ಶಿವಮೊಗ್ಗದ ಮೂವರು ಉದ್ಯಮಿಗಳಿಗೆ ಹೆಮ್ಮೆಯ ವಾಣಿಜ್ಯೋದ್ಯಮಿ ಪ್ರಶಸ್ತಿ, ಯಾರಿಗೆಲ್ಲ ಪ್ರಶಸ್ತಿ ಲಭಿಸಿದೆ?

chamber-of-commerce-president-gopinath-press-meet

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಮೂವರಿಗೆ ಹೆಮ್ಮೆಯ ವಾಣಿಜ್ಯೋದ್ಯಮಿ (Business Men) ಪ್ರಶಸ್ತಿ ನೀಡಲಾಗುತ್ತಿದೆ. ಡಿಸೆಂಬರ್‌ 28ರಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಶಾಂತಲಾ ಸ್ಪೆರೋಕ್ಯಾಸ್ಟ್‌ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್‌, ಕರ್ನಾಟಕ ವಾಣಿಜ್ಯ ಮತ್ತು ಕೈಗರಿಕಾ ಮಹಾಸಂಸ್ಥೆಯ ಅ‍ಧ್ಯಕ್ಷ ಎಂ.ಜಿ.ಬಾಲಕೃಷ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ … Read more

ಶಿವಮೊಗ್ಗದಲ್ಲಿ ಮೂರು ದಿನ ನಾಟಕೋತ್ಸವ, ಯಾವೆಲ್ಲ ನಾಟಕ ಪ್ರದರ್ಶನವಾಗಲಿದೆ?

Kuvempu-Natakotsava-in-Shimoga-by-hongirana

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಹೊಂಗಿರಣ ಸಂಸ್ಥೆ ವತಿಯಿಂದ ಕುವೆಂಪು ನಾಟಕೋತ್ಸವ (Drama Festival) ಆಯೋಜಿಸಲಾಗಿದೆ. ಡಿಸೆಂಬರ್‌ 27ರಿಂದ ಮೂರು ದಿನ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ಕ್ಕೆ ನಾಟಕಗಳು ಆರಂಭವಾಗಲಿವೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಂಗಿರಣ ಸಂಸ್ಥೆಯ ಸಾಸ್ವೆಹಳ್ಳಿ ಸತೀಶ್‌, ಹೊಂಗಿರಣೋತ್ಸವದಲ್ಲಿ ಕುವೆಂಪು ನಾಟಕೋತ್ಸವ ನಡೆಯುತ್ತಿದೆ. ಕುವೆಂಪು ಅವರ ಶಿಷ್ಯ, ವಿಶ್ರಾಂತ ಪ್ರಚಾರ್ಯ ಪ್ರೊ. ಪಂಚಾಕ್ಷರಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ … Read more

‘ಹೆಬ್ಬಾಳ್ಕರ್‌ ಮೇಲಿನ ಆತ್ಮೀಯತೆಗೆ ಡಿಕೆಶಿನೆ ಇದನ್ನೆಲ್ಲ ಮಾಡಿಸಿರಬಹುದುʼ

251224 KS Eshwarappa Press meet in Shimoga press trust

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಸಿ.ಟಿ.ರವಿ ಪ್ರಕರಣವನ್ನು ಸರ್ಕಾರ CID ತನಿಖೆಗೆ ವಹಿಸುವ ಬದಲು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕಿತ್ತು. ಪ್ರಕರಣದ ಪ್ರಮುಖ ಸಂಗತಿಗಳು ನ್ಯಾಯಾಂಗ ತನಿಖೆಯಿಂದ ಮಾತ್ರವೆ ಹೊರಬರಲು ಸಾಧ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಈಶ್ವರಪ್ಪ, ವಿಧಾನಸೌಧದಲ್ಲಿ ಸಿ.ಟಿ.ರವಿ ಅವರನ್ನು ಬಂಧಿಸಿ ರಾತ್ರಿ ಪೂರ್ತಿ ಐದು ಜಿಲ್ಲೆ ಸುತ್ತಿಸಿದ್ದಾರೆ. ಇದರ ಸೂಕ್ತ ತನಿಕೆ ಆಗಬೇಕಿದ್ದರೆ ನ್ಯಾಯಾಂಗ ತನಿಖೆಯೇ ಸರಿ ಎಂದರು. ಪೊಲೀಸ್ ಇಲಾಖೆಯ ವೈಫಲ್ಯವನ್ನು ಕಾಂಗ್ರೆಸ್ … Read more

ಶಿವಮೊಗ್ಗದ ವಾಹನ ಸವಾರರೆ ಹುಷಾರ್‌, ಸ್ವಲ್ಪ ಯಾಮಾರಿದರೆ ನಿಮ್ಮ ಪ್ರಾಣಕ್ಕೆ ಸಂಚಕಾರ ಫಿಕ್ಸ್‌

Cable-Duct-in-Balaraja-Urs-Road-in-Shimoga.

