ಶಿವಮೊಗ್ಗ, ಶಿಕಾರಿಪುರ ಟೋಲ್‌, ಸಚಿವರನ್ನು ಭೇಟಿಯಾದ ನಿಯೋಗ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

BANGALORE NEWS, 8 OCTOBER 2024 : ಶಿಕಾರಿಪುರ, ಶಿರಾಳಕೊಪ್ಪ ನಡುವೆ ನಿರ್ಮಿಸಿರುವ ಟೋಲ್ ಗೇಟ್ (Toll Gate) ಅನ್ನು ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿ ಶಾಸಕ ಬಿ.ವೈ.ವಿಜಯೇಂದ್ರ ನೇತೃತ್ವದ ನಿಯೋಗ ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿತು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮನವಿಯಲ್ಲಿ ಏನಿದೆ?

POINT-1

ಅವೈಜ್ಞಾನಿಕ ಟೋಲ್‌ನಿಂದ ಪ್ರತಿನಿತ್ಯ ತಾಲೂಕು ಕೇಂದ್ರ ಶಿಕಾರಿಪುರಕ್ಕೆ ಓಡಾಡುವ ಜನರಿಗೆ ತೊಂದರೆಯಾಗಿದೆ. ರೈತರು ಬೆಳೆಗಳನ್ನು, ರಸಗೊಬ್ಬರ, ಕೃಷಿ ಉಪಕರಣ ತರಲು ಓಡಾಡಲೇ ಬೇಕಾದ ಅನಿವಾರ್ಯತೆಯಿದೆ. ಪ್ರತಿನಿತ್ಯ ನೂರಾರು ಬಸ್‌ಗಳು ಮಾರ್ಗದಲ್ಲಿ ಓಡಾಡುತ್ತವೆ. ಟೋಲ್ ಕಾರಣದಿಂದ ಬಸ್ ದರ ಏರಿಕೆ ಮಾಡಲಾಗಿದೆ. ಜನಸಾಮಾನ್ಯರ ಮೇಲೆ ಇದರ ಹೊರೆ ಬೀಳಲಿದೆ. ಇದನ್ನು ತಪ್ಪಿಸಲು ಈಗಿರುವ ಟೋಲ್ ಅನ್ನು ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಸಚಿವರಿಗೆ ಶಾಸಕ ಬಿ.ವೈ.ವಿಜಯೇಂದ್ರ ಮನವರಿಕೆ ಮಾಡಿದರು.

081024-BY-Vijayendra-meets-satish-jarakiholi-in-bangalore.webp

POINT-2

ಟೋಲ್ ಸ್ಥಳಾಂತರಿಸುವಂತೆ ಸ್ಥಳೀಯರು, ಟೋಲ್ ವಿರೋಧಿ ಹೋರಾಟ ಸಮಿತಿಯವರು ಸಾಕಷ್ಟು ಪ್ರತಿಭಟನೆ, ರಸ್ತೆ ತಡೆ ನಡೆಸಿದ್ದಾರೆ. ಇದನ್ನು ತಾವು ಗಂಭೀರವಾಗಿ ಪರಿಗಣಿಸಿ ಟೋಲ್ ಸ್ಥಳಾಂತರಿಸಬೇಕು. ಇದನ್ನು ಪರಾಮರ್ಶಿಸದೆ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಅಧಿಕಾರಿಗಳ ವ್ಯಾಪ್ತಿಯಲ್ಲಿ ಸ್ಥಳಾಂತರ ಆಗದೇ ಇರುವ ಕಾರಣ ನೀವು ಸೂಚನೆ ನೀಡಿ ಟೋಲ್ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದಲಿಂಗಪ್ಪ ನಿಂಬೆಗೊಂದಿ, ಮಂಡಲ ಅಧ್ಯಕ್ಷ ಹನುಮಂತಪ್ಪ, ಮಂಡಲ ರೈತ ಮೋರ್ಚಾ ಅಧ್ಯಕ್ಷ ಯೋಗೇಶ್‌, ಕಾರ್ಯದರ್ಶಿ ಅಶೋಕ್, ಜಗದೀಶ್, ಗಿರೀಶ್ ಧಾರವಾಡ, ಟೋಲ್ ವಿರೋಧಿ ಸಮಿತಿ ಅಧ್ಯಕ್ಷ ಶಿವರಾಜ್ ಇತರರಿದ್ದರು.

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment