ಸಾಗರ – ಸೊರಬ – ಶಿಕಾರಿಪುರದಿಂದ ಬೆಂಗಳೂರಿಗೆ ಎರಡು KSRTC ಪಲ್ಲಕ್ಕಿ ಬಸ್‌, ಟೈಮಿಂಗ್‌ ಪ್ರಕಟ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 8 NOVEMBER 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಕೆಎಸ್‌ಆರ್‌ಟಿಸಿ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ ಸಾಗರ – ಸೊರಬ-ಬೆಂಗಳೂರು ಮಾರ್ಗದಲ್ಲಿ (ವಯಾ ಶಿಕಾರಿಪುರ, ಶಿವಮೊಗ್ಗ, ಭದ್ರಾವತಿ) ನ.5 ರಿಂದ ನೂತನವಾಗಿ 2 ನಾನ್ ಎಸಿ ಸ್ಲೀಪರ್ ಬಸ್ಸುಗಳನ್ನು ಬಸ್ಸುಗಳನ್ನು ಆರಂಭಿಸಲಾಗಿದೆ.

ಬಸ್ಸಿನ ವೇಳಾಪಟ್ಟಿ ಪ್ರಕಟ

ಸಾಗರ – ಸೊರಬ – ಬೆಂಗಳೂರು ಮಾರ್ಗ – ಸಾಗರದಿಂದ ಹೊರಡುವ ಸಮಯ ರಾತ್ರಿ 9 ಕ್ಕೆ, ಸೊರಬ ರಾತ್ರಿ 10, ಶಿಕಾರಿಪುರ ರಾತ್ರಿ 11, ಶಿವಮೊಗ್ಗ ರಾತ್ರಿ 12, ಭದ್ರಾವತಿ ರಾತ್ರಿ 12.30 ಬೆಂಗಳೂರು ಬೆಳಿಗ್ಗೆ 6.30ಕ್ಕೆ ತಲುಪಲಿದೆ.

ಬೆಂಗಳೂರು – ಸೊರಬ – ಸಾಗರ ಮಾರ್ಗ – ಬೆಂಗಳೂರಿನಿಂದ ಹೊರಡುವ ಸಮಯ ರಾತ್ರಿ 9.25, ಭದ್ರಾವತಿ ರಾತ್ರಿ 1.50, ಶಿವಮೊಗ್ಗ ರಾತ್ರಿ 2.20, ಶಿಕಾರಿಪುರ ಬೆಳಗಿನ ಜಾವ 3.20, ಸೊರಬ 5.40ಕ್ಕೆ, ಸಾಗರವನ್ನು ಬೆಳಿಗ್ಗೆ 6.40ಕ್ಕೆ ತಲುಪಲಿದೆ.

ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡಬಹುದು

ಈ ಬುಸ್ಸುಗಳಿಗೆ ಆನ್‍ಲೈನ್ ಮುಂಗಡ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಇದೆ. www.ksrtc.in ವೆಬ್‌ಸೈಟ್‌ನಲ್ಲಿ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಮಾಡಬಹುದು. ಪ್ರಯಾಣಿಕರು ಇದರ ಉಪಯೋಗ ಪಡೆಯಬೇಕು ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ – ಮತ್ತೊಂದು ಹೈಟೆಕ್‌ ಬಸ್‌ ಪರಿಚಯಿಸುತ್ತಿದೆ KSRTC, ಸದ್ಯದಲ್ಲೇ ರಸ್ತೆಗಿಳಿಯಲಿದೆ ‘ಪಲ್ಲಕ್ಕಿ’

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment