ಶಿವಮೊಗ್ಗದ ಟ್ರಾಫಿಕ್‌ ಪೊಲೀಸ್‌ ಠಾಣೆಗೆ ನ್ಯಾಯಾಧೀಶರ ದಿಢೀರ್ ಭೇಟಿ, ಕಾರಣವೇನು?

Judge-Santosh-sudden-visit-to-traffic-police-station

ಶಿವಮೊಗ್ಗ: ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಸಂತೋಷ್.ಎಂ.ಎಸ್ ಅವರು ಶಿವಮೊಗ್ಗ ನಗರದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಗೆ ದಿಢೀರ್‌ ಭೇಟಿ ನೀಡಿದರು. ಈ-ಚಲಾನ್ ಮೂಲಕ ವಿಧಿಸಲಾದ ದಂಡದ ಪಾವತಿಯಲ್ಲಿನ ಪ್ರಗತಿ ಪರಿಶೀಲಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 2,00,508 ಪ್ರಕರಣಗಳು ದಾಖಲಾಗಿದ್ದು ಅದರ ದಂಡದ ಒಟ್ಟು ಮೊತ್ತ ₹16,33,91,250. ಈ ಪೈಕಿ ಒಟ್ಟು 1,527 ಈ ಚಲನ್ ಪ್ರಕರಣಗಳು ಮುಕ್ತಾಯಗೊಂಡಿದೆ. ಒಟ್ಟು ₹6,14,750 ದಂಡ ಪಾವತಿ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಇದನ್ನೂ ಓದಿ … Read more

ಶಿವಮೊಗ್ಗದ ಒಂದು ರೈಲ್ವೆ ನಿಲ್ದಾಣ ಸೇರಿ ರಾಜ್ಯದ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರು

Railway-Track-in-Shimoga-station

ಬೆಂಗಳೂರು: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ರೈಲ್ವೆ ನಿಲ್ದಾಣಗಳಿಗೆ ಹೊಸ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಪತ್ರ ಬರೆದಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಶ್ರೀ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಪ್ರಸ್ತಾಪಿಸಿದ್ದಾರೆ. ಸರ್ಕಾರ ಈ ನಿಲ್ದಾಣಗಳಿಗೆ ಸಂತರ … Read more

ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

251025-Woman-rescued-at-Shimoga-Railway-Station.webp

ಶಿವಮೊಗ್ಗ: ಪತಿಯ ಕಿರುಕುಳ ತಾಳದೆ ರಾಜ್ಯ ಬಿಟ್ಟು ಬಂದಿದ್ದ 28 ವರ್ಷದ ಮಹಿಳೆಯೊಬ್ಬರನ್ನು ಶಿವಮೊಗ್ಗದ ರೈಲ್ವೆ (Railway) ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ 28 ವರ್ಷದ ಮಹಿಳೆ, ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅನುಮಾನದ ಮೇರೆಗೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಆಕೆಯ ವಿಚಾರಣೆ ಮಾಡಿದಾಗ ಪತಿಯ ಕಿರುಕುಳದ ಕುರಿತು ಮಾಹಿತಿ ನೀಡಿದ್ದರು. ಮದ್ಯ ಸೇವಿಸಿ ಬಂದು ಪತಿ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ಮನನೊಂದು ಊರು ಬಿಟ್ಟು ಬಂದಿರುವುದಾಗಿ ಆಕೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಕೊನೆಗೂ ಶುರುವಾಯ್ತು ಪ್ರೀ ಪೇಯ್ಡ್‌ ಆಟೋ ಕೌಂಟರ್‌, ಹೇಗಿದೆ ವ್ಯವಸ್ಥೆ?

