ಶಿವಮೊಗ್ಗವನ್ನು ಗೂಂಡಾ ರಾಜ್ಯ ಅಂದರು ಶಾಸಕ ಈಶ್ವರಪ್ಪ, ಅಷ್ಟಕ್ಕೂ ಶಾಸಕರ ಹೇಳಿಕೆಗೆ ಕಾರಣವೇನು ಗೊತ್ತಾ?

Eshwarappa General Image 1

ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019 ಗಾಂಜಾ, ಮಟ್ಕಾ, ಮರಳು ದಂಧೆ ಕುರಿತು ವಾಗ್ದಾಳಿ ನಡೆಸುವ ಸಂದರ್ಭ, ಶಾಸಕ ಕೆ.ಎಸ್.ಈಶ್ವರಪ್ಪ ಶಿವಮೊಗ್ಗ ಜಿಲ್ಲೆಯನ್ನು ಗೂಂಡಾ ರಾಜ್ಯ ಎಂದು ಆರೋಪಿಸಿದ್ದಾರೆ. ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರು ಈ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. ಇನ್ನು, ತಾವು ಪ್ರತಿನಿಧಿಸುವ ಕ್ಷೇತ್ರದ ಕುರಿತು ಗೂಂಡಾ ರಾಜ್ಯ ಅನ್ನುವುದು ಸರಿಯೇ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಈ ಕುರಿತು ವಿಧಾನ ಮಂಡಲದಲ್ಲೂ ಆಗ್ರಹಿಸಿದ್ದೇವೆ. ರಾಜ್ಯಾದ್ಯಂತ ಇದೇ ಸ್ಥಿತಿ ಇದೆ. … Read more

ಮಂಗನ ಕಾಯಿಲೆ ಆತಂಕದ ಬೆನ್ನಿಗೆ ಹೊಸನಗರದಲ್ಲಿ ಪ್ರತ್ಯಕ್ಷವಾಯ್ತು ಹೆಚ್1ಎನ್1

HOSANAGARA MAP GRAPHICS 1

ಶಿವಮೊಗ್ಗ ಲೈವ್.ಕಾಂ | 23 ಫೆಬ್ರವರಿ 2019 ಮಂಗನ ಕಾಯಿಲೆ ಆತಂಕ ದೂರಾಗುವ ಮೊದಲೇ, ಹೊಸನಗರದಲ್ಲಿ ಹೆಚ್1ಎನ್1 ಮಹಾಮಾರಿ ಪ್ರತ್ಯಕ್ಷವಾಗಿದೆ. ಈಗಾಗಲೇ ಇಬ್ಬರಲ್ಲಿ ಹೆಚ್1ಎನ್1 ಸೋಂಕು ಪತ್ತೆಯಾಗಿದೆ. ಸುಮಾರು 20 ಮಂದಿಗೆ ಸೋಂಕು ತಗುಲಿರುವ ಆತಂಕವಿದೆ. ನಗರ ಹೋಬಳಿಯಲ್ಲಿ ಸೋಂಕು ಪತ್ತೆಯಾಗಿದೆ. ಹಾಗಾಗಿ ತಾಲೂಕು ವೈದ್ಯಾಧಿಕಾರಿಗಳು ನಗರ ಹೋಬಳಿಗೆ ಭೇಟಿ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆಯ ಕುರಿತು ಪರಿಶೀಲನೆ ನಡೆಸಿದ್ದಾರೆ. ‘ಹೆಚ್1ಎನ್1 ಭಯ ಬೇಡ’ ಹಂದಿ ಜ್ವರದ ಹಿನ್ನೆಲೆ, ತಾಲೂಕು ವೈದ್ಯಾಧಿಕಾರಿ ಡಾ.ಸುರೇಶ್ ನೇತೃತ್ವದಲ್ಲಿ, ಮೂಡುಗೊಪ್ಪ … Read more

ಅಧಿಕಾರ ಸ್ವೀಕರಿಸಿದರು ಶಿವಮೊಗ್ಗದ ಮೊದಲ ಮಹಿಳಾ ಎಸ್.ಪಿ, ರೌಡಿಗಳಿಗೆ ಮೊದಲ ದಿನವೇ ಖಡಕ್ ವಾರ್ನಿಂಗ್

