ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SAGARA NEWS | 7 ಸೆಪ್ಟಂಬರ್ 2020
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಟಿ ವೈದ್ಯ ನಾರಾಯಣಮೂರ್ತಿ ಅವರ ನಿಧನದ ಬಳಿಕ ಪುನಾರಂಭವಾಗಿದ್ದ ಔಷಧ ವಿತರಣೆಗೆ ಮತ್ತೊಮ್ಮೆ ತಡೆ ನೀಡಲಾಗಿದೆ. ಗ್ರಾಮಸ್ಥರ ಒತ್ತಾಯದ ಹಿನ್ನೆಲೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದು, ಹೊರ ಊರಿನಿಂದ ಬಂದವರನ್ನು ನರಸೀಪುರ ಗ್ರಾಮ ಪ್ರವೇಶಿಸದಂತೆ ತಡೆದಿದ್ದಾರೆ.
ಪುನಾರಂಭವಾಗಿತ್ತು ಔಷಧ ವಿತರಣೆ
ನರಸೀಪುರದಲ್ಲಿ ನಾಟಿ ವೈದ್ಯ ನಾರಾಯಣಮೂರ್ತಿ ಅವರು ಕ್ಯಾನ್ಸರ್, ಕಿಡ್ನಿ ವೈಫಲ್ಯ ಸೇರಿದಂತೆ ಹಲವು ಸಮಸ್ಯೆಗೆ ಔಷಧ ವಿತರಿಸಿತ್ತಿದ್ದರು. ಕರೋನ ಲಾಕ್‍ಡೌನ್ ಹಿನ್ನೆಲೆ ಔಷಧ ವಿತರಣೆಗೆ ತಡೆ ನೀಡಲಾಗಿತ್ತು. ಬಳಿಕ ನಾಟಿ ವೈದ್ಯ ನಾರಾಯಣಮೂರ್ತಿ ಅವರ ನಿಧನದಿಂದಾಗಿ ಔಷಧ ವಿತರಣೆ ಸ್ಥಗಿತಗೊಳ್ಳಲಿದೆ ಎಂದು ಭಾವಿಸಲಾಗಿತ್ತು. ಆದರೆ ಕಳೆದ ಗುರುವಾರದಿಂದ ಅವರ ಕುಟುಂಬದವರು ಔಷಧ ವಿತರಣೆ ಪುನಾರಂಭ ಮಾಡಿದ್ದರು.
ಸ್ಥಳೀಯರಿಂದ ಭಾರಿ ವಿರೋಧ
ಬೇರೆ ಬೇರೆ ಕಡೆಯಿಂದ ಬರುವವರು ಊರು ಪ್ರವೇಶಿಸುವುದು ಗ್ರಾಮಸ್ಥರಲ್ಲಿ ಕರೋನ ಆತಂಕ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಬೇರೆ ಊರಿನಿಂದ ಬರುವವರು ತಮ್ಮೂರು ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಗ್ರಾಮಸ್ಥರು ಉಪ ವಿಭಾಗಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದರು.
ಬಿಗಿ ಬಂದೋಬಸ್ತ್
ಗ್ರಾಮಸ್ಥರ ಮನವಿ ಮೇರೆಗೆ ನರಸೀಪುರ ಗ್ರಾಮದ ಪ್ರವೇಶ ದ್ವಾರದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಪೊಲೀಸರು ಬ್ಯಾರಿಕೇಡ್ ಹಾಕಿ ಅಪರಿಚಿತರು ಗ್ರಾಮ ಪ್ರವೇಶಿಸದಂತೆ ತಡೆದಿದ್ದರು. ಹಾಗಾಗಿ ಹೊರ ಜಿಲ್ಲೆ, ಹೊರ ರಾಜ್ಯದಿಂದ ಬಂದವರು ಬರಿಗೈಯಲ್ಲಿ ಹಿಂತಿರುಗುವಂತಾಯಿತು.
ನೋವು ತೋಡಿಕೊಂಡ ಗ್ರಾಹಕರು
ಬೇರೆ ಜಿಲ್ಲೆ, ರಾಜ್ಯಗಳಿಂದ ಬಂದಿದ್ದವರು, ತಮಗೆ ಒಂದು ಪ್ಯಾಕೆಟ್ ಔಷಧ ಕೊಡಿಸಿ ಎಂದು ಪೊಲೀಸರು ಮತ್ತು ಸ್ಥಳೀಯರಲ್ಲಿ ಮನವಿ ಮಾಡಿದರು. ತಮ್ಮ ಕುಟುಂಬದ ಸದಸ್ಯರೊಬ್ಬರು ಕ್ಯಾನ್ಸರ್‍ನಿಂದ ಬಳಲುತ್ತಿದ್ದಾರೆ. ಔಷಧ ಕೊಡಿಸಿ ಎಂದು ಮನವಿ ಮಾಡಿದರು. ಆದರೆ ನಿಯಮದ ಪ್ರಕಾರ ಯಾರಿಗೂ ಔಷಧ ವಿತರಣೆಗೆ ಅವಕಾಶವಿಲ್ಲ. ಹಾಗಾಗಿ ಔಷಧ ಸಿಗದೆ ಎಲ್ಲರೂ ಹಿಂತಿರುಗಿದರು.
ಕರೋನ ಭೀತಿಯಲ್ಲಿ ನರಸೀಪುರ ಗ್ರಾಮಸ್ಥರು ಲಾಕ್ ಡೌನ್ ಅವಧಿಯಲ್ಲೂ ತಮ್ಮೂರು ಪ್ರವೇಶಿಸುವ ಅಪರಿಚಿತರನ್ನು ತಡೆದು ಪ್ರಶ್ನಿಸಿದ್ದರು. ಈಗಲು ಅದು ಮುಂದುವರೆದಿದೆ.
https://www.facebook.com/liveshivamogga/videos/314546413130946/?t=1
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]