ಬಟ್ಟೆಯೊಳಗೆ ಚೇಳು ನುಗ್ಗಿದೆ ಅಂತಾ ಗೆಳತಿ ಮನೆಗೆ ಹೋದ ಮಹಿಳೆ, ಆಮೇಲೆ ಗೆಳತಿಗೆ ಕಾದಿತ್ತು ಶಾಕ್

ಭದ್ರಾವತಿ: ಬಟ್ಟೆಯೊಳಗೆ ಚೇಳು ನುಗ್ಗಿದೆ ಎಂದು ನಾಟಕವಾಡಿ ಮನೆಯೊಳಗೆ ಪ್ರವೇಶಿಸಿದ ಮಹಿಳೆಯೊಬ್ಬರು ತನ್ನ ಸ್ನೇಹಿತೆಯ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು (rob gold) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಭದ್ರಾವತಿ ಗಾಂಧಿನಗರದ ನಿವಾಸಿ ಶೋಭಾ ಆರ್. ಎಂಬುವವರು ಹೊಸಮನೆ ಸಂತೆ ಮೈದಾನದ ತರಕಾರಿ ಮಂಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆಯೊಬ್ಬರ ಪರಿಚಯವಾಗಿತ್ತು. ಇವರಿಬ್ಬರ ಸ್ನೇಹ ಗಾಢವಾಗಿದ್ದರಿಂದ ಮಹಿಳೆ ಆಗಾಗ್ಗೆ ಶೋಭಾ ಅವರ ಮನೆಗೆ ಬಂದು ಹೋಗುತ್ತಿದ್ದರು.

ಇದನ್ನೂ ಓದಿ – ತ್ಯಾವರೆಕೊಪ್ಪ ಮೃಗಾಲಯದಲ್ಲಿ ವೈದ್ಯೆ ಸಾವು, ಮಿನಿಸ್ಟರ್‌ ಗರಂ, ಖಡಕ್‌ ಸೂಚನೆ, ಏನದು?

2024ರ ಡಿಸೆಂಬರ್ ತಿಂಗಳಲ್ಲಿ ಒಂದು ದಿನ ಮಹಿಳೆ, ಶೋಭಾ ಅವರ ಮಗಳನ್ನು ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆದೊಯ್ದಿದ್ದರು. ಮಾರ್ಗಮಧ್ಯೆ ತನ್ನ ಬಟ್ಟೆಯೊಳಗೆ ಚೇಳು ನುಗ್ಗಿದೆ ಎಂದು ನಂಬಿಸಿದ್ದರು. ಬಟ್ಟೆ ಸರಿ ಮಾಡಿಕೊಳ್ಳುವ ನೆಪದಲ್ಲಿ ಶೋಭಾ ಅವರು ಇಲ್ಲದ ಸಮಯದಲ್ಲಿ ಅವರ ಮನೆಗೆ ಮಗಳನ್ನು ಕರೆತಂದಿದ್ದಳು. ಮನೆಯೊಳಗೆ ಹೋದ ಮಹಿಳೆ ರೂಂನ ಬಾಗಿಲು ಹಾಕಿಕೊಂಡು ಸ್ವಲ್ಪ ಸಮಯದ ನಂತರ ಹೊರಬಂದಿದ್ದರು ಎಂದು ದೂರಿನಲ್ಲಿ ಆಪಾದಿಸಲಾಗಿದೆ.

Crime-News-General-Image

ಶೋಭಾ ಅವರು ಒಡವೆಗಳನ್ನು ಧರಿಸಲು ಬೀರು ತೆರೆದಾಗ ಕಳ್ಳತನ ಬೆಳಕಿಗೆ ಬಂದಿದೆ. ಬೀರುವಿನ ಲಾಕರ್‌ನಲ್ಲಿದ್ದ ಸುಮಾರು 73.5 ಗ್ರಾಂ ತೂಕದ ₹4,51,000 ಮೌಲ್ಯದ ಬಂಗಾರದ ಬ್ರೇಸ್‌ಲೆಟ್, ಸರಗಳು, ಓಲೆ, ಜುಮುಕಿ ಹಾಗೂ ಉಂಗುರಗಳು ಕಾಣೆಯಾಗಿದ್ದವು. ಮನೆಯವರನ್ನು ವಿಚಾರಿಸಿದಾಗ ಮಗಳು ಅಂದು ನಡೆದ ಘಟನೆ ತಿಳಿಸಿದ್ದಾಳೆ. ಘಟನೆ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್‌ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

Sunrise Facility Services, Sri sai Trust Shimoga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 20, 2026 at 11:00 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 20, 2026

Leave a Comment