48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರು ಅರೆಸ್ಟ್‌, ಲಕ್ಷ ಲಕ್ಷದ ಚಿನ್ನಾಭರಣ ಸೀಜ್‌, ಎಲ್ಲೆಲ್ಲಿ ಕದ್ದಿದ್ದರು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಹೊಸನಗರ: ಕಳ್ಳತನವಾದ 48 ಗಂಟೆಯೊಳಗೆ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು (Thieves) ಹೊಸನಗರ ತಾಲೂಕು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇವರಿಂದ ₹4 ಲಕ್ಷ ಮೌಲ್ಯದ ಚಿನ್ನಾಭರಣ, ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಮಗಾರ ಓಣಿಯ ಹನುಮಂತ ತೊಳೆಯಪ್ಪ (26) ಮತ್ತು ಮಂಜುನಾಥ ಬಿಸುಕಲ್ಲೊಡ್ಡರ (36) ಬಂಧಿತರು.

ಲಕ್ಷ ಲಕ್ಷದ ಚಿನ್ನಾಭರಣ, ನಗದು ಕದ್ದಿದ್ದರು

ಹೊಸನಗರದ ನಿಲ್ಸ್‌ಕಲ್‌ ಸಮೀಪದ ಕಬಳೆ ಗ್ರಾಮದ ರಿಚರ್ಡ್‌ ಡಿಸೋಜಾ ಮತ್ತು ಮಾಸ್ತಿಕಟ್ಟೆಯ ಶೇಷಾದ್ರಿ ಎಂಬುವವರ ಮನೆಯಲ್ಲಿ ಆ.21ರಂದು ಕಳ್ಳತನವಾಗಿತ್ತು. ರಿಚರ್ಡ್‌ ಡಿಸೋಜಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲಿನ ಬೀಗ ಮುರಿದು ₹1.66 ಲಕ್ಷ ಮೌಲ್ಯದ 31 ಗ್ರಾಂ ಚಿನ್ನಾಭರಣ, ₹70 ಸಾವಿರ ನಗದು ಕಳ್ಳತನ ಮಾಡಲಾಗಿತ್ತು. ಶೇಷಾದ್ರಿ ಅವರ ಮನೆಯಲ್ಲಿ ₹1.11 ಲಕ್ಷದ 28 ಗ್ರಾಂ ಚಿನ್ನಾಭರಣ, ₹3000 ಮೌಲ್ಯದ ಬೆಳ್ಳಿ ವಸ್ತುಗಳು, ₹30,000 ನಗದು ಕಳ್ಳತನ ಮಾಡಲಾಗಿತ್ತು.

Nagara-Police-nab-two-inter-district-thieves

48 ಗಂಟೆಯೊಳಗೆ ಕಳ್ಳರು ಅರೆಸ್ಟ್‌

ಪ್ರಕರಣ ದಾಖಲಾದ 48 ಗಂಟೆಯಲ್ಲಿ ಇಬ್ಬರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ. ಡಿವೈಎಸ್‌ಪಿ ಅರವಿಂದ ಎನ್‌.ಕಲಗುಜ್ಜಿ, ಹೊಸನಗರ ಇನ್ಸ್‌ಪೆಕ್ಟರ್‌ ಗುರಣ್ಣ ಎಸ್‌.ಹೆಬ್ಬಾಳ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಐದು ಗೇಟ್‌ ಓಪನ್‌, ಇಲ್ಲಿದೆ ಫೋಟೊ ರಿಪೋರ್ಟ್‌

ನಗರ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಾನಂದ ಕೋಳಿ, ಸಿಬ್ಬಂದಿ ಕುಮಾರ್‌.ಟಿ, ಶ್ರೀಶೇಖ್‌ ಅಮೀರ್‌ ಜಾನ್‌, ಕಿರಣ್‌ ಕುಮಾರ್‌, ವಿಶ್ವನಾಥ್‌.ಡಿ, ಪ್ರವೀಣ್‌ ಕುಮಾರ್‌, ಶಿವಕುಮಾರ ನಾಯ್ಕ, ರವಿಚಂದ್ರ, ಸುಜಯ ಕುಮಾರ್‌, ಪ್ರಜ್ವಲ್‌ ಡಿ.ಎಸ್‌, ಸಚಿನ್‌, ಚಾಲಕ ಶಶಿಧರ, ಶಿವಮೊಗ್ಗದ ಬೆರಳಚ್ಚು ವಿಭಾಗ ಮತ್ತು ಎ.ಎನ್‌.ಸಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

Two Inter District thieves nabbed by nagara police

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment