ದಿನ ಪಂಚಾಂಗ | 25 ಆಗಸ್ಟ್‌ 2025 | ಇವತ್ತು ಯಾವ್ಯಾವ ಸಮಯ ಹೇಗಿದೆ?

Indina-Panchanga-today Panchanga

ಈ ದಿನದ ಪಂಚಾಂಗ (Panchanga) ವಾರ : ಸೋಮವಾರ, 25 ಆಗಸ್ಟ್‌ 2025 –  ದ್ವಿತೀಯ ಸೂರ್ಯೋದಯ : 6.16 am ಸೂರ್ಯಾಸ್ತ : 6.44 pm ನಕ್ಷತ್ರ : ಉತ್ತರ ಶುಭ ಸಮಯ ಬ್ರಹ್ಮ ಮುಹೂರ್ತ ಬೆಳಗ್ಗೆ 4.43 ರಿಂದ 5.29ರವರೆಗೆ ಪ್ರಾಥಃ ಸಂಧ್ಯ ಬೆಳಗ್ಗೆ 5.06 ರಿಂದ 6.16ರವರೆಗೆ ಅಭಿಜಿತ್‌ ಮಧಾಹ್ನ 12.05 ರಿಂದ 12.55ರವರೆಗೆ ವಿಜಯ ಮುಹೂರ್ತ ಮಧ್ಯಾಹ್ನ 2.34 ರಿಂದ 3.24ರವರಗೆ ಗೋಧೂಳಿ ಮುಹೂರ್ತ ಸಂಜೆ 6.44 ರಿಂದ 7.07ರವರೆಗೆ ರಾಹು, … Read more

ಜೋಗಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಳ, ಜಲಪಾತದ ಮುಂದೆ ಸೆಲ್ಫಿ, ಫೋಟೊಗೆ ಪೋಸ್‌

Tourist-at-Jog-falls-in-shimoga

ಸಾಗರ: ವೀಕೆಂಡ್‌ ಹಿನ್ನೆಲೆ ಜೋಗ ಜಲಪಾತಕ್ಕೆ ಇವತ್ತು ದೊಡ್ಡ ಸಂಖ್ಯೆ ಪ್ರವಾಸಿಗರು (Tourist) ಆಗಮಿಸಿದ್ದರು. ಜಲಪಾತದ ವೈಭವ ಕಣ್ತುಂಬಿಕೊಂಡು ಖುಷಿ ಪಟ್ಟರು. ಲಿಂಗನಮಕ್ಕಿ ಜಲಾಶಯದಿಂದ ಕಳೆದ ವಾರ ನೀರು ಹರಿಸಲಾಗಿತ್ತು. ಹಾಗಾಗಿ ಜೋಗ ಜಲಪಾತದಲ್ಲಿ ರಾಜಾ, ರಾಣಿ, ರೋರರ್‌ ಮತ್ತು ರಾಕೆಟ್‌ ಜಲಪಾತಗಳು ಭೋರ್ಗರೆಯುತ್ತಿದ್ದವು. ಇದರ ವಿಡಿಯೋಗಳು ವೈರಲ್‌ ಆಗಿದ್ದವು. ಇದರ ಬೆನ್ನಿಗೆ ಪ್ರವಾಸಿಗರು ಹೆಚ್ಚಳವಾಗಿದ್ದಾರೆ. ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌ ಜೋಗ ಜಲಪಾತಕ್ಕೆ ಇಂದು ಭಾರಿ ಸಂಖ್ಯೆಯ … Read more

48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರು ಅರೆಸ್ಟ್‌, ಲಕ್ಷ ಲಕ್ಷದ ಚಿನ್ನಾಭರಣ ಸೀಜ್‌, ಎಲ್ಲೆಲ್ಲಿ ಕದ್ದಿದ್ದರು?

Nagara-Police-nab-two-inter-district-thieves

ಹೊಸನಗರ: ಕಳ್ಳತನವಾದ 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು (Thieves) ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಮಗಾರ ಓಣಿಯ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತರು. ಲಕ್ಷ ಲಕ್ಷದ ಚಿನ್ನಾಭರಣ, ನಗದು ಕದ್ದಿದ್ದರು ಹೊಸನಗರದ ನಿಲ್ಸ್‌ಕಲ್‌ ಸಮೀಪದ ಕಬಳೆ ಗ್ರಾಮದ ರಿಚರ್ಡ್‌ ಡಿಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ … Read more

ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌

Linganamakki-Dam-5-gates-opened

ಸಾಗರ: ಲಿಂಗನಮಕ್ಕಿ ಜಲಾಶಯದ (Linganamakki Dam) ಐದು ರೇಡಿಯಲ್‌ ಗೇಟ್‌ಗಳನ್ನು ಇಂದು ಪುನಃ ಮೇಲೆತ್ತಲಾಯಿತು. 3500 ಕ್ಯೂಸೆಕ್‌ ನೀರನ್ನು ಹೊರಬಿಡಲಾಯಿತು. ಸಚಿವ ಮಧು ಬಂಗಾರಪ್ಪ, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕೆ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯೆ ಬಲ್ಕಿಸ್‌ ಬಾನು ರೇಡಿಯಲ್‌ ಗೇಟ್‌ಗಳನ್ನು ಮೇಲೆತ್ತುವ ಸ್ವಿಚ್‌ ಒತ್ತಿದರು. ಜಲಾಶಯದಿಂದ ಕೆಲಕಾಲ ನೀರು ಹೊರಗೆ ಹಾಯಿಸಲಾಯಿತು. ಇವತ್ತು ಲಿಂಗನಮಕ್ಕಿ ಜಲಾಶಯಕ್ಕೆ 12,568 ಕ್ಯೂಸೆಕ್‌ ಒಳ ಹರಿವು ಇತ್ತು. ಒಟ್ಟು 8,612 ಕ್ಯೂಸೆಕ್‌ ನೀರು ಹೊರ ಹರಿವು … Read more

BREAKING NEWS – ಭದ್ರಾವತಿಯಲ್ಲಿ ಶಿಕ್ಷಕಿ ಸೇರಿ ಇಬ್ಬರಿಗೆ ಮರಣದಂಡನೆ, ಏನಿದು ಪ್ರಕರಣ?

Punishment-for-Bhadravathi-Teacher-BDVT-Court.

ಭದ್ರಾವತಿ: ಸರ್ಕಾರಿ ಶಾಲೆ ಶಿಕ್ಷಕರೊಬ್ಬರನ್ನು (Teacher) ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆ ಅವರ ಪತ್ನಿ ಸೇರಿ ಇಬ್ಬರಿಗೆ ಮರಣದಂಡನೆ (Death Sentence) ವಿಧಿಸಿ ಭದ್ರಾವತಿಯ ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ಆದೇಶಿಸಿದೆ. ನಾಲ್ಕನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚಿಟ್ಟಿಯಾರ ಅವರು ಇಂದು ತೀರ್ಪು ಪ್ರಕಟಿಸಿದ್ದಾರೆ. ಏನಿದು ಪ್ರಕರಣ? 2016ರ ಜುಲೈ 7ರಂದು ಜನ್ನಾಪುರದಲ್ಲಿ ಶಿಕ್ಷಕ ಇಮ್ತಿಯಾಜ್‌ ಎಂಬುವವರನ್ನು ಹತ್ಯೆ ಮಾಡಲಾಗಿತ್ತು. ಅವರ ಮೃತದೇಹವನ್ನು ನೈನಾಲ್‌ … Read more

ಶಿವಮೊಗ್ಗ ಸಿಟಿಯ ಡೇಂಜರಸ್‌ ತಿರುವು, ಸ್ವಲ್ಪ ಮೈಮರೆತರೆ ವಾಹನ ಸವಾರರು ಗ್ಯಾರಂಟಿ ಆಸ್ಪತ್ರೆ ಪಾಲು

KEB-circle-Potholes-in-shimoga-city

ಶಿವಮೊಗ್ಗ: ಇದು ಶಿವಮೊಗ್ಗ ಸಿಟಿಯ ಡೇಂಜರಸ್‌ ತಿರುವು. ಇಲ್ಲಿ ಸ್ವಲ್ಪ ಮೈಮರೆತರೆ ಕೈ, ಕಾಲು ಮುರಿದುಕೊಳ್ಳುವುದು ಫಿಕ್ಸ್.‌ (Potholes) ಶಿವಮೊಗ್ಗದ ಕೆ.ಇ.ಬಿ ಸರ್ಕಲ್‌ನಲ್ಲಿರುವ ಈ ತಿರುವಿನಲ್ಲಿ ರಸ್ತೆ ಬಾಯ್ತೆರೆದು ನೆತ್ತರು ಹೀರಿ ದಾಹ ನೀಗಿಸಿಕೊಳ್ಳಲು ಹೊಂಚು ಹಾಕುತ್ತಿದೆ. ತಿರುವಿನಲ್ಲಿ, ಕತ್ತಲಲ್ಲಿ ಅವಿತು ಕುಳಿತಂತಿರುವ ಈ ಗುಂಡಿಗಳು, ದೊಡ್ಡ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.   ನಿತ್ಯ ಸಾವಿರಾರು ವಾಹನ ಸಂಚಾರ ಕೆ.ಇ.ಬಿ ಸರ್ಕಲ್‌ನಿಂದ ಸಂಗೊಳ್ಳಿ ರಾಯಣ್ಣ ವೃತ್ತದ ಕಡೆಗೆ ತೆರಳುವ ಮಾರ್ಗದಲ್ಲಿ ಈ ಗುಂಡಿಗಳಿವೆ. ರೈಲ್ವೆ ನಿಲ್ದಾಣದ … Read more

