ಶಿವಮೊಗ್ಗದ ಸಿಟಿ ಸೆಂಟರ್ ಮಾಲ್ ಬಳಿ ಬೈಕ್ ನಿಲ್ಲಿಸುವವರೆ ಹುಷಾರ್

bike theft reference image

SHIVAMOGGA LIVE NEWS | 18 FEBRURARY 2023 SHIMOGA : ನಗರದ ಸಿಟಿ ಸೆಂಟರ್ (City Centre) ಮುಂಭಾಗ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನವಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರ್.ಎಂ.ಎಲ್ ನಗರದ ದಾಮೋದರ ಎಂಬುವವರಿಗೆ ಸೇರಿದ ಹೀರೋ ಪ್ಯಾಷನ್ ಬೈಕ್ ಕಳ್ಳತನವಾಗಿದೆ. ದಾಮೋದರ ಅವರು ಫೆ.15ರಂದು ಸಂಜೆ 4.30ರ ಹೊತ್ತಿಗೆ ತಮ್ಮ ಬೈಕನ್ನು ಸಿಟಿ ಸೆಂಟರ್ ಮಾಲ್ ಪಕ್ಕದಲ್ಲಿ ನೆಹರೂ ರಸ್ತೆಯಲ್ಲಿರುವ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದರು. ಮಾಲ್ ಒಳಗೆ ಹೋಗಿ … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಎಟಿಎಂ ಮೆಷಿನ್ ಒಡೆದ ಕಳ್ಳರು

Crime-News-General-Image

SHIVAMOGGA LIVE NEWS | 18 FEBRURARY 2023 SHIMOGA : ನಗರದಲ್ಲಿ ಎಟಿಎಂ ಮೆಷಿನ್ (ATM Theft) ಒಡೆದು ಹಣ ಕಳ್ಳತನಕ್ಕೆ ವಿಫಲ ಯತ್ನ ಮಾಡಲಾಗಿದೆ. ಇದರಿಂದ ಎಟಿಎಂ ಮೆಷಿನ್ ಗೆ ಹಾನಿಯಾಗಿದೆ. ಮಾಚೇನಹಳ್ಳಿ (Machenahalli) ಇಂಡಸ್ಟ್ರಿಯಲ್ ಏರಿಯಾದ ಕೆನರಾ ಬ್ಯಾಂಕ್ ಎಟಿಎಂ ಮೆಷಿನ್ (ATM Theft) ಒಡೆದು ಕಳ್ಳತನಕ್ಕೆ ಪ್ರಯತ್ನಿಸಲಾಗಿದೆ. ಫೆ.15ರ ರಾತ್ರಿ 10 ಗಂಟೆಯಿಂದ ಫೆ.16ರ ಬೆಳಗಿನ ಜಾವ 6 ಗಂಟೆಯೊಳಗೆ ಈ ಕಳ್ಳತನ ಯತ್ನ ನೆಡಸಲಾಗಿದೆ. ಇದನ್ನೂ ಓದಿ – ಅಡಕೆ ವ್ಯಾಪಾರಿ … Read more

ಶಿವಮೊಗ್ಗದಲ್ಲಿ ರಾತ್ರಿ ವಿಶೇಷ ಗಸ್ತು, 10 ಮಂದಿ ಪೊಲೀಸ್ ವಶಕ್ಕೆ, ಕಾರಣವೇನು?

Police-investigate-10-youths-for-public-nuisense

SHIVAMOGGA LIVE NEWS | 14 FEBRUARY 2023 SHIMOGA : ನಗರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವವರ ಮೇಲೆ ಪೊಲೀಸರು ದಾಳಿ (special patrol) ಮುಂದುವರೆಸಿದ್ದಾರೆ. 10 ಮಂದಿಯನ್ನು ಠಾಣೆಗೆ ಎಳೆ ತಂದು ಪ್ರಕರಣ ದಾಖಲಿಸಿದ್ದಾರೆ. ಸಾರ್ವಜನಿಕರ ನೆಮ್ಮದಿ ಕೆಡಿಸುವವರಿಗೆ ಶಾಸ್ತಿ ಮಾಡಲು ಪೊಲೀಸ್ ಇಲಾಖೆ ಏರಿಯಾ ಡಾಮಿನೇಷನ್ ವಿಶೇಷ ಗಸ್ತು (special patrol) ನಡೆಸುತ್ತಿದೆ. ಸೋಮವಾರ ರಾತ್ರಿ ಗಸ್ತು ನಡೆಸಿದ ಪೊಲೀಸರು ನಗರದ ವಿವಿಧೆಡೆ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿ ವಿಚಾರಣೆ … Read more

