ಶಿವಮೊಗ್ಗಕ್ಕೆ ಬರ್ತಿದ್ದಾರೆ ಮಹಿಳಾ ಆಯೋಗದ ಅಧ್ಯಕ್ಷೆ, ಸಾಲು ಸಾಲು ಸಭೆ, ಸಮಾರಂಭದಲ್ಲಿ ಭಾಗಿ

-Dr-Nagalakshmi-Choudhry-to-visit-shimoga.

ಶಿವಮೊಗ್ಗ: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ  ಚೌಧರಿ ನ.23 ರಂದು ರಾತ್ರಿ 9.40ಕ್ಕೆ ಶಿವಮೊಗ್ಗಕ್ಕೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ನ.24 ರಿಂದ ಮೂರು ದಿನ ಜಿಲ್ಲೆಯ ವಿವಿಧೆಡೆ ಪ್ರವಾಸ ಕೈಗೊಳ್ಳಲಿದ್ದಾರೆ.   ಎಲ್ಲೆಲ್ಲಿ ಯಾವ್ಯಾವ ಕಾರ್ಯಕ್ರಮದಲ್ಲಿ ಭಾಗಿ? ನ.24 ರಂದು ಬೆಳಗ್ಗೆ 9ಕ್ಕೆ ಮೆಗ್ಗಾನ್ ಜಿಲ್ಲಾ ಆಸ್ಪತ್ರೆ ಮತ್ತು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. 10.30ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ … Read more

ಶಿವಮೊಗ್ಗ ಮಹಿಳಾ ಕಾಂಗ್ರೆಸ್‌ಗೆ ನೂತನ ಅ‍ಧ್ಯಕ್ಷೆ, ಪದಗ್ರಹಣದ ದಿನಾಂಕ ಪ್ರಕಟ

women-congress-president-Shwetha-Bandi-press-meet.

ಶಿವಮೊಗ್ಗ: ಕಾಂಗ್ರೆಸ್ ಮಹಿಳಾ ಘಟಕದ (Women Congress) ಜಿಲ್ಲಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶ್ವೇತಾ ಬಂಡಿ ಸೆ.27ರಂದು ಬೆಳಗ್ಗೆ 11ಕ್ಕೆ ನಗರದ ಬಂಜಾರ ಕನ್ವೆಷನ್ ಹಾಲ್‌ನಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ತಿಳಿಸಿದರು. ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ಕುಮಾರ್‌, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಸೌಮ್ಯರೆಡ್ಡಿ, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಬಲ್ಕಿಷ್ ಬಾನು, ಬಿ.ಕೆ.ಸಂಗಮೇಶ್ವರ, ಪ್ರಮುಖರಾದ ಗೀತಾ ಶಿವರಾಜ್ ಕುಮಾರ್, ನಿರ್ಗಮಿತ ಮಹಿಳಾ ಕಾಂಗ್ರೆಸ್ … Read more

ಶಿವಮೊಗ್ಗ ಡಿಸಿ ಕಚೇರಿ ಮುಂದೆ ಮಹಿಳೆಯರ ಪ್ರತಿಭಟನೆ, ಡಿಮಾಂಡ್‌ಗಳೇನು?

Women-protest-in-Front-of-Shimoga-dc-office

ಶಿವಮೊಗ್ಗ: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಿರುಕುಳ, ಹಿಂಸೆ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ವಿಧವೆಯರು, ವೃದ್ಧಾಪ್ಯ ವೇತನ ಹಾಗೂ ವಿಶೇಷಚೇತನರ ಮಾಸಾಶನ ಹೆಚ್ಚಳಕ್ಕೆ ಆಗ್ರಹಿಸಿ ಸಮೃದ್ಧ್ ಸ್ವ ಸಹಾಯ ಸಂಘಗಳ ತಾಲೂಕು ಒಕ್ಕೂಟ ಹಾಗೂ ಅರುಣೋದಯ ಮಹಿಳಾ (Women) ಜಿಲ್ಲಾ ಒಕ್ಕೂಟ ಜಂಟಿಯಾಗಿ ಆಗ್ರಹಿಸಿವೆ. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು. ಲೈಂಗಿಕ ದೌರ್ಜನ್ಯ … Read more

