ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಸಾಗರ: ಸಿಗಂದೂರು ಸೇತುವೆ (Sigandur) ಲೋಕಾರ್ಪಣೆ ಬೆನ್ನಿಗೆ ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ಏರಿಕೆಯಾಗಿದೆ. ದೇವಿಯ ದರ್ಶನಕ್ಕೆ ಅನುಕೂಲವಾಗಲಿ ಎಂದು ದರ್ಶನದ ಸಮಯವನ್ನು ವಿಸ್ತರಣೆ ಮಾಡಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ತಾಲೂಕಿನ ಶಾಲೆ, ಕಾಲೇಜುಗಳಿಗೆ ಜು.26ರಂದು ರಜೆ
ಸಿಗಂದೂರು ದೇವಿ ದರ್ಶನದ ಅವಧಿಯನ್ನು ಒಂದೂವರೆ ಗಂಟೆ ಹೆಚ್ಚಳ ಮಾಡಲಾಗಿದೆ. ಇದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬಹುದಾಗಿದೆ.
ದರ್ಶನದ ಸಮಯ ಏನು?
ಈಗ ರಾತ್ರಿ 9 ಗಂಟೆವರೆಗು ಸಿಗಂದೂರು ದೇವಿ ದರ್ಶನ ಪಡೆಯಬಹುದಾಗಿದೆ. ಸಿಗಂದೂರು ದೇಗುಲದ ಆಡಳಿತ ಮಂಡಳಿ ಸಮಯ ವಿಸ್ತರಣೆ ಮಾಡಿ ಆದೇಶಿಸಿದೆ. ಈ ಕುರಿತು ದೇವಸ್ಥಾನದ ಕಾರ್ಯದರ್ಶಿ ರವಿಕುಮಾರ್ ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ನೀಡಿದ್ದಾರೆ.
[su_quote cite=”ರವಿಕುಮಾರ್, ಸಿಗಂದೂರು ದೇಗುಲದ ಕಾರ್ಯದರ್ಶಿ“]ಸಿಗಂದೂರು ದೇವಿಯ ದರ್ಶನಕ್ಕೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 2.30ರವರೆಗೆ ಅವಕಾಶವಿರಲಿದೆ. ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ದರ್ಶನವಿರಲಿದೆ. ಈ ಮೊದಲು ರಾತ್ರಿ 7.30ರವರೆಗೆ ಮಾತ್ರ ದರ್ಶನಕ್ಕೆ ಅವಕಾಶವಿತ್ತು. ಇನ್ನು, ಭಕ್ತರಿಗೆ ಮೂರು ಹೊತ್ತಿನ ಪ್ರಸಾದ ಇರಲಿದೆ.[/su_quote]

ಸಮಯ ವಿಸ್ತರಣೆಗೆ ಕಾರಣವೇನು?
ಸಿಗಂದೂರು ದೇಗುಲಕ್ಕೆ ಬರುವ ಭಕ್ತರು ಈ ಮೊದಲು ಲಾಂಚ್ ಮೂಲಕ ಶರಾವತಿ ಹಿನ್ನೀರು ದಾಟಬೇಕಿತ್ತು. ಸಂಜೆ 6 ಗಂಟೆವರೆಗೆ ಲಾಂಚ್ ವ್ಯವಸ್ಥೆ ಇರುತಿತ್ತು. ಭಾನುವಾರ ಅಥವಾ ವಿಶೇಷ ಸಂದರ್ಭ ಮಾತ್ರ ಲಾಂಚ್ ಸೇವೆ ಸ್ವಲ್ಪ ಹೆಚ್ಚಿನ ಹೊತ್ತು ಇರುತಿತ್ತು.
[su_divider top=”no” style=”dotted” divider_color=”#b8b8b8″ link_color=”#000000″ margin=”10″]
ತಡರಾತ್ರಿ ಬಂದ ಭಕ್ತರಿಗೆ ಸಿಗಂದೂರಿನಲ್ಲಿ ತಂಗಲು ಸಮಸ್ಯೆಯಾಗುತಿತ್ತು. ಸ್ವಂತ ವಾಹನದಲ್ಲಿ ಬಂದವರು ಸುತ್ತಿ ಬಳಸಿ ಸಾಗರ ತಲುಪಬಹುದಾಗಿತ್ತು. ಈ ಹಿನ್ನೆಲೆ ದೇವಿಯ ದರ್ಶನದ ಅವಧಿಯನ್ನು ರಾತ್ರಿ 7.30ರವರೆಗೆ ನಿಗದಿಪಡಿಸಲಾಗಿತ್ತು.

