ಕೂಡ್ಲಿಯಲ್ಲಿ ಸ್ನಾನಕ್ಕೆ ಇಳಿದ ಹೊಳಲ್ಕೆರೆಯ ಯುವಕ ನಾಪತ್ತೆ
HOLEHONNURU NEWS, 3 OCTOBER 2024 : ಕೂಡ್ಲಿಯ ತುಂಗಭದ್ರಾ ಸಂಗಮದಲ್ಲಿ ಸ್ನಾನಕ್ಕೆ (Missing) ಇಳಿದಿದ್ದ ಯುವಕ ಹರ್ಷಿತ್ (23) ನಾಪತ್ತೆಯಾಗಿದ್ದಾನೆ. ಹೊಳಲ್ಕೆರೆಯಿಂದ ಕುಟುಂಬದವರ ಜೊತೆ ಬುಧವಾರ ಕೂಡ್ಲಿ ತುಂಗಾ-ಭದ್ರಾ ಸಂಗಮದಲ್ಲಿ ಮಹಾಲಯ ಅಮಾವಾಸ್ಯೆ ಪೂಜೆ ನೆರವೇರಿಸಲು ಹರ್ಷಿತ್ ಬಂದಿದ್ದ. ಪೂಜೆ ನೆರವೇರಿಸಿ ಸ್ನಾನಕ್ಕೆಂದು ಸಂಗಮಕ್ಕಿಳಿದಾಗ ನೀರಿನಲ್ಲಿ ಮುಳುಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರ ತಂಡ ಸಂಗಮದಲ್ಲಿ ಯುವಕನಿಗಾಗಿ ಶೋಧ ಕಾರ್ಯ ನಡೆಸಿತು. ಸಂಜೆಯಾದರೂ ಯುವಕ ಪತ್ತೆಯಾಗಲಿಲ್ಲ. ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more