ಶಿವಮೊಗ್ಗ KSRTC ಬಸ್ ನಿಲ್ದಾಣ ಹಿಂಭಾಗ ಯುವಕ ಅರೆಸ್ಟ್

Arrest News Graphics

SHIVAMOGGA LIVE NEWS | CRIME | 03 ಮೇ 2022 ಶಿವಮೊಗ್ಗದ KSRTC ಬಸ್ ನಿಲ್ದಾಣದ ಹಿಂಭಾಗ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಖಚಿತವಾದ ಹಿನ್ನೆಲೆ ಪ್ರಕರಣ ದಾಖಲು ಮಾಡಲಾಗಿದೆ. ರಾಗಿಗುಡ್ಡ ನಿವಾಸಿ ಮೊಹಮದ್ ಅವೀಜ್ (19) ಬಂಧಿತ. ಮಟನ್ ಸ್ಟಾಲ್’ನಲ್ಲಿ ಕೆಲಸ ಮಾಡುವ ಈತ ಶಿವಮೊಗ್ಗದ KSRTC ಬಸ್ ನಿಲ್ದಾಣ ಹಿಂಭಾಗ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ಗಮನಿಸಿ … Read more

ಶಿವಮೊಗ್ಗ ಜಿಲ್ಲೆಯ ಹಲವು ಇನ್ಸ್ ಪೆಕ್ಟರ್’ಗಳ ವರ್ಗಾವಣೆ, ಯಾರೆಲ್ಲ ವರ್ಗವಾಗಿದ್ದಾರೆ?

police cap

SHIVAMOGGA LIVE NEWS | POLICE | 02 ಮೇ 2022 ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಇನ್ಸ್ ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ ಬಿ.ಸಿ.ಗಿರೀಶ್ ಹೊಸನಗರ ವೃತ್ತಕ್ಕೆ, ಎಸಿಬಿಯ ವಿ.ಪ್ರವೀಣ್‌ಕುಮಾರ್‌ ಅವರನ್ನು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಸಿಐಡಿಗೆ ವರ್ಗಾವಣೆ ಆದೇಶದಲ್ಲಿರುವ ಕೆ.ಅಂಜನ್‌ಕುಮಾರ್‌ ಅವರನ್ನು ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಗೆ, ಸಿಐಡಿಯಲ್ಲಿರುವ ಬಿ.ಮಂಜುನಾಥ್ ಶಿವಮೊಗ್ಗ ತುಂಗಾ ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ದೊಡ್ಡಪೇಟೆ ಠಾಣೆಯಲ್ಲಿರುವ … Read more

ವಿನೋಬನಗರ ಶಿವಾಲಯದಲ್ಲಿ ಇವತ್ತು ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರು ಭಾಗಿ

Veerashaiva-Mahasabha-Youth-Wing-Health-Camp.

SHIVAMOGGA LIVE NEWS | HEALTH | 02 ಮೇ 2022 ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಯುವ ಘಟಕ ಮತ್ತು ಸೆಕ್ಯೂರ್ ಆಸ್ಪತ್ರೆ ವತಿಯಿಂದ ಶಿವಮೊಗ್ಗದಲ್ಲಿ ಇವತ್ತು ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ತಜ್ಞ ವೈದ್ಯರು ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಜಿಲ್ಲಾಧ್ಯಕ್ಷ ಶಿವಯೋಗಿ ಹಂಚಿನಮನೆ ಅವರು, ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಮೇ 2ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. … Read more

ಗೋಪಾಳದಲ್ಲಿ ಮನೆ ಕಳ್ಳತನ, ಹೊಟೇಲ್ ಸಪ್ಲಯರ್ ಮೇಲೆ ಅನುಮಾನ

theft case general image

SHIVAMOGGA LIVE NEWS | THEFT | 30 ಏಪ್ರಿಲ್ 2022 ಗೋಪಾಳದ ಕೊನೇ ಬಸ್ ನಿಲ್ದಾಣ ಸಮೀಪದ ಮನೆಯೊಂದರಲ್ಲಿ ಬಂಗಾರದ ನೆಕ್ಲಸ್ ಮತ್ತು ನಗದು ಹಣ ಕಳವಾಗಿದೆ. ಹೋಟೆಲ್ ಸಪ್ಲೆಯರ್ ಮೇಲೆ ಅನುಮಾನ ವ್ಯಕ್ತವಾಗಿದ್ದು ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಗೋಪಾಳದ ಎಲ್.ಮಂಜುನಾಥ ಅವರು ಹೋಟೆಲ್ ನಡೆಸುತ್ತಿದ್ದಾರೆ. ಸೊರಬ ತಾಲೂಕಿನ ಬೆನ್ನೂರು ಗ್ರಾಮದ ಮೂರ್ತಿ ಎಂಬಾತ ಸಪ್ಲೆಯರ್ ಆಗಿದ್ದ. ಆತ ಮಂಜುನಾಥ ಅವರ ಮನೆಯಲ್ಲೇ ವಾಸವಿದ್ದ. ಏ.24ರಂದು ರಾತ್ರಿ ಮಂಜುನಾಥ ಅವರ ಪತ್ನಿ ಬೆಡ್‌ರೂಮ್ … Read more

