ಹೊಳೆಹೊನ್ನೂರು ಪೊಲೀಸರಿಂದ ಚನ್ನಗಿರಿಯ ಬೆಂಕಿ ರಾಮಪ್ಪ ಅರೆಸ್ಟ್‌, ಕಂತೆ ಕಂತೆ ದುಡ್ಡು ವಶಕ್ಕೆ, ಏನಿದು ಕೇಸ್‌?

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಹೊಳೆಹೊನ್ನೂರು: ನಕಲಿ ಬಂಗಾರ (Gold) ನೀಡಿ ಲಕ್ಷಾಂತರ ವಂಚಿಸಿದ್ದ ಆರೋಪ ಸಂಬಂಧ ರಾಮಪ್ಪ ಅಲಿಯಾಸ್‌ ಬೆಂಕಿ ರಾಮಪ್ಪ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ರಾಮಪ್ಪ ವಿಜಯನಗರ ಜಿಲ್ಲೆಯ ಹೊಸಪೇಟೆಯ ನಿವಾಸಿ ರಾಜೇಶ್ ಅವರಿಗೆ ಸುರೇಶ್ ಎಂದು ಪರಿಚಯಿಸಿಕೊಂಡಿದ್ದ. ನಂತರ, ಕಾಮಗಾರಿ ವೇಳೆ ನನಗೆ ಬಂಗಾರ ಸಿಕ್ಕಿದೆ. ಅದನ್ನು ನಿಮಗೆ ಮಾರಾಟ ಮಾಡುತ್ತೇನೆ ಎಂದು ಅವರನ್ನು ನಂಬಿಸಿದ್ದ ಎಂದು ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಈ ಜಾಹೀರಾತುಗಳ ಕೆಳಗೆ ಸುದ್ದಿ ಇನ್ನೂ ಇದೆ)  

SLV-BOOK-SHOP-SHIMOGA

JNNCE-ADMISSION-2025-26

ಬಂಗಾರ ಕೊಡುವುದಾಗಿ ಹೇಳಿ ಹೊಳೆಹೊನ್ನೂರಿಗೆ ಬರಲು ತಿಳಿಸಿದ್ದ. ಬಳಿಕ ನಕಲಿ ಬಂಗಾರ ನೀಡಿ 4 ಲಕ್ಷ ರೂ. ಪಡೆದಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ರಾಮಪ್ಪನನ್ನು ಬಂಧಿಸಿದ ಪೊಲೀಸರು, 3.08 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ.

ಸಿಪಿಐ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್ ಎಸ್.ಕುರಿ, ಸಿಬ್ಬಂದಿ ಎಚ್.ಸಿ. ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ವಿಶ್ವನಾಥ್ ಅವರ ತಂಡ ಆರೋಪಿ ಬಂಧನ ಕಾರ್ಯಾಚರಣೆ ನಡೆಸಿತ್ತು.

fake-gold-case-one-arrested-by-holehonnuru-police.

ಇದನ್ನೂ ಓದಿ » ದೇವಸ್ಥಾನದ ಮುಂದೆ ನಿಲ್ಲಿಸಿದ್ದ ಕಾರಿನಲ್ಲಿ ದಿಢೀರ್‌ ಬೆಂಕಿ, ಧಗಧಗ ಹೊತ್ತಿ ಉರಿದು ಸುಟ್ಟು ಕರಕಲು

The-Team-PU-College-scaled

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment