ಜೋಕಾಲಿಯ ಸೀರೆ ಕೊರಳಿಗೆ ಸುತ್ತಿಕೊಂಡು ಉಸಿರುಗಟ್ಟಿ ಬಾಲಕ ಸಾವು

HIVAMOGGA-NEWS- map

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 ಜುಲೈ 2021 ಮಕ್ಕಳ ಆಟಕ್ಕಾಗಿ ಕಟ್ಟಿದ್ದ ಜೋಕಾಲಿಯ ಸೀರೆ ಕೊರಳಿಗೆ ಸುತ್ತಿಕೊಂಡ ಪರಿಣಾಮ ಬಾಲಕನೊಬ್ಬ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕಿಶೋರ್ (13) ಮೃತ ಬಾಲಕ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯ ಮನೆಯೊಂದರಲ್ಲಿ ಘಟನೆ ಸಂಭವಿಸಿದೆ. ಕಿಶೋರ್, ಮೂಲತಃ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದೊಡ್ಡೇರಿ ಗ್ರಾಮದವನು. ಹಾಡೋನಹಳ್ಳಿಯ ದೊಡ್ಡಮ್ಮ ಜಯಮ್ಮ ಎಂಬುವರ ಮನೆಯಲ್ಲಿದ್ದುಕೊಂಡು ಕಿಶೋರ್‌ ವಿದ್ಯಾಭ್ಯಾಸ ಮಾಡುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಸಣ್ಣ ಮಗುವಿಗಾಗಿ ಕಟ್ಟಿದ ಸೀರೆಯಲ್ಲಿ ಜೋಕಾಲಿ … Read more

ಹೊಳೆಹೊನ್ನೂರು ರಸ್ತೆ ಬಳಿ ಭದ್ರಾವತಿ ಹಳೆ ನಗರ ಠಾಣೆ ಪೊಲೀಸರಿಂದ ದಾಳಿ, ಸಿಕ್ಕಿಬಿದ್ದರು ಆರು ಮಂದಿ

Bhadravathi Name Graphics

ಶಿವಮೊಗ್ಗ ಲೈವ್.ಕಾಂ | SHIMOGA NEWS | 16 ಜುಲೈ 2021 ಹೊಳೆಹೊನ್ನೂರು ರಸ್ತೆ ಬಳಿ ದ್ವಿಚಕ್ರ ವಾಹನಗಳಲ್ಲಿ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿದ್ದ ಯುವಕರ ತಂಡದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಹಳೆ ನಗರ ಠಾಣೆ ವ್ಯಾಪ್ತಿಯ ಹಳೆಸೀಗೆಬಾಗಿ ಬಳಿ ದಾಳಿ ನಡೆಸಿದ ಪೊಲೀಸರು ಭದ್ರಾವತಿ ಹೊಸಮನೆಯ ದಕ್ಷಿಣಾ ಮೂರ್ತಿ (37), ಸುದೀಪ್ (30), ವಿಜಯನಗರದ ಡ್ಯಾನಿಯಲ್ (25), ಸಂತೆ ಮೈದಾನದ ಕಿರಣ್ (23), ಜನ್ನಾಪುರದ ಪವನ್‍ ಕುಮಾರ್ (25), ಹೊಸ ಕೋಡಿಹಳ್ಳಿಯ ನವೀನ್ ಕುಮಾರ್ … Read more

