ಮಿನಿಸ್ಟರ್‌ಗೆ ಬೆದರಿಕೆ, ಶಿವಮೊಗ್ಗದಲ್ಲಿ ಆಕ್ರೋಶ, ಘೋಷಣೆ

Youth-congress-protest-in-Shimoga-against-RSS

ಶಿವಮೊಗ್ಗ: ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಜೀವ ಬೆದರಿಕೆ ಒಡ್ಡಿದ ಪ್ರಕರಣವನ್ನು ಉನ್ನತ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್‌ (Youth Congress) ಕಾರ್ಯಕರ್ತರು ಶಿವಮೊಗ್ಗದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಆರ್‌ಎಸ್‌ಎಸ್‌ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಘೋಷಣೆಗಳನ್ನು ಕೂಗಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ಸಚಿವರಿಗೆ ಬೆದರಿಕೆ ಒಡ್ಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಸರ್ಕಾರಿ ಶಾಲೆ, ಕಾಲೇಜು, ಸರ್ಕಾರಿ ಜಾಗಗಳಲ್ಲಿ ಆರ್‌ಎಸ್‌ಎಸ್ ಮಾತ್ರವಲ್ಲ ಯಾವುದೆ ಸಂಘ ಸಂಸ್ಥೆಯು ಕಾರ್ಯಕ್ರಮ ನಡೆಸಬೇಕಿದ್ದರೆ ಅನುಮತಿ ಪಡೆಯಬೇಕು. … Read more

ದುರ್ಗಿಗುಡಿಯಲ್ಲಿ ಮೂರು ಅಂತಸ್ತಿನ ಕಟ್ಟಡದಿಂದ ಜಿಗಿದು ಯುವಕ ಸಾವು

Police-Jeep-at-Shimoga-General-Image

ಶಿವಮೊಗ್ಗ: ನಿರ್ಮಾಣ ಹಂತದ ಮೂರು ಅಂತಸ್ತಿನ ಕಟ್ಟಡದಿಂದ (Building) ಜಿಗಿದು ಯುವಕ ಸಾವನ್ನಪ್ಪಿದ್ದಾರೆ. ದುರ್ಗುಗುಡಿಯ ಶನಿಮಹಾತ್ಮ ಸ್ವಾಮಿ ದೇವಸ್ಥಾನದ ಹಿಂಭಾಗದ ಬೀದಿಯಲ್ಲಿ ಘಟನೆ ಸಂಭವಿಸಿದೆ. ಉಡುಪಿ ಜಿಲ್ಲೆಯ ಕಾರ್ಕಳ ಮೂಲದ ಅಮಿತ್‌ (27) ಮೃತ ಯುವಕ. ಅಮಿತ್‌ ಕಟ್ಟಡದಿಂದ ಕೆಳಗೆ ಬೀಳುತ್ತಿದ್ದಂತೆ ಸ್ಥಳೀಯರು ಕೂಡಲೆ ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತೀವ್ರ ಗಾಯಗೊಂಡಿದ್ದ ಅವರು ಅಸುನೀಗಿದ್ದಾರೆ. ಶಿವಮೊಗ್ಗದ ಹೊಟೇಲ್‌ ಒಂದರಲ್ಲಿ ಅಮಿತ್‌ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನದ ಬಳಿಕ ಹೊಟೇಲ್‌ ರಜೆ ಇತ್ತು. ಅಮಿತ್‌ ಕೆಲಸ … Read more

ಶಿವಮೊಗ್ಗದಲ್ಲಿ ಮ್ಯಾರಥಾನ್‌, ಉದ್ಗಾಟಿಸಲಿದ್ದಾರೆ ವಿಜಯೇಂದ್ರ, ಗಿನ್ನಿಸ್‌ ದಾಖಲೆ ಸೇರಲಿದೆ ಕಾರ್ಯಕ್ರಮ