ಶಿವಮೊಗ್ಗದಲ್ಲಿ ಮಹಿಳೆಯರ ಬಟ್ಟೆಗಳನ್ನಷ್ಟೆ ಕದ್ದೊಯ್ದ ಕಳ್ಳ, ಸಿಸಿಟಿವಿಯಲ್ಲಿ ಕೃತ್ಯ ಸೆರೆ

Cloth-Theft-at-Shanthi-Nagara-

ಶಿವಮೊಗ್ಗ: ಮನೆ ಮುಂದೆ ಒಣಗಲು ಹಾಕಿದ್ದ ಮಹಿಳೆಯರ ಬಟ್ಟೆಯನ್ನು (Cloth) ವ್ಯಕ್ತಿಯೊಬ್ಬ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಾಗಿಗುಡ್ಡದ 8ನೇ ತಿರುವಿನಲ್ಲಿ ಜು.16ರ ತಡರಾತ್ರಿ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬ ಮನೆಯೊಂದರ ಬಳಿ ಬಂದು ಹೋಗುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈತ ಮಹಿಳೆಯರ ಬಟ್ಟೆಗಳನ್ನು ಮಾತ್ರ ಕಳ್ಳತನ ಮಾಡಿಕೊಂಡು ಹೋಗಿದ್ದಾನೆ ಎಂದು ಆರೋಪಿಸಲಾಗಿದೆ. ರಾಗಿಗುಡ್ಡ, ಶಾಂತಿ ನಗರ ಭಾಗದಲ್ಲಿ ಈ ಹಿಂದೆಯು ಬಟ್ಟೆ ಕಳ್ಳತನವಾಗಿದೆ ಎಂಬ ಆರೋಪವಿದೆ. ಇದನ್ನೂ ಓದಿ » ಯಶವಂತಪುರ – ತಾಳಗುಪ್ಪ ಮಧ್ಯೆ ಒಂದು ಟ್ರಿಪ್‌ … Read more

ಶಿವಮೊಗ್ಗದಿಂದ ಕಾರ್ಮಿಕ ಮಹಿಳೆಯರನ್ನು ವಿಮಾನದಲ್ಲಿ ಗೋವಾಗೆ ಕರೆದೊಯ್ದ ಅಡಿಕೆ ತೋಟದ ಮಾಲೀಕ

farm-workers-at-shimoga-airport

ಶಿವಮೊಗ್ಗ : ವಿಮಾನಯಾನದ ಅನುಭವ ಪಡೆಯಲು ಈ ಹಿಂದೆ ರೈತರೊಬ್ಬರು ಶಿವಮೊಗ್ಗ ವಿಮಾನ (Airport) ನಿಲ್ದಾಣದಿಂದ ಬೆಂಗಳೂರಿಗೆ ಹೋಗಿ ಬಂದಿದ್ದ ವಿಡಿಯೋ ವೈರಲ್‌ ಆಗಿತ್ತು . ಈಗ ತೋಟದ ಮಾಲೀಕರೊಬ್ಬರು ತಮ್ಮ ತೋಟಕ್ಕೆ ಕೂಲಿ ಕೆಲಸಕ್ಕೆ ಬರುತ್ತಿದ್ದ ಮಹಿಳೆಯರನ್ನು ವಿಮಾನದಲ್ಲಿ ಕರೆದೊಯ್ದು ಅವರ ಆಸೆ ಈಡೇರಿಸಿದ್ದಾರೆ.  ಶಿವಮೊಗ್ಗ ವಿಮಾನ ನಿಲ್ದಾಣದಿಂದ ಹತ್ತು ಮಹಿಳೆಯರು ತಮ್ಮ ತೋಟದ ಮಾಲೀಕನೊಂದಿಗೆ ಗೋವಾಗೆ ಹಾರಿದ್ದಾರೆ. ಸ್ಟಾರ್‌ ಏರ್‌ಲೈನ್ಸ್‌ನಲ್ಲಿ ಗೋವಾಗೆ ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಶಿರಗಾನಹಳ್ಳಿಯ ರೈತ ವಿಶ್ವನಾಥ್‌ ತಮ್ಮ ತೋಟಕ್ಕೆ … Read more

ಸಿ.ಟಿ.ರವಿ ವಿರುದ್ಧ ಮಹಿಳೆಯರ ಆಕ್ರೋಶ, ರಾಜ್ಯಪಾಲರಿಗೆ ಮನವಿ, ಆಗ್ರಹವೇನು?