ಭದ್ರಾ ಎಡ, ಬಲ ದಂಡೆ ನಾಲೆಗಳಲ್ಲಿ ನೀರು ಹರಿಸಲು ದಿನಾಂಕ ಫಿಕ್ಸ್

Bhadra-Dam-No-Water

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021 ಮುಂಗಾರು ಹಂಗಾಮಿನ ಬೆಳೆಗಳಿಗೆ ಭದ್ರಾ ಜಲಾಶಯದ ಎಡೆ ಮತ್ತು ಬಲ ದಂಡೆ ನಾಲೆಗಳಿಗೆ ಜುಲೈ 23ರಿಂದ ನೀರು ಹರಿಸಲು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ತಿಳಿಸಿದರು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಕಚೇರಿ ಸಭಾಂಗಣದಲ್ಲಿ ನಡೆದ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಪವಿತ್ರಾ ರಾಮಯ್ಯ, ಜುಲೈ 23ರ ಮಧ್ಯರಾತ್ರಿಯಿಂದ 120 ದಿನಗಳ ಕಾಲ ಎಡ, ಬಲ ದಂಡೆ … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಜೋರು, ಹೊಸನಗರದಲ್ಲಿ ಅತ್ಯಧಿಕ, ತೀರ್ಥಹಳ್ಳಿ, ಸಾಗರದಲ್ಲೂ ವರ್ಷಧಾರೆ ಅಬ್ಬರ

170621 Rain At Agumbe Thirthahalli 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021 ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆ ಜೋರಾಗಿದೆ. ಹೊಸನಗರ ತಾಲೂಕಿನಲ್ಲಿ ದಾಖಲೆ ಪ್ರಮಾಣದ ಮಳೆ ಸುರಿಯುತ್ತಿದೆ. ಇದರಿಂದಾಗಿ ಜಿಲ್ಲೆಯ ಹಳ್ಳ ಕೊಳ್ಳಗಳಿಗೆ ನೀರಿನ ಹರಿವು ಹೆಚ್ಚಳವಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 59.31 ಮಿ.ಮೀ ಮಳೆಯಾಗಿದೆ. ಈ ತಿಂಗಳಲ್ಲಿ ಇದು ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಶಿವಮೊಗ್ಗ ತಾಲೂಕಿನಲ್ಲಿ 18 ಮಿ.ಮೀ, ಭದ್ರಾವತಿಯಲ್ಲಿ 48.20 ಮಿ.ಮೀ, ತೀರ್ಥಹಳ್ಳಿ 79.60 ಮಿ.ಮೀ, ಸಾಗರದಲ್ಲಿ 70.80 ಮಿ.ಮೀ, … Read more

ಅರಸಾಳು ಮಾಲ್ಗುಡಿ ಮ್ಯೂಸಿಯಂ, ರೈಲ್ವೆ ಇಲಾಖೆಯಿಂದ ಶಂಕರ್ ನಾಗ್ ಆಪ್ತನಿಗೆ ಶಾಕ್, ಏನದು? | VIDEO NEWS

070721 Malgudi Museum At Arasalu Railway Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಜುಲೈ 2021 ಶಿವಮೊಗ್ಗದ ಪ್ರಮುಖ ಆಕರ್ಷಣೆಗಳಲ್ಲಿ ಮಾಲ್ಗುಡಿ ಮ್ಯೂಸಿಯಂ ಸೇರಿಕೊಂಡಿದೆ. ಪ್ರವಾಸಿಗರ ಪಾಲಿಗೆ ಮತ್ತೊಂದು ಚಿತ್ತಾಕರ್ಷಣೆಯ ಸ್ಥಳ. ಈ ಅದ್ಭುತ ಲೋಕ ಸೃಷ್ಟಿಸಿದ, ಶಂಕರ್‍ ನಾಗ್‍ ಆಪ್ತ, ಕಲಾವಿದ ಜಾನ್ ದೇವರಾಜ್ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈಲ್ವೆ ಇಲಾಖೆಯ ಕಚೇರಿಗಳನ್ನು ಅಲೆದರೂ, ಮನವಿ ಮಾಡಿದರೂ ಬಾಕಿ ಹಣ ಕೈಸೇರಿಲ್ಲ. ಏನಿದು ಬಾಕಿ ಹಣ? ಶಿವಮೊಗ್ಗದ ಅರಸಾಳು ಗ್ರಾಮದಲ್ಲಿರುವ ರೈಲ್ವೆ ನಿಲ್ದಾಣದ ಆವರಣದಲ್ಲಿ ಮಾಲ್ಗುಡಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಮಾಲ್ಗುಡಿ … Read more

