ಕೆರೆಗೆ ಉರುಳಿದ ಕಾರು, ತ್ಯಾಗರ್ತಿಯ ಮಹಿಳೆ ಸಾವು, ಜೀವದ ಹಂಗು ತೊರೆದು ಇಬ್ಬರನ್ನು ರಕ್ಷಿಸಿದ ಸ್ಥಳೀಯರು

Car-drowned-in-a-lake-near-ripponpete

ರಿಪ್ಪನ್‌ಪೇಟೆ: ಚಾಲಕನ ನಿಯಂತ್ರಣ ತಪ್ಪಿದ ಕಾರು (CAR) ಕೆರೆಗೆ ಉರುಳಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ರಿಪ್ಪನ್‌ಪೇಟೆಯ ಚಿಪ್ಪಿಗರ ಕೆರೆಗೆ ಇವತ್ತು ಕಾರು ಉರುಳಿದೆ. ಕಾರಿನಲ್ಲಿದ್ದ ತ್ಯಾಗರ್ತಿಯ ಪಾರ್ವತಮ್ಮ (65) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕ ಮತ್ತು ಯುವತಿಯನ್ನು ರಕ್ಷಿಸಲಾಗಿದೆ. ಅಮ್ಮನಘಟ್ಟದಿಂದ ವಾಪಸ್‌ ಬರುತ್ತಿದ್ದರು ಕಾರಿನಲ್ಲಿದ್ದವರು ಅಮ್ಮನಘಟ್ಟದಿಂದ ತ್ಯಾಗರ್ತಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಚಿಪ್ಪಗರ ಕೆರೆ ಬಳಿ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳೀಯರಾದ ಗಿರೀಶ್ , ಇಮ್ರಾನ್ ಹಾಗೂ … Read more

ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಪುತ್ರಿ ಡಾ.ರಾಜನಂದಿನಿಗೆ ಕೊಲೆ ಬೆದರಿಕೆ, ಏನಿದು ಪ್ರಕರಣ?

Dr-Rajanandini-Kagodu-Sagara.

SHIVAMOGGA LIVE NEWS | THREAT | 04 ಮೇ 2022 ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಪುತ್ರಿ ಡಾ.ರಾಜನಂದಿನಿ ಅವರಿಗೆ ಕೊಲೆ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಾಗರ ತಾಲೂಕು ತ್ಯಾಗರ್ತಿ ಗ್ರಾಮದ ಮಾರಿಗುಡಿ ಸಮೀಪ ಡಾ.ರಾಜನಂದಿನಿ ಅವರ ಕಾರು ಅಡ್ಡಗಟ್ಟಿ ಬೆದರಿಕೆ ಒಡ್ಡಲಾಗಿದೆ. ಈ ಸಂಬಂಧ ಅವರ ಕಾರು ಚಾಲಕ ಪ್ರಕಾಶ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆದರಿಕೆ ಒಡ್ಡಿದ್ದು ಯಾರು? ಕಾಗೋಡು ತಿಮ್ಮಪ್ಪ ಫೌಂಡೇಶನ್ … Read more

ತ್ಯಾಗರ್ತಿ ಮಾರ್ಗವಾಗಿ ಆನಂದಪುರಕ್ಕೆ ತೆರಳುತ್ತಿದ್ದ ಬೈಕ್’ಗೆ ವಾಹನ ಡಿಕ್ಕಿ

sagara graphics

SHIVAMOGGA LIVE NEWS | 2 ಮಾರ್ಚ್ 2022 ಬೈಕ್’ನಲ್ಲಿ ತೆರಳುತ್ತಿದ್ದವರೆಗೆ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಲ್ಲುಕೊಪ್ಪ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಶಿವರಾಜ್ ಮತ್ತು ಮಹೇಂದ್ರ ಅವರು ಗಾಯಗೊಂಡಿದ್ದಾರೆ. ಸೊರಬದ ಬೆಲವಂತಕೊಪ್ಪದಿಂದ ತ್ಯಾಗರ್ತಿ ಮಾರ್ಗವಾಗಿ ಆನಂದಪುರದ ಕಡೆಗೆ ತರಳುತ್ತಿದ್ದಾಗ ಎದುರಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಶಿವರಾಜ್ ಮತ್ತು ಮಹೇಂದ್ರ ಗಾಯಗೊಂಡಿದ್ದು, ಸ್ಥಳೀಯರು, ಇತರೆ ವಾಹನ ಸವಾರರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ರಾತ್ರಿ ಘಟನೆ … Read more

ತ್ಯಾಗರ್ತಿಯಲ್ಲಿ ಡೆಂಘೆ ಕಂಟ್ರೋಲ್ಗೆ ಕರಪತ್ರ ಜಾಗೃತಿ, ಸ್ಕೂಲ್ಗೆ ಸ್ಯಾನಿಟೈಸ್ ಮಾಡಲು ಕ್ರಮ

tyagarthi sagara graphics

ಶಿವಮೊಗ್ಗ ಲೈವ್.ಕಾಂ | TYAGARTHI NEWS | 25 JUNE 2021 ಸಾಗರ ತಾಲೂಕಿನಲ್ಲಿ ಡೆಂಘೆ ಜ್ವರದ ಭೀತಿ ಹೆಚ್ಚಾಗಿದೆ. ಗ್ರಾಮದಲ್ಲಿ ಡೆಂಘೆ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ತ್ಯಾಗರ್ತಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಇಸಾಕ್ ತಿಳಿಸಿದ್ದಾರೆ. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಕರೋನ ಕಾರ್ಯಪಡೆ ಮತ್ತು ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಉಪಾಧ್ಯಕ್ಷ ಇಸಾಕ್‍, ಡೆಂಘೆ ಮುನ್ನೆಚ್ಚರಿಕೆ ಕುರಿತು ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಕರಪತ್ರಗಳನ್ನು ಹಂಚಲಾಗುತ್ತಿದೆ. ಊರಿನ ಸ್ವಚ್ಛತೆಗೆ ಎಲ್ಲರೂ … Read more