ಆಯನೂರು ಸಮೀಪ ಅಪಘಾತ, ಬೈಕ್ ಸವಾರ ಸಾವು

Ayanur Graphics

SHIVAMOGGA LIVE NEWS | ACCIDENT| 29 ಏಪ್ರಿಲ್ 2022 ಆಯನೂರು ಸಮೀಪ ಪಿಕಪ್ ವಾಹನ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ. ವಿಠಗೊಂಡನಕೊಪ್ಪ ಗ್ರಾಮದ ಆಕಾಶ್ (20) ಮೃತ ದುರ್ದೈವಿ. ಆಯನೂರ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಆಕಾಶ್ ಬೈಕಿನಲ್ಲಿ ಶಿವಮೊಗ್ಗದಿಂದ ಆಯನೂರು ಕಡೆಗೆ ತೆರಳುತ್ತಿದ್ದ. ಕೋಳಿ ಸಾಗಣೆಯ ಪಿಕಪ್ ವಾಹನವು ಆಯನೂರು ಕಡೆಯಿಂದ ಶಿವಮೊಗ್ಗದ ಕಡೆಗೆ ತೆರಳುತ್ತಿತ್ತು. ವೀರಗಾರನ ಬೈರನಕೊಪ್ಪದ ಬಳಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆಕಾಶ್ … Read more

ಮೂರು ದಿನ ಶಿವಮೊಗ್ಗ, ಶಿಕಾರಿಪುರ ಪ್ರವಾಸ ಕೈಗೊಂಡ ಮಾಜಿ ಸಿಎಂ

-Yedyurappa-Visit-Shimoga-Helipad

SHIVAMOGGA LIVE NEWS | SHIMOGA TOUR | 29 ಏಪ್ರಿಲ್ 2022 ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೂರು ದಿನ ಶಿವಮೊಗ್ಗ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಇವತ್ತು ಹೆಲಿಕಾಪ್ಟರ್ ಮೂಲಕ ಶಿವಮೊಗ್ಗಕ್ಕೆ ಆಗಮಿಸಿರುವ ಯಡಿಯೂರಪ್ಪ ಅವರು ಶಿವಮೊಗ್ಗ ಮತ್ತು ಶಿಕಾರಿಪುರದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾವೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ? ಏಪ್ರಿಲ್ 30ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗ ನಗರದಲ್ಲಿ ಖಾಸಗಿ ಆಸ್ಪತ್ರೆಯೊಂದರ ಉದ್ಘಾಟನೆ ಮಾಡಲಿದ್ದಾರೆ. ಸಂಜೆ ಶಿಕಾರಿಪುರಕ್ಕೆ ತೆರಳಲಿದ್ದಾರೆ. ಮೇ 1ರಂದು ಬೆಳಗ್ಗೆ 10.30ಕ್ಕೆ ಶಿಕಾರಿಪುರದ ಉಡುಗಣಿಗೆ … Read more

ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಅಪಘಾತ, ಸಿದ್ದಾಪುರದ ಯುವಕ ಸ್ಥಳದಲ್ಲೆ ಸಾವು

Bhadravathi News Graphics

ಶಿವಮೊಗ್ಗ ಲೈವ್.ಕಾಂ | ACCIDENT | 28 ಏಪ್ರಿಲ್ 2022 ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಸವಾರನೊಬ್ಬ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೊಸ ಸಿದ್ದಾಪುರ ಗ್ರಾಮದ ಅರುಣ್ (30) ಮೃತ ದುರ್ದೈವಿ. ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕರ್ತವ್ಯ ಮುಗಿಸಿ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಹಿಟ್ ಅಂಡ್ ರನ್ ಅರುಣ್ ಬೈಪಾಸ್ ರಸ್ತೆಯಲ್ಲಿ ಸಿದ್ದಾಪುರದ ಕಡೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಎದುರಿನಿಂದ ಬಂದ ವಾಹನ ಅರುಣ್‌ಗೆ ಡಿಕ್ಕಿ ಹೊಡೆದಿರುವ ಶಂಕೆ ಇದೆ. ಕೆಳಗೆ ಬಿದ್ದ … Read more

