ಶಿವಮೊಗ್ಗ ಶೇಷಾದ್ರಿಪುರಂದನಲ್ಲಿ ಮಟಮಟ ಮಧ್ಯಾಹ್ನ ಮನೆಯಿಂದ ಹೊರ ಬಂದ ಚಾಲಕನಿಗೆ ಕಾದಿತ್ತು ಆಘಾತ

Police-Van-Jeep-at-Shimoga-Nehru-Road

SHIVAMOGGA LIVE NEWS | 26 APRIL 2024 SHIMOGA : ನಗರದ ಶೇಷಾದ್ರಿಪುರಂನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಕಳ್ಳತನ ಮಾಡಲಾಗಿದೆ. ಚಾಲಕ ಸಯ್ಯದ್‌ ಜಾಫರ್‌ ಸಾದಿಕ್‌ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ಕಳುವಾಗಿದೆ. ಏ.23ರಂದು ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದ್ದ ಸಯ್ಯದ್‌ ಜಾಫರ್‌ ಸಾದಿಕ್‌, ಬೈಕ್‌ ಆನ್ನು ಮನೆ ಮುಂದೆ ನಿಲ್ಲಿಸಿದ್ದರು. ಮಧ್ಯಾಹ್ನ ಮನೆಯಿಂದ ಹೊರ ಬಂದಾಗ ಬೈಕ್‌ ನಾಪತ್ತೆಯಾಗಿತ್ತು. ಎಲ್ಲೆಡೆ ಹುಡುಕಿದ ಬಳಿಕ ಇ-ಎಫ್‌ಐಆರ್‌ ದಾಖಲಿಸಿದ್ದಾರೆ. ಕೋಟೆ ಠಾಣೆಯಲ್ಲಿ ಪ್ರಕರಣ … Read more

ಗಾಂಧಿ ಬಜಾರ್‌ ಚಿನ್ನದ ಅಂಗಡಿ ಸ್ಟಾಕ್‌ ಚೆಕ್‌ ವೇಳೆ ಮಾಲೀಕನಿಗೆ ಶಾಕ್, ಸಿಸಿಟಿವಿ ಪರಿಶೀಲಿಸಿದಾಗ ಕಾದಿತ್ತು ಆಘಾತ

Kote Police station building

SHIVAMOGGA LIVE NEWS | 24 APRIL 2024 SHIMOGA : ಆಭರಣದ ಅಂಗಡಿಗೆ ಬಂದಿದ್ದ ಇಬ್ಬರು ಮಹಿಳೆಯರು 21 ಗ್ರಾಂ ತೂಕದ ಚಿನ್ನದ ಸರ ಕಳ್ಳತನ ಮಾಡಿದ್ದಾರೆ. ಅಂಗಡಿಯಲ್ಲಿ ಸ್ಟಾಕ್‌ ಚೆಕ್‌ ಮಾಡುವಾಗ ಘಟನೆ ಬೆಳಕಿಗೆ ಬಂದಿದೆ. ಸಿಸಿಟಿವಿ ಪರಿಶೀಲಿಸಿದಾಗ ಮಹಿಳೆಯರು ಚಿನ್ನದ ಸರ ಕಳವು ಮಾಡಿರುವುದು ಸ್ಪಷ್ಟವಾಗಿದೆ. ಸರ ಕೇಳಿದರು, ಮೂಗುತಿ ಖರೀದಿಸಿದರು ಗಾಂಧಿ ಬಜಾರ್‌ನ ಜುವೆಲ್ಲರಿ ಅಂಗಡಿಯೊಂದರಲ್ಲಿ ಚಿನ್ನದ ಸರ ಖರೀದಿಗೆ 60 ವರ್ಷ ಮತ್ತು 30 ವರ್ಷ ವಯಸ್ಸಿನ ಇಬ್ಬರು ಮಹಿಳೆಯರು … Read more

ಭದ್ರಾವತಿಯ ಎರಡು ದೇಗುಲಗಳಲ್ಲಿ ದೇವರ ಆಭರಣ, ಕಾಣಿಕೆ ಹಣ ಕಳ್ಳತನ, ಎಲ್ಲೆಲ್ಲಿ ನಡೆಯಿತು ಘಟನೆ?