Marathon in Shimoga city by BJP Yuva Morcha

ಶಿವಮೊಗ್ಗ: ನಶೆ ಮುಕ್ತ ಭಾರತಕ್ಕಾಗಿ ಸೆ.21ರಂದು ದೇಶದ 100 ನಗರಗಳಲ್ಲಿ ನಮೋ ಯುವ ರನ್‌ ಮ್ಯಾರಾಥಾನ್‌ ನಡೆಯಲಿದೆ. ಅಂದು ಬೆಳಗ್ಗೆ 6.30ಕ್ಕೆ ಶಿವಮೊಗ್ಗ ನಗರದಲ್ಲಿಯು ಮ್ಯಾರಥಾನ್‌ (Marathon) ನಡೆಯಲಿದೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ‍ಧ್ಯಕ್ಷ ಪ್ರಶಾಂತ್‌ ಕುಕ್ಕೆ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಶಾಂತ್‌ ಕುಕ್ಕೆ, ಅಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 7ಕ್ಕೆ ಮ್ಯಾರಥಾನ್‌ಗೆ ಚಾಲನೆ ನೀಡಲಿದ್ದಾರೆ. ಈ ಮ್ಯಾರಥಾನ್‌ ಗಿನ್ನಿಸ್‌ ದಾಖಲೆಗೆ ಸೇರಲಿದೆ ಎಂದು ತಿಳಿಸಿದರು. ಶಿವಮೊಗ್ಗದ ಶಿವಮೂರ್ತಿ ಸರ್ಕಲ್‌ನಲ್ಲಿ … Read more

ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ತೀರ್ಥಹಳ್ಳಿಯ ಯುವಕನ ರವಾನೆ

Zero-Traffic-for-Thirthahall-youth-from-Shimoga-to-Manipal-hospital

ಶಿವಮೊಗ್ಗ: ತೀವ್ರ ಜ್ವರದ ಕಾರಣ ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನನ್ನು ಶಿವಮೊಗ್ಗದಿಂದ ಮಣಿಪಾಲಕ್ಕೆ ಜೀರೋ ಟ್ರಾಫಿಕ್‌ನಲ್ಲಿ ರವಾನಿಸಲಾಯಿತು. ಸಂಚಾರ ಪೊಲೀಸರು ಜೀರೋ ಟ್ರಾಫಿಕ್‌ (Zero Traffic) ವ್ಯವಸ್ಥೆ ಮಾಡಿ, ಆಂಬುಲೆನ್ಸ್‌ಗೆ ಪೈಲೆಟ್‌ ಜೀಪ್‌ ಒದಗಿಸಿದ್ದರು. ಶಿವಮೊಗ್ಗದ ಮೆಟ್ರೋ ಆಸ್ಪತ್ರೆಗೆ ದಾಖಲಾಗಿದ್ದ ‍‍ತೀರ್ಥಹಳ್ಳಿಯ ಹುಂಚ ಹೋಬಳಿಯ ಶಂಕರಹಳ್ಳಿಯ ಶ್ರೇಯಾಂಕ್‌ (21) ಬಹು ಅಂಗಾಂಗ ಸಮಸ್ಯೆಯಿಂದ ಬಳಲುತ್ತಿದ್ದರು. ತುರ್ತಾಗಿ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ಮಣಿಪಾಲದ ಆಸ್ಪತ್ರೆಗೆ ರವಾನಿಸಲಾಯಿತು. ಇದಕ್ಕಾಗಿ ಪೊಲೀಸರು ಜೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಿ ನೆರವಾದರು. ಇಂದು … Read more

ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ ಶವವಾಗಿ ಪತ್ತೆ, ಈಶ್ವರ್‌ ಮಲ್ಪೆ ನೇತೃತ್ವದ ಕಾರ್ಯಾಚರಣೆ