ಎರಡ್ಮೂರು ದಿನ ಯಾರೂ ಇಲ್ಲದ ಮನೆಗಳೆ ಟಾರ್ಗೆಟ್, ಶಿವಮೊಗ್ಗದಲ್ಲಿ 2 ಮನೆ ಬಾಗಿಲು ಮುರಿದ ಕಳ್ಳರು

crime name image

SHIVAMOGGA LIVE NEWS | 10 FEBRUARY 2023 SHIMOGA : ನಗರದ ಎರಡು ಕಡೆ ಮನೆಗಳ ಬಾಗಿಲ ಬೀಗ ಮುರಿದು (House Theft) ಚಿನ್ನಾಭರಣ, ನಗದು, ಮೊಬೈಲ್ ಕಳ್ಳತನ  ಮಾಡಲಾಗಿದೆ. ಎರಡು ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರೆಗೆ ಹೋದವರಿಗೆ ಬಂತು ಫೋನ್ ಕರೆ ಅಶೋಕ ನಗರ : ಮಂಜಪ್ಪ ಎಂಬುವವರು ಫೆ.6ರಂದು ಕುಟುಂಬ ಸಹಿತ ಜಾತ್ರೆಗೆ ತೆರಳಿದ್ದರು. ಫೆ.9ರ ಮಧ್ಯಾಹ್ನ ಪಕ್ಕದ ಮನೆಯವರು ಕರೆ ಮಾಡಿ ನಿಮ್ಮ ಮನೆಯ ಬಾಗಿಲಿನ ಬೀಗ ಮರಿದಿದ್ದು (House … Read more

ಹಬ್ಬಕ್ಕೆಂದು ಮಾವನ ಮನೆಗೆ ಹೋಗಿದ್ದವರು ಮನೆಗೆ ಮರಳಿದಾಗ ಕಾದಿತ್ತು ಆಘಾತ

Crime-News-General-Image

SHIVAMOGGA LIVE NEWS | 8 FEBRURARY 2023 SHIMOGA : ಮನೆಯವರೆಲ್ಲ ಹಬ್ಬಕ್ಕೆ ಸಂಬಂಧಿಕರ ಮನೆಗೆ ತೆರಳಿದ್ದಾಗ ಮನೆಯ ಬಾಗಿಲ ಬೀಗ ಮುರಿದು ಕಳ್ಳತನ (house theft) ಮಾಡಲಾಗಿದೆ. ಮತ್ತೋಡು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಮಲ್ಲೇಶಪ್ಪ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮಲ್ಲೇಶಪ್ಪ ಅವರ ಮಾವನ ಮನೆಯಲ್ಲಿ ಕಂತೆ ಭಿಕ್ಷೆ ಹಬ್ಬದಲ್ಲಿ ಪಾಲ್ಗೊಳ್ಳಲು ಎಲ್ಲರು ಫೆ.6ರಂದು ಸಂಜೆ ತೆರಳಿದ್ದರು. ಮರುದಿನ ಬೆಳಗ್ಗೆ ಮನೆ ಬಳಿಗೆ ಬಂದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಇದನ್ನೂ ಓದಿ – ಹೆಣ್ಣು ಒಪ್ಪಿಸುವ ಶಾಸ್ತ್ರ … Read more