Bhadravathi-Rural-Police-Station

SHIVAMOGGA LIVE NEWS | 23 APRIL 2024 BHADRAVATHI : ದೇವಸ್ಥಾನದ ಮುಂಬಾಗಿಲಿನ ಬೀಗ ಒಡೆದು, ಹುಂಡಿ ಹಣ, ದೇವರ ಆಭರಣ ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಬದನೇಹಾಳ್‌ ಗ್ರಾಮದ ಹುಚ್ಚಮ್ಮ ದೇವಸ್ಥಾನ ಮತ್ತು ಬಂಡಿಗುಡ್ಡದ ಮಾರಿಯಮ್ಮ ದೇಗುಲಗಳಲ್ಲಿ ಘಟನೆ ಸಂಭವಿಸಿದೆ. ನಿತ್ಯ ಪೂಜೆಗೆ ಬೆಳಗ್ಗೆ ಅರ್ಚಕ ಕುಮಾರ್‌ ದೇಗುಲಕ್ಕೆ ಬಂದಾಗ ಕಳ್ಳತನ ಗೊತ್ತಾಗಿದೆ. ಎರಡು ದೇಗುಲಗಳಲ್ಲಿ ಸುಮಾರು 20 ಸಾವಿರ ರೂ. ಕಾಣಿಕೆ ಹಣ, ದೇವರ ಅಭರಣಗಳು ಸೇರಿ ಒಟ್ಟು 83,200 ರೂ. ಮೌಲ್ಯದ … Read more

ಪೂಜೆ ಮುಗಿಸಿ ನವುಲೆಯ ಮನೆಗೆ ವಾಪಸಾದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

Police-Van-Jeep-at-Shimoga-Nehru-Road

SHIVAMOGGA LIVE NEWS | 23 APRIL 2024 SHIMOGA : ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಬಾಗಿಲಿನ ಬೀಗ ಮುರಿದು, ಬೀರುವಿನದ್ದ ಚಿನ್ನ, ಬೆಳ್ಳಿ ಆಭರಣ, ನಗದು ಕಳವು ಮಾಡಲಾಗಿದೆ. ಶಿವಮೊಗ್ಗ ನಗರದ ನವುಲೆಯ ಕುರುಬರ ಬೀದಿಯ ರವಿ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ರವಿ, ಅಲಸೆಯಲ್ಲಿ ದೇಗುಲಕ್ಕೆ ತೆರಳಿ, ಆಯನೂರಿನಲ್ಲಿರುವ ಸಹೋದರಿಯ ಮನೆಯಲ್ಲಿ ಉಳಿದು ಮರುದಿನ ಬೆಳಗ್ಗೆ ಮನೆಗೆ ಮರಳಿದಾ ಬಾಗಿಲು ತೆರೆದಂತಿತ್ತು. ಒಳ ಹೋಗಿ ನೋಡಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. 25 ಸಾವಿರ  … Read more

ಶಿವಮೊಗ್ಗದಲ್ಲಿ ಬೆಳಗ್ಗೆ ಅಂಗಡಿ ಬಾಗಿಲು ತೆಗೆದು ಒಳ ಹೋದ ಕೆಲಸಾಗರರಿಗೆ ಕಾದಿತ್ತು ಶಾಕ್

Crime-News-General-Image

SHIVAMOGGA LIVE NEWS | 22 APRIL 2024 SHIMOGA : ರೂಫಿಂಗ್‌ ಶೀಟ್‌ ತೆರೆದು ಅಂಗಡಿಯೊಂದರ ಒಳಗೆ ನುಗ್ಗಿರುವ ಕಳ್ಳರು ಕ್ಯಾಶ್‌ ಬಾಕ್ಸ್‌ನಲ್ಲಿ ಇಟ್ಟಿದ್ದ 2.40 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಾರೆ. ಶಿವಮೊಗ್ಗದ ಗಾರ್ಡನ್‌ ಏರಿಯಾದಲ್ಲಿರುವ ಸೋಲಂಕಿ ಟ್ರೇಡರ್ಸ್‌ನಲ್ಲಿ ಘಟನೆ ಸಂಭವಿಸಿದೆ. ವ್ಯಾಪಾರದ ಹಣ 2.40 ಲಕ್ಷ ರೂ. ಅನ್ನು ಬ್ಯಾಂಕ್‌ಗೆ ಕಟ್ಟಬೇಕಿತ್ತು. ಅದನ್ನು ಎಣಿಸಿ ಏ.19ರ ರಾತ್ರಿ ಕ್ಯಾಶ್‌ ಬಾಕ್ಸ್‌ನಲ್ಲಿ ಇರಿಸಲಾಗಿತ್ತು. ಏ.20ರಂದು ಬೆಳಗ್ಗೆ ಅಂಗಡಿಯಲ್ಲಿ ಕೆಲಸ ಮಾಡುವವರು ಬಾಗಿಲು ತೆಗದಾಗ ಕ್ಯಾಶ್‌ … Read more

