ಶಿವಮೊಗ್ಗ ಜಿಲ್ಲೆ, ಇವತ್ತು ಯಾವ್ಯಾವ ತಾಲೂಕಿನಲ್ಲಿ ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

SHIVAMOGGA LIVE NEWS, 20 JANUARY 2025 ಶಿವಮೊಗ್ಗ : ಪೂರ್ವೋತ್ತರ ಮಾರುತಗಳು ಹಾದು ಹೋಗುತ್ತಿರುವ ಹಿನ್ನೆಲೆ ರಾಜ್ಯದ ವಿವಿಧೆಡೆ ಮಳೆಯಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ತುಸು ಮೋಡ ಕವಿದ ವಾತಾವರಣ ಇರಲಿದೆ. ಇದರ ಹೊರತು ಜಿಲ್ಲೆಯಲ್ಲಿ ಜೋರು ಬಿಸಿಲು, ರಾತ್ರಿ ಹೊತ್ತು ಚಳಿ (Weather) ಮುಂದುವರೆಯಲಿದೆ. ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿಯಲ್ಲಿ ಇವತ್ತು ಗರಿಷ್ಠ 35 ಡಿಗ್ರಿ … Read more

ಮಕ್ಕಳಿಗೆ ಚಿನ್ನದ ಸರ ಹಾಕುವ ಪೋಷಕರೆ ಹುಷಾರ್‌, ಶಿವಮೊಗ್ಗದಲ್ಲಿ ಎರಡು ಪ್ರತ್ಯೇಕ ಕೇಸ್‌ ದಾಖಲು

Crime-News-General-Image

SHIVAMOGGA LIVE NEWS, 20 JANUARY 2025 ಶಿವಮೊಗ್ಗ : ಹತ್ತು ದಿನದ ಅಂತರದಲ್ಲಿ ನಗರದ ಎರಡು ಕಲ್ಯಾಣ ಮಂಟಪದಲ್ಲಿ ಮಕ್ಕಳ ಕೊರಳಲಿದ್ದ ಚಿನ್ನದ ಸರ (Gold Chain) ಕಳವು ಮಾಡಲಾಗಿದೆ. ಪೋಷಕರು ಗಮನಿಸಿದಾಗ ಚಿನ್ನದ ಸರ ಇಲ್ಲದಿರುವುದು ಗೊತ್ತಾಗಿದೆ. ಈ ಸಂಬಂಧ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?

ಶಿವಮೊಗ್ಗದಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ ಸಮ್ಮೇಳನಕ್ಕೆ ಚಾಲನೆ, ಕೇಂದ್ರ ಸಚಿವರು ಏನೆಲ್ಲ ಹೇಳಿದರು?

Startup-Summit-at-Shimoga-PES-College

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಪಿಇಎಸ್ ಶಿಕ್ಷಣ ಸಂಸ್ಥೆಯ ಅನ್ವೇಷಣಾ ಇನ್ನೋವೇಶನ್ ಹಾಗೂ ಎಂಟರ್‌ಪ್ರಿನ್ಯೊರಿಯಲ್ ಫೋರಂನಿಂದ ಪ್ರೇರಣಾ ಕನ್ವೆಷನ್ ಹಾಲ್‌ನಲ್ಲಿ ಮಲ್ನಾಡ್‌ ಸ್ಟಾರ್ಟ್‌ಅಪ್‌ (Start Up) ಸಮ್ಮೇಳನ ನಡೆಯಿತು. ಕೇಂದ್ರ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್‌ ಕಾರ್ಯಕ್ರಮ ಉದ್ಘಾಟಿಸದರು. ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಶಾರದಾ ಪೂರ್ಯನಾಯ್ಕ, ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಕೃಷಿ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ, ಅನ್ವೇಷಣಾ ವ್ಯವಸ್ಥಾಪಕ ನಿರ್ದೇಶಕ ಸಿ.ಎಂ.ಪಾಟೀಲ್, … Read more

ಭದ್ರಾವತಿಯಲ್ಲಿ ಭೀಕರ ಅಪಘಾತ, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವು

BHADRAVATHI-BREAKING-NEWS.jpg

SHIVAMOGGA LIVE NEWS, 18 JANUARY 2025 ಭದ್ರಾವತಿ : ಟ್ರಾಕ್ಟರ್‌ (Tractor) ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ವೈದ್ಯಕೀಯ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಭದ್ರಾವತಿ ತಾಲೂಕು ಬಾರಂದೂರು ಕ್ರಾಸ್‌ ಬಳಿ ಅಪಘಾತ ಸಂಭವಿಸಿದೆ. ವೈದ್ಯಕೀಯ ವಿದ್ಯಾರ್ಥಿನಿ ಕೃತಿ (21) ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಶಿವಮೊಗ್ಗದಿಂದ ಕುಟುಂಬದೊಂದಿಗೆ ತಮ್ಮೂರು ತರೀಕೆರೆಯ ಅಮೃತಾಪುರಕ್ಕೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪೇಪರ್‌ ಟೌನ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ » ಶಿವಮೊಗ್ಗ ಸಿಟಿ ಬಸ್ಸುಗಳ … Read more

ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಮಿನಿಸ್ಟರ್‌ ವಾರ್ನಿಂಗ್‌, ಕಾರಣವೇನು?