ಶಿವಮೊಗ್ಗ ಲೈವ್.ಕಾಂ | 22 ಫೆಬ್ರವರಿ 2019 ಶಿವಮೊಗ್ಗದ ಜಿಲ್ಲಾ ರಕ್ಷಣಾಧಿಕಾರಿಯಾಗಿ ಡಾ.ಅಶ್ವಿನಿ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಅಭಿನವ್ ಖರೆ ಅವರು ಡಾ.ಅಶ್ವಿನಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ಶಿವಮೊಗ್ಗದ ಮೊದಲ ಮಹಿಳೆ ಜಿಲ್ಲಾ ರಕ್ಷಣಾಧಿಕಾರಿಯಾಗಿದ್ದಾರೆ. ಇದಕ್ಕೂ ಮೊದಲು, ನೂತನ ಜಿಲ್ಲಾ ರಕ್ಷಣಾಧಿಕಾರಿ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಕ್ರೈಂ ಕಂಟ್ರೋಲ್ ಮಾಡುವುದೇ ಗುರಿ ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಜಿಲ್ಲಾ ರಕ್ಷಣಾಧಿಕಾರಿ ಡಾ.ಅಶ್ವಿನಿ, … Read more

ಪುನಿತ್ ರಾಜ್’ಕುಮಾರ್ ಸಿನಿಮಾದಲ್ಲಿ ಮಾಡಿದ್ದನ್ನು, ಭದ್ರಾವತಿಯ ಯುವಕ ರಿಯಲ್ ಲೈಫ್’ನಲ್ಲಿ ಮಾಡಿ ತೋರಿಸಿದ

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019 ಪವರ್ ಸ್ಟಾರ್ ಸಿನಿಮಾದಲ್ಲಿ ಮಾಡಿದ್ದನ್ನ, ಭದ್ರಾವತಿ ಯುವಕ, ರಿಯಲ್ ಲೈಫ್’ನಲ್ಲಿ ಮಾಡಿದ್ದಾನೆ. ಈತನ ಕೆಲಸಕ್ಕೆ ಭಾರೀ ಮೆಚ್ಚುಗೆ ಸಿಕ್ಕಿದೆ. ಈ ಹುಡುಗನ ವಿಡಿಯೋ ವೈರಲ್ ಆಗಿದೆ. ಈ ಸುದ್ದಿ ಓದುವ ಮೊದಲು ಪುನಿತ್ ರಾಜ್’ಕುಮಾರ್ ಅವರ ಈ ಹಾಡನ್ನು ಒಮ್ಮೆ ನೋಡಿಬಿಡಿ. ಯಾರೇ ಕೂಗಾಡಲಿ ಸಿನಿಮಾದ ಈ ಹಾಡಿನಲ್ಲಿ, ಪುನಿತ್ ರಾಜ್’ಕುಮಾರ್ ಅವರು ಭಿಕ್ಷುಕನೊಬ್ಬನಿಗೆ ಹೊಸ ರೂಪ ನೀಡ, ನೂತನ ಬದುಕು ಕಲ್ಪಿಸುತ್ತಾರೆ. ಇದು ರೀಲ್ ಸ್ಟೋರಿ. ಆದರೆ … Read more

ಶಿವಮೊಗ್ಗ ಜಿಲ್ಲೆಯ ವಿವಿಧ ಠಾಣೆಯ ಪಿಎಸ್ಐಗಳು ಟ್ರಾನ್ಸ್’ಫರ್, ಯಾರೆಲ್ಲ ವರ್ಗವಾಗಿದ್ದಾರೆ ಗೊತ್ತಾ?

police cap

ಶಿವಮೊಗ್ಗ ಲೈವ್.ಕಾಂ | 20 ಫೆಬ್ರವರಿ 2019 ಲೋಕಸಭೆ ಚುನಾವಣೆ ಹಿನ್ನೆಲೆ, ವಿವಿಧ ಪೊಲೀಸ್ ಠಾಣೆಯ ಸಬ್ ಇನ್ಸ್’ಪೆಕ್ಟರ್’ಗಳ ವರ್ಗಾವಣೆ ಮಾಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ವರ್ಗಾವಣೆ ಮಾಡಲಾಗಿದೆ. ಸ್ವಂತ ಜಿಲ್ಲೆ, ಸ್ವಂತ ಸ್ಥಳ, ಕಳೆದ ಒಂದೇ ಉಪ ವಿಭಾಗದಲ್ಲಿ ಮೂರು ವರ್ಷ ಸೇವೆ ಸಲ್ಲಿಸಿದವರನ್ನು ವರ್ಗಾಯಿಸಬೇಕು ಎಂದು ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಯಾವ್ಯಾವ ಠಾಣೆಯಿಂದ, ಯಾರೆಲ್ಲ ಪಿಎಸ್ಐಗಳ ಟ್ರಾನ್ಸ್’ಫರ್ ಆಗಿದೆ? ಶರಾವತಿ – ಮಹಿಳಾ ಪೊಲೀಸ್ ಠಾಣೆಯಿಂದ ಚಿತ್ರದುರ್ಗದ ಮಹಿಳಾ ಠಾಣೆಗೆ … Read more

