ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 17 DECEMBER 2024
ಶಿವಮೊಗ್ಗ : ತುಂಗಭದ್ರಾ ಸೇತುವೆ ಮೇಲೆ ಹೋಗುತ್ತಿದ್ದ ಕರಡಿಯೊಂದರ (Bear) ವಿಡಿಯೋ ಸಾಮಾಜಿಕ ಜಾಲಾತಣದಲ್ಲಿ ವೈರಲ್ ಆಗಿದೆ. ಇದರಿಂದ ಹೊಳಲೂರು ಸುತ್ತಮುತ್ತ ಪುನಃ ಕರಡಿ ಅತಂಕ ಶುರುವಾಗಿದೆ.
ಹೊಳಲೂರಿನಿಂದ ಸನ್ಯಾಸಿಕೊಡಮಗ್ಗಿ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿರುವ ತುಂಗಭದ್ರಾ ಸೇತುವೆ ಮೇಲೆ ಕರಡಿ ಕಾಣಿಸಿಕೊಂಡಿದೆ. ಕಾರಿನಲ್ಲಿ ತೆರಳುತ್ತಿದ್ದವರು ಕರಡಿಯ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಮತ್ತೆ ಕರಡಿ ಆತಂಕದಲ್ಲಿ ಜನ
ಹೊಳಲೂರು ಸುತ್ತಮುತ್ತಲಿನ ಅಗಸನಹಳ್ಳಿ, ಡಣಾಯಕಪುರ ಗ್ರಾಮಗಳಲ್ಲಿ ಕರಡಿಗಳು ಸೆರೆಯಾಗಿದ್ದವು. ಈಚೆಗೆ ಮಲ್ಲಾಪುರ ಸರ್ಕಲ್‌ನಲ್ಲಿ ಮನೆಯೊಂದರ ಬಳಿ ಕರಡಿ ಕಾಣಿಸಿಕೊಂಡಿತ್ತು. ಇದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈಗ ಸನ್ಯಾಸಿಕೊಡಮಗ್ಗಿ ಸಮೀಪದ ಸೇತುವೆ ಮೇಲೆ ಕರಡಿ ಕಾಣಿಸಿಕೊಂಡಿದೆ.
ವೈರಲ್ ಆದ ವಿಡಿಯೋ
ಕರಡಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ವಿವಿಧ ವಾಟ್ಸಪ್ ಗ್ರೂಪ್‌ಗಳಲ್ಲಿ ಹರಿದಾಡುತ್ತಿದೆ. ಹಾಗಾಗಿ ಈ ಭಾಗದ ಜನರು ತಮ್ಮ ಜಮೀನಿಗೆ ಹೋಗಲು, ಸಂಜೆ ವೇಳೆ ವಿವಿಧ ಕೆಲಸಕ್ಕೆ ತೆರಳುವವರು, ಒಬ್ಬಂಟಿಯಾಗಿ ಓಡಾಡುವುದಕ್ಕೆ ಹೆದರುವಂತಾಗಿದೆ.
ಇದನ್ನೂ ಓದಿ » ನಟ ದರ್ಶನ್ ಚಾಲಕ ಶಿವಮೊಗ್ಗ ಜೈಲಿಂದ ರಿಲೀಸ್, ಓಡೋಡಿ ಹೋಗಿ ಕಾರು ಹತ್ತಿದ ಆರೋಪಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422