ತ್ಯಾಗರ್ತಿ, ಹಿರೇಬಿಲಗುಂಜಿ ಒಂದು ವಾರ ಸಂಪೂರ್ಣ ಲಾಕ್ ಡೌನ್

ಶಿವಮೊಗ್ಗ ಲೈವ್.ಕಾಂ | SAGARA NEWS | 27 MAY 2021 ಸೋಂಕು ಹರಡುವುದನ್ನು ತಡೆಯಲು ಸಾಗರ ತಾಲೂಕು ತ್ಯಾಗರ್ತಿ ಮತ್ತು ಹಿರೇಬಿಲಗುಂಜಿಯಲ್ಲಿ ಲಾಕ್ ಡೌನ್ ಘೋಷಿಸಿ, ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಉಪ ತಹಶೀಲ್ದಾರ್ ಕಲ್ಲಪ್ಪ ಮೆಣಸಿನಹಾಳ್ ನೇತೃತ್ವದಲ್ಲಿ ಹಿರರೇಬಿಲಗುಂಜಿ ಮತ್ತು ತ್ಯಾಗರ್ತಿ ಗ್ರಾಮ ಪಂಚಾಯಿತಿಯ ಸದಸ್ಯರು, ಅಧಿಕಾರಿಗಳು, ಕೋವಿಡ್ ಕಾರ್ಯಪಡೆ ಸದಸ್ಯರು ಸಭೆ ನಡೆಸಿ, ಈ ನಿರ್ಣಯ ಕೈಗೊಂಡಿದ್ದಾರೆ. ಮೇ 28 ರಿಂದ ಜೂನ್ 3ರವರೆಗೆ ಸಂಪೂರ್ಣ ಲಾಕ್‍ ಡೌನ್ ಮಾಡಲಾಗುತ್ತದೆ. ಈ … Read more

ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಡಿಸಿಗೆ ದೂರು ನೀಡಿದ 86 ವರ್ಷದ ವೃದ್ಧೆ, ಉಪವಾಸ ಸತ್ಯಾಗ್ರಹದ ಎಚ್ಚರಿಕೆ, ಕಾರಣವೇನು?

ಶಿವಮೊಗ್ಗ ಲೈವ್.ಕಾಂ |SHIMOGA NEWS | 24 NOVEMBER 2020 ಗ್ರಾಮ ಲೆಕ್ಕಾಧಿಕಾರಿಯ ಎಡವಟ್ಟಿನಿಂದ ತಮಗೆ ಪರಿಹಾರ ದೊರೆತಿಲ್ಲ. ಈ ಬಗ್ಗೆ ವಿಚಾರಿಸಿದರೆ ಗ್ರಾಮ ಲೆಕ್ಕಾಧಿಕಾರಿ ಉದ್ಧಟತನದಿಂದ ಉತ್ತರಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕು. ಇಲ್ಲವಾದಲ್ಲಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ವೃದ್ಧೆಯೊಬ್ಬರು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ಎಚ್ಚರಿಸಿದ್ದಾರೆ. ಉಳ್ಳೂರು ಗ್ರಾಮದ ಮಂಚಾಲೆ ಗ್ರಾಮದ ಸರಸ್ವತಮ್ಮ (86), ಗ್ರಾಮ ಲೆಕ್ಕಾಧಿಕಾರಿ ವಿರುದ್ಧ ಜಿಲ್ಲಾಧಿಕಾರಿ ಅವರಿಗೆ ದೂರು ನೀಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿ ಎಡವಟ್ಟೇನು? ಸರಸ್ವತಮ್ಮ ಅವರಿಗೆ ಸಿರಗುಪ್ಪ … Read more

ಶಿವಮೊಗ್ಗ, ಶಿಕಾರಿಪುರದಲ್ಲಿ ಸ್ಪೀಡ್, ಸಾಗರದಲ್ಲಿ ಬಹಳ ಸ್ಲೋ, ನೆರೆ ಪರಿಹಾರ ವಿಳಂಬಕ್ಕೆ ತಾಲೂಕು ಪಂಚಾಯಿ ಅಧ್ಯಕ್ಷರ ಆಕ್ರೋಶ

ಶಿವಮೊಗ್ಗ ಲೈವ್.ಕಾಂ | SAGARA | 22 ಅಕ್ಟೋಬರ್ 2019 ಶಿವಮೊಗ್ಗ, ಶಿಕಾರಿಪುರ ತಾಲೂಕುಗಳಿಗೆ ಹೋಲಿಸಿದೆ ಸಾಗರದಲ್ಲಿ ನೆರೆ ಪರಿಹಾರ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ಆರೋಪಿಸಿದ್ದಾರೆ. ತ್ಯಾಗರ್ತಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಜನಸ್ಪಂದನಾ ಮತ್ತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಹಕ್ರೆ, ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ನೀಡದೆ ಇರುವುದೆ ಪರಿಹಾರ ವಿತರಣೆ ವಿಳಂಬಕ್ಕೆ ಕಾರಣ ಎಂದು ಆರೋಪಿಸಿದರು. ಕೆಲವು ಕಡೆ ಕಂದಾಯ ಇಲಾಖೆ ಅಧಿಕಾರಿಗಳು ನಡೆಸಿದ ಸಮೀಕ್ಷೆಯಲ್ಲಿ … Read more