ಮಂಗನಕಾಯಿಲೆ ಆತಂಕದಲ್ಲಿರುವ ಸಾಗರದ ಗ್ರಾಮಕ್ಕೆ ಮಿನಿಸ್ಟರ್ ಭೇಟಿ, ಆರೋಗ್ಯ ಇಲಾಖೆ ನಿರ್ಲಕ್ಷ್ಯದ ಬಗ್ಗೆ ಏನಂದ್ರು?

070119 Minister Visit Aralagodu village 1

ಶಿವಮೊಗ್ಗ ಲೈವ್.ಕಾಂ | 07 ಜನವರಿ 2019 ಮಂಗನಕಾಯಿಲೆಯಿಂದ ಆತಂಕಕ್ಕೀಡಾಗಿರುವ ಸಾಗರದ ಅರಳಗೋಡು ಗ್ರಾಮಕ್ಕೆ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಇದೇ ವೇಳೆ,  ಆರೋಗ್ಯ ಇಲಾಖೆಯ ನಿರ್ಲಕ್ಷದ ಕುರಿತು ತನಿಖೆ ನಡೆಸುವುದಾಗಿಯೂ ಭರವಸೆ ನೀಡಿದ್ದಾರೆ. ಎಲ್ಲೆಲ್ಲಿಗೆ ಭೇಟಿ ಕೊಟ್ಟರು ಮಿನಿಸ್ಟರ್? ಸಚಿವ ಶಿವಾನಂದ ಪಾಟೀಲ್ ಅವರು, ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಮಂಗನಕಾಯಿಲೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾದವರ ಆರೋಗ್ಯ ವಿಚಾರಿಸಿದರು. ಬಳಿಕ, ಭಾರಂಗಿ ಹೋಬಳಿಯ ಅರಳಗೋಡು ಗ್ರಾಮಕ್ಕೆ ಭೇಟಿ … Read more

ಭದ್ರಾವತಿಯಲ್ಲಿ ಮಟ್ಕಾ ಜೂಜಾಟದಲ್ಲಿ ತೊಡಗಿದ್ದ ನಾಲ್ವರು ಅರೆಸ್ಟ್, ಹಣ ವಶಕ್ಕೆ

prison hand cuff image

ಶಿವಮೊಗ್ಗ ಲೈವ್.ಕಾಂ | 5 ಜನವರಿ 2019    ಭದ್ರಾವತಿಯ ಕೂಡ್ಲಿಗೆರೆ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಮಟ್ಕಾ ಜೂಜಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧನದ ಸಂದರ್ಭ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೂಡ್ಲಿಗೆರೆಯ ಚಿನ್ನಪ್ಪಯ್ಯ, ಅಶೋಕ್, ತಿಲಕ್’ನಗರದ ಶಿವಣ್ಣ, ಕಾಗದ ನಗರದ ಪ್ರಸನ್ನ ಬಂಧಿತರು. ಇವರಿಂದ 2915 ರೂ. ನಗದು ವಶಕ್ಕೆ ಪಡೆಯಲಾಗಿದೆ. ಸಿಪಿಐ ಯೋಗೇಶ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣಮೂರ್ತಿ, ನಟರಾಜ್, ಯೋಗೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.   ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ … Read more

