ಶಿವಮೊಗ್ಗದಲ್ಲಿ ನಾಲ್ಕು ದಿನ ಕೃಷಿ, ತೋಟಗಾರಿಕೆ ಮೇಳ, ದಿನಾಂಕ ಪ್ರಕಟ, ಏನೆಲ್ಲ ವಿಶೇಷತೆ ಇರಲಿದೆ?

Agriculture-University-Iruvakki-sagara-campus-board

ಶಿವಮೊಗ್ಗ: ‘ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ’ ಘೋಷವಾಕ್ಯದಡಿ ನವುಲೆಯ ಕೆಳದಿ ಶಿವಪ್ಪ ನಾಯಕ ಕೃಷಿ (Agriculture) ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ನ.7ರಿಂದ 10ರವರೆಗೆ ಕೃಷಿ ಮತ್ತು ತೋಟಗಾರಿಕೆ ಮೇಳ ಆಯೋಜಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆರ್‌.ಸಿ.ಜಗದೀಶ್‌, ಮೇಳದಲ್ಲಿ ಕೃಷಿ ಮತ್ತು ತೋಟಗಾರಿಕೆ ವಸ್ತು ಪ್ರದರ್ಶನ, ವಿವಿಧ ಬೆಳೆಗಳ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣ ಪ್ರದರ್ಶನ, ವಿಜ್ಞಾನಿಗಳು–ರೈತರೊಂದಿಗೆ ಸಂವಾದ ಮತ್ತು ವಿಚಾರ ಗೋಷ್ಠಿಯನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು. ಮೇಳದಲ್ಲಿ ಏನೇನೆಲ್ಲ ಇರಲಿದೆ? ಕೃಷಿ ಮತ್ತು ತೋಟಗಾರಿಕಾ … Read more

ಭಾರತದ ಟಾಪ್‌ ವಿವಿಗಳಲ್ಲಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಸ್ಥಾನ, ಇಲ್ಲಿದೆ ಡಿಟೇಲ್ಸ್‌

kuvempu-University-

ಶಿವಮೊಗ್ಗ: ದೆಹಲಿಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಗುರುವಾರ ಬಿಡುಗಡೆಗೊಳಿಸಿರುವ 2025ನ ಸಾಲಿನ ರಾಷ್ಟ್ರೀಯ ಶೈಕ್ಷಣಿಕ ಸಂಸ್ಥೆಗಳ ರ‍್ಯಾಂಕಿಂಗ್‌ನಲ್ಲಿ (ಎನ್‌ಐಆರ್‌ಎಫ್) ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳ (University) ವಿಭಾಗದಲ್ಲಿ ಕುವೆಂಪು ವಿಶ್ವವಿದ್ಯಾಲಯ 51 ರಿಂದ 100ರ ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ದೇಶದ 4,100ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳ ಈ ರ‍್ಯಾಂಕಿಂಗ್ ಪಟ್ಟಿಯಲ್ಲಿ ಕುವೆಂಪು ವಿ.ವಿ. ಸರ್ಕಾರಿ ವಿಶ್ವವಿದ್ಯಾಲಯಗಳ ವಿಭಾಗದಲ್ಲಿ 51ರಿಂದ 100ರೊಳಗೆ ಸ್ಥಾನ ಪಡೆದಿದೆ. ಉಳಿದಂತೆ ಮೈಸೂರು ವಿವಿ 20ನೇ ಸ್ಥಾನ, ಬೆಂಗಳೂರು ವಿವಿ 26ನೇ … Read more