60823-Minister-Madhu-Bangarappa.jpg

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರಕ್ಕೆ (Corruption) ಕಡಿವಾಣ ಹಾಕಲು ಕ್ರಮ ವಹಿಸುತ್ತೇವೆ. ತಪ್ಪೆಸಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಪಾಲಿಕೆಯಲ್ಲಿ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಅಧಿಕಾರಿಯೊಬ್ಬರು ಸಿಕ್ಕಿಬಿದ್ದಿದ್ದಾರೆ. ಇ ಸ್ವತ್ತು ವಿಚಾರದಲ್ಲಿ ಗೊಂದಲ ನಿವಾರಣೆಗೆ ಕ್ರಮ ವಹಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ಕುರಿತು ಜನಪ್ರತಿನಿಧಿಗಳು … Read more

ಶಿವಮೊಗ್ಗ ಸಿಟಿ ಬಸ್ಸುಗಳ ಚಾಲಕರಿಗೆ ಬಿಸಿ ಮುಟ್ಟಿಸಿದ ಟ್ರಾಫಿಕ್‌ ಪೊಲೀಸ್‌

PSI-Tirumalesh-checks-city-buses-for-horn

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಕರ್ಕಶ ಹಾರನ್‌ಗಳ (Horn) ಮೂಲಕ ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಖಾಸಗಿ ಬಸ್‌ ಚಾಲಕರಿಗೆ ಸಂಚಾರ ಠಾಣೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪಶ್ಚಿಮ ಸಂಚಾರ ಠಾಣೆ ಪೊಲೀಸರು ದಿಢೀರ್‌ ತಪಾಸಣೆ ನಡೆಸಿ ಕರ್ಕಶ ಹಾರನ್‌ ತೆಗಿಸಿದ್ದಾರೆ. ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಮಾರ್ಗದರ್ಶನದಲ್ಲಿ ಪಿಎಸ್‌ಐ ತಿರುಮಲೇಶ್‌ ಕಾರ್ಯಾಚರಣೆ ನಡೆಸಿದರು. ಕರ್ಕಶ ಶಬ್ದ ಮಾಡುವ ಹಾರನ್‌ ಬಳಸುತ್ತಿದ್ದ ಬಸ್ಸುಗಳನ್ನು ತಡೆದು ತಪಾಸಣೆ ನಡೆಸಿದರು. ಚಾಲಕರನ್ನು ಬಸ್ಸಿನಿಂದ … Read more

ಶಿವಮೊಗ್ಗದಲ್ಲಿ ಬಸ್‌ ಡಿಕ್ಕಿ, ಗುಂಡಿಗೆ ಬಿದ್ದ ಸ್ಕೂಟಿ, ಬಾಲಕಿ ಬಲಗಾಲಿಗೆ ಗಂಭೀರ ಗಾಯ

Scooty-and-bus-mishap-at-mandli-in-Shimoga-city

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಖಾಸಗಿ ಬಸ್‌ ಮತ್ತು ದ್ವಿಚಕ್ರ ವಾಹನ (Scooty) ಡಿಕ್ಕಿಯಾಗಿ ಬಾಲಕಿ ಗಂಭೀರ ಗಾಯಗೊಂಡಿದ್ದಾಳೆ. ಶಿವಮೊಗ್ಗದ ಎನ್‌.ಟಿ.ರಸ್ತೆಯ ಮಂಡ್ಲಿ ಸಮೀಪ ಘಟನೆ ಸಂಭವಿಸಿದೆ. ಪೃಥ್ವಿ (15) ಗಂಭೀರ ಗಾಯಗೊಂಡ ಬಾಲಕಿ. ತಂದೆಯೊಂದಿಗೆ ಸ್ಕೂಟಿಯಲ್ಲಿ ತೆರಳುವಾಗ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ರಸ್ತೆ ಪಕ್ಕದ ಗುಂಡಿ ಸ್ಕೂಟಿ ಬಿದ್ದಿದೆ. ಪೃಥ್ವಿಯ ಬಲಗಾಲಿಗೆ ಗಂಭೀರ ಗಾಯವಾಗಿದೆ. ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪಶ್ಚಿಮ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ … Read more

ಸಾಗರ ಗಣಪತಿ ಕೆರೆ, ಮಾಜಿ ಮಿನಿಸ್ಟರ್‌ ಪರಿಶೀಲನೆ, ಟೈಲ್ಸ್‌ ವಿಚಾರಕ್ಕೆ ಗರಂ, ಕಾರಣವೇನು?