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ನಗರದ ಪ್ರಮುಖ ರಸ್ತೆಗಳಲ್ಲಿ ಕೇಬಲ್‌ ಡೆಕ್ಟ್‌ಗಳ ಸ್ಲ್ಯಾಬ್‌ಗಳು (Slab) ಮತ್ತೆ ಅಪಾಯಕಾರಿ ಸ್ಥಿತಿಗೆ ತಲುಪಿವೆ. ಸ್ವಲ್ಪ ಯಾಮಾರಿದರು ವಾಹನ ಸವಾರರು ಪ್ರಾಣವನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿ ಇದೆ. ಜಿಲ್ಲಾಧಿಕಾರಿ ಕಚೇರಿ ಸನಿಹದಲ್ಲೇ, ತಾಲೂಕು ಕಚೇರಿ ಎದುರಲ್ಲೇ ಇಂತಹ ದುಸ್ಥಿತಿ ಇದ್ದರು ಅಧಿಕಾರಿಗಳು ಇವುಗಳ ರಿಪೇರಿಗೆ ಕ್ಯಾರೆ ಅನ್ನದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ‌ ಮೃತ್ಯು ಕೂಪಗಳಾಗುತ್ತಿವೆ ಕೇಬಲ್‌ ಡೆಕ್ಟ್‌ ಸ್ಮಾರ್ಟ್‌ ಸಿಟಿ ಯೋಜನೆ ಅಡಿ ಶಿವಮೊಗ್ಗ ನಗರದ … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿ ಕುತ್ತಿಗೆ ಪರೀಕ್ಷಿಸಿಕೊಂಡ ಮಹಿಳೆಗೆ ಕಾದಿತ್ತು ಆಘಾತ

KSRTC-Bus-Stand-Shivamogga

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಬಸ್‌ ಹತ್ತುವಾಗ ಮಹಿಳೆಯೊಬ್ಬರ ಕೊರಳಲ್ಲಿದ್ದ ಮಾಂಗಲ್ಯ ಸರ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ KSRTC ಬಸ್‌ ನಿಲ್ದಾಣದಲ್ಲಿ ಶಿಕಾರಿಪುರದ ನಾಗರತ್ನ ಎಂಬುವವರ ಮಾಂಗಲ್ಯ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ » ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್‌ಡೇಟ್‌ ನೀಡಿದ ಸಂಸದ ನಾಗರತ್ನ ತಮ್ಮ ಪತಿಯೊಂದಿಗೆ ಶಿವಮೊಗ್ಗದ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಮುಗಿಸಿ ಊರಿಗೆ ತೆರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಶಿಕಾರಿಪುರ ಪ್ಲಾಟ್‌ಫಾರಂನಲ್ಲಿ ಬಸ್‌ ಹುತ್ತುವಾಗ ಜನ ದಟ್ಟಣೆ … Read more

ಶಿವಮೊಗ್ಗದಲ್ಲಿ ಮೂರು ದಿನ ಶ್ರೀರಾಮನ ಆದರ್ಶ ಕುರಿತು ಅನುಗ್ರಹ ಸಂದೇಶ

Dr-Mytreyi-and-KS-Eshwarappa-about-Srigandha-programme.

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಶ್ರೀಗಂಧ ಸಂಸ್ಥೆ ವತಿಯಿಂದ ನಗರದ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ಶ್ರೀರಾಮನ (SriRama) ಆದರ್ಶದ ಕುರಿತು ಮೂರು ದಿನ ವಿಶೇಷ ಪ್ರವಚನ ಮತ್ತು ಅನುಗ್ರಹ ಸಂದೇಶ ಕಾರ್ಯಕ್ರಮ ನಡೆಯಲಿದೆ. ಉತ್ತರಾದಿ ಮಠದ ‍ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಪ್ರವಚನ ನೀಡಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಂಧ ಸಂಸ್ಥೆಯ ಡಾ. ಮೈತ್ರೇಯಿ, ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಉತ್ತಮ ವಾಗ್ನಿಗಳು. ಅವರಿಂದ ‍ಶ್ರೀರಾಮನ ಆದರ್ಶದ ಕುರಿತು ಪ್ರವಚನ ಕೇಳುವುದು ಸುಯೋಗ ಎಂದರು. ಮೂರು … Read more

ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಅಪ್‌ಡೇಟ್‌ ನೀಡಿದ ಸಂಸದ

MP-BY-raghavendra-about-Shimoga-Airport-Flight

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ಸೋಗಾನೆ ವಿಮಾನ ನಿಲ್ದಾಣದಿಂದ ಕಾರ್ಗೊ ವಿಮಾನಗಳ (Flight) ಹಾರಾಟಕ್ಕೆ ಅಗತ್ಯವಿರುವ ಸೌಲಭ್ಯ ಕಲ್ಪಿಸಲು 50 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಮಾಧ್ಯಮಗಳ ಜೊತೆ ಮಾತನಾಡಿದ ಸಂಸದ ರಾಘವೇಂದ್ರ, ಇನ್ನು ಒಂದೂವರೆ ತಿಂಗಳಲ್ಲಿ ನೈಟ್‌ ಲ್ಯಾಂಡಿಂಗ್‌ ಸೌಲಭ್ಯ ಲಭ್ಯವಾಗಲಿದೆ. ವಿಸಿಬಲಿಟಿ ಸಮಸ್ಯೆ ಈಗ ಪರಿಹಾರವಾಗಿದೆ. ಅದರ ಬೆನ್ನಿಗೆ ಕಾರ್ಗೊ ವಿಮಾನಗಳ ಹಾರಾಟಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ರೈತರು ಬೆಳೆದ ಬೆಳೆ ಮತ್ತು ಇತರೆ ವಸ್ತುಗಳ … Read more

