ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ವಿದ್ಯಾರ್ಥಿನಿಲಯಕ್ಕೆ ದಿಢೀರ್ ಭೇಟಿ (surprise visit) ನೀಡಿ ಪರಿಶೀಲಿಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಸಾರ್ವಜನಿಕರಿಗೆ ದೊರೆಯುತ್ತಿರುವ ವೈದ್ಯಕೀಯ ಸೇವೆಗಳ ಬಗ್ಗೆ ಮಾಹಿತಿ ಪಡೆದರು. ಕೇಂದ್ರದ ಕಾರ್ಯನಿರ್ವಹಣೆ, ಅಗತ್ಯ ಔಷಧಿಗಳ ದಾಸ್ತಾನು ಪರಿಶೀಲಿಸಿದರು. ಕೇಂದ್ರದಿಂದ ದೊರಕುತ್ತಿರುವ ಸೌಲಭ್ಯಗಳ ಕುರಿತು ರೋಗಿಗಳ ಜೊತೆಗೆ ಚರ್ಚೆ ನಡೆಸಿದರು.
ಇದನ್ನೂ ಓದಿ : ಹೊಸನಗರ ಕ್ಷೇತ್ರ ಮರು ರಚನೆ, ಪಾದಯಾತ್ರೆ ಸಮಾರೋಪ, ಸಚಿವ, ಸಂಸದರು ಏನಂದ್ರು?
ಹಾಸ್ಟೆಲ್‌ಗು ದಿಢೀರ್ ಭೇಟಿ
ಇಲ್ಲಿನ ವಿದ್ಯಾರ್ಥಿನಿಲಯಕ್ಕು ಜಿಲ್ಲಾಧಿಕಾರಿ ದಿಢೀರ್ ಭೇಟಿ ನೀಡಿದರು. ಅಡುಗೆ ಕೋಣೆ ಮತ್ತು ದಾಸ್ತಾನು ಕೊಠಡಿ ವೀಕ್ಷಿಸಿದರು. ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟ ಖಚಿತಪಡಿಸಿಕೊಳ್ಳಲು ಖುದ್ದಾಗಿ ಪರಿಶೀಲನೆ ನಡೆಸಿದರು. ಮೆನುವಿನಂತೆ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಿ, ಶುಚಿತ್ವಕ್ಕೆ ಆದ್ಯತೆ ನೀಡಲು ಸೂಚಿಸಿದರು.

ನಿಲಯದ ಆವರಣ ಮತ್ತು ಶೌಚಾಲಯಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ವಾರ್ಡನ್‌ಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು.
ವಿದ್ಯಾರ್ಥಿಗಳ ಜೊತೆಗೆ ಸಂವಾದ
ಬಳಿಕ ವಿದ್ಯಾರ್ಥಿಗಳ ಜೊತೆಗೆ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣವಿದೆಯೇ ಮತ್ತು ಮೂಲ ಸೌಕರ್ಯಗಳ ಕೊರತೆಯಿದೆಯೇ ಎಂದು ವಿಚಾರಿಸಿದರು.
ಇದನ್ನೂ ಓದಿ : ಅರ್ಧ ಬೆಲೆಗೆ ಚಿನ್ನ, ಶಿವಮೊಗ್ಗದ ಬುಳ್ಳಾಪುರದ ತೆಂಗಿನ ತೋಟದಲ್ಲಿ ಆಗಿದ್ದೇನು?

LATEST NEWS
- ಕೆನರಾ ಬ್ಯಾಂಕ್ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್?

- ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್

- ಶಿವಮೊಗ್ಗ ಸಿಟಿಯಲ್ಲಿ ಅದ್ಧೂರಿ ಶೋಭಾಯಾತ್ರೆ, ಏನೇನೆಲ್ಲ ಇತ್ತು? ಇಲ್ಲಿವೆ ಫೋಟೊಗಳು

- ಶಿವಮೊಗ್ಗ ಜಿಲ್ಲಾಧಿಕಾರಿ ದಿಢೀರ್ ಭೇಟಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಹಾಸ್ಟೆಲ್‌ನಲ್ಲಿ ಪರಿಶೀಲನೆ

- ಆಗುಂಬೆ ಸಮೀಪ ಕಾರು ಡಿಕ್ಕಿ, ವ್ಯಕ್ತಿ ಸ್ಥಳದಲ್ಲೆ ಸಾವು, ಹೇಗಾಯ್ತು ಘಟನೆ?

About The Editor
ನಿತಿನ್ ಆರ್.ಕೈದೊಟ್ಲು










