ಕುಟುಂಬ ಸಹಿತ ಸಿಎಂ ಫಾರಿನ್ ಟೂರ್, ಶಿವಮೊಗ್ಗದಲ್ಲಿ ಮಾಜಿ ಸಿಎಂ ಗರಂ

Yedyurappa at Vinobhanagara General Image 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ರಾಜ್ಯದ ರೈತರು ಸಂಕಷ್ಟದಲ್ಲಿರುವಾಗ ಮುಖ್ಯಮಂತ್ರಿ ಕುಮಾರಸ್ವಾಮಿ, ಕುಟುಂಬದವರ ಜೊತೆಗೆ ಹೊಸ ವರ್ಷಾಚರಣೆಗೆ ವಿದೇಶಕ್ಕೆ ತೆರಳಿದ್ದಾರೆ ಅಂತಾ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ರಾಜ್ಯದ 150 ತಾಲೂಕುಗಳಲ್ಲಿ ಬರವಿದೆ. ಬರಪೀಡಿತ ಪ್ರದೇಶಗಳಲ್ಲಿ ಬಿಜೆಪಿ ತಂಡ ತೆರಳಿ ವಸ್ತುಸ್ಥಿತಿ ಅಧ್ಯಯನ ಮಾಡಿದೆ. ಈ ತಾಲೂಕಿನ ಜನರ ಬವಣೆ ಕುರಿತು ಪ್ರತಿಪಕ್ಷ ಬಿಜೆಪಿ ಪ್ರಶ್ನೆ ಮಾಡಲು ಶುರು ಮಾಡಿದ ನಂತರ ರಾಜ್ಯ ಸರ್ಕಾರ ಪ್ರತೀ ತಾಲೂಕಿಗೆ … Read more

ಸಾಗರದಲ್ಲಿ ಮುಂದುವರೆದ ಮಂಗನ ಕಾಯಿಲೆ ಆತಂಕ, ಮತ್ತೊಬ್ಬ ಶಂಕಿತ ಬಲಿ, ಮಂಗಗಳ ಮೃತದೇಹ ಪತ್ತೆ

030119 Mangana Kayale Monkey Death 1

ಶಿವಮೊಗ್ಗ ಲೈವ್.ಕಾಂ | 3 ಜನವರಿ 2019 ಸಾಗರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಗಳ ಅಸಹಜ ಸಾವು ಮುಂದುವರೆದಿದ್ದು, ಮಂಗನ ಕಾಯಿಲೆ ಆತಂಕ ಇಮ್ಮಡಿಯಾಗಿದೆ. ಇನ್ನು, ಮಂಗನ ಕಾಯಿಲೆ ಶಂಕಿತರೊಬ್ಬರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕಂಚಿಕೈ ಮಂಜುನಾಥ (22) ಮೃತಪಟ್ಟಿದ್ದಾರೆ. ಮಂಜುನಾಥ ಅವರಿಗೆ ತೀವ್ರ ಜ್ವರ ಮತ್ತು ಜಾಂಡೀಸ್ ಇತ್ತು. ಮಂಗನ ಕಾಯಿಲೆ ಶಂಕೆಯಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅವರ ರಕ್ತದ ಮಾದರಿಯನ್ನು ಪುಣೆಯಲ್ಲಿರುವ ಲ್ಯಾಬ್’ಗೆ ಕಳುಹಿಸಲಾಗಿದೆ. ಮುಂದುವರೆದ ಮಂಗಗಳ ಸಾವು ಭಾರಂಗಿ ಹೋಬಳಿಯ ಅರಳಗೋಡು … Read more

‘ಸಾಲ ಮನ್ನಾ ಹೆಸರಲ್ಲಿ ಸಿಎಂ ಆರು ತಿಂಗಳಿಂದ ಪ್ರಚಾರ ಪಡೀತಿದ್ದಾರೆ, ಆದ್ರೆ ಸಾಲ ಮಾತ್ರ ಮನ್ನಾ ಆಗಿಲ್ಲ’