ಕುವೆಂಪು ವಿವಿ ಸ್ನಾತಕೋತ್ತರ ವಿಭಾಗಕ್ಕೆ ಸೇರುವವರಿಗೆ ಗುಡ್‌ ನ್ಯೂಸ್‌

Kuvempu University File Image 2

ಶಿವಮೊಗ್ಗ: ಶಂಕರಘಟ್ಟದ ಕುವೆಂಪು ವಿಶ್ವವಿದ್ಯಾಲಯದ (University) 2025–26ನೇ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ವಿಭಾಗದಲ್ಲಿ ಭರ್ತಿಯಾಗದೇ ಉಳಿದಿರುವ ಖಾಲಿ ಸ್ಥಾನಗಳಿಗೆ ವಿದ್ಯಾರ್ಥಿಗಳಿಂದ ಅರ್ಜಿ (Applications) ಆಹ್ವಾನಿಸಲಾಗಿದೆ. ಸೆ.15 ರೊಳಗಾಗಿ ಅರ್ಜಿ ಸಲ್ಲಿಸುವಂತೆ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಕುವೆಂಪು ವಿಶ್ವವಿದ್ಯಾಲಯಕ್ಕೆ ದೇಶದಲ್ಲೇ 30ನೇ ರ‍್ಯಾಂಕ್‌, ಏನಿದು ರ‍್ಯಾಂಕಿಂಗ್‌? ವಿವಿ ಪಡೆದ ಅಂಕಗಳೆಷ್ಟು? applications for kuvempu university

ಶಿವಮೊಗ್ಗದಲ್ಲಿ ಹಣ್ಣು, ಆಹಾರ ಮೇಳ, ಯಾವಾಗ? ಏನೆಲ್ಲ ಇರುತ್ತೆ? ಇಲ್ಲಿದೆ ಡಿಟೇಲ್ಸ್‌

Agriculture-University-Iruvakki-sagara-campus-board

ಶಿವಮೊಗ್ಗ : ನವುಲೆಯ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಏ.26 ರಿಂದ 28ರವರೆಗೆ ವೈವಿಧ್ಯಮಯ ಹಣ್ಣುಗಳು (Fruits) ಮತ್ತು ಆಹಾರ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ತಿಳಿಸಿದರು. ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿಸಿಲಿನ ಅಬ್ಬರ ಜೋರು, ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ನವುಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೇಂದ್ರದ ಆವರಣದಲ್ಲಿ ಮೂರು ದಿನವೂ ಬೆಳಿಗ್ಗೆ 9ರಿಂದ ರಾತ್ರಿ 9ರವರೆಗೆ … Read more

ಶಂಕರಘಟ್ಟದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಯತ್ನ, ಕುವೆಂಪು ವಿವಿಯಲ್ಲಿ ತರಗತಿ ಬಹಿಷ್ಕಾರ, ಮೆರವಣಿಗೆ

Kuvempu-University-Students-Protest

SHIVAMOGGA LIVE NEWS | 11 JULY 2024 SHANKARAGHATTA : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳು (Students) ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಆಡಳಿತ ಭವನದ ಮುಂಭಾಗ ಧರಣಿ ನಡೆಸಿದರು. ಆತ್ಮಹತ್ಯೆ ಯತ್ನದ ಬೆನ್ನಿಗೆ ಹೋರಾಟ ಕುವೆಂಪು ವಿವಿಯಲ್ಲಿನ ಹಗರಣಗಳಿಂದ ಮನನೊಂದು ವಿದ್ಯಾರ್ಥಿಯೊಬ್ಬ (ಕುಟುಂಬದವರ ಮನವಿ ಮೇರಗೆ ಹೆಸರು, ಊರು ಪ್ರಕಟಿಸುತ್ತಿಲ್ಲ) ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದ. ಇದರ … Read more

