ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ: ಕಳಸವಳ್ಳಿ – ಅಂಬಾರಗೋಡ್ಲು ನಡುವೆ ಓಡಾಡುತ್ತಿದ್ದ ಲಾಂಚ್‌ನ್ನು (Sigandur launch) ಪ್ರವಾಸೋದ್ಯಮಕ್ಕೆ ಬಳಸಲು ಜಿಲ್ಲಾಡಳಿತ ಮತ್ತು ಶಾಸಕರು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಂಬಾರು ಮಂಡಳಿ ಸದಸ್ಯ ಪ್ರಸನ್ನ ಕೆರೆಕೈ ಒತ್ತಾಯಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಸೇತುವೆ ಉದ್ಘಾಟನೆಗೊಂಡು ಲಾಂಚ್ ಸೇವೆ ಸ್ಥಗಿತಗೊಂಡಿದೆ. ಆ ಸಂದರ್ಭ ಲಾಂಚ್‌ಗಳನ್ನು ಪ್ರವಾಸೋದ್ಯಮಕ್ಕೆ ಬಳಸಲಾಗುವುದು ಎಂದು ಸರ್ಕಾರ ಹೇಳಿತ್ತು. ಇದಾದ 8 ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಶರಾವತಿ ಹಿನ್ನೀರಿನಲ್ಲಿ ಮೂರು ಲಾಂಚ್‌ಗಳು ಸೇವೆಯಲ್ಲಿದ್ದವು. ಮುಪ್ಪಾನೆಯಲ್ಲಿ ಫ್ಲಾಟ್ ಫಾರಂ ಸಿದ್ದಪಡಿಸಿದರೆ ಒಂದು ಲಾಂಚ್‌ನ್ನು ಅಲ್ಲಿ ಬಿಡಬಹುದು. ಜನರ ಹಿತದೃಷ್ಟಿಯಿಂದ ಅಲ್ಲಿ ಇದರ ಅಗತ್ಯವಿದೆ. ಬರುವೆಯಲ್ಲೊಂದು ಫ್ಲಾಟ್ ಫಾರಂ ಮಾಡಿದರೆ ಅಲ್ಲೂ ಒಂದು ಲಾಂಚ್‌ನ್ನು ವ್ಯವಸ್ಥೆ ಮಾಡಬಹುದು. ಬರುವೆಯ ಜನರು ಪಡಿತರಕ್ಕೆ 40 ಕಿ.ಮೀ. ಸುತ್ತುವರಿದು ಬರುವುದು ಇದರಿಂದ ತಪ್ಪುತ್ತದೆ ಎಂದು ಅವರು ಸಲಹೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಯಲಕುಂಡ್ಲಿ, ಜಿಲ್ಲಾ ಸಮಿತಿ ಸದಸ್ಯ ಪ್ರಶಾಂತ್, ಶ್ರೀಧರ ಚುಟ್ಟಿಕೆರೆ, ಗಣಪತಿ, ಗೋವರ್ಧನ ಮತ್ತಿತರರು ಹಾಜರಿದ್ದರು.
ಇದನ್ನೂ ಓದಿ – ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

LATEST NEWS
- ಸಕ್ರೆಬೈಲು ಕಾಡಿನಲ್ಲಿ ಎರಡು ಕ್ಯಾಮರಾ ಕಳ್ಳತನ, ಅಡವಿ ಮಧ್ಯೆ ಕ್ಯಾಮರಾ ಇಟ್ಟಿದ್ದೇಕೆ?

- ಶಿವಮೊಗ್ಗದ NH ಆಸ್ಪತ್ರೆಯಿಂದ ಕಾರ್ಯಾಗಾರ, 40 ಮಕ್ಕಳಿಗೆ ಮಾತ್ರ ಅವಕಾಶ, ಏನೇನಿರುತ್ತೆ?

- ಮಾಜಿ ಮಿನಿಸ್ಟರ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಕಚೇರಿ ಮುಂದೆ ಅಹೋರಾತ್ರಿ ಧರಣಿ

- ವಕ್ತರರಾಗಿ ಜಿ.ಡಿ.ಮಂಜುನಾಥ್ ನೇಮಕ

- ಕಾರು ಚೇಸ್ ಮಾಡಿಕೊಂಡು ಬಂದು ಕಾಚಿನಕಟ್ಟೆ ಬಳಿ ಅಡ್ಡಗಟ್ಟಿ ಗುತ್ತಿಗೆದಾರನ ಮೇಲೆ ಹಲ್ಲೆ

About The Editor
ನಿತಿನ್ ಆರ್.ಕೈದೊಟ್ಲು