[su_divider top=”no” style=”dotted” divider_color=”#b8b8b8″ link_color=”#000000″ margin=”10″]
ಸಿಗಂದೂರು ಸೇತುವೆ ಲೋಕಾರ್ಪಣೆ ಆದ ಬಳಿಕ ದೇಗುಲಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಅಲ್ಲದೆ ರಾತ್ರಿ ಬಹು ಹೊತ್ತಿನವರೆಗೆ ದೇಗುಲಕ್ಕೆ ಬಂದು ದರ್ಶನ ಪಡೆಯಲು ಅವಕಾಶವಾಗಿದೆ. ಇದೇ ಕಾರಣಕ್ಕೆ ದರ್ಶನದ ಅವಧಿಯನ್ನು ವಿಸ್ತರಿಸಲಾಗಿದೆ. ರಾತ್ರಿ 9.30ರವರೆಗೆ ಭಕ್ತರು ದರ್ಶನ ಪಡೆಯಬಹುದಾಗಿದೆ.
[su_divider top=”no” style=”dotted” divider_color=”#b8b8b8″ link_color=”#000000″ margin=”10″]
ಸಿಗಂದೂರು ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕೆ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ರಜೆ ದಿನಗಳು, ವಿಶೇಷ ಸಂದರ್ಭದಲ್ಲಿ ಇಲ್ಲಿ ಭಕ್ತರು ದ್ವಿಗುಣಗೊಳ್ಳುತ್ತಿದ್ದರು. ಸೇತುವೆ ಲೋಕಾರ್ಪಣೆ ಬಳಿಕ ಭಕ್ತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ಚಳವಾಗಿದೆ.
–
[su_divider top=”no” style=”dotted” divider_color=”#ffffff” link_color=”#000000″ margin=”10″]
[su_button url=”https://www.facebook.com/liveshivamogga” target=”blank” style=”flat” background=” #316FF6″ color=”#ffffff” size=”4″ radius=”0″ icon=”icon: facebook-square”][/su_button] [su_button url=”https://x.com/liveshivamogga” target=”blank” style=”flat” background=”#000000″ color=”#ffffff” size=”4″ radius=”0″ icon=”icon: twitter”][/su_button] [su_button url=”https://www.instagram.com/shivamoggalive/” target=”blank” style=”flat” background=”#E1306C” color=”#ffffff” size=”4″ radius=”0″ icon=”icon: instagram”][/su_button] [su_button url=”https://www.youtube.com/@shivamoggalive” target=”blank” style=”flat” background=”#FF0000″ color=”#ffffff” size=”4″ radius=”0″ icon=”icon: youtube-square”][/su_button] [su_button url=”https://www.linkedin.com/in/shivamogga-live-666a05322/” target=”blank” style=”flat” background=”#0072b1″ color=”#ffffff” size=”4″ radius=”0″ icon=”icon: linkedin-square”][/su_button]
[su_divider top=”no” style=”dotted” divider_color=”#ffffff” link_color=”#000000″ margin=”10″]
LATEST NEWS
- ಶಿವಮೊಗ್ಗದ ವಿವಿಧೆಡೆ ಇಂದು ಮತ್ತು ನಾಳೆ ಇಡೀ ದಿನ ಕರೆಂಟ್ ಇರಲ್ಲ, ಎಲ್ಲೆಲ್ಲಿ?

- ಸರಕು ರೇಟ್ ಕುಸಿತ, ಉಳಿದ ಅಡಿಕೆಗಳ ಧಾರಣೆ ಎಷ್ಟಿದೆ?, 13 ಮಾರ್ಚ್ 2026ರ ಅಡಿಕೆ ರೇಟ್

- ಸಹ್ಯಾದ್ರಿ ಉತ್ಸವದಲ್ಲಿ ಜಾನಪದ ಕಲೆಗಳ ಕಲರವ, ಏನಂದ್ರು ನಟಿ ಜಯಮಾಲಾ?

- ವಿದ್ಯಾನಗರದ ಆರ್ಮಿ ಕ್ಯಾಂಟೀನ್ನಲ್ಲಿ ಮದ್ಯ ಕಳ್ಳತನಕ್ಕೆ ಯತ್ನ, ಆಗಿದ್ದೇನು?

- ಕಾರ್ಗಲ್ನಲ್ಲಿ ವಾಂತಿ, ಭೇದಿ ಪ್ರಕರಣ ಹೆಚ್ಚಳ, ಮಹಿಳೆ ಸಾವು, ಜನರಲ್ಲಿ ಆತಂಕ

[su_divider top=”no” style=”dotted” divider_color=”#ffffff” link_color=”#000000″ margin=”10″]
[su_divider top=”no” style=”dotted” divider_color=”#ffffff” link_color=”#000000″ margin=”10″]
About The Editor
ನಿತಿನ್ ಆರ್.ಕೈದೊಟ್ಲು















