಿ ಆಲಯ, ಗುಡ್ಡದ ಬಾಹುಬಲಿ ಬಸದಿ ಮತ್ತಿತರೆಡೆ ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯದಲ್ಲಿ ಲಕ್ಷದಿಪೋತ್ಸವ ಜರುಗಲಿದೆ. ನ.10ರಂದು ಸ್ವಾಮೀಜಿ ಪಟ್ಟಾಭಿಷೇಕ ಮಹೋತ್ಸವದ ವರ್ಧಂತ್ಯೋತ್ಸವ ನೆರವೇರಲಿದೆ. ಇದನ್ನೂ ಓದಿ » ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಶಿವಮೊಗ್ಗದಲ್ಲಿ ಆಕ್ರೋಶ ಬಂಧನಕ್ಕೆ ಒತ್ತಾಯ, ಕಾರಣವೇನು?

ಶಿವಮೊಗ್ಗ ಬಿಜೆಪಿ ಕಚೇರಿ ಮುಂಭಾಗ ವಂದೇ ಮಾತರಂ

Vande-Mataram-song-in-front-of-BJP-Office-in-shimoga-city.

ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ‘ವಂದೇ ಮಾತರಂ’ ಗೀತೆ ಹಾಡಿದರು. (Vande Mataram) ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಹಿನ್ನೆಲೆ ದೇಶದೆಲ್ಲೆಡೆ ಗೀತೆ ಗಾಯನ ಮತ್ತು ಸಂಭ್ರಮದ ಆಚರಣೆಯಂತೆ ಜಿಲ್ಲಾ ಬಿಜೆಪಿ ಕಚೇರಿ ಮುಂಭಾಗದಲ್ಲೂ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾ ನಂತರದ ದೇಶಪ್ರೇಮದ ಕಿಚ್ಚಿಗೆ ವಂದೇ ಮಾತರಂ ಗೀತೆಯು ಪ್ರೇರಣೆ ನೀಡಿತು. ವಿಶ್ವದ ಅಪ್ರತಿಮ ನಾಯಕ … Read more

ಇಂದು ಉಚಿತವಾಗಿ ಹೃದಯ ತಪಾಸಣಾ ಶಿಬಿರ

soraba anavatti graphics

ಆನವಟ್ಟಿ: ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಜನದನಿ ಸೇವಾ ಸಂಸ್ಥೆ, ಆಯುಷ್‌ ಇಲಾಖೆ ಹಾಗೂ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದ ಸಂಯುಕ್ತ ಆಶ್ರಯದಲ್ಲಿ ನ. 8ರಂದು ಚೌಡಮ್ಮನ ದೇವಸ್ಥಾನದ ಹತ್ತಿರ ಹೃದಯ ಉಚಿತ ತಪಾಸಣಾ (Heart Checkup) ಶಿಬಿರ ಹಮ್ಮಿಕೊಳ್ಳಲಾಗಿದೆ. ನ.15ರಂದು ವಿಶ್ವ ಭಾರತಿ ಶಾಲಾ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಜನದನಿ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಲಾಕರ್‌, ಬಾಲಾಜಿ ನೃತ್ಯ ಶಾಲೆ ಹಾಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ, ನಟ– … Read more