Haratalu-halappa-visit-ganapathi-kere-in-sagara

SHIVAMOGGA LIVE NEWS, 18 JANUARY 2025 ಸಾಗರ : ಗಣಪತಿ ಕೆರೆ (Ganapathi kere) ದಂಡೆ ಮೇಲೆ ನಡೆಯುತ್ತಿರುವ ಕಾಮಗಾರಿಯನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಪರಿಶೀಲಿಸಿದರು. ಈ ಸಂದರ್ಭ ಕಾಮಗಾರಿ ಆರಂಭದಲ್ಲಿ ಬಳಕೆಯಾದ ಇಂಟರ್‌ಲಾಕ್‌ ಟೈಲ್ಸ್‌ ಬದಲು ಬೇರೊಂದು ಟೈಲ್ಸ್‌ ಬಳಸಿರುವುದಕ್ಕ ಹಾಲಪ್ಪ ಆಕ್ಷೇಪ ವ್ಯಕ್ತಪಡಿಸಿದರು. ಹಾಲಪ್ಪ ಏನೆಲ್ಲ ಹೇಳಿದರು? ನಮ್ಮ ಆಡಳಿತಾವಧಿಯಲ್ಲಿ ಗಣಪತಿ ಕೆರೆ ದಂಡೆ ಮೇಲೆ ಬಣ್ಣ ಮಿಶ್ರಿತ ಇಂಟರ್‌ಲಾಕ್‌ ಟೈಲ್ಸ್‌ ಅಳವಡಿಸಿ ರಸ್ತೆ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಇದಕ್ಕಾಗಿ ನಗರಸಭೆಯಿಂದ 32 … Read more

ಕಾಗೋಡು ತಿಮ್ಮಪ್ಪಗೆ ಒಂದೇ ದಿನ ಎರಡು ವಿವಿಯಿಂದ ಎರಡು ಗೌರವ ಡಾಕ್ಟರೇಟ್‌ ಪ್ರದಾನ

kuvempu-university-and-agriculture-university-invitation-for-kagodu-thimmappa Doctorate

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಒಂದೇ ದಿನ ಎರಡು ವಿಶ್ವವಿದ್ಯಾಲಯಗಳಿಂದ, ಎರಡು ಪ್ರತ್ಯೇಕ ಗೌರವ ಡಾಕ್ಟರೇಟ್‌ (Doctorate) ಪ್ರದಾನ ಮಾಡಲಾಗುತ್ತಿದೆ. ಕಾಗೋಡು ತಿಮ್ಮಪ್ಪ ಅವರಿಗೆ ಕುವೆಂಪು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಘೋಷಿಸಲಾಗಿದೆ. ಇನ್ನೊಂದೆಡೆ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿವಿಯಿಂದಲು ಗೌರವ ಡಾಕ್ಟರೇಟ್‌ ಘೋಷಿಸಲಾಗಿದೆ. ಈಗಾಗಲೆ ಎರಡು ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸಾಗರದಲ್ಲಿ ಕಾಗೋಡು ತಿಮ್ಮಪ್ಪ ಅವರ ಮನೆಗೆ … Read more

ಶಿವಮೊಗ್ಗ ಪಾಲಿಕೆ, ಕೈ ಬಿಸಿ ಮಾಡಿದರಷ್ಟೆ ಕೆಲಸ, ಏನಾಗ್ತಿದೆ ಪೌರ ಸಂಸ್ಥೆಯಲ್ಲಿ?

Shimoga-Mahanagara-Palike-ambedkar-statue

SHIVAMOGGA LIVE NEWS, 18 JANUARY 2025 ಶಿವಮೊಗ್ಗ : ಸರ್ವ ಸಮಸ್ಯೆ ನೀಗಿಸಬೇಕಿದ್ದ ಮಹಾನಗರ ಪಾಲಿಕೆಯೆ (Palike) ಈಗ ನಗರದ ನಾಗರಿಕರ ಪಾಲಿಗೆ ಅತಿದೊಡ್ಡ ಸಮಸ್ಯೆಯಾಗಿದೆ. ಅಧಿಕಾರಿಗಳ ಕೈ ಬಿಸಿ ಮಾಡದೆ, ಮಧ್ಯವರ್ತಿಗಳ ಜೇಬು ಭರ್ತಿ ಮಾಡದೆ ಇದ್ದರೆ ಸಣ್ಣಪುಟ್ಟ ಕೆಲಸವು ಆಗದ ದುಸ್ಥಿತಿ ಇದೆ. ಸಾಲು ಸಾಲು ಲೋಕಾಯುಕ್ತ ದಾಳಿ, ಜನಪ್ರತಿನಿಧಿಗಳ ಆರೋಪ ಪಾಲಿಕೆಯೊಳಗಿನ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನೋಟು ತೋರಿಸದೆ ಕೆಲಸಗಳು ನಡೆಯುವುದಿಲ್ಲ. ಜನ ಹತ್ತಾರು ಬಾರಿ ಓಡಾಡಿ, ಹಣ … Read more