Congress-Women-wing-protest-against-CT-Ravi

SHIVAMOGGA LIVE NEWS, 21 DECEMBER 2024 ಶಿವಮೊಗ್ಗ : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರನ್ನು ಅವಾಚ್ಯವಾಗಿ ನಿಂದಿಸಿದ ಸಿ.ಟಿ.ರವಿ ಅವರನ್ನು ಶಾಸಕ ಸ್ಥಾನದಿಂದ ಅಮಾನತು (Suspend) ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್‌ನ ಮಹಿಳಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮಹಿಳೆಯರಿಗೆ ಗೌರವ ನೀಡಬೇಕಿದ್ದ ಹಿರಿಯ ಸದಸ್ಯ ಸಿ.ಟಿ.ರವಿ, ಸಚಿವ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಕುರಿತು ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಇದರ … Read more

ಶಿವಮೊಗ್ಗದಲ್ಲಿ ಅಕ್ಕ ಕೆಫೆ ಕ್ಯಾಂಟಿನ್‌, ಮಹಿಳೆಯರಿಂದ ಅರ್ಜಿ ಆಹ್ವಾನ

Akka-cafe-canteen-to-be-established-in-Shimoga.

SHIVAMOGGA LIVE NEWS, 5 DECEMBER 2024 ಸಾಗರ : ಮಹಿಳೆಯರೆ ನಡೆಸುವ ಅಕ್ಕ ಕೆಫೆ (Cafe) ಕ್ಯಾಂಟೀನ್‌ಗಳನ್ನು ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಲು ಯೋಜಿಸಲಾಗಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಹಿಳೆಯರೆ ನಡೆಸುವ ಈ ಕ್ಯಾಂಟೀನ್‌ಗಳನ್ನು ಸ್ಥಾಪಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಭಿಯಾಗಿಸುವುದು ಕಾರ್ಯಕ್ರಮದ ಉದ್ದೇಶ. ಡೇ-ನಲ್ಮ್ ಯೋಜನೆಯಡಿ ರಚನೆಯಾದ ಗುಂಪುಗಳು ಅಕ್ಕ ಕೆಫೆ ಹಾಗೂ ಅಕ್ಕ ಬೇಕ್ ಪ್ರಾರಂಭಿಸಬಹುದಾಗಿದೆ. ಆಸಕ್ತರು ಶಿವಮೊಗ್ಗ ಮಹಾನಗರ ಪಾಲಿಕೆ ಕಚೇರಿಯಲ್ಲಿ … Read more

ಶಿವಮೊಗ್ಗದಲ್ಲಿ ನ.21ರಿಂದ ಅಂತಾರಾಜ್ಯ ಮಹಿಳಾ ಕ್ರಿಕೆಟ್‌

DS-Arun-MLC-Shimoga

SHIMOGA NEWS, 18 NOVEMBER 2024 : ನ.21 ರಿಂದ 29ರವರೆಗೆ ನವುಲೆಯ ಕೆಎಸ್‌ಸಿಎ ಮತ್ತು ಜೆಎನ್‌ಎನ್‌ಸಿಇ ಕ್ರೀಡಾಂಗಣದಲ್ಲಿ 15 ವರ್ಷ ವಯೋಮಿತಿಯೊಳಗಿನ ಅಂತಾರಾಜ್ಯ ಮಹಿಳಾ ಕ್ರಿಕೆಟ್‌ (Cricket) ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮೂಲಸೌಕರ್ಯ ಅಭಿವೃದ್ಧಿ ಸಮಿತಿ ಸಂಚಾಲಕ ಡಿ.ಎಸ್.ಅರುಣ್‌ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿ.ಎಸ್.ಅರುಣ್‌, ನ.21ರಂದು ಬೆಳಗ್ಗೆ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್‌ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಜೆಎನ್‌ಎನ್‌ಸಿಇ ಮೈದಾದನಲ್ಲಿ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎಸ್‌.ಎನ್‌.ನಾಗರಾಜ್‌ ಉದ್ಘಾಟಿಸಲಿದ್ದಾರೆ ಎಂದರು. … Read more