211025 Prepaid Auto in shimoga railway station.

ಶಿವಮೊಗ್ಗ: ಕೊನೆಗೂ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಪ್ರೀ ಪೇಯ್ಡ್‌ (Pre Paid) ಆಟೋ ವ್ಯವಸ್ಥೆ ಜಾರಿಗೆ ಬಂದಿದೆ. ಯದ್ವ ತದ್ವ ಹಣ ವಸೂಲಿ ಮಾಡುತ್ತಿದ್ದ ಕೆಲವು ಆಟೋ ಚಾಲಕರಿಗೆ ಮೂಗು ದಾರ ಬಿದ್ದಂತಾಗಿದೆ. ಪೊಲೀಸರ ಈ ಕ್ರಮದಿಂದಾಗಿ ಸದ್ಯ ನಾಗರಿಕರು ನಿರಾಳವಾಗಿದ್ದಾರೆ. ಪ್ರೀ ಪೇಯ್ಡ್‌ ಆಟೋ ವ್ಯವಸ್ಥೆಗೆ ಬಹು ವರ್ಷದಿಂದ ಬೇಡಿಕೆ ಇತ್ತು. ಈಗ ಈ ವ್ಯವಸ್ಥೆ ಜಾರಿಗೆ ಬಂದಿದ್ದು ರೈಲ್ವೆ ನಿಲ್ದಾಣದಿಂದ ಹೊರ ಬರುತ್ತಿದ್ದಂತೆ ಪ್ರಯಾಣಿಕರು ಸೀದ ಈ ಕೌಂಟರ್‌ಗಳತ್ತ ಆಗಮಿಸಿ ರಶೀದಿ ಪಡೆದು ಖುಷಿಯಿಂದ … Read more

ಕಾರ್ಮಿಕರಿಗೆ ಹಣ ವರ್ಗಾಯಿಸಲು ಬ್ಯಾಂಕ್‌ ಅಕೌಂಟ್‌ ಪರಿಶೀಲಿಸಿದ ಉದ್ಯಮಿಗೆ ಕಾದಿತ್ತು ಶಾಕ್

Online-Fraud-Case-image

ಶಿವಮೊಗ್ಗ: ಬ್ಯಾಂಕ್‌ ಖಾತೆ (Bank Account) ಹ್ಯಾಕ್‌ ಮಾಡಿ ₹1.95 ಲಕ್ಷ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ. ಈ ಸಂಬಂಧ ಶಿವಮೊಗ್ಗದ ಉದ್ಯಮಿಯೊಬ್ಬರು ಸಿ.ಇ.ಎನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಮಾಚೇನಹಳ್ಳಿಯ ಕಾರ್ಖಾನೆಯೊಂದರ ಕಾರ್ಮಿಕರಿಗೆ ಹಣ ವರ್ಗಾಯಿಸಲು, ಉದ್ಯಮಿ ತಮ್ಮ  ಬ್ಯಾಂಕ್‌ ಖಾತೆಯನ್ನು ಪರಿಶೀಲಿಸಿದಾಗ, ಹಣ ಇಲ್ಲದಿರುವುದು ಗಮನಕ್ಕೆ ಬಂದಿದೆ. ಬ್ಯಾಂಕಿನಲ್ಲಿ ವಿಚಾರಿಸಿದಾಗ ಅ.10ರ ರಾತ್ರಿ ಬ್ಯಾಂಕ್‌ ಖಾತೆಯನ್ನು ಹ್ಯಾಕ್‌ ಮಾಡಿ ಹಣ ವರ್ಗಾವಣೆ ಮಾಡಿಕೊಂಡಿರುವುದು ಗೊತ್ತಾಗಿದೆ. ಈ ಹಿನ್ನಲೆ ಉದ್ಯಮಿ ದೂರು ನೀಡಿದ್ದು ತನಿಖೆ … Read more

ಚಾಕು, ಲಾಂಗ್‌, ವಿಕೆಟ್‌ ಹಿಡಿದು ಭದ್ರಾವತಿಯಲ್ಲಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್‌ ಮೇಲೆ ಪೊಲೀಸ್‌ ದಾಳಿ