ಬಾವಿಗೆ ಹಾರಿ ಮಾಜಿ ಯೋಧ ಆತ್ಮಹತ್ಯೆ

KUMSI-NEWS

ಕುಂಸಿ: ಮಾಜಿ ಸೈನಿಕರೊಬ್ಬರು (Former Soldier) ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಸಿ ಸಮೀಪದ ಚಿನ್ಮನೆ ಗ್ರಾಮದ ಮಾಜಿ ಯೋಧ ಡಿ.ಆ‌ರ್.ಸುರೇಶಪ್ಪ ದೊಡ್ಮನೆ (66) ಆತ್ಮಹತ್ಯೆ ಮಾಡಿಕೊಂಡವರು. ಗುರುವಾರ ಬೆಳಗಿನ ಜಾವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಊರಿನಲ್ಲಿ ವ್ಯವಸಾಯದ ಜೊತೆಗೆ ಅಂಗಡಿ ನಡೆಸುತ್ತಿದ್ದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಬೇಸತ್ತು ತನ್ನ ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ ಏನೇನಾಯ್ತು? … Read more

ಶಿವಮೊಗ್ಗದಲ್ಲಿ ಎನ್‌ಸಿಪಿ ಕಲಾ ಸಂಗಮ, ವಿದ್ಯಾರ್ಥಿಗಳಿಗೆ 5 ಪ್ರಮುಖ ಸಲಹೆ ನೀಡಿದ NES ಅಧ್ಯಕ್ಷ

National-Pharmacy-college-programme-in-shimoga

ಶಿವಮೊಗ್ಗ: ನಗರದ ರಾಷ್ಟ್ರೀಯ ಔಷಧ (Pharmacy) ಮಹಾವಿದ್ಯಾಲಯದ ವತಿಯಿಂದ ಅಂಬೇಡ್ಕರ್ ಭವನದಲ್ಲಿ ಎನ್.ಸಿ.ಪಿ ಕಲಾ ಸಂಗಮ- 2025 ಕಾರ್ಯಕ್ರಮ ಆಯೋಜಿಸಲಾಗಿತ್ತು. ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಕಾರ್ಯಕ್ರಮ ಉದ್ಘಾಟಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿದೆ 10 ಸುದ್ದಿಗಳು | 22 ಆಗಸ್ಟ್‌ 2025 ಕಾಲೇಜಿನ ಪ್ರಾಂಶುಪಾಲ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಪೃಥ್ವಿ ಗೌಡ ಮುಖ್ಯ ಅತಿಥಿಯಾಗಿದ್ದರು. Pharmacy college programme

ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಅಸ್ವಸ್ಥರಾಗಿ ಬಿದ್ದ ವ್ಯಕ್ತಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಸಾವು, ಎರಡೂ ಕೈ ಮೇಲಿದೆ ಹಚ್ಚೆ

KSRTC-Bus-Stand-Shivamogga

ಶಿವಮೊಗ್ಗ: KSRTC ಬಸ್‌ ನಿಲ್ದಾಣದಲ್ಲಿ ತೀವ್ರ ಅಸ್ವಸ್ಥರಾಗಿದ್ದ ವ್ಯಕ್ತಿ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ವ್ಯಕ್ತಿಯ ವಾರಸುದಾರರು ಇದ್ದಲ್ಲಿ ದೊಡ್ಡಪೇಟೆ ಪೊಲೀಸ್‌ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆ.13ರಂದು KSRTC ಬಸ್‌ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬರು ಅಸ್ವಸ್ಥರಾಗಿದ್ದರು. ಜನರು ವಿಚಾರಿಸಿದಾಗ ಇಲಿ ಪಾಷಾಣ ಸೇವಿಸಿರುವುದಾಗಿ ತಿಳಿಸಿದ್ದ. ಕೂಡಲೆ ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆ.18ರಂದು ಆ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ » ಗಣಪತಿ ಹಬ್ಬದ ಚಂದಾ ವಿಚಾರವಾಗಿ ನಡುಬೀದಿಯಲ್ಲಿ ಗಲಾಟೆ, ಮೂವರ ವಿರುದ್ಧ ಕೇಸ್‌ … Read more

ಅಡಿಕೆ ಧಾರಣೆ | 22 ಆಗಸ್ಟ್‌ 2025 | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

ADIKE-RATE-SHIVAMOGGA-LIVE-NEWS - Areca Price

ಮಾರುಕಟ್ಟೆ ಮಾಹಿತಿ: ಶಿವಮೊಗ್ಗ ಮಾರುಕಟ್ಟೆಯಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate). ಶಿವಮೊಗ್ಗ ಮಾರುಕಟ್ಟೆ ಗೊರಬಲು 20209 38099 ಬೆಟ್ಟೆ 52500 66099 ರಾಶಿ 50009 60711 ಸರಕು 63000 86600 ‌ಇದನ್ನೂ ಓದಿ » ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿದೆ 10 ಸುದ್ದಿಗಳು | 22 ಆಗಸ್ಟ್‌ 2025 Adike rate