ಶಿವಮೊಗ್ಗ ಜಿಲ್ಲೆಯಾದ್ಯಂತ ಜೋರು ಮಳೆ, ಭದ್ರಾವತಿಯಲ್ಲಿ ಆಲಿಕಲ್ಲು ಸಹಿತ ಮಳೆ

Rain-at-Shimoga

ಶಿವಮೊಗ್ಗ ಲೈವ್.ಕಾಂ | SHIMOGA RAIN | 28 ಏಪ್ರಿಲ್ 2022 ಶಿವಮೊಗ್ಗ ಜಿಲ್ಲೆಯಾದ್ಯಂತ ಇವತ್ತು ಗುಡುಗು ಸಹಿತ ಭಾರಿ ಮಳೆಯಾಗುತ್ತಿದೆ. ಹಲವು ಕಡೆ ಆಲಿಕಲ್ಲು ಮಳೆಯಾದ ವರದಿಯಾಗಿದೆ. ಶಿವಮೊಗ್ಗ ನಗರದಲ್ಲಿ ಸಂಜೆ ವೇಳೆಗೆ ಜೋರು ಗಾಳಿ, ಗುಡುಗು ಸಹಿತ ಮಳೆಯಾಗಿದೆ. ಭಾರಿ ಮಳೆಯಿಂದ ಅಲ್ಲಲ್ಲಿ ಚರಂಡಿ ತುಂಬಿ ನೀರು ರಸ್ತೆಗೆ ಹರಿದಿದೆ. ಇನ್ನು, ಜೋರು ಮಳೆಯಿಂದ ಶಿವಮೊಗ್ಗ ನಗರದಲ್ಲಿ ಜನಜೀವನ ಅಸ್ತವ್ಯಸ್ತ ಆಗಿತ್ತು. ಶಿವಮೊಗ್ಗ ತಾಲೂಕಿನಲ್ಲೂ ಮಳೆ ಅಬ್ಬರಿಸಿದೆ. ವಿವಿಧೆಡೆ ಮಳೆಗೆ ಮರಗಳು ಬುಡಮೇಲಾದ ವರದಿಯಾಗಿದೆ. … Read more

ಭದ್ರಾ ನಾಲೆಯಲ್ಲಿ ನೀರು ನಿಲ್ಲಿಸುವ ಕುರಿತು ಕಾಡಾ ಸಭೆಯಲ್ಲಿ ಮಹತ್ವದ ನಿರ್ಧಾರ

Bhadra-Kada-Meeting-in-Shimoga-Machenahalli.

SHIVAMOGGA LIVE NEWS | WATER | 28 ಏಪ್ರಿಲ್ 2022 ಬೇಸಿಗೆ ಬೆಳೆಗಳಿಗಾಗಿ ಭದ್ರಾ ಅಚ್ಚುಕಟ್ಟು ನಾಲೆಗಳಲ್ಲಿ ಹರಿಸಲಾಗುತ್ತಿರುವ ನೀರನ್ನು ಮೇ 15 ಕ್ಕೆ ನಿಲ್ಲಿಸಲಾಗುವುದು. ನೀರಿನ ಅವಶ್ಯಕತೆ ಇದ್ದರೆ ಮೇ 20ರವರೆಗೆ ಹೆಚ್ಚುವರಿಯಾಗಿ ನೀರು ಹರಿಸಲಾಗುವುದು ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿತು. ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪವಿತ್ರಾ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇವತ್ತು ಮಲವಗೊಪ್ಪದ ಕಚೇರಿಯಲ್ಲಿ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಈ ನಿರ್ಣಯ … Read more

ಶಿವಮೊಗ್ಗದಲ್ಲಿ ಭಯದ ವಾತಾವರಣ ಸೃಷ್ಟಿ, ಕಠಿಣ ಕ್ರಮಕ್ಕೆ ಎಸ್.ಪಿಗೆ ದೂರು

BJP-Submitted-Memorandum-to-Shimoga-SP

SHIVAMOGGA LIVE NEWS | HINDU| 28 ಏಪ್ರಿಲ್ 2022 ಕಳೆದ ಮೂರು ತಿಂಗಳಿಂದ ಶಿವಮೊಗ್ಗ ನಗರದಲ್ಲಿ ಅಶಾಂತಿ ಸೃಷ್ಟಿಸಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಗರ ಘಟಕ ಆಗ್ರಹಿಸಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರಿಗೆ ಬಿಜೆಪಿ ನಗರ ಘಟಕದ ವತಿಯಿಂದ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಏನಿದೆ? ಪ್ರಶಾಂತವಾಗಿದ್ದ ಶಿವಮೊಗ್ಗ ನಗರದಲ್ಲಿ ಕಳೆದ 3 ತಿಂಗಳಿಂದ ಅಶಾಂತಿ ಸೃಷ್ಟಿಸಲಾಗುತ್ತಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಮತ್ತು ಅಮಾಯಕ … Read more