New-Town-Police-Station-Bhadravathi

ಭದ್ರಾವತಿ: ಚಾಕು, ಲಾಂಗ್‌, ವಿಕೆಟ್‌ ಹಿಡಿದು ನಡುರಾತ್ರಿ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ್ದ ಗ್ಯಾಂಗ್‌ ಒಂದನ್ನು ಪೊಲೀಸರು ಬಂಧಿಸಿದ್ದಾರೆ. ಭದ್ರಾವತಿಯ ಶಿವರಾಮ ನಗರ ಮತ್ತು ಮಾಚೇನಹಳ್ಳಿ ನಡುವೆ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಅರೆಸ್ಟ್‌ (Arrest) ಮಾಡಿದ್ದಾರೆ. ಲೋಕೇಶ್‌, ಅಕಾಶ್‌, ಸುಂದರ್‌, ಸುಜಿತ್‌, ದಿಲೀಪ್‌ ಬಂಧಿತರು. ರಸ್ತೆಯಲ್ಲಿ ಓಮ್ನಿ ಕಾರು ನಿಲ್ಲಿಸಿಕೊಂಡು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದರು. ಪೊಲೀಸರು ದಾಳಿ ನಡೆಸಿದಾಗ ಐವರು ಪರಾರಿಯಾಗಲು ಯತ್ನಿಸಿದ್ದರು. ಮಜಾ ಮಾಡೋಕೆ ದರೋಡೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಬಾಲಕ, ಬಾಲಕಿ ರಕ್ಷಣೆ, ಏನಿದು ಕೇಸ್‌?

railway-police-rescue-minors.

ಶಿವಮೊಗ್ಗ: ರೈಲ್ವೆ (RAILWAY) ನಿಲ್ದಾಣದಲ್ಲಿ ಇಬ್ಬರು ಅಪ್ರಾಪ್ತರನ್ನು ರೈಲ್ವೆ ಪೊಲೀಸರು ರಕ್ಷಣೆ ಮಾಡಿದ್ದಾರೆ. ನಿಲ್ದಾಣದ 2ನೇ ಪ್ಲಾಟ್‌ಫಾರಂನಲ್ಲಿ 16 ವರ್ಷದ ಬಾಲಕ ಮತ್ತು 17 ವರ್ಷದ ಬಾಲಕಿ ಸುತ್ತಾಡುತ್ತಿದ್ದರು. ಅನುಮಾನದ ಮೇರೆಗೆ ಪ್ರಶ್ನಿಸಿದಾಗ ಇಬ್ಬರು ಸಮರ್ಪಕ ಉತ್ತರ ನೀಡದ ಹಿನ್ನೆಲೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಇಬ್ಬರು ಅಪ್ರಾಪ್ತರನ್ನು ಕೊನೆಗೆ ಮಕ್ಕಳ ರಕ್ಷಣಾ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಇದನ್ನು ಓದಿ » ಸಹ್ಯಾದ್ರಿ ಕಾಲೇಜಿನಲ್ಲಿ ಇಂದಿನಿಂದ ಎರಡು ದಿನ ಕಾರ್ಯಾಗಾರ RAILWAY STATION

ಚನ್ನಪಟ್ಟಣದ ಯುವಕ, ನಾಗಮಂಗಲದಲ್ಲಿ ವಿವಾಹ, ರಿಪ್ಪನ್‌ಪೇಟೆಯಲ್ಲಿ ದಾಖಲಾಯ್ತು ಪ್ರಕರಣ, ಕಾರಣವೇನು?

Police-General-Image

ರಿಪ್ಪನ್‌ಪೇಟೆ: ಅಪ್ರಾಪ್ತಿಯೊಂದಿಗೆ ವಿವಾಹವಾದ (marriage) ಯುವಕನ ವಿರುದ್ಧ ಬಾಲ್ಯವಿವಾಹ ತಡೆ ಕಾಯಿದೆ ಹಾಗೂ ಪೋಕ್ಸ್‌ ಪ್ರಕರಣ ದಾಖಲಾಗಿದೆ. ಚನ್ನಪಟ್ಟಣ ತಾಲೂಕಿನ ಯುವಕ ಶಿವಮೊಗ್ಗ ಜಿಲ್ಲೆಯ ಗ್ರಾಮವೊಂದರ ಬಾಲಕಿಯೊಂದಿಗೆ ನಾಗಮಂಗಲದ ದೇವಸ್ಥಾನದಲ್ಲಿ ಆಗಸ್ಟ್ 29ರಂದು ವಿವಾಹವಾಗಿದ್ದ. ಕಳೆದ ಕೆಲವು ದಿನಗಳಿಂದ ಯುವಕ, ಬಾಲಕಿಯ ಮನೆಯಲ್ಲಿ ವಾಸವಾಗಿದ್ದನು. ಮಾಹಿತಿ ಅರಿತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಶಿವಮೊಗ್ಗದ ಮಹಿಳಾ ಸಾಂತ್ವನ ಕೇಂದ್ರಕ್ಕೆ ತಿಳಿಸಿದ್ದು, ಅಧಿಕಾರಿಗಳ ಸಮಾಲೋಚನೆ ವೇಳೆ ವಿವಾಹವಾಗಿರುವುದು ದೃಢಪಟ್ಟಿದೆ. ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಇನ್‌ಸ್ಟಾಗ್ರಾಂನಲ್ಲಿ ಸಹೋದರಿಯ ಫೋಟೊ ಕಂಡು ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದು ಪ್ರಕರಣ?

