ಹೊಟೇಲ್‌ನಲ್ಲಿದ್ದ ಸಿಲಿಂಡರ್‌, ಮುಂದೆ ನಿಂತಿದ್ದ ಬೈಕು ನಾಪತ್ತೆ, ಕೆಲಸಕ್ಕಿದ್ದ ಯುವಕನು ಕಾಣೆ, ಆಗಿದ್ದೇನು?

ಸಾಗರ: ಹೊಟೇಲೊಂದರಲ್ಲಿ ಕೆಲಸಕ್ಕಿದ್ದ ಯುವಕನೇ ಹೋಟೆಲ್ (Hotel) ಮುಂದೆ ನಿಲ್ಲಿಸಿದ್ದ ಬೈಕ್ ಹಾಗೂ ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಸಾಗರದ ಬಿ.ಹೆಚ್‌.ರಸ್ತೆಯಲ್ಲಿರುವ ಮಂಜುನಾಥ್‌ ಎಂಬುವವರಿಗೆ ಸೇರಿದ ಹೊಟೇಲ್‌ನಲ್ಲಿ ಘಟನೆ ನಡೆದಿದೆ. ಕೆಲಸ ಮುಗಿಸಿ ಮಾಲೀಕರ ಸಂಬಂಧಿ ರಾಜು ಎಂಬುವವರು ಬೈಕನ್ನು ಹೊಟೇಲ್ ಮುಂದೆ ನಿಲ್ಲಿಸಿ ಕೀ ಅನ್ನು ಕ್ಯಾಶ್ ಕೌಂಟರ್ ಬಳಿ ಇಟ್ಟಿದ್ದರು. ರಾಜು ಅವರು ಊಟ ಮುಗಿಸಿ ವಾಪಸ್ ಬಂದು ನೋಡಿದಾಗ ಬೈಕ್ ಹಾಗೂ ಹೊಟೇಲ್‌ನಲ್ಲಿದ್ದ ಒಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಕಾಣೆಯಾಗಿತ್ತು.

Sagara Police Station Building

ಅದೇ ಸಮಯದಲ್ಲಿ ಹೊಟೇಲ್‌ನಲ್ಲಿ ಕೆಲಸಕ್ಕಿದ್ದ ಸಂಜು ಎಂಬಾತ ಕೂಡ ನಾಪತ್ತೆಯಾಗಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳುವಾದ ಬೈಕ್ ಮತ್ತು ಸಿಲಿಂಡರ್‌ನ ಒಟ್ಟು ಮೌಲ್ಯ ₹24,000 ಎಂದು ಅಂದಾಜಿಸಲಾಗಿದೆ. ಘಟನೆ ಸಂಬಂಧ ಹೊಟೇಲ್‌ ಮಾಲೀಕ ಮಂಜುನಾಥ್‌ ಅವರು ಸಾಗರ ಪೊಲೀಸ್‌ ಠಾಣೆಗೆ ದೂರು ನೀಡದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಶಿವಮೊಗ್ಗ KSRTC ನಿಲ್ದಾಣದಲ್ಲಿ ಡ್ರೈವರ್‌ಗೆ ಚಪ್ಪಲಿಯಿಂದ ಹೊಡೆದು ಎದೆಗೆ ಗುದ್ದಿದ ಮಹಿಳೆ

Leave a Comment