ಕುವೆಂಪು ವಿವಿ ಪ್ರಾಧ್ಯಾಪಕ ಭಾರತದ ಟಾಪ್‌ 3ನೇ ಉತ್ತಮ ಸಂಶೋಧಕ

Top-Scientist-Kuvempu-University-Prof-Girish

SHIVAMOGGA LIVE NEWS | 2 MAY 2024 EDUCATION NEWS : ರಿಸರ್ಚ್ ಡಾಟ್ ಕಾಂ ವೆಬ್ ತಾಣ ಬಿಡುಗಡೆ ಮಾಡಿರುವ ಉತ್ತಮ ಸಂಶೋಧಕರ ವರದಿಯಲ್ಲಿ ಕುವೆಂಪು ವಿವಿ ಗಣಿತ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ಬಿ.ಜೆ.ಗಿರೀಶ್ ಭಾರತದಲ್ಲಿ 3ನೇ ಸ್ಥಾನ ಹಾಗೂ ಜಾಗತಿಕವಾಗಿ 671ನೇ ಸ್ಥಾನ ಪಡೆದಿದ್ದಾರೆ. ಕಳೆದ ವರ್ಷ ಇವರು ಜಾಗತಿಕವಾಗಿ 942ನೇ ಸ್ಥಾನದಲ್ಲಿದ್ದರು. ರಿಸರ್ಚ್ ಡಾಟ್ ಕಾಂ ಅಂತಾರಾಷ್ಟ್ರೀಯ ಸಂಸ್ಥೆಯು ಸಂಶೋಧನೆಗಳು ಮತ್ತು ವಿಜ್ಞಾನಿಗಳ ಕುರಿತಾಗಿ ಮಾಹಿತಿ ಪ್ರಕಟಿಸುತ್ತದೆ. ಗಿರೀಶ್ 240ಕ್ಕೂ … Read more

ಎರಡೆ ದಿನಕ್ಕೆ ಕುವೆಂಪು ವಿವಿ ಕುಲಸಚಿವರು ಬದಲು, ಅಧಿಕಾರ ಸ್ವೀಕಾರಕ್ಕು ಮುನ್ನವೆ ಹೊಸಬರ ನೇಮಕ

kuvempu-University-

SHIVAMOGGA LIVE NEWS | 2 FEBRUARY 2024 SHIMOGA : ಕುವೆಂಪು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರನ್ನು ನೇಮಿಸಿದ್ದ ಸರ್ಕಾರ ಎರಡನೇ ದಿನದಲ್ಲಿ ಆದೇಶ ಬದಲಿಸಿದೆ. ಮತ್ತೊಬ್ಬ ಅಧಿಕಾರಿಯನ್ನು ಆ ಸ್ಥಾನಕ್ಕೆ ನೇಮಿಸಿದೆ. ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆಎಎಸ್‌ ಅಧಿಕಾರಿ ವಿಜಯ ಕುಮಾರ್‌.ಹೆಚ್‌.ಬಿ ಅವರನ್ನು ನೇಮಿಸಲಾಗಿದೆ. ಎರಡೆ ದಿನದಲ್ಲಿ ಆದೇಶ ಬದಲು ಜ.31ರಂದು ಕೆಎಎಸ್‌ ಅಧಿಕಾರಿ ಶಿವರಾಜು.ಪಿ ಅವರನ್ನು ಕುವೆಂಪು ವಿವಿ ಆಡಳಿತ ಕುಲಸಚಿವರಾಗಿ ನೇಮಿಸಿ ಸರ್ಕಾರ ಆದೇಶಿಸಿತ್ತು. ಶಿವರಾಜು ಅವರು ಅವರು ಇನ್ನೂ ಅಧಿಕಾರ … Read more

ಕುವೆಂಪು ವಿವಿಗೆ ನೂತನ ಕುಲಸಚಿವರ ನೇಮಕ

P-Shivaraj-to-be-new-registrar-of-Kuvempu-University

SHIVAMOGGA LIVE NEWS | 1 FEBRUARY 2024 SHIMOGA : ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವರಾಗಿ (ಆಡಳಿತ) ಕೆಎಎಸ್‌ ಅಧಿಕಾರಿ ಪಿ.ಶಿವರಾಜ್‌ ಅವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಕುಲಸಚಿವರ ಹುದ್ದೆ ಖಾಲಿ ಇದ್ದ ಹಿನ್ನೆಲೆ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿತ್ತು. ಈಗ ಕೆಎಎಸ್‌ ಅಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ. ಇದನ್ನೂ ಓದಿ – ನೂರು ದಿನ ಕಳೆದರು ಉಪನ್ಯಾಸಕರ ಖಾತೆಗೆ ಬಾರದ ಗೌರವಧನ, ಕುವೆಂಪು ವಿವಿ ವಿರುದ್ಧ ಅಸಮಾಧಾನ

ಕುವೆಂಪು ವಿವಿ ಅಕಾಡೆಮಿಕ್‌ ಕ್ಯಾಲೆಂಡರ್‌ ಅವಧಿ ಮುಂದೂಡಲು ವಿದ್ಯಾರ್ಥಿ ಸಂಘಟನೆ ಆಗ್ರಹ, ಕಾರಣವೇನು?

nsui-memorandum-to-kuvempu-univesity-registrar-snehal-sudhakar-lokande.