ಚಾನಲ್‌ನಲ್ಲಿ ಬಟ್ಟೆ ಒಗೆದು ಮನೆಗೆ ಮರಳಿದ ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

Crime-News-General-Image

SHIVAMOGGA LIVE NEWS | 20 APRIL 2024 HOLEHONNURU : ಮನೆಯಲ್ಲಿದ್ದ ಬೀರು ಒಡೆದು ಚಿನ್ನ, ಬೆಳ್ಳಿ ಆಭರಣ ಮತ್ತು ನಗದು ಕಳ್ಳತನ ಮಾಡಲಾಗಿದೆ. ಭದ್ರಾವತಿ ತಾಲೂಕು ಅರಬಿಳಚಿ ಗ್ರಾಮದ ಮಣಿಮೇಘಲ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಮಣಿಮೇಘಲ ಕೆಲಸಕ್ಕೆ ತೆರಳಿದ್ದರು. ಅವರ ತಾಯಿ ಬಟ್ಟೆ ಒಗೆಯಲು ಸಮೀಪದ ಚಾನಲ್‌ಗೆ ತೆರಳಿದ್ದರು. ಈ ಸಂದರ್ಭ ಮನೆಯ ಬಾಗಿಲು ತೆರೆದು ಒಳ ನುಗ್ಗಿರುವ ಕಳ್ಳರು ಬೀರು ಒಡೆದು 20 ಸಾವಿರ ರೂ. ನಗದು, ಚಿನ್ನದ ತಾಳಿ, ಉಂಗುರ, … Read more

ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಅರ್ಧ ಮಾಂಗಲ್ಯ ಸರ ಅಪಹರಣ, ಘಟನೆ ಸಂಭವಿಸಿದ್ದು ಹೇಗೆ?

Sagara Police Station Building

SHIVAMOGGA LIVE NEWS | 18 APRIL 2024 SAGARA : ನಡೆದು ಹೋಗುತ್ತಿದ್ದ ವೃದ್ಧೆಯೊಬ್ಬರ ಬಳಿ ಬೈಕ್‌ನಲ್ಲಿ ಬಂದ ಅಪರಿಚಿತರು ವಿಳಾಸ ಕೇಳುವಂತೆ ನಟಿಸಿ ಮಾಂಗಲ್ಯ ಸರ ಅಪಹರಿಸಿದ್ದಾರೆ. ಸಾಗರದ ಅಣಲೆಕೊಪ್ಪ ಬಡಾವಣೆಯ ರಾಬಿಯಾ ಮಸೀದಿ ಬಳಿ ಘಟನೆ ನಡೆದಿದೆ. ಅಪರಿಚಿತರು ಶಿರವಾಳ ಗ್ರಾಮದ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದರು. ವಿಳಾಸ ಕೇಳುವ ನೆಪದಲ್ಲಿ ಶಾಂತಮ್ಮ ಎಂಬುವರ ಮಾಂಗಲ್ಯ ಸರ ಕೀಳಲು ಮುಂದಾಗಿದ್ದಾರೆ. ಶಾಂತಮ್ಮ ಪ್ರತಿರೋಧ ವ್ಯಕ್ತಪಡಿಸಿದಾಗ 40 ಗ್ರಾಂ ತೂಕದ ಮಾಂಗಲ್ಯ ಸರದ ಪೈಕಿ 23 ಗ್ರಾಂ … Read more

ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ ತಳ್ಳಿಕೊಂಡು ಹೋದ ಖದೀಮರು

Bike-theft-at-siddaiah-road-in-Shimoga

SHIVAMOGGA LIVE NEWS | 15 APRIL 2024 SHIMOGA : ಮನೆಯೊಂದರ ಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾಗಿದೆ. ಬೆಳಗಿನ ಜಾವ ಬೈಕ್‌ ಅನ್ನು ಕಳ್ಳರು ತಳ್ಳಿಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಶಿವಮೊಗ್ಗದ ಹೆಚ್‌.ಸಿದ್ದಯ್ಯ ರಸ್ತೆಯ ಕೋರಿ ಪುಟ್ಟಪ್ಪನ ಕಾಂಪೌಂಡ್‌ನಲ್ಲಿ ಪ್ರವೀಣ್‌ ಎಂಬುವವರಿಗೆ ಸೇರಿದ ಹೀರೋ ಹೋಂಡಾ ಡ್ರೀಮ್‌ ಯುಗ ಬೈಕ್‌ ಕಳುವಾಗಿದೆ. ಈ ಭಾಗದಲ್ಲಿ ಬೈಕ್‌ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೈಕ್‌ನ ಸುಳಿವು ಸಿಕ್ಕವರು ಮೊಬೈಲ್‌ ನಂಬರ್‌ 9353314090 … Read more

ಬಸ್‌ ಹತ್ತಿ ಕುಟುಂಬದವರಿಗೆ ಕರೆ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ, ಆಗಿದ್ದೇನು?

KSRTC-Bus-General-Image-Shimoga-Bangalore

SHIVAMOGGA LIVE NEWS | 11 APRIL 2024 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪುನಃ ಕಳ್ಳರ ಹಾವಳಿ ಹೆಚ್ಚಾಗಿದೆ. ಬಸ್‌ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ಚಿನ್ನ, ಬೆಳ್ಳಿ ಆಭರಣ, ಮೊಬೈಲ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ದಾವಣಗೆರೆ ಪ್ಲಾಟ್‌ಫಾರಂನಲ್ಲಿ ಘಟನೆ ಸಂಭವಿಸಿದೆ. ಬೆಂಗಳೂರು ನಿವಾಸಿ ಪ್ರತಿಭಾ ಎಂಬುವವರು ತಮ್ಮ ಚಿಕ್ಕಮ್ಮನೊಂದಿಗೆ ಬಸ್‌ ಹತ್ತುವಾಗ ರಶ್‌ ಇತ್ತು. ನೂಕುನುಗ್ಗಲಿನಲ್ಲಿ ಪ್ರತಿಭಾ ಅವರು ಬಸ್‌ ಹತ್ತಿ ಸೀಟಿನಲ್ಲಿ ಕುಳಿತಿದ್ದರು. ಕೆಲ ನಿಮಿಷದ … Read more

ಮನೆ ತಲುಪುವ ಹೊತ್ತಿಗೆ ಎದುರಿಗೆ ಬಂತು ಬೈಕ್‌, LBS ನಗರದಲ್ಲಿ ಕೇಸ್‌, ಮಹಿಳೆಯರೆ ಹುಷಾರ್‌

crime name image

SHIVAMOGGA LIVE NEWS | 9 APRIL 2024 SHIMOGA : ಬೈಕ್‌ ಸವಾರನೊಬ್ಬ ನಡೆದು ಹೋಗುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ ಕಸಿದುಕೊಂಡು ಪರಾರಿಯಾಗಿದ್ದಾನೆ. ಶಿವಮೊಗ್ಗದ ಎಲ್‌ಬಿಎಸ್‌ ನಗರದಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯರಾದ ರೇಣುಕಾ ಅವರು ಗಾಂಧಿ ನಗರದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳುವಾಗ ಘಟನೆ ಸಂಭವಿಸಿದೆ. ರೇಣುಕಾ ಅವರು ಎಲ್‌ಬಿಎಸ್‌ ನಗರ ರಸ್ತೆಯಲ್ಲಿ ರಾತ್ರಿ 9.30ರ ಹೊತ್ತಿಗೆ ನಡೆದು ಹೋಗುತ್ತಿದ್ದಾಗ ಘಟನೆಯಾಗಿದೆ. ಎದುರಿನಿಂದ ಬೈಕ್‌ನಲ್ಲಿ ಬಂದ ಯುವಕನೊಬ್ಬ ಅವರ ಕೈಯಲ್ಲಿದ್ದ ವ್ಯಾನಿಟಿ … Read more