181218 Yedyurappa at Shivamogga BSY 1

ಶಿವಮೊಗ್ಗ ಲೈವ್.ಕಾಂ | 18 ಡಿಸೆಂಬರ್ 2018 ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಾಲ ಮನ್ನಾ ಅಂತಾ ಹೇಳುತ್ತ, ಆರು ತಿಂಗಳಾಗಿದೆ. ಸಾಲ ಮನ್ನಾ ಹೆಸರಲ್ಲಿ ಪ್ರಚಾರ ಪಡೆಯುತ್ತಿರುವ ಸಿಎಂ, ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ ಅಂತಾ ಯಡಿಯೂರಪ್ಪ ಟೀಕಿಸಿದ್ದಾರೆ. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಆರು ತಿಂಗಳಾದರೂ ರೈತರ ಸಾಲ ಮನ್ನಾ ಆಗಿಲ್ಲ. ಹಾಗಾಗಿ ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಲೇ ಇದೆ. ರಾಷ್ಟ್ರೀಕೃತ ಬ್ಯಾಂಕ್’ಗಳಿಗೆ ಸರ್ಕಾರ, ಸಾಲ ಮನ್ನಾದ ಹಣ ಪಾವತಿ ಮಾಡದೆ ಇದ್ದರೆ ಕ್ಲಿಯರೆನ್ಸ್ … Read more

ಭದ್ರಾವತಿ ಉದ್ಧಾಮ ದೇಗುಲ ಬಳಿ ಚಿರತೆ ಕಾಣಿಸಿದ್ದು ನಿಜವಾ? ವಾಟ್ಸಪ್’ನಲ್ಲಿ ಹರಿದಾಡುತ್ತಿರುವ ಮೆಸೇಜ್ ಸತ್ಯಾನಾ?

ಶಿವಮೊಗ್ಗ ಲೈವ್.ಕಾಂ | 17 ಡಿಸೆಂಬರ್ 2018 ಭದ್ರಾವತಿ ಉದ್ಧಾಮ ಕ್ಷೇತ್ರದ ಬಳಿ ಚಿರತೆ ಕಾಣಿಸಿಕೊಂಡಿದೆ..! ಗಂಗೂರು ರಸ್ತೆಯಲ್ಲಿ ಚಿರತೆ ನೋಡಿ ಬೆಚ್ಚಿಬಿದ್ದ ಜನ..! ಬೈಕ್’ನಲ್ಲಿ ಓಡಾಡುತ್ತಿದ್ದವರು, ಜೀವ ರಕ್ಷಣೆಗಾಗಿ ಮರ ಹತ್ತಿ ತಪ್ಪಿಸಿಕೊಂಡರು..! ಹೀಗಂತಾ ಎರಡು ದಿನದಿಂದ ವಾಟ್ಸಪ್, ಫೇಸ್’ಬುಕ್’ನಲ್ಲಿ ಮೆಸೇಜ್’ಗಳು ಹರಿದಾಡುತ್ತಿವೆ. ಭದ್ರಾವತಿಯ ಗಂಗೂರು ಗ್ರಾಮದ ಉದ್ಧಾಮ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಪ್ರತೀ ದಿನ ಭಕ್ತರು ತಂಡೋಪ ತಂಡವಾಗಿ ಹೋಗಿ ಬರುತ್ತಾರೆ. ದಟ್ಟ ಅರಣ್ಯದ ನಡುವೆ, ಪ್ರಶಾಂತ ವಾತಾವರಣದಲ್ಲಿರುವ ದೇಗುಲದಲ್ಲಿ, ಹುಣ್ಣಿಮೆ ದಿನ ವಿಶೇಷ … Read more