ಶಿವಮೊಗ್ಗದಲ್ಲಿ ಪಾನಿಪೂರಿ ಅಂಗಡಿಗೆ ಹೋಗಿ ಹಿಂತಿರುಗಿದ ಬೈಕ್ ಮಾಲೀಕನಿಗೆ ಕಾದಿತ್ತು ಆಘಾತ

bike theft reference image

SHIVAMOGGA LIVE NEWS | 3 FEBRUARY 2023 SHIMOGA : ಪಾನಿಪೂರಿ ಸೇವಿಸಿ ಹಿಂತಿರುಗಿ ಬರುವಷ್ಟರಲ್ಲಿ ಬೈಕ್ ಕಳ್ಳತನ (bike theft) ಮಾಡಲಾಗಿದೆ. ಶಿವಮೊಗ್ಗದ ಬಿ.ಹೆಚ್.ರಸ್ತೆಯ ರಾಯಲ್ ಆರ್ಕಿಡ್ ಹೊಟೇಲ್ ಮುಂಭಾಗ ಘಟನೆ ಸಂಭವಿಸಿದೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಬೋಗಸ್ ಕಾರ್ಡ್ ರದ್ಧತಿಗೆ ಅಭಿಯಾನ, ರದ್ದುಗೊಳಿಸದಿದ್ದರೆ ಕಾನೂನು ಕ್ರಮ, ಏನಿದು? ಜ.21ರಂದು ರಾತ್ರಿ ಬೊಮ್ಮನಕಟ್ಟೆ ನಿವಾಸಿ ಹರೀಶ್ ಎಂಬುವವರು ಬಿ.ಹೆಚ್.ರಸ್ತೆಯಲ್ಲಿ ಬೈಕ್ ನಿಲ್ಲಿಸಿ ಪಾನಿಪೂರಿ ಅಂಗಡಿಗೆ ತೆರಳಿದ್ದರು. … Read more

ಶಿವಮೊಗ್ಗ ನಿಲ್ದಾಣದಲ್ಲಿ ನೀರಿನ ಬಾಟಲಿ ಕೊಂಡು ಬಸ್ ಹತ್ತಿದ ವಿದ್ಯಾರ್ಥಿನಿಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIVAMOGGA LIVE NEWS | 19 JANUARY 2023 SHIMOGA | ಬಸ್ಸಿನಿಂದ ಕೆಳಗಿಳಿದು ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಸಿ ಮರಳುವ ಹೊತ್ತಿಗೆ ಪ್ರಯಾಣಿಕರೊಬ್ಬರ ಲ್ಯಾಪ್ ಟಾಪ್ ಕಳ್ಳತನವಾಗಿದೆ. ಶಿವಮೊಗ್ಗದ ಕೆ.ಎಸ್.ಆರ್.ಟಿ.ಸಿ (shimoga ksrtc) ಬಸ್ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ಇಂಜಿನಿಯರಿಂಗ್ ವಿದ್ಯಾರ್ಥಿನಿ ಹುಬ್ಬಳಿ ಮೂಲದ ಧೃತಿ ರೆಡ್ಡಿ ಎಂಬುವವರಿಗೆ ಸೇರಿದ 70 ಸಾವಿರ ರೂ. ಮೌಲ್ಯದ ಲೆನೊವೋ ಲ್ಯಾಪ್ ಟಾಪ್ ಮತ್ತು ಅದರ ಬ್ಯಾಗ್ ಕಳ್ಳತನವಾಗಿದೆ. ಹೇಗಾಯ್ತು ಘಟನೆ? ಧೃತಿ ಅವರು ಶಿವಮೊಗ್ಗದಲ್ಲಿರುವ ತಮ್ಮ ಸ್ನೇಹಿತೆಯ … Read more

ಹಾಡಹಗಲೆ ಜಡೆ ಗ್ರಾಮದ ಮಠದಲ್ಲಿ ಹುಂಡಿ ಕಳ್ಳತನ

soraba anavatti graphics

SHIVAMOGGA LIVE NEWS | 13 JANUARY 2023 SORABA : ತಾಲೂಕಿನ ಜಡೆ ಗ್ರಾಮದ ಶ್ರೀ ಸಿದ್ದ ವೃಷಭೇಂದ್ರ ಸಂಸ್ಥಾನ ಮಠದಲ್ಲಿ (mutt) ಹಾಡ ಹಗಲೆ ಕಾಣಿಕೆ ಹುಂಡಿ ಕಳ್ಳತನವಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಠದ (mutt) ಒಳಗೆ ಶ್ರೀ ಕುಮಾರಪ್ರಭು ಸ್ವಾಮೀಜಿ ಗುದ್ದುಗೆ ಮುಂಭಾಗ ಇದ್ದ ಹುಂಡಿ ಕಳ್ಳತನವಾಗಿದೆ. ಜ.11ರಂದು ಬೆಳಗ್ಗೆ 10.30ಕ್ಕೆ ಮುಖ್ಯ ಅರ್ಚಕ ಗುರುಪಾದಯ್ಯ ಅವರು ಪೂಜೆ ಮುಗಿಸಿ ಮಠದಿಂದ ಮನೆಗೆ ಹೋಗಿದ್ದರು. ಮಧ್ಯಾಹ್ನ ಮಠಕ್ಕೆ … Read more