ಶಿವಮೊಗ್ಗದಲ್ಲಿ ಉಪನ್ಯಾಸಕ ಅರೆಸ್ಟ್‌, ವಿದ್ಯಾರ್ಥಿನಿ ನೀಡಿದ್ದ ದೂರಿನ ಹಿನ್ನಲೆ ಬಂಧನ, ಕಾರಣವೇನು?

women-police-station-general-image.

DAM LEVEL, 3 SEPTEMBER 2024 : ಮದುವೆ ಆಗುವುದಾಗಿ ನಂಬಿಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿದ ಆರೋಪ ಸಂಬಂಧ ಕಾಲೇಜು ಒಂದರ ಉಪನ್ಯಾಸಕನನ್ನು (LECTURER) ಶಿವಮೊಗ್ಗ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಉಪನ್ಯಾಸಕ ಪುನೀತ್ ಬಂಧಿತ. ಕಾಲೇಜು ಒಂದರಲ್ಲಿ ಉಪನ್ಯಾಸಕನಾಗಿರುವ ಪುನೀತ್‌ಗೆ ಬಸ್‌ನಲ್ಲಿ ಹೋಗುವಾಗ ಶಿವಮೊಗ್ಗದ 19 ವರ್ಷದ ವಿದ್ಯಾರ್ಥಿನಿ ಪರಿಚಯವಾಗಿದ್ದಳು. ಪಠ್ಯದಲ್ಲಿ ಅರ್ಥವಾಗದ ವಿಷಯಗಳನ್ನು ಹೇಳಿಕೊಡುವುದಾಗಿ ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರವೆಸಗಿರುವ ಆರೋಪ ಕೇಳಿಬಂದಿದೆ. ವಿದ್ಯಾರ್ಥಿನಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ. ಶಿವಮೊಗ್ಗ … Read more

ಶಿವಮೊಗ್ಗದ ರೋಡ್‌ ರೋಮಿಯೋಗಳಿಗೆ ಕಾದಿದೆ ಗ್ರಹಚಾರ, ಇವತ್ತಿಂದ ಚೆನ್ನಮ್ಮ ಪಡೆ ಆರಂಭ, ಏನಿದು?

Chennamma-Pade-by-Shimoga-Police.

SHIVAMOGGA LIVE NEWS | 27 MAY 2024 SHIMOGA : ರೋಡ್‌ ರೋಮಿಯೋಗಳಿಗೆ (Road Romeos) ಬಿಸಿ ಮುಟ್ಟಿಸಲು ಪೊಲೀಸ್‌ ಇಲಾಖೆ ಈ ಹಿಂದೆ ಓಬವ್ವ ಪಡೆದ ಆರಂಭಿಸಿತ್ತು. ಈಗ ಆ ಪಡೆಗೆ ಮರು ಜೀವ ನೀಡಲಾಗಿದೆ. ಚೆನ್ನಮ್ಮ ಪಡೆ ಎಂಬ ಹೊಸ ಹೆಸರಿನೊಂದಿಗೆ ಇವತ್ತಿನಿಂದ ಗಸ್ತು ಆರಂಭಿಸಲಿದೆ. ಹೊಸ ಕಾರು, ವಿನೂತನ ಲೋಗೊ ಓಬವ್ವ ಪಡೆ ಮಾದರಿಯಲ್ಲೇ ಚೆನ್ನಮ್ಮ ಪಡೆಗು ಪ್ರತ್ಯೇಕ ವಾಹನ ನಿಗದಿಪಡಿಸಲಾಗಿದೆ. ಏರ್ಟಿಗಾ ವಾಹನವನ್ನು ಪಡೆಗೆ ಮೀಸಲಿರಿಸಲಾಗಿದೆ. ಓಬವ್ವ ಪಡೆಗೆ ಪ್ರತ್ಯೇಕ … Read more