ಮಾಜಿ ಶಾಸಕ ಕರಿಯಣ್ಣ ನಿಧನ, ಇಲ್ಲಿವೆ ಅವರ ಕುರಿತ ಹತ್ತು ಪ್ರಮುಖ ವಿಚಾರಗಳು

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಆರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಶಾಸಕ ಕರಿಯಣ್ಣ (74), ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕರಿಯಣ್ಣ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ನಡುವೆಯೂ ಬಿರುಸಿನ ಪ್ರಚಾರ ಆರೋಗ್ಯದಲ್ಲಿ ಸಮಸ್ಯೆಯಿದ್ದರೂ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ, ಕರಿಯಣ್ಣ, ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಮಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ತಿ ಡಾ.ಶ್ರೀನಿವಾಸ್ ಪರವಾಗಿ ಹಗಲು ರಾತ್ರಿಯನ್ನದೆ ಪ್ರಚಾರ ನಡೆಸಿದ್ದರು. ಆ ಬಳಿಕ ಕರಿಯಣ್ಣ ಹೊರಗೆ ಕಾಣಿಸಿಕೊಂಡಿದ್ದು ವಿರಳ. ಮಾಜಿ … Read more

ಮತ್ತೊಂದು ಸುತ್ತಿನ ಪಾದಯಾತ್ರೆಗೆ ಕಿಮ್ಮನೆ ರತ್ನಾಕರ್ ಸಜ್ಜು, ಎಲ್ಲಿಂದೆಲ್ಲಿಗೆ ಪಾದಯಾತ್ರೆ? ಕಾರಣವೇನು?

ಶಿವಮೊಗ್ಗ ಲೈವ್.ಕಾಂ | 13 ಡಿಸೆಂಬರ್ 2018 ಶಾಸಕ ಆರಗ ಜ್ಞಾನೇಂದ್ರ ಅವರ ಹಗರಣಗ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ. ಇದಕ್ಕೂ ಮೊದಲು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆಗಳನ್ನು ನಡೆಸುವುದಾಗಿಯೂ ಅವರು ಸ್ಪಷ್ಟಪಡಿಸಿದ್ದಾರೆ. ಏನೆಲ್ಲ ಹಗರಣಗಳಾಗಿವೆ? ಪಟ್ಟಿ ಬಿಡುಗಡೆ ಯಾವಾಗ? ಆರಗ ಜ್ಞಾನೇಂದ್ರ ಕ್ಷೇತ್ರದ ಶಾಸಕರಾಗುವ ಬದಲು ಬಿಜೆಪಿ ಶಾಸಕರಾಗಿದ್ದಾರೆ. ಅವರು ಶಾಸಕರಾದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಶಾಸಕರ ಬೆಂಬಲಿಗರೇ ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಬಿಜೆಪಿ ತಾ.ಪಂ ಸದಸ್ಯರೊಬ್ಬರು ಪ್ರತೀ … Read more

ನಾಲ್ಕನೇ ದಿನವೂ ಶಿವಮೊಗ್ಗದಲ್ಲಿ ಮುಂದುವರೆದ ಆಪರೇಷನ್ ಸೆಲ್ಲರ್, ಎಲ್ಲೆಲ್ಲಿ ಕಾರ್ಯಾಚರಣೆ ನಡೆಯಿತು? ಇವತ್ತು ಏನೇನಾಯ್ತು?

ಶಿವಮೊಗ್ಗ ಲೈವ್.ಕಾಂ | 11 ಡಿಸೆಂಬರ್ 2018 ಸೆಲ್ಲರ್ ತೆರವು ಕಾರ್ಯಾಚರಣೆ ನಾಲ್ಕನೇ ದಿನಕ್ಕೂ ಮುಂದುವರೆದಿದೆ. ಶಿವಮೊಗ್ಗ ಸಿಟಿಯಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಿಸುವ ಸಲುವಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾಲಿಕೆಯ ಉಪ ಆಯುಕ್ತೆ ಡಾ.ಸಹನಾ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇವತ್ತು ಬೆಳಗ್ಗೆಯಿಂದ, ಜ್ಯೂವೆಲ್ ರಾಕ್ ಹೊಟೇಲ್ ರಸ್ತೆಯಲ್ಲಿ ಆಪರೇಷನ್ ನಡೆಸಲಾಯಿತು. ಸೂರ್ಯ ಕಂಫರ್ಟ್, ಅನ್ಮೋಲ್ ಹೊಟೇಲ್, ಕುವೆಂಪು ರಸ್ತೆಯ ಕಾಂಪ್ಲೆಕ್ಸ್, ಗೋಪಾಳದ ನೂರು ಅಡಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಯಿತು. ಇನ್ನು, ಸಾಯಿ ಪ್ಯಾಲೇಸ್ ಮುಂಭಾಗ, ರಸ್ತೆಯ ಮೇಲೆ … Read more