ಶಿವಮೊಗ್ಗದಲ್ಲಿ ಕ್ರಿಸ್‌ಮಸ್‌, ರಾತ್ರಿಯಿಂದಲೆ ಪ್ರಾರ್ಥನೆ, ಹೇಗಿದೆ ಸಂಭ್ರಮ?

241224 Christmas at Sacred Heart Church in Shimoga city

SHIVAMOGGA LIVE NEWS, 25 DECEMBER 2024 ಶಿವಮೊಗ್ಗ : ನಗರದಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು (Christmas) ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಳೆದ ರಾತ್ರಿಯಿಂದಲೆ ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲಾಗುತ್ತಿದೆ. ನಗರದ ಸೇಕ್ರೆಡ್‌ ಹಾರ್ಟ್‌ ಚರ್ಚ್‌ನಲ್ಲಿ ರಾತ್ರಿ ಪ್ರಾರ್ಥನೆ ನೆರವೇರಿಸಲಾಯಿತು. ದಿವ್ಯ ಬಲಿ ಪೂಜೆ, ಗೋದಲಿ ಮುಂದೆ ಪ್ರಾರ್ಥನೆ ನಡೆಸಲಾಯಿತು. ಬಿಷಪ್‌, ವಿವಿಧ ಚರ್ಚ್‌ಗಳ ಧರ್ಮಗುರುಗಳು ಪ್ರಾರ್ಥನೆ ವೇಳೆ ಪಾಲ್ಗೊಂಡಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ದೊಡ್ಡ ಸಂಖ್ಯೆಯ ಕ್ರೈಸ್ತರು ಏಸು ಕ್ರಿಸ್ತನನ್ನು ಪ್ರಾರ್ಥಿಸಿದರು. ಚರ್ಚ್‌ ಆವರಣಕ್ಕೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿತ್ತು. ಇದನ್ನೂ ಓದಿ … Read more

ನಟ ಶಿವರಾಜ್‌ ಕುಮಾರ್‌ಗಾಗಿ ಶಿವಮೊಗ್ಗದಲ್ಲಿ ಪೂಜೆ, ಸಿಗಂದೂರಿನಲ್ಲಿ ಹೋಮ

Special-Pooja-for-Shivaraj-kumar-at-marikamba-temple-and-sigandur

SHIVAMOGGA LIVE NEWS, 24 DECEMBER 2024 ಶಿವಮೊಗ್ಗ : ಶಸ್ತ್ರ ಚಿಕಿತ್ಸೆಗೆ (Operation) ಒಳಗಾಗುತ್ತಿರುವ ನಟ ಶಿವರಾಜ್‌ ಕುಮಾರ್‌ ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ ನೆರವೇರಿದವು. » ಎಂ.‍ಶ್ರೀಕಾಂತ್‌ ಅಭಿಮಾನಿಗಳಿಂದ ಪೂಜೆ ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್‌ ಅಭಿಮಾನಿ ಬಳಗದ ವತಿಯಿಂದ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ. ಶೀಘ್ರ ಗುಣವಾಗಿ. ಅವರಿಗೆ ಆರೋಗ್ಯ, … Read more

ಲಂಚ ಪಡೆದ ತಕ್ಷಣ ಲೋಕಾಯುಕ್ತರು ಪ್ರತ್ಯಕ್ಷ, ಅಧಿಕಾರಿ ಅರೆಸ್ಟ್

Lokayuktha-Raid-General-Image

SHIVAMOGGA LIVE NEWS, 24 DECEMBER 2024 ಶಿವಮೊಗ್ಗ : ಈ ಸ್ವತ್ತು ಮಾಡಿಕೊಡಲು ಲಂಚ ಪಡೆಯುತ್ತಿದ್ದ ವೇಳೆ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸೊರಬ ತಾಲೂಕು ಇಂಡುವಳ್ಳಿ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ಈಶ್ವರಪ್ಪ ರೆಡ್‌ ಹ್ಯಾಂಡ್‌ (Red Hand) ಆಗಿ ಸಿಕ್ಕಿಬಿದ್ದಿದ್ದಾರೆ. ಇಂಡುವಳ್ಳಿ ಗ್ರಾಮದ ಮೊಹಮ್ಮದ್‌ ಗೌಸ್‌ ಅವರ ತಂದೆ ಭಾಷಾ ಸಾಬ್‌ ಅವರ ಹೆಸರಿನಲ್ಲಿ ಜಮೀನಿನ ಈ ಸ್ವತ್ತು ಮಾಡಿಕೊಡಲು ಪಿಡಿಒ ಈಶ್ವರಪ್ಪ 5 ಸಾವಿರ ರೂ. … Read more