Instagram-Cyber-Crime-Shimoga-Station.

ಶಿವಮೊಗ್ಗ: ಮಹಿಳೆಯೊಬ್ಬರ ಫೋಟೊ ಮೇಲೆ ಅಶ್ಲೀಲವಾಗಿ ಬರೆದು ಇನ್‌ಸ್ಟಾಗ್ರಾಂ (Instagram) ಖಾತೆಯೊಂದರಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಗೆ ದೂರು ನೀಡಲಾಗಿದೆ. ಶಿವಮೊಗ್ಗದ ಗೃಹಿಣಿಯ (ಹೆಸರು ಗೌಪ್ಯ) ಸಹೋದರ ಇನ್‌ಸ್ಟಾಗ್ರಂ ನೋಡುತ್ತಿದ್ದಾಗ ಅವರ ಸಹೋದರಿಯ ಫೋಟೊ ಕಾಣಿಸಿದೆ. ಅದರ ಮೇಲೆ ಆಶ್ಲೀಲ ಬರೆವಣಿಗೆ ಇತ್ತು. ಇದನ್ನು ಸಹೋದರಿಗೆ ತೋರಿಸಿದ್ದ. ಹಾಗಾಗಿ, ತನ್ನ ಫೋಟೊವನ್ನು ಕದ್ದು ಅನುಮತಿ ಇಲ್ಲದೆ ಅಪ್ಲೋಡ್‌ ಮಾಡಿದ್ದಲ್ಲದೆ ಅದರ ಮೇಲೆ ಆಶ್ಲೀಲವಾಗಿ ಬರೆಯಲಾಗಿದೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. … Read more

ಪೊಲೀಸ್‌ ಠಾಣೆಯಲ್ಲಿರುವ 47 ದ್ವಿಚಕ್ರ ವಾಹನ ಹರಾಜು, ಯಾವಾಗ? ಯಾರೆಲ್ಲ ಪಾಲ್ಗೊಳ್ಳಬಹುದು?

Tunga-Nagara-Police-Station-Shimoga

ಶಿವಮೊಗ್ಗ: ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ವಾರಸುದಾರರು ಪತ್ತೆಯಾಗದ 47 ದ್ವಿಚಕ್ರ ವಾಹನಗಳ ಹರಾಜು  (Auction) ನಡೆಸಲು ನ್ಯಾಯಾಲಯ ಆದೇಶಿಸಿದೆ. ಆದ್ದರಿಂದ ಮೇ 9ರಂದು ಬೆಳಗ್ಗೆ 9 ಗಂಟೆಗೆ ತುಂಗಾ ನಗರ ಪೊಲೀಸ್‌ ಠಾಣೆ ಆವರಣದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಹರಾಜಿನಲ್ಲಿ ಭಾಗವಹಿಸಬಹುದಾಗಿದೆ ಎಂದು ಇನ್ಸ್‌ಪೆಕ್ಟರ್‌ ಕೆ.ಟಿ.ಗುರುರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಯುವತಿಯ ಫೇಸ್‌ಬುಕ್‌ ರಿಕ್ವೆಸ್ಟ್‌ ಒಪ್ಪಿದ ಶಿವಮೊಗ್ಗದ ಉದ್ಯಮಿಗೆ ಮುಂದೆ ಕಾದಿತ್ತು ಶಾಕ್