ಬಸ್ಸಲ್ಲಿ ಪಾಲಿಕೆಗೆ ಬಂದು ಕಾರಲ್ಲಿ ಮನೆಗೆ ಹಿಂತಿರುಗಿದ್ರು..! ಅಧಿಕಾರ ಸಿಕ್ಕರೂ ಹತ್ತು ನಿಮಿಷ ಎಣಿಸಿ ಕುರ್ಚಿ ಏರಿದರು..!

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆ ಅನೇಕ ಸ್ವಾರಸ್ಯಕರ ಮತ್ತು ಕೂತಹಲಕಾರಿ ಸಂಗತಿಗಳಿಗೆ ಸಾಕ್ಷಿಯಾಯ್ತು. ಬಸ್ಸಲ್ಲಿ ಬಂದಿಳಿದ ಬಿಜೆಪಿ ಸದಸ್ಯರು ಪಾಲಿಕೆಯ ಬಿಜೆಪಿ ಸದಸ್ಯರು ಬಿಜೆಪಿ ಕಚೇರಿಯಿಂದ ಪಾಲಿಕೆವರೆಗೂ ಪ್ರತ್ಯೇಕ ಬಸ್’ನಲ್ಲಿ ಬಂದರು. ಬಸ್ಸಿನಿಂದ ಬಂದಿಳಿಯುತ್ತಿದ್ದಂತೆ ಘೋಷಣೆಗಳನ್ನು ಕೂಗಿ, ಸಭಾಂಗಣ ಪ್ರವೇಶಿದರು. ಆದರೆ ಚನ್ನಬಸಪ್ಪ ಅವರು ಪ್ರತ್ಯೇಕವಾಗಿ ಕಾರಿನಲ್ಲಿ ಬಂದರು. ‘ಹೆಣ್ಮಗಳಿಗೆ ಅನ್ಯಾಯ ಮಾಡಬೇಡಿ’ ಚುನಾವಣೆ ಸಂದರ್ಭ ಕಾಂಗ್ರೆಸ್ ಅಭ್ಯರ್ಥಿ ಮಂಜುಳಾ ಶಿವಣ್ಣ ವಿರುದ್ಧವಾಗಿ ಯಾರೆಲ್ಲ ಮತ … Read more

ಬಿಜೆಪಿ ಮಡಿಲಿಗೆ ಶಿವಮೊಗ್ಗ ಪಾಲಿಕೆ ಮೇಯರ್, ಉಪಮೇಯರ್, ಯಾರಿಗೆಷ್ಟು ಓಟ್ ಬಂತು ಗೊತ್ತಾ?

281118 Mayor Election Shivamogga 1

ಶಿವಮೊಗ್ಗ ಲೈವ್.ಕಾಂ | 28 ನವೆಂಬರ್ 2018 ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಲತಾ ಗಣೇಶ್ ಅವರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಎಸ್.ಎನ್.ಚನ್ನಬಸಪ್ಪ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. PHOTO | ನೂತನ ಮೇಯರ್, ಉಪಮೇಯರ್’ಗೆ ಅಭಿನಂದನೆ ಸಲ್ಲಿಸಿದ ಶಾಸಕ ಈಶ್ವರಪ್ಪ ಕುತೂಹಲ ಮೂಡಿಸಿದ ಕಾಂಗ್ರೆಸ್, ಜೆಡಿಎಸ್ ನಡೆ ಸಂಖ್ಯಾಬಲ ಇಲ್ಲದಿದ್ದರೂ ಕಡೇ ಕ್ಷಣದಲ್ಲಿ ಕಾಂಗ್ರೆಸ್ ಪಕ್ಷ, ಮೇಯರ್, ಉಪಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿತ್ತು. ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಪಕ್ಷ ಬೆಂಬಲ ಘೋಷಿಸಿತ್ತು. … Read more