SHIVAMOGGA LIVE NEWS | 25 JANUARY 2024 SHIMOGA : ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆದಿಲ್ಲ. ಅದ್ದರಿಂದ ಶೈಕ್ಷಣಿಕ ಅವಧಿಯನ್ನು ಮುಂದೂಡುವಂತೆ ಆಗ್ರಹಿಸಿ ಎನ್‌ಎಸ್‌ಯುಐ ಸಂಘಟನೆ ವತಿಯಿಂದ ಶಿವಮೊಗ್ಗದಲ್ಲಿ ಕುವೆಂಪು ವಿಶ್ವವಿದ್ಯಾಲಯ ಕುಲಸಚಿವ ಸ್ನೇಹಲ್‌ ಸುಧಾಕರ್‌ ಲೋಖಂಡೆ ಅವರಿಗೆ ಮನವಿ ಸಲ್ಲಿಸಲಾಯಿತು. ಕುವೆಂಪು ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ಕೊರತೆಯಿಂದಾಗಿ ಕಾಲೇಜುಗಳಲ್ಲಿ ತರಗತಿಗಳು ಸರಿಯಾಗಿ ನಡೆದಿಲ್ಲ. ಪಾಠಗಳನ್ನು ಮುಗಿಸಲು ಇನ್ನಷ್ಟು ಕಾಲವಕಾಶ ಬೇಕಿದೆ. ಆದ್ದರಿಂದ ಅಕಾಡೆಮಿಕ್ ಕ್ಯಾಲೆಂಡರ್‌ ಅವಧಿಯನ್ನ ಫೆಬ್ರವರಿ … Read more

ಕುವೆಂಪು ವಿವಿ ಅಕಾಡೆಮಿಕ್‌ ಕೌನ್ಸಿಲ್‌ಗೆ ಅರುಣ್‌, ಸೂರಜ್‌ ರೇವಣ್ಣ, ಏನಿದು ಕೌನ್ಸಿಲ್‌?

DS-Arun-MLC-Shimoga

SHIVAMOGGA LIVE NEWS | 24 JANUARY 2024 EDUCATION NEWS : ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿಗೆ ವಿಧಾನ ಪರಿಷತ್ತಿನ ಇಬ್ಬರು ಶಾಸಕರನ್ನು ನೇಮಿಸಲಾಗಿದೆ. ವಿಧಾನ ಪರಿಷತ್‌ ಸದಸ್ಯರಾದ ಡಿ.ಎಸ್.ಅರುಣ್‌ ಮತ್ತು ಸೂರಜ್‌ ರೇವಣ್ಣ ಅವರನ್ನು ನೇಮಿಸಿ ಸಭಾಪತಿ ಅವರು ನಾಮ ನಿರ್ದೇಶನ ಮಾಡಿದ್ದಾರೆ. ಈ ಸಂಬಂಧ ವಿಧಾನ ಪರಿಷತ್ತಿನ ಕಾರ್ಯದರ್ಶಿ ಅವರು ಕುವೆಂಪು ವಿವಿ ಕುಲ ಸಚಿವರಿಗೆ ಆದೇಶ ಪ್ರತಿ ರವಾನಿಸಿದ್ದಾರೆ. ಏನಿದು ವಿದ್ಯಾವಿಷಯಕ ಪರಿಷತ್ತು? ವಿಶ್ವವಿದ್ಯಾಲಯಗಳ ಶೈಕ್ಷಣಿಕ ಚುಟುವಟಿಕೆ ಕುರಿತು ಶಾಸನಗಳು, ಆದೇಶಗಳು, … Read more