Poornesh-found-in-the-lake-by-eshwar-malpe-team

ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ನಾಪತ್ತೆಯಾಗಿದ್ದ ಯುವಕ (Youth) ಶವವಾಗಿ ಪತ್ತೆಯಾಗಿದ್ದಾರೆ. ಮುಳುಗು ತಜ್ಞ ಈ‍ಶ್ವರ್‌ ಮಲ್ಪೆ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹ ಪತ್ತೆ ಮಾಡಿದ್ದಾರೆ. ಉಕ್ಕಡ ಮಗುಚಿ ಪೂರ್ಣೇಶ್‌ (22) ನಾಪತ್ತೆಯಾಗಿದ್ದರು. ಇವತ್ತು ಬೆಳಗ್ಗೆ ಮೃತದೇಹ ಹೊರ ತೆಗೆಯಲಾಗಿದೆ. ಮೃತದೇಹ ಕಂಡು ಪೂರ್ಣೇಶ್‌ ಅವರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಹೊಸನಗರ ತಾಲೂಕು ಬಂಟೋಡಿಯಲ್ಲಿ ಉಕ್ಕಡ ಮಗುಚಿ ಪೂರ್ಣೇಶ್ ನಾಪತ್ತೆಯಾಗಿದ್ದರು. ಶರತ್‌ ಮತ್ತು ರಂಜನ್‌ ಪಾರಾಗಿದ್ದರು. ವಿಷಯ ತಿಳಿದು ಅಗ್ನಿಶಾಮಕ ಸಿಬ್ಬಂದಿ ಶೋಧ … Read more

ಹೊಸನಗರದಲ್ಲಿ ಉಕ್ಕಡ ಮಗುಚಿ ಯುವಕ ನಾಪತ್ತೆ, ಸರ್ಕಾರದ ವಿರುದ್ಧ ಸ್ಥಳೀಯರು ಗರಂ, ಹೇಗಾಯ್ತು ಘಟನೆ?

Hosanagara-Sampekatte-Ukkada-incident

ಹೊಸನಗರ: ಹೊಳೆ ದಾಟುವಾಗ ಉಕ್ಕಡ ಮಗುಚಿ ಯುವಕ ನೀರುಪಾಲಾಗಿದ್ದಾನೆ (Tragedy). ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೊಸನಗರ ತಾಲೂಕು ಬಂಟೋಡಿಯಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ತಾಲೂಕಿನ ಹೊಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕಟ್ಟಿನಹೊಳೆ ಗ್ರಾಮದ ಮೂವರು ಯುವಕರು ತೆರಳುತ್ತಿದ್ದ ಉಕ್ಕಡ ಮಗುಚಿದೆ. ಪೂರ್ಣೇಶ (22) ಎಂಬ ಯುವಕ ನೀರು ಪಾಲಾಗಿದ್ದಾರೆ. ಜೊತೆಯಲ್ಲಿದ್ದ ಶರತ್ ಮತ್ತು ರಂಜನ್ ಎಂಬ ಯುವಕರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ದೌಡಾಯಿಸಿದ್ದು, ನೀರುಪಾಲಾದ ಯುವಕನ ಶೋಧ … Read more

ಯಡೇಹಳ್ಳಿಯಲ್ಲಿ ಅಪಘಾತ, ತೀವ್ರ ಗಾಯಗೊಂಡಿದ್ದ ಯುವಕ ಸಾವು, ಮಾನವೀಯತೆ ಮೆರೆದ ಪೋಷಕರು

Yadehalli-mishap-youth-donates-eyes

ಹೊಳೆಹೊನ್ನೂರು: ಯಡೇಹಳ್ಳಿಯಲ್ಲಿ ಅಪರಿಚಿತ ಸರಕು ಸಾಗಣೆ ವಾಹನ (Goods Vehicle) ಡಿಕ್ಕಿಯಾಗಿ ಗಾಯಗೊಂಡಿದ್ದ ಬಿ.ಪುನೀತ್‌ ರಾಜ್ (19) ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ. ಯಡೇಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ ದಾಟುವಾಗ ಸರಕು ಸಾಗಣೆ ವಾಹನ ಡಿಕ್ಕಿ ಹೊಡೆದಿತ್ತು. ತೀವ್ರ ಗಾಯಗೊಂಡಿದ್ದ ಪುನೀತ್‌ರಾಜ್‌ನನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತದಿಂದಾಗಿ ಬಹು ಅಂಗಾಂಗಕ್ಕೆ ಪೆಟ್ಟಾಗಿ ಹಾನಿಯಾಗಿ, ಕೋಮಾ ತಲುಪಿದ್ದರು. ಇದನ್ನೂ ಓದಿ » ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಚಿಕಿತ್ಸೆಗೆ ಸ್ಪಂದಿಸದ … Read more

ಮಹಿಳೆಗೆ 3 ವರ್ಷ, ಯುವಕನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ಏನಿದು ಕೇಸ್‌?