ಚಂದ್ರಗುತ್ತಿಯಲ್ಲಿ ಮುಜರಾಯಿ ಇಲಾಖೆ ಆಡಳಿತ ಕಟ್ಟಡ ಉದ್ಘಾಟನೆ, ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸಲು ಪ್ಲಾನ್

ಶಿವಮೊಗ್ಗ ಲೈವ್.ಕಾಂ | 15 ಡಿಸೆಂಬರ್ 2018 ಚಂದ್ರಗುತ್ತಿಯಲ್ಲಿನಿರ್ಮಿಸಿರುವ ಮುಜರಾಯಿ ಇಲಾಖೆಯ ಆಡಳಿತ ಕಟ್ಟಡವನ್ನು ಶಾಸಕ ಕುಮಾರ್ ಬಂಗಾರಪ್ಪ ಇವತ್ತು ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ಚಂದ್ರಗುತ್ತಿಗೆ ಸೌಕರ್ಯ ಒದಗಿಸುವ ಮೂಲಕ ಸುಸಜ್ಜಿತ ಪ್ರವಾಸಿ ತಾಣವಾಗಿ ರೂಪಿಸುವುದಾಗಿಭರವಸೆ ನೀಡಿದರು.  ಹಬ್ಬ ಮತ್ತು ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಅವರಿಗೆಮೂಲ ಸೌಕರ್ಯದ ಅಗತ್ಯವಿದೆ. ಮೊದಲ ಹಂತದಲ್ಲಿ ಮುಜರಾಯಿತ ಇಲಾಖೆ ಯಾತ್ರಿ ನಿವಾಸ, ಆಡಳಿತ ಕಚೇರಿ, ಕಲ್ಯಾಣಮಂಟಪ, ಮಳಿಗೆಗಳು ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದರು. ಶಿವಮೊಗ್ಗ … Read more

ಮಾಜಿ ಶಾಸಕ ಕರಿಯಣ್ಣ ನಿಧನ, ಇಲ್ಲಿವೆ ಅವರ ಕುರಿತ ಹತ್ತು ಪ್ರಮುಖ ವಿಚಾರಗಳು

ಶಿವಮೊಗ್ಗ ಲೈವ್.ಕಾಂ | 14 ಡಿಸೆಂಬರ್ 2018 ಆರು ತಿಂಗಳಿಂದ ಅನಾರೋಗ್ಯಕ್ಕೀಡಾಗಿದ್ದ ಮಾಜಿ ಶಾಸಕ ಕರಿಯಣ್ಣ (74), ಇವತ್ತು ಬೆಳಗ್ಗೆ ನಿಧನರಾಗಿದ್ದಾರೆ. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಕರಿಯಣ್ಣ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದ ನಡುವೆಯೂ ಬಿರುಸಿನ ಪ್ರಚಾರ ಆರೋಗ್ಯದಲ್ಲಿ ಸಮಸ್ಯೆಯಿದ್ದರೂ, ಕಳೆದ ವಿಧಾನಸಭೆ ಚುನಾವಣೆ ಸಂದರ್ಭ, ಕರಿಯಣ್ಣ, ಬಿರುಸಿನ ಪ್ರಚಾರ ನಡೆಸಿದ್ದರು. ತಮ್ಮ ಮಗ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಅಭ್ಯರ್ತಿ ಡಾ.ಶ್ರೀನಿವಾಸ್ ಪರವಾಗಿ ಹಗಲು ರಾತ್ರಿಯನ್ನದೆ ಪ್ರಚಾರ ನಡೆಸಿದ್ದರು. ಆ ಬಳಿಕ ಕರಿಯಣ್ಣ ಹೊರಗೆ ಕಾಣಿಸಿಕೊಂಡಿದ್ದು ವಿರಳ. ಮಾಜಿ … Read more