ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 25 DECEMBER 2022
ಭದ್ರಾವತಿ : ಬಾಲಕನ ಅಪಹರಣ (kidnap case) ಮಾಡಿ ಪೋಷಕರಿಗೆ ಹಣದ ಬೇಡಿಕೆ ಇಟ್ಟಿದ್ದ ಗ್ಯಾಂಗ್ ಒಂದನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿ ಮಹಮದ್ ಅಜರ್ ಎಂಬುವವರ 16 ವರ್ಷದ ಮಗನ ಕಿಡ್ನಾಪ್ (kidnap case) ಮಾಡಲಾಗಿತ್ತು. ಡಿ.22ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಬಾಲಕನ ಅಪಹರಣ ಮಾಡಿದ್ದರು. ಅಲ್ಲದೆ ಹಣಕ್ಕೆ ಬೇಡಿಕೆಯನ್ನು ಇಟ್ಟಿದ್ದರು. ಈ ಸಂಬಂಧ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ರಾಶಿ ರಾಶಿ ಸೈಲೆನ್ಸರ್ ಗಳನ್ನು ರಸ್ತೆ ಮೇಲಿಟ್ಟು ಬುಲ್ಡೋಜರ್ ಹತ್ತಿಸಿದ ಪೊಲೀಸರು
ತನಿಖೆ ಕೈಗೊಂಡ ನ್ಯೂಟೌನ್ ಠಾಣೆ ಪೊಲೀಸರು ಬಾಲಕನ ಪತ್ತೆ ಮಾಡಿದ್ದಾರೆ. ಅಪಹರಣಕಾರರನ್ನು ಬಂಧಿಸಿದ್ದಾರೆ. ಭದ್ರಾವತಿ ನೆಹರು ನಗರದ ಮುಬಾರಕ್ ಅಲಿಯಾಸ್ ಡಿಚ್ಚಿ (24), ಸಾಗರದ ಜಾಬೀರ್ ಬಾಷಾ ಅಲಿಯಾಸ್ ರಾಬರ್ಟ್ (22), ಶಿವಮೊಗ್ಗ ಟಿಪ್ಪುನಗರದ ಮುಸ್ತಫಾ (26), ಸಾಗರ ನೂರುಲ್ ಹುದಾ ಮಸೀದಿ ಸಮೀಪದ ಅಡಕೆ ವ್ಯಾಪಾರಿ ಅಬ್ದುಲ್ ಸಲಾಂ (26), ಸಾಗರ ಅಣಲೆಕೊಪ್ಪದ ಇರ್ಫಾನ್ (31) ಬಂಧಿತರು. ಇವರಿಂದ ಒಂದು ಕಾರನ್ನು ವಶಕ್ಕೆ ಪಡೆಯಲಾಗಿದೆ.
ಭದ್ರಾವತಿ ಎ.ಎಸ್.ಪಿ ಜಿತೇಂದ್ರ ದಯಾಮ, ಸಿಪಿಐ ರಾಘವೇಂದ್ರ ಕಾಂಡಿಕೆ ಅವರ ನೇತೃತ್ವದಲ್ಲಿ, ನ್ಯೂಟೌನ್ ಪೊಲೀಸ್ ಠಾಣೆ ಪಿಎಸ್‌ಐ ರಂಗನಾಥ ಅಂತರಗಟ್ಟಿ, ಸಿಬ್ಬಂದಿ ಎ.ಎಸ್.ಐ ವೇಂಕಟೇಶ, ರಾಘವೇಂದ್ರ, ಶ್ಯಾಮಕುಮಾರ, ಶ್ರೀಧರ, ರೂಪೇಶ, ಹಾಲಪ್ಪ, ಮೌನೇಶ, ಪೈರೋಜ್, ಸುನೀಲ್ ಕುಮಾರ, ತೀರ್ಥಲಿಂಗಪ್ಪ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

LATEST NEWS
- ಶಿವಮೊಗ್ಗದಲ್ಲಿ ಕೆಲಸ ಖಾಲಿ ಇದೆ, ತಿಂಗಳಿಗೆ ₹20,000 ದಿಂದ ₹50,000 ದವರೆಗೆ ಸಂಬಳ

- ತಂದೆ, ಮಗನಿಗೆ ಜೀವಾವಧಿ ಶಿಕ್ಷೆ, ದಂಡ ವಿಧಿಸಿದ ಶಿವಮೊಗ್ಗ ಕೋರ್ಟ್, ಯಾಕೆ?

- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 17 ಮಾರ್ಚ್ 2026 – ಅಡಿಕೆ ಧಾರಣೆ

- ಶಿವಮೊಗ್ಗ ಡಿ.ಸಿ ಎದುರು ಮೈದಾನಕ್ಕೆ ಬ್ಯಾರಿಕೇಡ್, ಹಿಂದೂ ಸಂಘಟನೆಗಳು ಗರಂ, ಕಾರಣವೇನು?

- ಬೆಳಗ್ಗೆ ಲೇಔಟ್‌ಗೆ ಬಂದ ಲೆಕ್ಚರರ್‌ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – SHIVAMOGGA LIVE COMMUNITY