ಭಗವಾನ್ ಗಡಿಪಾರಿಗೆ ಭದ್ರಾವತಿಯಲ್ಲಿ ಪ್ರತಿಭಟನೆ

ಶಿವಮೊಗ್ಗ ಲೈವ್.ಕಾಂ | 4 ಜನವರಿ 2019    ಹಿಂದೂ ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಎಸ್.ಕೆ.ಭಗವಾನ್ ಅವರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ, ವಿಶ್ವಹಿಂದೂ ಪರಿಷತ್, ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಭಗವಾನ್ ಎಂದು ಹೆಸರಿಟ್ಟುಕೊಂಡು ಅದಕ್ಕೆ ವಿರುದ್ಧವಾಗಿ ಹಿಂದೂ ಧರ್ಮದ  ದೇವರುಗಳ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುತ್ತಿರುವುದನ್ನು ವಿರೋಧಿಸಿದರು. ಇದಕ್ಕೂ ಮೊದಲು, ರಂಗಪ್ಪ ವೃತ್ತದಿಂದ ತಾಲ್ಲೂಕು ಕಚೇರಿವರೆಗೆ ಮೆರವಣಿಗೆಯಲ್ಲಿ ಸಾಗಿದ ಪ್ರತಿಭಟನಾಕಾರರು ತಹಶೀಲ್ದಾರ್ ಅವರಿಗೆ ಮನವಿಸಲ್ಲಿಸಿದರು. ಪ್ರಮುಖರಾದ ಓಂಕಾರಪ್ಪ, ಧರ್ಮಪ್ರಸಾದ್, ಬಿ.ಕೆ.ಶ್ರೀನಾಥ್, ರಾಮಚಂದ್ರ, ಆರ್.ಎಸ್.ಶೋಭ, ಹೇಮಾವತಿ … Read more

‘ರಾಜ್ಯದ ಸಾಲಮನ್ನಾವನ್ನು ಬಿಜೆಪಿಯವರು ಹಳದಿ ಕಣ್ಣಿಂದ ನೋಡೋದನ್ನು ಬಿಡಲಿ’

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ರಾಜ್ಯ ಸರ್ಕಾರದ ಸಾಲಮನ್ನಾ ಯೋಜನೆಯನ್ನು ಬಿಜೆಪಿ ಮುಖಂಡರು ಹಳದಿ ಕಣ್ಣಿನಿಂದ ನೋಡುವುದನ್ನು ಬಿಡಬೇಕು ಅಂತಾ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಎಂ.ಮಂಜುನಾಥಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲಮನ್ನಾ ಯೋಜನೆಯ ಸಂಪೂರ್ಣ ಮಾಹಿತಿಯನ್ನೇ ತಿಳಿಯದೇ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಮುಖಂಡರು, ಹಣವೇ ಬಿಡುಗಡೆಯಾಗಿಲ್ಲ, 800 ರೈತರಿಗಷ್ಟೇ ಸಾಲ ಮನ್ನಾ ಆಗಿದೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಹಾಗಾದರೆ ಕೇಂದ್ರ ಸರ್ಕಾರದಿಂದ ಎಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬುದನ್ನು ಉತ್ತರಿಸಲಿ ಎಂದು ಮಂಜುನಾಥಗೌಡ … Read more

ಸಾಗರದಲ್ಲಿ ಮುಂದುವರೆದ ಮಂಗನ ಕಾಯಿಲೆ ಆತಂಕ, ಮತ್ತೊಬ್ಬ ಶಂಕಿತ ಬಲಿ, ಮಂಗಗಳ ಮೃತದೇಹ ಪತ್ತೆ

030119 Mangana Kayale Monkey Death 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ಸಾಗರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಅಸಹಜ ಸಾವು ಮುಂದುವರೆದಿದ್ದು, ಮಂಗನ ಕಾಯಿಲೆ ಆತಂಕ ಇಮ್ಮಡಿಯಾಗಿದೆ. ಇನ್ನು, ಮಂಗನ ಕಾಯಿಲೆ ಶಂಕಿತರೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಂಚಿಕೈ ಮಂಜುನಾಥ (22) ಮೃತಪಟ್ಟಿದ್ದಾರೆ. ಮಂಜುನಾಥ ಅವರಿಗೆ ತೀವ್ರ ಜ್ವರ ಮತ್ತು ಜಾಂಡೀಸ್ ಇತ್ತು. ಮಂಗನ ಕಾಯಿಲೆ ಶಂಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್’ಗೆ ಕಳುಹಿಸಲಾಗಿದೆ. ಮುಂದುವರೆದ ಮಂಗಗಳ ಸಾವು ಭಾರಂಗಿ ಹೋಬಳಿಯ ಅರಳಗೋಡು … Read more