ಆನವೇರಿಯಿಂದ ಬಸ್ಸಲ್ಲಿ ಬಂದು ಶಿವಮೊಗ್ಗ ಗುರುಪುರದ ಬಳಿ ತನ್ನ ಬ್ಯಾಗ್ ಪರಿಶೀಲಿಸಿದ ವ್ಯಕ್ತಿಗೆ ಆಘಾತ

crime name image

SHIVAMOGGA LIVE NEWS | 13 JANUARY 2023 SHIMOGA : ಬಂಗಾರದ ಆಭರಣಗಳನ್ನು ರಿಪೇರಿ ಮಾಡಿಸಲು ಶಿವಮೊಗ್ಗದ ಗಾಂಧಿ ಬಜಾರ್ ಗೆ ಬಸ್ಸಿನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಬ್ಯಾಗಿನಲ್ಲಿದ್ದ ಎರಡು ಪರ್ಸ್ (purse) ಕಳ್ಳತನವಾಗಿದೆ. ಅವುಗಳಲ್ಲಿ ಇದ್ದ ನಗದು ಮತ್ತು ಆಭರಣ ಕಳುವಾಗಿದೆ ಎಂದು ದೂರಲಾಗಿದೆ. ಭದ್ರಾವತಿ ತಾಲೂಕು ಆನವೇರಿಯ ನಾಗರಾಜ್ ರಾಯ್ಕರ್ ಎಂಬುವವರ ಬ್ಯಾಗಿನಲ್ಲಿದ್ದ ಪಾರ್ಸ್ (purse) ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ನಾಗರಾಜ್ ರಾಯ್ಕರ್ ಅವರ ಗ್ರಾಹಕರು ಕೊಟ್ಟಿದ್ದ ಒಡವೆಗಳನ್ನು ಒಂದು ಪರ್ಸಿನಲ್ಲಿಟ್ಟುಕೊಂಡಿದ್ದರು. ಮತ್ತೊಂದು ಪರ್ಸಿನಲ್ಲಿ … Read more

ಸಂಜೆ ಟಾರ್ಪಲ್ ಮುಚ್ಚಿ, ಬೆಳಗ್ಗೆ ಬಂದು ತೆಗೆದಾಗ ಅಡಕೆ ಬೆಳೆಗಾರನಿಗೆ ಕಾದಿತ್ತು ಶಾಕ್, ಠಾಣೆಗೆ ದೌಡು

Soraba-Police-Station

SHIVAMOGGA LIVE NEWS |10 JANUARY 2023 ಸೊರಬ : ಮನೆಯೊಂದರ ಟೆರೇಸ್ ಮೇಲೆ ಒಣಗಿಸಲು ಹಾಕಿದ್ದ ಅಡಕೆ (adike theft) ಕಳ್ಳತನವಾಗಿದೆ. ಪಟ್ಟಣದ ರಾಜೀವ್ ನಗರದಲ್ಲಿ ಘಟನೆ ಸಂಭವಿಸಿದೆ. ನಡಹಳ್ಳಿ ಗ್ರಾಮದ ರಾಜೀವ್ ಎಂಬುವವರು ತಮ್ಮ ತೋಟದಲ್ಲಿ ಬೆಳೆದ ಅಡಕೆಯನ್ನು (adike theft) ಬೇಯಿಸಿ, ರಾಜೀವ್ ನಗರದ ಮನೆಯ ಟೆರೇಸ್ ಮೇಲೆ ಒಣಗಿಸಿದ್ದರು. ಜ.4ರಂದು ಸಂಜೆ ಅಡಕೆಗೆ ಟಾರ್ಪಲ್ ಮುಚ್ಚಿದ್ದರು. ಮರುದಿನ ಬೆಳಗ್ಗೆ ಬಂದು ಟಾರ್ಪಲ್ ತೆಗೆದಾಗ ಅಡಕೆ ನಾಪತ್ತೆಯಾಗಿತ್ತು. ಇದನ್ನೂ ಓದಿ – ಅಡಕೆ ಧಾರಣೆ … Read more