Imprisonment-for-Shikaripura-lady-and-a-youth

ಶಿವಮೊಗ್ಗ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಸಬೀತಾದ ಹಿನ್ನೆಲೆ ಓರ್ವ ಮಹಿಳೆ ಸೇರಿ ಇಬ್ಬರಿಗೆ ಜೈಲು (Imprisonment) ಶಿಕ್ಷೆ ಮತ್ತು ದಂಡ ವಿಧಿಸಿ ಶಿವಮೊಗ್ಗದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಶಿಕಾರಿಪುರದ ಯಾಸೀರ್‌ ಪಾಷಾ (27) ಎಂಬಾತನಿಗೆ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹50 ಸಾವಿರ ದಂಡ ವಿಧಿಸಲಾಗಿದೆ. ಶಹಜಾನ್‌ ಅಲಿಯಾಸ್‌ ಸಾನಿಯಾ ಬೇಗಂಗೆ (52) ಮೂರು ವರ್ಷ ಕಠಿಣ ಕಾರಾಗೃಹ ಶಿಕ್ಷೆ, ₹25 ಸಾವಿರ ದಂಡ ವಿಧಿಸಲಾಗಿದೆ ಎಂದು ಪೊಲೀಸ್‌ ಇಲಾಖೆ … Read more

ಮನೆಯವರೆಲ್ಲ ಮದುವೆಗೆ ತೆರಳಿದ್ದಾಗ ನೇಣು ಬಿಗಿದು ಯುವಕ ಸಾವು

Crime-News-General-Image

ರಿಪ್ಪನ್‌ಪೇಟೆ: ಕಾರಗೋಡು ಗ್ರಾಮದ ಸೃಜನ್ (19) ಮನೆಯಲ್ಲಿ (House) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯವರೆಲ್ಲಾ ಸಂಬಂಧಿಕರ ಮದುವೆಗೆಂದು ತೀರ್ಥಹಳ್ಳಿಗೆ ತೆರಳಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ರಿಪ್ಪನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇದನ್ನೂ ಓದಿ » ಸೊರಬದಲ್ಲಿ ತಟ್ಟೆ ಬ್ಯಾಂಕ್ ಆರಂಭ, ಇವತ್ತು ತೀರ್ಥಹಳ್ಳಿಯಲ್ಲಿ ಉದ್ಘಾಟನೆ, ಏನಿದು ತಟ್ಟೆ ಬ್ಯಾಂಕ್?

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಾಕಿದ್ದ ಯುವಕನಿಗೆ ಶಾಕ್‌, ದಾಖಲಾಯ್ತು ಕೇಸ್‌, ಏನಿದೆ ವಿಡಿಯೋದಲ್ಲಿ?

instagram.webp

ಶಿವಮೊಗ್ಗ : ಉದ್ದನೆಯ ಹರಿತ ಆಯುಧ ಹಿಡಿದು ವಿಡಿಯೋ (Video) ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದ ಯುವಕನ ವಿರುದ್ಧ ಶಿವಮೊಗ್ಗದಲ್ಲಿ ಪೊಲೀಸ್‌ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದಾರೆ. ಆಯುಧ ಪ್ರದರ್ಶಿಸುವ ವಿಡಿಯೋವನ್ನು (Video) ಎಡಿಟ್‌ ಮಾಡಿ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಲಾಗಿತ್ತು. ಯು ಆರ್‌ ಮೈ ಎನಿಮಿ ಎಂದು ವಿಡಿಯೋದಲ್ಲಿ ಬರೆಯಲಾಗಿತ್ತು ಎಂದು ಆರೋಪಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಇರುವುದರಿಂದ ವಿಡಿಯೋ ಅಪ್‌ಲೋಡ್‌ ಮಾಡಿದ್ದ ಜಬೀರ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೋಟೆ ಠಾಣೆಯಲ್ಲಿ ಸ್ವಯಂ … Read more